Karnataka Kukkut Sanjeevini Yojane- ಕುಕ್ಕುಟ ಸಂಜೀವಿನಿ ಯೋಜನೆ | ಮಹಿಳೆಯರಿಗೆ ಉಚಿತ ಕೋಳಿ ಮರಿ, ಕೋಳಿ ಶೆಡ್ ನಿರ್ಮಾಣಕ್ಕೆ ಭರ್ಜರಿ ಸಹಾಯಧನ

Spread the love

WhatsApp Group Join Now
Telegram Group Join Now

ಮಹಿಳೆಯರಿಗೆ ಕುಕ್ಕುಟ ಸಂಜೀವಿನಿ ಯೋಜನೆಯಡಿ (Karnataka Kukkut Sanjeevini Yojane) ಉಚಿತ ಕೋಳಿಮರಿ, ಕೋಳಿಶೆಡ್ ನಿರ್ಮಾಣಕ್ಕೆ ಸಹಾಯಧನ ಹಾಗೂ ಭತ್ಯೆ ಸಹಿತ ತರಬೇತಿ ನೀಡಲಾಗುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ ಹಲವು ಕೃಷಿ ಮತ್ತು ಕೃಷಿಯೇತರ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇದೀಗ ನೂತನವಾಗಿ ಅನುಷ್ಠಾನಗೊಳಿಸಿರುವ ‘ಕುಕ್ಕುಟ ಸಂಜೀವಿನಿ ಯೋಜನೆ’ ವಿಶೇಷ ಗಮನ ಸೆಳೆಯುತ್ತಿದೆ.

ಏನಿದು ಕುಕ್ಕುಟ ಸಂಜೀವಿನಿ ಯೋಜನೆ?

ಅಸಲಿಗೆ ‘ಕೋಳಿ ಸಾಕಾಣಿಕೆ’ ಬಹುತೇಕ ಸುಲಭವಾಗಿ ಆರಂಭಿಸಬಹುದಾದ, ಕಡಿಮೆ ವೆಚ್ಚದಲ್ಲಿ ಅಧಿಕ ಲಾಭ ತರುವ ಉದ್ಯಮ. ಇಂತಹ ಉದ್ಯಮಕ್ಕೆ ಸರ್ಕಾರದಿಂದಲೇ ಉಚಿತ ಕೋಳಿಮರಿಗಳು, ಶೆಡ್ ನಿರ್ಮಾಣಕ್ಕೆ ಹಣ ಮತ್ತು ಖಚಿತ ಮಾರುಕಟ್ಟೆ ದೊರೆತರೆ ಇನ್ನೇನು ಬೇಕು?

ಹೌದು, ರಾಜ್ಯ ಸರ್ಕಾರ ಇದೇ ಉದ್ದೇಶದಿಂದ 2024-25ರ ಬಜೆಟ್‌ನಲ್ಲಿ ‘ಕುಕ್ಕುಟ ಸಂಜೀವಿನಿ ಯೋಜನೆ’ಯನ್ನು ಘೋಷಿಸಿ ಈಗ ಜಾರಿಗೆ ತಂದಿದೆ. ಮಹಿಳಾ ಸ್ವಸಹಾಯ ಸಂಘಗಳಿಗೆ ಇದು ಆದಾಯದ ಹೊಸ ಬಾಗಿಲನ್ನು ತೆರೆಯುವ ಯೋಜನೆ ಎನ್ನಬಹುದು.

ಇದನ್ನೂ ಓದಿ: E-Swathu Helpline Numbers- ಗ್ರಾಮ ಪಂಚಾಯತಿ ವ್ಯಾಪ್ತಿಯ ನಿಮ್ಮ ಆಸ್ತಿಗೆ ‘ಇ-ಸ್ವತ್ತು’ ಪಡೆಯಲು ಈ ನಂಬರ್‌ಗೆ ಕಾಲ್ ಮಾಡಿ | ಜಿಲ್ಲಾ ಸಹಾಯವಾಣಿ ಸಂಖ್ಯೆಗಳ ಪಟ್ಟಿ ಇಲ್ಲಿದೆ…

Karnataka Kukkut Sanjeevini Yojane
Karnataka Kukkut Sanjeevini Yojane
ಯೋಜನೆಯ ಗುರಿಗಳೇನು?

ಈ ಯೋಜನೆಯು ಕೇವಲ ಕೋಳಿ ಸಾಕಾಣಿಕೆಯನ್ನು ಉತ್ತೇಜಿಸುವುದಷ್ಟೇ ಅಲ್ಲ; ಮಹಿಳೆಯರನ್ನು ಆರ್ಥಿಕವಾಗಿ ಬಲಪಡಿಸುವುದು, ಗ್ರಾಮೀಣ ಕುಟುಂಬಗಳ ಆದಾಯವನ್ನು ಹೆಚ್ಚಿಸುವುದು ಹಾಗೂ ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆಯನ್ನು ಕಡಿಮೆ ಮಾಡುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ.

ಅಂದರೆ, ಒಟ್ಟಾರೆ ಮಹಿಳೆ, ಕುಟುಂಬ ಮತ್ತು ಗ್ರಾಮೀಣ ಆರ್ಥಿಕತೆಗೆ ಒತ್ತು ನೀಡುವ ಸಮಗ್ರ ಕಾರ್ಯಕ್ರಮ ಇದಾಗಿದೆ. ಈಗಾಲೇ ಯಾದಗಿರಿ ಜಿಲ್ಲೆಯ 28 ಗ್ರಾಮಗಳ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಈ ಯೋಜನೆಯಡಿ ಸಿಗುವ ಪ್ರಮುಖ ಸೌಲಭ್ಯಗಳು ಹೀಗಿವೆ:

ಉಚಿತ ಕೋಳಿಮರಿ ವಿತರಣೆ

ಪ್ರಮುಖವಾಗಿ ಈ ಯೋಜನೆಯಡಿ ಪಶುಸಂಗೋಪನಾ ಇಲಾಖೆ ಆರು ವಾರಗಳ ಉತ್ತಮ ಗುಣಮಟ್ಟದ ನಾಟಿ ಕೋಳಿಮರಿಗಳನ್ನು ಉಚಿತವಾಗಿ ನೀಡುತ್ತದೆ. ಗ್ರಾಮೀಣ ಹವಾಮಾನಕ್ಕೆ ಹೊಂದಿಕೊಳ್ಳುವ, ಕಡಿಮೆ ಸಾವಿನ ಪ್ರಮಾಣ ಇರುವ ಈ ನಾಟಿ ಕೋಳಿ ಮರಿಗಳು ಸ್ವಸಹಾಯ ಸಂಘಗಳಿಗೆ ಉತ್ತಮ ಆದಾಯ ನೀಡುವ ಸಾಮರ್ಥ್ಯ ಹೊಂದಿರುತ್ತವೆ.

ಇದನ್ನೂ ಓದಿ: SBI Bengaluru Recruitment 2025- ಬೆಂಗಳೂರು ಎಸ್‌ಬಿಐ ನೇಮಕಾತಿ | 104 ಹುದ್ದೆಗಳಿಗೆ ಪದವೀಧರರಿಂದ ಅರ್ಜಿ ಆಹ್ವಾನ

ಕೋಳಿ ಶೆಡ್ ನಿರ್ಮಾಣಕ್ಕೆ ಸರ್ಕಾರದಿಂದಲೇ ಹಣ!

ಇನ್ನು ಕೋಳಿಗಳಿಗೆ ಶೆಡ್ ಇಲ್ಲದಿದ್ದರೆ ಕೋಳಿ ಸಾಕಾಣಿಕೆ ಕಷ್ಟ. ಇದನ್ನು ಮನಗಂಡ ಸರ್ಕಾರ, ಉದ್ಯೋಗ ಖಾತ್ರಿ ಯೋಜನೆಯ ಸಹಾದಿಂದ (MGNREGA) ಯೋಜನೆಯಡಿ ಶೆಡ್ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಲಾಗುತ್ತದೆ.

500 ಕೋಳಿಗಳಿಗೆ ಶೆಡ್ ನಿರ್ಮಾಣಕ್ಕೆ 4.5 ಲಕ್ಷ ರೂ. ಹಾಗೂ 1,000 ಕೋಳಿಗಳಿಗೆ ಶೆಡ್ ನಿರ್ಮಾಣ ಮಾಡಲು 7.5 ಲಕ್ಷ ಅಥವಾ 10 ಲಕ್ಷ ರೂ. ನೀಡಲಾಗುತ್ತದೆ. ಇದು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಬರುವುದರಿಂದ, ಸ್ಥಳೀಯರಿಗೆ ಉದ್ಯೋಗ ಮತ್ತು ಸಂಘಕ್ಕೆ ಗುಣಮಟ್ಟದ ಕಟ್ಟಡ ಸಿದ್ಧವಾಗುತ್ತದೆ.

Karnataka Kukkut Sanjeevini Yojane
Karnataka Kukkut Sanjeevini Yojane
25,000 ರೂ. ಪ್ರೋತ್ಸಾಹಧನ

ಯೋಜನೆಗೆ ಸೇರ್ಪಡೆಯಾದ ಪ್ರತಿ ಸ್ವಸಹಾಯ ಸಂಘಕ್ಕೆ ಜಿಲ್ಲಾಮಟ್ಟದ ಪಶುಸಂಗೋಪನಾ ಇಲಾಖೆ ಒಟ್ಟು 25,000 ರೂ. ಪ್ರೋತ್ಸಾಹಧನ ನೀಡುತ್ತದೆ. ಇದು ಪ್ರಾರಂಭಿಕ ವೆಚ್ಚಗಳನ್ನು ನಿಭಾಯಿಸಲು ದೊಡ್ಡ ಸಹಾಯವಾಗುತ್ತದೆ.

ಇದನ್ನೂ ಓದಿ: New Ration Card Application- ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಅನುಮತಿ | ಯಾರೆಲ್ಲಾ ಅರ್ಜಿ ಹಾಕಬಹುದು? ಸಂಪೂರ್ಣ ವಿವರ ಇಲ್ಲಿದೆ…

ಖಚಿತ ಮಾರುಕಟ್ಟೆ ಸಂಪರ್ಕ

ಕುಕ್ಕುಟ ಸಂಜೀವಿನಿ ಯೋಜನೆಯ ಅತ್ಯಂತ ದೊಡ್ಡ ಆಕರ್ಷಣೆ ಎಂದರೆ ಉತ್ಪಾದನೆಯಾದ ಮೊಟ್ಟೆಗಳಿಗೆ ಖಚಿತವಾಗಿ ಮಾರುಕಟ್ಟೆ ಒದಗಿಸುವುದು. ಸರ್ಕಾರಿ ಶಾಲೆಗಳ ಮಧ್ಯಾಹ್ನದ ಊಟ ಹಾಗೂ ಸ್ಥಳೀಯ ಆಂಗನವಾಡಿಗಳಿಗೆ ಮಾರುಕಟ್ಟೆ ದರದಲ್ಲಿ ಮೊಟ್ಟೆ ಪೂರೈಕೆ ಮಾಡಲು ಅವಕಾಶವಿದೆ.

ತರಬೇತಿ ಮತ್ತು ತಾಂತ್ರಿಕ ಮಾರ್ಗದರ್ಶನ
WhatsApp Group Join Now
Telegram Group Join Now

ಈ ಯೋಜನೆ ಕೇವಲ ನೆರವು ನೀಡುವುದಷ್ಟೇ ಅಲ್ಲ; ಸಂಘದ ಸದಸ್ಯರು ಉದ್ಯಮದಲ್ಲಿ ಯಶಸ್ವಿಯಾಗಬೇಕೆಂಬ ನಿಟ್ಟಿನಲ್ಲಿ ಸಮಗ್ರ ತರಬೇತಿ ಕೂಡ ನೀಡಲಾಗುತ್ತದೆ. ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳದ ಪ್ರಾದೇಶಿಕ ಕೇಂದ್ರಗಳು ಮತ್ತು ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆಯ ಸಹಯೋಗದಿಂದ 5-10 ದಿನಗಳ ಕೋಳಿ ಸಾಕಾಣಿಕೆ ತರಬೇತಿ ನಡೆಸಲಾಗುತ್ತದೆ.

ಸದರಿ ತರಬೇತಿಯಲ್ಲಿ ದಿನಕ್ಕೆ ಪ್ರತೀ ಮಹಿಳೆಯರಿಗೆ 200 ರೂ. ಭತ್ಯೆ, ಓಡಾಟದ ವೆಚ್ಚ ಹಾಗೂ ಅಧ್ಯಯನ ಸಾಮಗ್ರಿಗಳಿಗೆ 800 ರೂ. ಅನುದಾನ ಒದಗಿಸಿ ಕೋಳಿಗಳ ಆಹಾರ ನಿರ್ವಹಣೆ, ರೋಗ ನಿಯಂತ್ರಣ, ಔಷಧೋಪಚಾರ, ಶೆಡ್ ನಿರ್ವಹಣೆ ಕುರಿತು ಪೂರ್ಣ ಜ್ಞಾನ ನೀಡಲಾಗುತ್ತದೆ.

ಇದನ್ನೂ ಓದಿ: Anganwadi Recruitment 2025- ಮಹಿಳೆಯರಿಗೆ ಅಂಗನವಾಡಿ ಹುದ್ದೆಗಳು | 571 ಹುದ್ದೆಗಳಿಗೆ ಅರ್ಜಿ ಆಹ್ವಾನ

ಈ ಯೋಜನೆಗೆ ಯಾರು ಅರ್ಹರು?

ಕುಕ್ಕುಟ ಸಂಜೀವಿನಿ ಯೋಜನೆ ವಿಶೇಷವಾಗಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಸ್ವಸಹಾಯ ಸಂಘಗಳಿಗೆ (Self Help Groups) ಅನ್ವಯವಾಗುತ್ತದೆ. ಸದರಿ ಸಂಘದಲ್ಲಿ 5-10 ಸದಸ್ಯರು ಇರಬೇಕು.

ಸಂಘದ ಎಲ್ಲಾ ಸದಸ್ಯರೂ ಮಹಿಳೆಯರೇ ಆಗಿರಬೇಕು. ಎಲ್ಲರಿಗೂ ಕೋಳಿ ಸಾಕಾಣಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಆಸಕ್ತಿ ಇರಬೇಕು. ಕೋಳಿ ಸಾಕಿರುವ ಅನುಭವಕ್ಕೆ ಆದ್ಯತೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಇಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿಲ್ಲ, ನೇರವಾಗಿ ನಿಮ್ಮ ತಾಲ್ಲೂಕಿನ ಪಶುಪಾಲನಾ ಇಲಾಖೆಯ ಕಚೇರಿ ಅಥವಾ ತಾಲ್ಲೂಕು ಪಶು ಆಸ್ಪತ್ರೆಗೆ ಕಚೇರಿ ಸಮಯದಲ್ಲಿ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸರಳ ದಾಖಲೆಗಳನ್ನು ಜೋಡಿಸಿ ಸಲ್ಲಿಸಿದರೆ ಸಾಕು.

ಇದನ್ನೂ ಓದಿ: Karnataka New BPL Card List- 2.93 ಲಕ್ಷ ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ | ಈ ಹೊಸ ಪಟ್ಟಿಯಲ್ಲಿ ನೀವಿದ್ದೀರಾ?

ಅಗತ್ಯವಿರುವ ದಾಖಲೆಗಳು
  • ಪ್ರತಿ ಸದಸ್ಯರಿಂದ ಆಧಾರ್ ಕಾರ್ಡ್ ಪ್ರತಿಗಳು
  • ಪಾಸ್‌ಪೋರ್ಟ್ ಅಳತೆಯ ಫೋಟೋ
  • ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್
  • ಕೋಳಿ ಶೆಡ್ ನಿರ್ಮಾಣಕ್ಕೆ ಇರುವ ಜಾಗದ ಪಹಣಿ/ದಾಖಲೆ
  • ಮೊಬೈಲ್ ಸಂಖ್ಯೆ (ಸಕ್ರಿಯವಾಗಿರಬೇಕು)

ಕುಕ್ಕುಟ ಸಂಜೀವಿನಿ ಯೋಜನೆ, ಕಡಿಮೆ ಹೂಡಿಕೆ, ಹೆಚ್ಚು ಲಾಭ ನೀಡುವ ಅತ್ಯುತ್ತಮ ಅವಕಾಶವಾಗಿದೆ. ಉಚಿತ ಕೋಳಿಮರಿ, ಶೆಡ್ ನಿರ್ಮಾಣಕ್ಕೆ ಲಕ್ಷಾಂತರ ರೂ., ಪ್ರೋತ್ಸಾಹಧನ, ತರಬೇತಿ ಮತ್ತು ಖಚಿತ ಮಾರುಕಟ್ಟೆ ಒಟ್ಟಿಗೆ ಸಿಗುವುದರಿಂದ ಮಹಿಳಾ ಸಂಘಗಳಿಗೆ ಉತ್ತಮ ಆದಾಯ ಮಾರ್ಗ ಕಂಡುಕೊಳ್ಳಲು ಇದು ಸೂಕ್ತ ಯೋಜನೆಯಾಗಿದೆ.

ಹೆಚ್ಚಿನ ಮಾಹಿತಿ ಕೂಡಲೇ ನಿಮ್ಮ ಸ್ಥಳೀಯ ಪಶುಪಾಲನಾ ಇಲಾಖೆ ಅಥವಾ ತಾಲ್ಲೂಕು ಪಶು ಆಸ್ಪತ್ರೆಗೆ ಕಚೇರಿ ಭೇಟಿ ನೀಡಿ. ಪಂಚಮಿತ್ರ ಸಹಾಯವಾಣಿ: 8277506000

Women Free Sewing Machine- ಉಚಿತ ಹೊಲಿಗೆ ಯಂತ್ರ ವಿತರಣೆ ಯೋಜನೆ | ಮಹಿಳೆಯರಿಗೆ ಸುವರ್ಣಾವಕಾಶ


Spread the love
error: Content is protected !!