ಸಿಇಟಿ ಫಲಿತಾಂಶ (Karnataka CET 2025 Result) ಬಿಡುಗಡೆ ಯಾವಾಗ ಎಂದು ಕಾಯುತ್ತಿರುವ ಲಕ್ಷಾಂತರ ಅಭ್ಯರ್ಥಿಗಳಿಗೆ, ಫಲಿತಾಂಶ ರಿಸಲ್ಟ್ ಕುರಿತ ಅಪ್‌ಡೇಟ್ ಇಲ್ಲಿದೆ…
ರಾಜ್ಯದ ಲಕ್ಷಾಂತರ ಪಿಯುಸಿ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸುಗಳ ಪ್ರವೇಶ ಪಡೆಯುವ ಕನಸು ಕಂಡು, ಕಳೆದ ಏಪ್ರಿಲ್ ತಿಂಗಳಲ್ಲಿ ನಡೆದ UGCET 2025 (ಕರ್ನಾಟಕ ಸಿಇಟಿ) ಪರೀಕ್ಷೆ ಬರೆದಿದ್ದರು. ಇದೀಗ ಅವರ ಈ ನಿರೀಕ್ಷೆಗೆ ಉತ್ತರ ನೀಡುವ ಘಳಿಗೆ ಹತ್ತಿರವಾಗಿದ್ದು, ಫಲಿತಾಂಶ ಪ್ರಕಟಣೆ ಶೀಘ್ರದಲ್ಲೇ ನಡೆಯಲಿದೆ ಎಂಬ ದೃಢ ಮಾಹಿತಿ ಲಭ್ಯವಾಗಿದೆ.
UGCET (Under Graduate Common Entrance Test) Karnataka Examination Authority (KEA) ನಡೆಸುವ ಪ್ರಮುಖ ಪರೀಕ್ಷೆಯಾಗಿದ್ದು, ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್, ಅಗ್ರಿಕಲ್ಚರ್, ಆಯುಷ್, ಫಾರ್ಮಸಿ, ಮತ್ತು ಇತರೆ ವೃತ್ತಿಪರ ಪದವಿ ಕೋರ್ಸ್’ಗಳ ಪ್ರವೇಶಕ್ಕೆ ಅವಕಾಶ ಒದಗಿಸುತ್ತದೆ.
Karnataka Weather Alert- ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ | ನಾಲ್ಕು ದಿನ ಯೆಲ್ಲೋ ಅಲರ್ಟ್ ಘೋಷಣೆ
UGCET 2025 ಪರೀಕ್ಷೆಯ ವಿಶೇಷತೆಗಳು
ಈ ವರ್ಷದ ಪರೀಕ್ಷೆ ಏಪ್ರಿಲ್ 16 ಮತ್ತು 17ರಂದು ರಾಜ್ಯದಾದ್ಯಂತ 500ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಈ ಬಾರಿ ಪರೀಕ್ಷೆಗೆ 3.30 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿ ಭಾಗವಹಿಸಿದ್ದಾರೆ.
ಮೊದಲ ಬಾರಿಗೆ ಕ್ಯೂಆರ್ ಕೋಡ್ ಮುಖಾಂತರ ಮುಖಚಹರೆ ದೃಢೀಕರಣ ವ್ಯವಸ್ಥೆ ಜಾರಿಗೆ ಬಂದಿದೆ. ವೆಬ್‌ಕಾಸ್ಟಿಂಗ್ ಮೂಲಕ ನಿಗಾ ಇಡಲಾಗಿತ್ತು. ಟೆಕ್ನಾಲಜಿಯನ್ನು ವ್ಯಾಪಕವಾಗಿ ಬಳಸಲಾದ ಸಿಇಟಿ, ಪ್ರವೇಶ ಪರೀಕ್ಷೆಗಳ ಮಾದರಿಯಾಗಿ ಪರಿಗಣಿಸಲಾಗಿದೆ.
ಫಲಿತಾಂಶ ಪ್ರಕಟಣೆ ವಿಳಂಬಕ್ಕೆ ಕಾರಣವೇನು?
UGCET ಫಲಿತಾಂಶವನ್ನು ಹೊರಡಿಸುವ ಮೊದಲು ಈ ಕೆಳಕಂಡ ಇತರ ಕೆಲವು ಮುಖ್ಯ ಪರೀಕ್ಷೆಗಳ ಫಲಿತಾಂಶಗಳನ್ನು ಪಡೆಯುವುದು ಅಗತ್ಯವಾಗಿದೆ:
- ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ (ರಾಜ್ಯ ಶಿಕ್ಷಣ ಮಂಡಳಿ)
- ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ- ಮೇ 13 ರಂದು ಪ್ರಕಟಗೊಂಡಿದೆ.
- ICSE ಫಲಿತಾಂಶ
- ಕೃಷಿ ಪದವಿಗೆ ಸಂಬಂಧಿಸಿದ ಪ್ರಾಯೋಗಿಕ ಪರೀಕ್ಷೆಗಳ ಅಂಕಪಟ್ಟಿ- ಇದನ್ನು ವಿವಿಧ ಕೃಷಿ ವಿಶ್ವವಿದ್ಯಾಲಯಗಳು KEAಗೆ ಒದಗಿಸಬೇಕು.
ಈ ಅಂಕಗಳನ್ನು ಪರಿಗಣಿಸಿ, ಏಇಂ ಫಲಿತಾಂಶದ ಲೆಕ್ಕಾಚಾರ ನಡೆಸುತ್ತದೆ. PUC ಅಂಕ ಮತ್ತು ಅಇಖಿ ಅಂಕಗಳನ್ನು ಶೇ.50:50 ಅನುಪಾತದಲ್ಲಿ ಪರಿಗಣಿಸಿ ಒಟ್ಟಾರೆ ರ‍್ಯಾಂಕ್ ನೀಡಲಾಗುತ್ತದೆ.
ಅಧಿಕೃತ ಫಲಿತಾಂಶ ಬಿಡುಗಡೆ ಯಾವಾಗ?
ಉನ್ನತ ಶಿಕ್ಷಣ ಸಚಿವರ ಡಾ. ಎಂ.ಸಿ ಸುಧಾಕರ್ ಅವರು ನೀಡಿದ ಮಾಹಿತಿ ಪ್ರಕಾರ ಸಿಇಟಿ ಫಲಿತಾಂಶ ಸಂಪೂರ್ಣವಾಗಿ ತಯಾರಾಗಿದೆ. ಆದರೆ CBSE, ಕೃಷಿ ಹಾಗೂ PUC-II ಪರೀಕ್ಷೆಗಳ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ. ಈ ಫಲಿತಾಂಶಗಳು ಪ್ರಕವಾದ ತಕ್ಷಣ ಸಿಇಟಿ ಫಲಿತಾಂಶ ಪ್ರಕಟಿಸಲಾಗುವುದು.
ಈ ಪೈಕಿ ಕಳೆದ ಮೇ 13ರಂದು ಸಿಬಿಎಸ್‌ಇ 10ನೇ ಮತ್ತು 12ನೇ ತರಗತಿ ಫಲಿತಾಂಶ ಪ್ರಕಟವಾಗಿದೆ. ಮೇ 17ಕ್ಕೆ PUC-II ಪರೀಕ್ಷೆಗಳ ಫಲಿತಾಂಶ ಬಿಡುಗಡೆ ನಿರೀಕ್ಷೆ ಇದೆ. ಹೀಗಾಗಿ ಇದೇ ಮೇ 20ರೊಳಗೆ ಸಿಇಟಿ ಫಲಿತಾಂಶ ಪ್ರಕಟವಾಗಬಹುದು ಎನ್ನಲಾಗುತ್ತಿದೆ.
ಫಲಿತಾಂಶವನ್ನು ಪರಿಶೀಲಿಸುವ ವಿಧಾನ
UGCET 2025 ಫಲಿತಾಂಶವನ್ನು ನೋಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:
- KEA ಅಧಿಕೃತ ವೆಬ್‌ಸೈಟ್ https://cetonline.karnataka.gov.in/keaಗೆ ಭೇಟಿ ನೀಡಿ.
- UGCET 2025 RESULT ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ Register Number ಮತ್ತು Date of Birth ನಮೂದಿಸಿ.
- Submit ಕ್ಲಿಕ್ ಮಾಡಿದ ಮೇಲೆ, ನಿಮ್ಮ ವೈಯಕ್ತಿಕ ಫಲಿತಾಂಶ ಪ್ರದರ್ಶಿತವಾಗುತ್ತದೆ.
- ಫಲಿತಾಂಶವನ್ನು ಡೌನ್‌ಲೋಡ್ ಮಾಡಿ ಅಥವಾ ಪ್ರಿಂಟ್‌ಔಟ್ ತೆಗೆದುಕೊಳ್ಳಿ.
ವಿದ್ಯಾರ್ಥಿ ಸ್ನೇಹಿ ಮೊಬೈಲ್ ಅಪ್ಲಿಕೇಶನ್
ಏಇಂ ಈ ಬಾರಿ ವಿಶೇಷವಾಗಿ ವಿದ್ಯಾರ್ಥಿ ಸ್ನೇಹಿ ಸೇವೆಗಾಗಿ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಈ ಅಪ್ಲಿಕೇಶನ್ ಮೂಲಕ ಕೆಳಕಂಡ ಎಲ್ಲಾ ಸೇವೆಗಳನ್ನು ಪಡೆಯಬಹುದು:
- ಆನ್‌ಲೈನ್ ಅರ್ಜಿ ಭರ್ತಿ
- ಆಪ್ಷನ್ ಎಂಟ್ರಿ
- ಸೀಟು ಹಂಚಿಕೆ ಸ್ಥಿತಿ ಪರಿಶೀಲನೆ
- ಶುಲ್ಕ ಪಾವತಿ
- ಡಾಕ್ಯುಮೆಂಟ್ ಅಪ್ಲೋಡ್
- ಅಲರ್ಟ್ ಸಂದೇಶಗಳು
Google Play Store ಅಥವಾ KEA ವೆಬ್‌ಸೈಟ್ ಮೂಲಕ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬಹುದು. ಇದರ ಮೂಲಕ ಬಹುತೇಕ ಎಲ್ಲಾ ಪ್ರವೇಶ ಸಂಬಂಧಿತ ಹಂತಗಳನ್ನು ವಿದ್ಯಾರ್ಥಿಗಳೇ ಖುದ್ದು ಪೂರ್ಣಗೊಳಿಸಬಹುದು.
ಸಿಇಟಿ ಫಲಿತಾಂಶದ ನಂತರ ಮುಂದಿನ ಹಂತಗಳು
UGCET ಫಲಿತಾಂಶ ಪ್ರಕಟವಾದ ನಂತರ KEA ಪ್ರವೇಶದ ಮುಂದಿನ ಹಂತಗಳ ಬಗ್ಗೆ ಪ್ರಕಟಣೆ ನೀಡಲಿದೆ. ಸಾಮಾನ್ಯವಾಗಿ ಈ ಹಂತಗಳು ಈ ರೀತಿ ಇರುತ್ತವೆ:
- ವೈಯಕ್ತಿಕ ಡಾಕ್ಯುಮೆಂಟ್ ಪರಿಶೀಲನೆ (Document Verification)
- ಆಪ್ಷನ್ ಎಂಟ್ರಿ (Option Entry)
- ಸೀಟು ಹಂಚಿಕೆ ಪ್ರಕ್ರಿಯೆ
- ಅಂತಿಮ ಪ್ರವೇಶ ಪತ್ರ ಡೌನ್‌ಲೋಡ್
- ಕಾಲೇಜ್‌ಗೆ ಹಾಜರಾಗುವುದು
ವಿದ್ಯಾರ್ಥಿಗಳಿಗೆ ಮಹತ್ವದ ಸೂಚನೆಗಳು
ಫಲಿತಾಂಶ ಪ್ರಕಟದ ನಂತರ ಯಾವುದೇ ತೊಂದರೆಯಿಲ್ಲದಂತೆ ಮುಂದಿನ ಹಂತಗಳಲ್ಲಿ ಭಾಗವಹಿಸಲು ಈಗಾಗಲೇ ಎಲ್ಲಾ ಡಾಕ್ಯುಮೆಂಟ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳಿ.
ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ನ್ನು ನಿಯಮಿತವಾಗಿ ಪರಿಶೀಲಿಸಿ. ಶಂಕೆಗಳಿದ್ದರೆ KEA ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ ಅಥವಾ ಕಮನ್ ಸರ್ವೀಸ್ ಸೆಂಟರ್‌ಗೆ ಭೇಟಿ ನೀಡಿ.
UGCET 2025 ಪರೀಕ್ಷೆಯಲ್ಲಿ ಭಾಗವಹಿಸಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಾಶಯಳು. ನಿಮ್ಮ ಕನಸುಗಳ ವೃತ್ತಿಪರ ಕೋರ್ಸು ಸೇರಲು ಇದು ಪ್ರಾರಂಭಿಕ ಹಂತ. ಸಾಧನೆಯ ದಾರಿಯಲ್ಲಿ ನೀವು ಮತ್ತಷ್ಟು ಬೆಳೆಯಲೆಂದು ಹಾರೈಕೆ…
Education Loan- ₹10 ಲಕ್ಷದಿಂದ ₹60 ಲಕ್ಷದ ವರೆಗೆ ಶಿಕ್ಷಣ ಸಾಲ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…