BDA Flat Mela 2025- ಸರ್ಕಾರದಿಂದ ಬಿಡಿಎ ಸಬ್ಸಿಡಿ ಫ್ಲ್ಯಾಟ್ ಹಂಚಿಕೆಗೆ ಅರ್ಜಿ ಆಹ್ವಾನ | ಸ್ಥಳದಲ್ಲಿಯೇ ಸಿಗಲಿದೆ ಬ್ಯಾಂಕ್ ಲೋನ್…

Spread the love

WhatsApp Group Join Now
Telegram Group Join Now

ಬಿಡಿಎ (BDA) ವತಿಯಿಂದ ರಾಜ್ಯ ಸರ್ಕಾರ ರಿಯಾಯ್ತಿ ದರದಲ್ಲಿ 2BHK, 3BHK ಸುಸಜ್ಜಿತ ಫ್ಲ್ಯಾಟ್‌ಗಳ ಹಂಚಿಕೆಗೆ ಮುಂದಾಗಿದ್ದು; ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

ರಾಜ್ಯ ಸರ್ಕಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (Bangalore Development Authority- BDA) ವತಿಯಿಂದ ಬೆಂಗಳೂರಿನಲ್ಲಿ ಭರ್ಜರಿ ವಸತಿ ಮೇಳವನ್ನು ಇದೇ ಮೇ 17, 2025ರಂದು ಆಯೋಜಿಸಲಾಗಿದೆ. ಮನೆ ಖರೀದಿಯ ಕನಸು ಹೊಂದಿರುವ ಕುಟುಂಬಗಳಿಗೆ ಇದು ಮಹತ್ವದ ಅವಕಾಶವಾಗಿದೆ.

ಈ ಮೇಳದಲ್ಲಿ ಶೇಕಡಾ 25ರಷ್ಟು ಮುಂಗಡ ಹಣ ಪಾವತಿ ಮಾಡಿದರೆ ಸಾಕು ತಕ್ಷಣವೇ ಫ್ಲ್ಯಾಟ್ ಹಂಚಿಕೆ ಆಗಲಿದೆ. ಮಾತ್ರವಲ್ಲ ಸ್ಥಳದಲ್ಲಿಯೇ ಹೋಮ್ ಲೋನ್ ಅನುಮೋದನೆಯ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಇದೊಂದು ‘ಒನ್ ಸ್ಟಾಪ್ ಸೊಲ್ಯೂಶನ್’ ಆಗಿದ್ದು, ಮನೆ ಆಯ್ಕೆ, ಹಂಚಿಕೆ ಪತ್ರ, ಬ್ಯಾಂಕ್ ಸಾಲ ಅನುಮೋದನೆ ಸೇರಿ ಒಂದೇ ಜಾಗದಲ್ಲಿ ಎಲ್ಲವೂ ಪೂರ್ತಿಗೊಳ್ಳುವ ಮೂಲಕ ಕನಸಿನ ಮನೆಯನ್ನು ಸ್ವಂತ ಮಾಡಿಕೊಳ್ಳುವ ಅವಕಾಶ ಇಲ್ಲಿದೆ.

Digital Hakkupatra Scheme- ಮೇ 20ಕ್ಕೆ ಅನಧಿಕೃತ ಆಸ್ತಿಗಳಿಗೆ ಸರ್ಕಾರದಿಂದ ಒಂದು ಲಕ್ಷ ಹಕ್ಕುಪತ್ರ ವಿತರಣೆ | ಯಾರಿಗೆಲ್ಲ ಸಿಗಲಿದೆ ಪಟ್ಟಾಖಾತೆ?

ಮೇಳದ ಪ್ರಮುಖ ವಿವರಗಳು
  • ಮೇಳ ನಡೆಯುವ ದಿನಾಂಕ: 17-05-2025 (ಶನಿವಾರ)
  • ಸಮಯ: ಬೆಳಿಗ್ಗೆ 9 ರಿಂದ ಸಂಜೆ 5ರ ವರೆಗೆ
  • ಸ್ಥಳ: ನಾಡಪ್ರಭು ಕೆಂಪೇಗೌಡ ಬಡಾವಣೆ, ಕೊಮ್ಮಘಟ್ಟ, ಬೆಂಗಳೂರು ದಕ್ಷಿಣ

ಈ ಮೇಳದಲ್ಲಿ ಭಾಗವಹಿಸಲು ಆಸಕ್ತ ಖರೀದಿದಾರರು ಯಾವುದೇ ಮಧ್ಯವರ್ತಿಗಳ ಅಗತ್ಯವಿಲ್ಲದೆ ನೇರವಾಗಿ ಬಂದು ಫ್ಲ್ಯಾಟ್ ಆಯ್ಕೆ ಮಾಡಬಹುದು. ಎಲ್ಲ ಸಹಾಯ, ಮಾರ್ಗದರ್ಶನ ಸ್ಥಳದಲ್ಲಿಯೇ ಸಿಗಲಿದೆ.

ಲಭ್ಯವಿರುವ ಫ್ಲ್ಯಾಟ್‌ಗಳ ಬೆಲೆ, ವಿಸ್ತಿರ್ಣದ ವಿವರಗಳು
  • ಎನ್‌ಪಿಎಲ್ ಫೇಸ್-1ರಲ್ಲಿ 3BHKಯ 1314.54 ಚದರ ಅಡಿ ವಿಸ್ತೀರ್ಣದ ಒಟ್ಟು 480 ಮನೆಗಳಿವೆ. ತಲಾ ಒಂದು ಮನೆಗೆ ₹65.20 ಲಕ್ಷ ಬೆಲೆ ನಿಗದಿಪಡಿಸಲಾಗಿದೆ.
  • ಎನ್‌ಪಿಎಲ್ ಫೇಸ್-2ರಲ್ಲಿ 2BHKಯ 978 ಚದರ ಅಡಿ ವಿಸ್ತೀರ್ಣದ ಒಟ್ಟು 360 ಮನೆಗಳಿವೆ. ತಲಾ ಒಂದು ಮನೆಗೆ ₹53.85 ಲಕ್ಷ ದರ ನಿಗದಿಪಡಿಸಲಾಗಿದೆ.
  • ಎನ್‌ಪಿಕೆಎಲ್ ಫೇಸ್-3ರಲ್ಲಿ 2BHKಯ 904.27 ಚದರ ಅಡಿ ವಿಸ್ತೀರ್ಣದ ಒಟ್ಟು 336 ಮನೆಗಳಿವೆ. ಇವುಗಳಿಗೆ ತಲಾ ₹48.70 ಲಕ್ಷ ಬೆಲೆ ನಿಗದಿಪಡಿಸಲಾಗಿದೆ.

e-Pouthi- ಮನೆ ಬಾಗಿಲಿಗೆ ಇ-ಪೌತಿ | ರೈತರ ಖಾತೆ ಸಮಸ್ಯೆ ಪರಿಹಾರಕ್ಕೆ ಕಂದಾಯ ಇಲಾಖೆ ಆಂದೋಲನ

ಫ್ಲ್ಯಾಟ್‌ಗಳ ವಿಶೇಷತೆಗಳು

ಈ ಎಲ್ಲ ಫ್ಲ್ಯಾಟ್‌ಗಳು ಉತ್ತಮ ವಿನ್ಯಾಸ, ಬೆಳಕು, ಗಾಳಿಗೆ ಸೂಕ್ತವಾದ ಸೌಲಭ್ಯ ಹೊಂದಿದ್ದು, ಆಧುನಿಕ ಕಟ್ಟಡ ತಂತ್ರಜ್ಞಾನದಿಂದ ನಿರ್ಮಿಸಲ್ಪಟ್ಟಿವೆ:

  • ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸಿದ ಮನೆಗಳಾಗಿದ್ದು; ಉದ್ಯಾನವನ, ಪ್ಲೇ ಏರಿಯಾ, ಸುಸಜ್ಜಿತ ರಸ್ತೆ ವ್ಯವಸ್ಥೆ ಇದೆ.
  • ಸದ್ಯ ಶುದ್ಧ ನೀರಿನ ಪೂರೈಕೆಗೆ ಕೊಳವೆಬಾವಿ ವ್ಯವಸ್ಥೆ ಇದ್ದು; ಜಲಮಂಡಳಿ ಯೋಜನೆ ಪ್ರಗತಿಯಲ್ಲಿದೆ.
  • ನಿತ್ಯ ಬಳಕೆಯ ಅಗತ್ಯಕ್ಕೆ ಬರುವ ಎಲ್ಲಾ ವಸ್ತುಗಳ ಮಾರುಕಟ್ಟೆ ಸಮೀಪದಲ್ಲಿದೆ.
  • RERA ಪ್ರಮಾಣೀಕೃತವಾಗಿದ್ದು ಖರೀದಿದಾರರ ಹಕ್ಕುಗಳಿಗೆ ಕಾನೂನು ರಕ್ಷಣೆ ಇದೆ.
  • ಪ್ರಯಾಣದ ಅನುಕೂಲತೆಗೆ ಚಲ್ಲಘಟ್ಟ ಮೆಟ್ರೋ ನಿಲ್ದಾಣ ಕೇವಲ 2.5 ಕಿ.ಮೀ. ಹಾಗೂ ಬೆಂಗಳೂರು-ಮೈಸೂರು ಹೆದ್ದಾರಿ ಕೇವಲ 1.6 ಕಿ.ಮೀ. ಸಮೀಪದಲ್ಲಿವೆ.
  • ಬೆಂಗಳೂರು ದಕ್ಷಿಣ ಪ್ರದೇಶದಲ್ಲಿ ಹೆದ್ದಾರಿ ಸಂಪರ್ಕ, ಶಾಲೆಗಳು, ಆಸ್ಪತ್ರೆಗಳು ಮತ್ತು ಶಾಪಿಂಗ್ ಮಾಲ್‌ಗಳು ಕೂಡ ಹತ್ತಿರದಲ್ಲಿವೆ.
ಬಿಡಿಎ ವತಿಯಿಂದ ರಾಜ್ಯ ಸರ್ಕಾರ ರಿಯಾಯ್ತಿ ದರದಲ್ಲಿ 2BHK, 3BHK ಸುಸಜ್ಜಿತ ಫ್ಲ್ಯಾಟ್‌ಗಳ ಹಂಚಿಕೆಗೆ ಮುಂದಾಗಿದ್ದು; ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ...
BDA Flat Mela 2025 Bangalore Loan Details
ಸ್ಥಳದಲ್ಲಿಯೇ ಬ್ಯಾಂಕ್ ಸಾಲ ಸೌಲಭ್ಯ

ಈ ಮೇಳದ ಪ್ರಮುಖ ಆಕರ್ಷಣೆ ಎಂದರೆ, ಭಾರತೀಯ ಸ್ಟೇಟ್ ಬ್ಯಾಂಕ್ (SBI), ಕೆನರಾ ಬ್ಯಾಂಕ್, HDFC ಬ್ಯಾಂಕ್, LIC  ಹೌಸಿಂಗ್ ಫೈನಾನ್ಸ್, ICICI ಬ್ಯಾಂಕ್ ಮತ್ತು ಇತರ ಪ್ರಮುಖ ಬ್ಯಾಂಕ್‌ಗಳು ಮೇಳದಲ್ಲಿ ಭಾಗವಹಿಸುತ್ತಿವೆ.

ಈ ಬ್ಯಾಂಕ್‌ಗಳು ಕಡಿಮೆ ಬಡ್ಡಿದರದಲ್ಲಿ ಫ್ಲ್ಯಾಟ್‌ಗಳ ಖರೀದಿಗೆ ಸ್ಥಳದಲ್ಲಿಯೇ ಗೃಹ ಸಾಲವನ್ನು ಅನುಮೋದಿಸುತ್ತಿದ್ದು; ಅರ್ಜಿ ಪರಿಶೀಲನೆ, ಮಂಜೂರಾತಿ ಪ್ರಕ್ರಿಯೆ ಎಲ್ಲವೂ ಸ್ಥಳದಲ್ಲಿಯೇ ಮುಗಿಯಲಿದೆ.

Karnataka Govt Staff Transfer- ಮೇ 15ರಿಂದ ಸರ್ಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆ ಆರಂಭ | ಯಾರಿಗೆಲ್ಲ ಸಿಗಲಿದೆ ಅವಕಾಶ? ಇಲ್ಲಿದೆ ಸಂಪೂರ್ಣ ಮಾಹಿತಿ

ಇತರೆ ಮನೆ ಯೋಜನೆಗಳ ಪರಿಚಯ

ಬಿಡಿಎ ವತಿಯಿಂದ ಮೇಳದಲ್ಲಿ ಕೊಮ್ಮಘಟ್ಟ ವಸತಿ ಯೋಜನೆ ಮಾತ್ರವಲ್ಲದೆ ಈ ಕೆಳಕಂಡ ಇನ್ನೂ ಎರಡು ಪ್ರಮುಖ ಯೋಜನೆಗಳ ಫ್ಲ್ಯಾಟ್‌ಗಳಿಗೂ ಹಂಚಿಕೆ ನೀಡಲಾಗುತ್ತಿದೆ.

  • ಕಣಿಮಿಣಿಕೆ ವಸತಿ ಯೋಜನೆ: ಬಡವರು ಹಾಗೂ ಕಡಿಮೆ ಆದಾಯದ ವರ್ಗದವರಿಗೆ ತಕ್ಕಂತೆ ವಿನ್ಯಾಸಗೊಳಿಸಿದ 1BHK ಮತ್ತು 2BHK ಮನೆಗಳು ಇಲ್ಲಿವೆ.
  • ಡಾ. ಪುನೀತ್ ರಾಜ್‌ಕುಮಾರ್ ಫ್ರೈಡ್ ವಿಲ್ಲಾ ಯೋಜನೆ: ವಿಶಾಲ ವಿನ್ಯಾಸ, ಸ್ವತಂತ್ರ ವಾಸದ ಅನುಭವ, ವಿಶೇಷ ಡಿಸೈನ್ ಮತ್ತು ಸಮಗ್ರ ವ್ಯವಸ್ಥೆಗಳೊಂದಿಗೆ ಅತಿ ಕಡಿಮೆ ಬೆಲೆಯಲ್ಲಿ, ಅತ್ಯುತ್ತಮ ಗುಣಮಟ್ಟದ ಫ್ಲ್ಯಾಟ್‌ಗಳು ಇಲ್ಲಿವೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ಆದಾಯ ಪ್ರಮಾಣಪತ್ರ
  • ವಿಳಾಸದ ದಾಖಲೆ
  • ಬ್ಯಾಂಕ್ ಖಾತೆಯ ವಿವರಗಳು (ಮುಂಗಡ ಪಾವತಿಗಾಗಿ)
ಈ ಮೇಳ ಯಾಕೆ ಮಹತ್ವಪೂರ್ಣ?
  • ಶೇ.25ರಷ್ಟು ಪಾವತಿಸಿ ತಕ್ಷಣದ ಹಂಚಿಕೆ ಪತ್ರ
  • ಸ್ಥಳದಲ್ಲಿಯೇ ಬ್ಯಾಂಕ್ ಲೋನ್ ಅನುಮೋದನೆ
  • ಬೆಂಗಳೂರು ನಗರದ ವಿಶ್ವಾಸಾರ್ಹ ಯೋಜನೆ
  • ಸರ್ಕಾರಿ ದೃಢತೆ, ಭದ್ರತೆ ಮತ್ತು ನೈರ್ಮಲ್ಯ
  • ಮಧ್ಯಮ ವರ್ಗದವರು ಮತ್ತು ಉದ್ಯೋಗಸ್ಥರಿಗೆ ನೇರ ಪ್ರಯೋಜನ

ಈ ಮೇಳವು ಸರ್ಕಾರದೊಂದಿಗೆ ನೇರವಾಗಿ ಮನೆ ಖರೀದಿಗೆ ಅವಕಾಶ ಒದಗಿಸುತ್ತಿದೆ. ಕನಸಿನ ಮನೆ ಖರೀದಿಗಾಗಿ ನೀವು ಕಾಯುತ್ತಿದ್ದರೆ, ಮರೆಯದೇ ಇದೇ ಮೇ 17ರಂದು ಕೊಮ್ಮಘಟ್ಟದಲ್ಲಿ ನಡೆಯಲಿರುವ ಈ ಮೇಳಕ್ಕೆ ಬನ್ನಿ, ನಿಮ್ಮ ಸ್ವಂತ ಮನೆ ಕನಸು ಪೂರೈಸಿಕೊಳ್ಳಿ…

ಹೆಚ್ಚಿನ ಮಾಹಿತಿಗೆ:

E-Swathu Rural Property- ಸರ್ಕಾರಿ ಜಾಗ, ಕೃಷಿ ಭೂಮಿಯಲ್ಲಿ ಕಟ್ಟಿರುವ ಮನೆ, ಸೈಟುಗಳಿಗೆ ಸಕ್ರಮ ಭಾಗ್ಯ | ಇ-ಸ್ವತ್ತು ಸಮಸ್ಯೆಗಳಿಗೆ ಸರ್ಕಾರದ ಪರಿಹಾರ

WhatsApp Group Join Now
Telegram Group Join Now


Spread the love
error: Content is protected !!