ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಶೀತ ಅಲೆ ಬೀಸುವ ಮುನ್ಸೂಚನೆ ಇದ್ದು; ಹವಾಮಾನ ಇಲಾಖೆ ಎಚ್ಚರಿಕೆ (Karnataka Cold Wave Warning) ನೀಡಿದೆ. ರಾಜ್ಯದ ಎಲ್ಲೆಲ್ಲಿ ಚಳಿ ಪ್ರಭಾವ ಹೇಗಿದೆೆ? ಎಂಬ ಮಾಹಿತಿ ಇಲ್ಲಿದೆ…
ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಹಲವೆಡೆ ಮತ್ತೆ ಥರಗುಟ್ಟಿಸುವ ಚಳಿ ಅನುಭವವಾಗುತ್ತಿದೆ. ಶೀತಗಾಳಿ, ಮೋಡ ಕವಿದ ವಾತಾವರಣ ಮತ್ತು ತಾಪಮಾನದಲ್ಲಿ ಆಗಿರುವ ಗಣನೀಯ ಇಳಿಕೆ ಇದಕ್ಕೆ ಪ್ರಮುಖ ಕಾರಣವಾಗಿದೆ.
ಕೆಲ ದಿನಗಳಿಂದ ಚಳಿ ಕಡಿಮೆಯಾಗಿದೆ ಎಂದು ನಿಟ್ಟುಸಿರು ಬಿಟ್ಟ ಜನರಿಗೆ ಈಗ ಮತ್ತೆ ಸ್ವೆಟರ್, ಶಾಲ್ ಹುಡುಕುವ ಪರಿಸ್ಥಿತಿ ಬಂದಿದೆ. ಹವಾಮಾನ ಇಲಾಖೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಶಿತ ಅಲೆ ಎಚ್ಚರಿಕೆ ನೀಡಿದೆ.
Minimum Temperature Drops- ಕನಿಷ್ಠ ತಾಪಮಾನದಲ್ಲಿ ಭಾರೀ ಇಳಿಕೆ
ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಬಹಳ ಕಡಿಮೆಯಾಗಿ ದಾಖಲಾಗಿದೆ. ನಿನ್ನೆ ಜನವರಿ 8ರಂದು ದಾವಣಗೆರೆ, ವಿಜಯಪುರ, ಬೀದರ್ ಜಿಲ್ಲೆಗಳಲ್ಲಿ ತಲಾ 9°C ತಾಪಮಾನ ಇದೆ.
ಧಾರವಾಡದಲ್ಲಿ 9.8°C, ಚಿಂತಾಮಣಿ 10°C, ಗದಗ 10.8°C, ಹಾಗೂ ಹಾವೇರಿಯಲ್ಲಿ 10.6°C ತಾಪಮಾನ ದಾಖಲಾಗಿದೆ. ಈ ಅಂಕಿ-ಅಂಶಗಳು ಚಳಿಯ ತೀವ್ರತೆಯನ್ನು ಸ್ಪಷ್ಟವಾಗಿ ತೋರಿಸುತ್ತವೆ. ವಿಶೇಷವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಚಳಿಯಿಂದ ತತ್ತರಿಸುವಂತಾಗಿದೆ.
Colder Days Ahead?- ಮುಂದಿನ ದಿನಗಳಲ್ಲಿ ಇನ್ನಷ್ಟು ಚಳಿ?
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಮುಂದಿನ ಐದು ದಿನಗಳಲ್ಲಿ ಕೆಲ ಪ್ರದೇಶಗಳಲ್ಲಿ 3 ರಿಂದ 5 ಡಿಗ್ರಿ ಸೆಲ್ಸಿಯಸ್ ತನಕ ತಾಪಮಾನ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ.
ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಶೀತ ಅಲೆ ಬೀಸಲಿದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ. ಈ ಭಾಗಗಳ ಜನರು ಹೆಚ್ಚು ಜಾಗರೂಕರಾಗಿರಬೇಕು.

ಇದನ್ನೂ ಓದಿ: Weekly Horoscope- ವಾರ ಭವಿಷ್ಯ: ಈ ವಾರ ಯಾರಿಗೆ ಲಕ್? ಯಾರಿಗೆ ಎಚ್ಚರಿಕೆ?
Below-Normal Temperatures- ಸಾಮಾನ್ಯಕ್ಕಿಂತ ಕಡಿಮೆ ಉಷ್ಣಾಂಶ
ಕರಾವಳಿ ಪ್ರದೇಶಗಳನ್ನು ಹೊರತುಪಡಿಸಿ ಮೈಸೂರು, ಮಂಡ್ಯ, ಚಿತ್ರದುರ್ಗ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಸಾಮಾನ್ಯಗಿಂತ 3-6 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ.
ಇದರಿಂದ ಬೆಳಗಿನ ಹೊತ್ತಿನಲ್ಲಿ ಮತ್ತು ರಾತ್ರಿ ಸಮಯದಲ್ಲಿ ಚಳಿ ಹೆಚ್ಚು ಅನುಭವವಾಗುತ್ತಿದೆ. ಮಕ್ಕಳು, ವೃದ್ಧರು ಮತ್ತು ಆರೋಗ್ಯ ಸಮಸ್ಯೆ ಇರುವವರು ಹೆಚ್ಚಾಗಿ ಕಾಳಜಿ ವಹಿಸುವುದು ಅಗತ್ಯ.
Rain Alert in Some Areas- ಕೆಲವೆಡೆ ಮಳೆ ಮುನ್ಸೂಚನೆ
ಹವಾಮಾನ ಬದಲಾವಣೆಯ ಪರಿಣಾಮವಾಗಿ ಬೆಂಗಳೂರು ನಗರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಸೇರಿದಂತೆ ದಕ್ಷಿಣ ಮತ್ತು ಮಧ್ಯ ಕರ್ನಾಟಕದ ಕೆಲ ಭಾಗಗಳಲ್ಲಿ ಮುಂದಿನ ಐದು ದಿನ ತುಂತುರು ಮಳೆಯಾಗುವ ಸಾಧ್ಯತೆ ಇದೆ.
ಚಳಿ ಜೊತೆಗೆ ಮಳೆ ಬಿದ್ದರೆ ತಾಪಮಾನ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇರುವುದರಿಂದ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ.
Cold Weather Tips- ಚಳಿಗೆ ಸಣ್ಣ ಸಲಹೆ
ಬೆಳಗ್ಗೆ ಮತ್ತು ರಾತ್ರಿ ಸಮಯದಲ್ಲಿ ಬೆಚ್ಚಗಿನ ಬಟ್ಟೆ ಧರಿಸಿ. ಚಳಿ ಹೆಚ್ಚಿರುವ ಪ್ರದೇಶಗಳಲ್ಲಿ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸಿ. ವೃದ್ಧರು ಮತ್ತು ಮಕ್ಕಳ ಆರೋಗ್ಯದ ಮೇಲೆ ವಿಶೇಷ ನಿಗಾ ಇರರಲಿ. ರೈತರು ಹವಾಮಾನ ಮಾಹಿತಿ ಗಮನಿಸಿ ಬೆಳೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಲಿ.
ಒಟ್ಟಿನಲ್ಲಿ, ರಾಜ್ಯದಲ್ಲಿ ಮತ್ತೆ ಚಳಿ ತನ್ನ ಪ್ರಭಾವ ತೋರಿಸಲು ಶುರು ಮಾಡಿದೆ. ಹವಾಮಾನ ಇಲಾಖೆಯ ಮುನ್ಸೂಚನೆಗಳನ್ನು ಗಮನಿಸುತ್ತಾ, ಆರೋಗ್ಯ ಮತ್ತು ದೈನಂದಿನ ಜೀವನದಲ್ಲಿ ಅಗತ್ಯ ಎಚ್ಚರಿಕೆ ವಹಿಸುವುದೇ ಉತ್ತಮ.