ಇನ್ಮುಂದೆ ಇವರಿಗೆ ಮಾತ್ರ ಸಿಗುತ್ತೆ ಗೃಹಲಕ್ಷ್ಮಿ, ಗೃಹಜ್ಯೋತಿ ಸೌಲಭ್ಯ? ಗ್ಯಾರಂಟಿ ಯೋಜನೆಗಳು ಫಿಲ್ಟರ್ Karnataka Guarantee Schemes filter

Spread the love

WhatsApp Group Join Now
Telegram Group Join Now

Karnataka Guarantee Schemes filter : ರಾಜ್ಯ ಕಾಂಗ್ರೆಸ್ ಸರ್ಕಾರ (Karnataka State Congress Govt) ಕಳೆದೊಂದು ವರ್ಷದಿಂದ ಅನುಷ್ಠಾನಗೊಳಿಸಿರುವ ಗ್ಯಾರಂಟಿ ಯೋಜನೆಗಳ ಫಿಲ್ಟರ್’ಗೆ ಸಿದ್ಧತೆ ನಡೆದಿದೆ. ಈ ಬಗ್ಗೆ ಆಡಳಿತರೂಢ ಪಕ್ಷದ ಶಾಸಕರು, ಸಚಿವರಿಂದ ಮೇಲಿಂದ ಮೇಲೆ ಒತ್ತಡ ಬರುತ್ತಿದ್ದು; ಈ ಬಾರಿ ಈ ಒತ್ತಡ ಗಂಭೀರ ಸ್ವರೂಪ ಪಡೆದಿದೆ ಎನ್ನಲಾಗುತ್ತಿದೆ. ಹೀಗಾಗಿ ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ಉಳ್ಳವರನ್ನು ಹೊರಗಿಡುವ ಪ್ರಯತ್ನಕ್ಕೆ ಮುಂದಾಗಿದೆ ಎನ್ನಲಾಗುತ್ತಿದೆ.

ಗ್ಯಾರಂಟಿ ಯೋಜನೆಗಳಿಗೆ ಆಗುವ ವೆಚ್ಚವೆಷ್ಟು?

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದು ಅಧಿಕಾರ ಹಿಡಿದ ಕೂಡಲೇ ಚುನಾವಣೆ ಸಂದರ್ಭದಲ್ಲಿ ನುಡಿದಂತೆ ಹಂತಹಂತವಾಗಿ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ವಿದ್ಯಾನಿಧಿ ಹಾಗೂ ಅನ್ನಭಾಗ್ಯ ಸೇರಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ.

ಸಿಎಂ ಸಿದ್ದರಾಮಯ್ಯ (C M Siddaramaiah) ಅವರು ನೀಡಿದ ಮಾಹಿತಿಯಂತೆ ಸದರಿ ಪಂಚ ಗ್ಯಾರಂಟಿ ಯೋಜನೆಗಳಿಗೆ ಕಳೆದ ವರ್ಷ 36,000 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಈ ವರ್ಷ ಈ ಯೋಜನೆಗಳಿಗೆ 52,000 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ಬೋಗಸ್ ರೇಷನ್ ಕಾರ್ಡ್ ಆಗಸ್ಟ್ 31ರೊಳಗೆ ವಾಪಾಸು ಮಾಡುವಂತೆ ಆಹಾರ ಇಲಾಖೆ ಖಡಕ್ ವಾರ್ನಿಂಗ್ Ineligible Ration Card Return Deadline

10,000 ಕೋಟಿ ರೂಪಾಯಿ ಉಳಿತಾಯದ ಲೆಕ್ಕಾಚಾರ

ಪಂಚ ಗ್ಯಾರಂಟಿ ಯೋಜನೆಗಳನ್ನು ಅರ್ಹ ಬಡವರಿಗೆ ಮಾತ್ರ ಅನ್ವಯವಾಗುವಂತೆ ಮಾಡಿದರೆ ರಾಜ್ಯದ ಇತರ ಅಭಿವೃದ್ಧಿ ಕಾರ್ಯಗಳಿಗೆ ಆಗಾಗ ತಲೆದೋರುವ ‘ಅನುದಾನ’ ಕೊರತೆ ನೀಗುತ್ತದೆ ಎಂಬ ಲೆಕ್ಕಾಚಾರ ಶಾಸಕರು, ಸಚಿವರಿಂದ ವ್ಯಕ್ತವಾಗುತ್ತಿದೆ.

ಉಳ್ಳವರು, ತೆರಿಗೆ ಪಾವತಿದಾರರು ಹಾಗೂ ಹೆಚ್ಚಿನ ಆದಾಯ ಗಳಿಸುತ್ತಿರುವವರನ್ನು ಗ್ಯಾರಂಟಿ ಯೋಜನೆಗಳಿಂದ ಹೊರಗಿಟ್ಟರೆ ಬರೋಬ್ಬರಿ 10,000 ಕೋಟಿ ರೂಪಾಯಿ ಉಳಿತಾಯ ಮಾಡಬಹುದು. ಇದರಿಂದ ಆಗಾಗ್ಗೆ ಕೇಳಿಬರುವ ಅನುದಾನ ಕೊರತೆಯೂ ನೀಗಲಿದೆ ಎಂಬ ವಾದ ಕೇಳಿ ಬರುತ್ತಿದೆ.

Karnataka Guarantee Schemes filter

ಇದನ್ನೂ ಓದಿ: ಇನ್ಮುಂದೆ ಗ್ರಾಮ ಪಂಚಾಯತಿ ಹಗರಣಗಳಿಗೆ ಅಧ್ಯಕ್ಷ, ಸದಸ್ಯರಿಗೂ ಶಿಕ್ಷೆ | ಬಂತು ಹೊಸ ರೂಲ್ಸ್ Gram Panchayat Scam New Rules

ಗ್ಯಾರಂಟಿಗೆ ಕತ್ತರಿ ಇಲ್ಲ, ಕೇವಲ ಫಿಲ್ಟರ್!

ಗ್ಯಾರಂಟಿ ಯೋಜನೆ ಪರಿಷ್ಕರಣೆ ಬಗ್ಗೆ ಹಲವು ಸಚಿವರು ಮುಖ್ಯಮಂತ್ರಿಗಳ ಮೇಲೆ ಒತ್ತಡ ತರುತ್ತಿದ್ದು; ಬಹುತೇಕ ಸಚಿವರು ಗ್ಯಾರಂಟಿ ಯೋಜನೆಗಳನ್ನು ‘ಬಂದ್’ ಮಾಡುವ ಬದಲು ‘ಫಿಲ್ಟರ್’ ಮಾಡುವ ಕುರಿತು ಮಾತಾಡಿದ್ದಾರೆ. ಸಚಿವ ಸತೀಶ ಜಾರಕಿಹೊಳಿ, ಡಾ| ಜಿ. ಪರಮೇಶ್ವರ್, ಸಚಿವ ಈಶ್ವರ ಖಂಡ್ರೆ, ಮಧು ಬಂಗಾರಪ್ಪ ಸೇರಿದಂತೆ ಬಹುತೇಕರು ಗ್ಯಾರಂಟಿ ಯೋಜನೆಗಳನ್ನು ಫಿಲ್ಟರ್ ಮಾಡುವ ಬಗ್ಗೆ ಮನವಿ ಮಾಡಿದ್ದಾರೆ.

ಇದಕ್ಕೆ ಪೂರಕವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗ್ಯಾರಂಟಿ ಯೋಜನೆಗಳಿಗೆ ಕತ್ತರಿ ಹಾಕುವುದಿಲ್ಲ. ಯಾವ ಸಚಿವರಿಂದಲೂ ಅಂತಹ ಮನವಿ ಬಂದಿಲ್ಲ. ಪಕ್ಷದ ಅಧ್ಯಕ್ಷನಾಗಿ ನಾನು ಹಾಗೂ ಸಿಎಂ ಸಿದ್ದರಾಮಯ್ಯನವರು ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದೇವೆ. ಜಿಎಸ್‌ಟಿ, ತೆರಿಗೆದಾರರಿಗೆಲ್ಲ ಯಾಕೆ ನೀಡಬೇಕು? ಅದನ್ನು ಪರಿಶೀಲಿಸುತ್ತೇವೆ. ಫಲಾನುಭವಿಗಳ ಗುರುತಿನ ಚೀಟಿ ವಿತರಣೆಗೆ ಚಿಂತಿಸುತ್ತಿದ್ದೇವೆ ಎನ್ನುತ್ತಾರೆ.

ಕಳೆದ ಆಗಸ್ಟ್ 15ರಂದು ನಡೆದ 78ನೇ ಸ್ವಾತಂತ್ರ‍್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಕೂಡ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಯಾಥಾವತ್ ಮುಂದುವರೆಯಲಿದೆ. ಕರ್ನಾಟಕದ ಈ ಯೋಜನೆ ದೇಶಕ್ಕೆ ಮಾದರಿ ಎಂದರೆ ಖಂಡಿತಾ ತಪ್ಪಾಗಲಾರದು ಎಂದು ಹೇಳುವ ಮೂಲಕ ಪರಿಷ್ಕರಣೆ ಕುರಿತ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಇದನ್ನೂ ಓದಿ: ಗೃಹಲಕ್ಷ್ಮಿ ಜೂನ್-ಜುಲೈ ಎರಡು ಕಂತಿನ ಹಣ ಒಟ್ಟಿಗೆ ಜಮಾ | ಈ ದಿನ ಸಿಗುತ್ತೆ ₹4000 Gruha Lakshmi Scheme Money Deposit


Spread the love
error: Content is protected !!