ಕೃಷಿ ಇಲಾಖೆಯ 1,138 ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆ ಅನುಮೋದನೆ | ಪಿಯುಸಿ ಪಾಸಾದವರಿಗೂ ಅವಕಾಶ Karnataka Agri Officers Recruitment 2024

Spread the love

Karnataka Agri Officers Recruitment 2024 : ಸಚಿವ ಸಂಪುಟ ಸಭೆಯಲ್ಲಿ (Cabinet meeting) ರಾಜ್ಯ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಕೃಷಿ ಇಲಾಖೆಯಲ್ಲಿ (Agriculture Department) ಖಾಲಿ ಇರುವ 1,100ಕ್ಕೂ ಹೆಚ್ಚು ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅನುಮೋದನೆ ದೊರೆತಿರುವ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊ೦ಡಿದ್ದು ಇದರ ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಕಳೆದ ಜುಲೈ 24ರಂದು ನಡೆದ ಸಚಿವ ಸಂಪುಟದಲ್ಲಿ ಶಾಸಕ ಎಚ್ ಡಿ ರೇವಣ್ಣ ಅವರ ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಕುರಿತ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ ಕೃಷಿ ಸಚಿವರು (Agricultural Minister) ಕೃಷಿ ಇಲಾಖೆ ಖಾಲಿ ಹುದ್ದೆಗಳ ವಿವರ ಹಾಗೂ ಆರ್ಥಿಕ ಇಲಾಖೆಯಿಂದ ಅನುಮೋದನೆ ದೊರೆತಿರುವ ಬಗ್ಗೆ ಮಾಹಿತಿ ಹಂಚಿಕೊ೦ಡಿದ್ದಾರೆ.

ಸಚಿವ ಸಂಪುಟದ ಅಧಿಕೃತ ಮಾಹಿತಿಯ ಪ್ರಕಾರ ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ವಿವರ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆಗಳು, ಆಯ್ಕೆಯಾದವರಿಗೆ ಸಿಗುವ ಮಾಸಿಕ ವೇತನ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ನೀಡಲಾಗಿದೆ….

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಆಗಸ್ಟ್’ನಿಂದ ಎಷ್ಟೆಷ್ಟು ಸಂಬಳ ಏರಿಕೆ? ಮೊಬೈಲ್’ನಲ್ಲೇ ಚೆಕ್ ಮಾಡಿ… 7th Pay Commission Calculation

Karnataka Agri Officers Recruitment 2024
ಖಾಲಿ ಹುದ್ದೆಗಳ ವಿವರ

ಕಳೆದ ಹಲವು ವರ್ಷಗಳಿಂದ ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ ಹಾಗೂ ಇತರೆ ಹುದ್ದೆಗಳ ನೇಮಕಾತಿ ನಡೆಯದೇ ಇರುವುದರಿಂದ ಕೃಷಿ ಇಲಾಖೆಯ ಯೋಜನೆಗಳನ್ನು ರೈತರಿಗೆ ಸಮರ್ಪಕವಾಗಿ ತಲುಪಿಸಲು ಆಗುತ್ತಿಲ್ಲ. ಜೊತೆಗೆ ರೈತರ ಇತರೆ ಕೆಲಸ ಕಾರ್ಯಗಳಿಗೂ ತೊಂದರೆ ಆಗುತ್ತಿದೆ. ಹೀಗಾಗಿ ಇಲಾಖೆಯ ಈ ಹುದ್ದೆಗಳನ್ನು ನೇಮಕಾತಿಗೆ ಸರ್ಕಾರ ಸನ್ನದ್ಧವಾಗಿದೆ. ಕೃಷಿ ಸಚಿವರ ಅಧಿಕೃತ ಮಾಹಿತಿಯ ಪ್ರಕಾರ ರಾಜ್ಯ ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ವಿವರ ಈ ಕೆಳಗಿನಂತಿದೆ:

  • ಕೃಷಿ ಅಧಿಕಾರಿ (Agricultural Officer) : 118 ಹುದ್ದೆಗಳು
  • ಸಹಾಯಕ ಕೃಷಿ ಅಧಿಕಾರಿ (Assistant Agricultural Officer) : 809 ಹುದ್ದೆಗಳು

ಕಲ್ಯಾಣ ಕರ್ನಾಟಕ ವೃಂದದ ಖಾಲಿ ಹುದ್ದೆಗಳು

  • ಕೃಷಿ ಅಧಿಕಾರಿ : 18 ಹುದ್ದೆಗಳು
  • ಸಹಾಯಕ ಕೃಷಿ ಅಧಿಕಾರಿ : 159 ಹುದ್ದೆಗಳು
  • ಬೆರಳಚ್ಚುಗಾರರು : 17 ಹುದ್ದೆಗಳು
  • ದ್ವಿತೀಯ ದರ್ಜೆ ಸಹಾಯಕರು : 17 ಹುದ್ದೆಗಳು

ಇದನ್ನೂ ಓದಿ: 5000 ಅಂಗನವಾಡಿ ಸರ್ಕಾರಿ ಮಾಂಟೆಸ್ಸರಿ ಟೀಚರ್ ನೇಮಕಾತಿ: ಯಾರಿಗೆಲ್ಲ ಸಿಗಲಿದೆ ಅವಕಾಶ? Govt Montessori Teacher Recruitment 2024

ಕೃಷಿ ಇಲಾಖೆಯಲ್ಲಿನ FDA, SDA ಹುದ್ದೆಗಳ ನೇಮಕಾತಿ ಮಾಹಿತಿ

ಕೃಷಿ ಸಚಿವರ ಮಾಹಿತಿ ಪ್ರಕಾರ ಕೃಷಿ ಇಲಾಖೆಯಲ್ಲಿ ಉಳಿಕೆ ಮೂಲ ವೃಂದದಡಿ ಹಾಗೂ ಕಲ್ಯಾಣ ಕರ್ನಾಟಕ ವೃಂದದಡಿ ಖಾಲಿ ಇರುವ ಎಫ್’ಡಿಎ ಹಾಗೂ ಎಸ್’ಡಿಎ ಹುದ್ದೆಗಳ ನೇಮಕಾತಿ ಕುರಿತು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲು ಕ್ರಮ ವಹಿಸಲಾಗಿದ್ದು; ಅಧಿಕೃತ ಮಾಹಿತಿ ಪ್ರಕಾರ ಖಾಲಿ ಇರುವ ಹುದ್ದೆಗಳು ಈ ಕೆಳಗಿನಂತಿವೆ:

ಪ್ರಥಮ ದರ್ಜೆ ಸಹಾಯಕ ಹುದ್ದೆಗಳು

  • ಉಳಿಕೆ ಮೂಲ ವೃಂದದಡಿ : 42 ಹುದ್ದೆಗಳು
  • ಕಲ್ಯಾಣ ಕರ್ನಾಟಕ ವೃಂದದಡಿ : 19 ಹುದ್ದೆಗಳು
  • ಒಟ್ಟು 61 ಹುದ್ದೆಗಳು

ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳು 

  • ಉಳಿಕೆ ಮೂಲ ವೃಂದದಡಿ : 53 ಹುದ್ದೆಗಳು
  • ಕಲ್ಯಾಣ ಕರ್ನಾಟಕ ವೃಂದದಡಿ : 12 ಹುದ್ದೆಗಳು
  • ಒಟ್ಟು 65 ಹುದ್ದೆಗಳು

ಇದನ್ನೂ ಓದಿ: 7ನೇ ವೇತನ ಆಯೋಗ ಜಾರಿ ಸರ್ಕಾರಿ ಆದೇಶ : ಸರಕಾರಿ ನೌಕರರಿಗೆ ಆಗಸ್ಟ್ ನಿಂದ ಸಿಗುವ ಸವಲತ್ತುಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ… Govt Employees Revised Pay Scale List

KPSC ಗೆ ಪ್ರಸ್ತಾವನೆ ಸಲ್ಲಿಕೆ

ಕಳೆದ ಒಂದು ವರ್ಷದಿಂದ ಕೃಷಿ ಇಲಾಖೆಯಲ್ಲಿನ ಹುದ್ದೆಗಳ ನೇಮಕಾತಿಯನ್ನು ಶೀಘ್ರದಲ್ಲಿಯೇ ಮಾಡಿಕೊಳ್ಳಲಾಗುವುದು ಎಂದು ಹೇಳುತ್ತಲೇ ಬರಲಾಗುತ್ತಿದೆ. ಆದರೆ ಈ ಬಾರಿ ನಿಶ್ಚಿತವಾಗಿಯೂ ನೇಮಕಾತಿ ನಡೆಸುವ ಪ್ರಯತ್ನಗಳು ನಡೆದಿವೆ.

ಜುಲೈ 24ರಂದು ನಡೆದ ಸಚಿವ ಸಂಪುಟದಲ್ಲಿ ಕೃಷಿ ಸಚಿವರು ಹಂಚಿಕೊ೦ಡ ಮಾಹಿತಿಯ ಪ್ರಕಾರ, ಕೃಷಿ ಅಧಿಕಾರಿ ಹಾಗೂ ಕೃಷಿ ಸಹಾಯಕ ಅಧಿಕಾರಿ ಹುದ್ದೆಗಳಿಗೆ ಈಗಾಗಲೇ ಅನುಮತಿ ದೊರೆತಿದ್ದು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಂದರೆ ಇನ್ನೇನು ಕೆಲವೇ ದಿನಗಳಲ್ಲಿ ಈ ಒಂದು ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ.

Karnataka Agri Officer Recruitment 2024

ಇದನ್ನೂ ಓದಿ: ಅಂಗನವಾಡಿ LKG-UKG ಟೀಚರ್ ನೇಮಕಾತಿ: ಹೇಗೆ ನಡೆಯಲಿದೆ ನೇಮಕ ಪ್ರಕ್ರಿಯೆ? ಸಚಿವರ ಮಹತ್ವದ ಮಾಹಿತಿ… Anganwadi LKG UKG Teacher Recruitment 2024

ಕೃಷಿ ಇಲಾಖೆ ಖಾಲಿ ಹುದ್ದೆಗಳಿಗೆ ಅರ್ಹತೆಗಳು

ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು B.Sc Agri ಅಥವಾ ಕೃಷಿ ಇಂಜಿನಿಯರಿ೦ಗ್’ನಲ್ಲಿ ಬಿ.ಟೆಕ್ ಮುಗಿಸಿರುವವರು ಅರ್ಹತೆ ಹೊಂದಿರುತ್ತಾರೆ. ಈ ನೇಮಕಾತಿಯಲ್ಲಿ ಶೇ. 85ರಷ್ಟು ಹುದ್ದೆಗಳನ್ನು B.Sc agriculture ಮುಗಿಸಿದವರಿಗೆ ಹಾಗೂ ಶೇ. 15ರಷ್ಟು ಹುದ್ದೆಗಳನ್ನು B.Tech in Agri Engineering ಮುಗಿಸಿದವರಿಗೆ ಮೀಸಲಿಡಲಾಗಿದೆ.

ಇನ್ನು ಪ್ರಥಮ ದರ್ಜೆ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದಾದರೂ ಒಂದು ವಿಷಯದಲ್ಲಿ ಪದವಿ ಮುಗಿಸಿರಬೇಕು. ಅದೇ ರೀತಿ ದ್ವಿತೀಯ ದರ್ಜೆ ಸಹಾಯಕ ಹಾಗೂ ಬೆರಳಚ್ಚುಗಾರರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ದ್ವಿತೀಯ ಪಿಯುಸಿ ಪಾಸ್ ಆಗಿರಬೇಕು.

ಇದನ್ನೂ ಓದಿ: 2024-25ನೇ ಸಾಲಿನ ಪಶುಪಾಲನಾ ಇಲಾಖೆ ಸಹಾಯಧನ, ಸಬ್ಸಿಡಿ ಯೋಜನೆಗಳು | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ… Karnataka Animal Husbandry Schemes

ಮಾಸಿಕ ವೇತನ ಎಷ್ಟು?

ಕರ್ನಾಟಕ ರಾಜ್ಯ ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಕೃಷಿ ಅಧಿಕಾರಿ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ರೂ. 40,900 ರಿಂದ ರೂ.78,200ರ ವರೆಗೆ ಸಂಬಳ ಇರುತ್ತದೆ. ಜೊತೆಗೆ ಸರ್ಕಾರ ಎಲ್ಲ ರೀತಿಯ ಸವಲತ್ತುಗಳು ಅನ್ವಯವಾಗುತ್ತವೆ.

ನೇಮಕ ಪ್ರಕ್ರಿಯೆ ಹೇಗೆ?

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲು ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯನ್ನು ನಡೆಸಿ ನಂತರದ ಹಂತದಲ್ಲಿ ದಾಖಲಾತಿ ಪರಿಶೀಲನೆ ಮುಖಾಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಈ ನೇಮಕಾತಿಯು ಶೀಘ್ರದಲ್ಲಿ ಆರಂಭವಾಗಲಿದ್ದು; ಕೃಷಿ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಿರುವ ಎಲ್ಲಾ ಅಭ್ಯರ್ಥಿಗಳು ನೇಮಕಾತಿಗಾಗಿ ಬೇಕಾಗಿರುವ ಸಂಪೂರ್ಣ ಸಿದ್ಧತೆಯನ್ನು ಈಗಿನಿಂದಲೇ ಆರಂಭಿಸಿ. ಈ ಕುರಿತ ನಿರಂತರ ಅಪ್ಡೇಟ್’ಗಾಗಿ ಮಾಹಿತಿಮನೆ ಫಾಲೋ ಮಾಡಿ…

ಇದನ್ನೂ ಓದಿ: SSLC ಪಾಸಾದವರಿಗೆ ಕರ್ನಾಟಕದಲ್ಲಿ 1,940 ಪೋಸ್ಟ್ ಮ್ಯಾನ್ ಹುದ್ದೆಗಳು | ಯಾವ ಜಿಲ್ಲೆಗೆ ಎಷ್ಟು ಹುದ್ದೆ? ಇಲ್ಲಿದೆ ಮಾಹಿತಿ… Karnataka Post Master Recruitment 2024


Spread the love
WhatsApp Group Join Now
Telegram Group Join Now

2 thoughts on “ಕೃಷಿ ಇಲಾಖೆಯ 1,138 ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆ ಅನುಮೋದನೆ | ಪಿಯುಸಿ ಪಾಸಾದವರಿಗೂ ಅವಕಾಶ Karnataka Agri Officers Recruitment 2024”

Leave a Comment

error: Content is protected !!