7th Pay Commission Calculation : ಕರ್ನಾಟಕ ಸರಕಾರಿ ನೌಕರರಿಗೆ (Karnataka Govt Employees) ರಾಜ್ಯ ಸರ್ಕಾರವು 7ನೇ ವೇತನ ಆಯೋಗದ (7th Pay Commission) ವರದಿಯನ್ನು ಅನುಷ್ಠಾನಗೊಳಿಸಿದೆ. ಈ ಕುರಿತು ಈಗಾಗಲೇ ಸರ್ಕಾರದಿಂದ ಅಧಿಕೃತ ಆದೇಶವೂ ಪ್ರಕಟವಾಗಿದ್ದು; ಇದೇ ಆಗಸ್ಟ್ ತಿಂಗಳಿ೦ದ ನೌಕರರಿಗೆ ಪರಿಷ್ಕೃತ ಸಂಬಳ, ಭತ್ಯೆ, ಪಿಂಚಣಿ ಸೌಲಭ್ಯಗಳು ಲಭ್ಯವಾಗಲಿವೆ.
ವೇತನ ಲೆಕ್ಕಾಚಾರಕ್ಕೆ ವೆಬ್ಸೈಟ್ ಲಾಂಚ್
ಎಲ್ಲಾ ಸರಕಾರಿ ನೌಕರರು ತಮಗೆ ಅನ್ವಯವಾಗುವ ವೇತನವನ್ನು ಪರಿಶೀಲಿಸುತ್ತಿದ್ದು; ಈ ಕೆಲಸವನ್ನು ಸರಳೀಕರಣಗೊಳಿಸುವ ಉದ್ದೇಶದಿಂದ ಆನ್ಲೈನ್’ನಲ್ಲಿ ನೌಕರರ ವೇತನವನ್ನೂ ಕಂಡುಕೊಳ್ಳಲು ಪ್ರತ್ಯೇಕ ವೆಬ್ಸೈಟ್ ಅಭಿವೃದ್ದಿಗೊಳಿಸಲಾಗಿದೆ. https://karpay.calculator.cafe/ ವೆಬ್ಸೈಟ್ ಮೂಲಕ ನೌಕರರು 7ನೇ ವೇತನವನ್ನು ಕಂಡುಕೊಳ್ಳಬಹುದಾಗಿದೆ.
ಪರಿಷ್ಕೃತ ವೇತನವನ್ನು 2024ರ ಆಗಸ್ಟ್ 1ರಿಂದ ಜಾರಿಗೊಳಿಸಲು ಸರ್ಕಾರ ಕಳೆದ ಜುಲೈ 23ರಂದು ಅಧಿಕೃತ ಆದೇಶ ಹೊರಡಿಸಿದೆ. ಆ ಪ್ರಕಾರ ಆಗಸ್ಟ್ ತಿಂಗಳಿನಿ೦ದ ಸರ್ಕಾರಿ ನೌಕರರ ವೇತನ ಶೇ.27.5 ರಷ್ಟು ಹೆಚ್ಚಳವಾಗಲಿದೆ. ನಿವೃತ್ತ ನೌಕರರ ಪಿಂಚಣಿ ಕೂಡ ಏರಿಕೆಯಾಗಿದೆ.
‘ಸಿ’ ಮತ್ತು ‘ಡಿ’ ದರ್ಜೆ ನೌಕರರ ಪರಿಷ್ಕೃತ ವೇತನ
‘ಎ’ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ‘ಸಿ’ ಮತ್ತು ‘ಡಿ’ ದರ್ಜೆ ನೌಕರರಿಗೆ 2022ರ ಜುಲೈ 1ರಂದು (6ನೇ ವೇತನ ಆಯೋಗ) ಮೂಲ ವೇತನ, ತುಟ್ಟಿಭತ್ಯೆ, ಫಿಟ್ಮೆಂಟ್ ಸೌಲಭ್ಯ ಸೇರಿ ಒಟ್ಟು 29,005 ರೂಪಾಯಿ ಸಿಗುತ್ತಿತ್ತು.
ಇದೀಗ 2024ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ (7ನೇ ವೇತನ ಆಯೋಗ) ಮೂಲ ವೇತನ, ತುಟ್ಟಿಭತ್ಯೆ, ಫಿಟ್ಮೆಂಟ್ ಸೌಲಭ್ಯ ಸೇರಿ 29,005 ರೂಪಾಯಿಗೆ ಹೆಚ್ಚುವರಿಯಾಗಿ 6,940 ರೂಪಾಯಿ ಸಿಗಲಿದೆ.

‘ಎ’ ಮತ್ತು ‘ಬಿ’ ದರ್ಜೆ ನೌಕರರ ಪರಿಷ್ಕೃತ ವೇತನ
ಅದೇ ರೀತಿ ಎ ವಲಯದಲ್ಲಿ ಕಾರ್ಯ ನಿರ್ವಹಿಸುವ ಎ ಮತ್ತು ಬಿ ದರ್ಜೆ ನೌಕರರಿಗೆ 2022ರ ಜುಲೈ 1ರ (6ನೇ ವೇತನ ಆಯೋಗ) ಮೂಲ ವೇತನ, ತುಟ್ಟಿಭತ್ಯೆ, ಫಿಟ್ಮೆಂಟ್ ಸೌಲಭ್ಯ ಸೇರಿ ಒಟ್ಟು 35,595 ರೂಪಾಯಿ ಸಿಗುತ್ತಿತ್ತು.
ಇದೀಗ 2024ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ (7ನೇ ವೇತನ ಆಯೋಗ) ಮೂಲ ವೇತನ, ತುಟ್ಟಿಭತ್ಯೆ, ಫಿಟ್ಮೆಂಟ್ ಸೌಲಭ್ಯ ಸೇರಿ 35,595 ರೂಪಾಯಿಗೆ ಹೆಚ್ಚುವರಿಯಾಗಿ 8,050 ರೂಪಾಯಿ ಸಿಗಲಿದೆ.
ನಿವೃತ್ತ ಮತ್ತು ಸೇವೆಯಲ್ಲಿ ಮೃತರಾದವರ ಪಿಂಚಣಿ ಮತ್ತು ಕುಟುಂಬ ಪಿಂಚಣಿ, ಮನೆ ಬಾಡಿಗೆ, ನಗರ ಪರಿಹಾರ, ವೈದ್ಯಕೀಯ ಭತ್ಯೆ, ನೌಕರರ ಸಾಮೂಹಿಕ ವಿಮಾ ಯೋಜನೆಯಲ್ಲೂ ಪರಿಷ್ಕರಣೆಯ ಶಿಫಾರಸ್ಸುಗಳನ್ನು ಅಂಗೀಕರಿಸಲಾಗಿದೆ.
ಇದನ್ನೂ ಓದಿ: ಸರ್ಕಾರಿ ಪಿಯು ಕಾಲೇಜ್ ಲೆಕ್ಚರರ್ ಹುದ್ದೆಗಳಿಗೆ ಅರ್ಜಿ | 814 ಹುದ್ದೆಗಳ ನೇಮಕ PU Lecturer Recruitment 2024
ಮೊಬೈಲ್’ನಲ್ಲಿಯೇ ನಿಮ್ಮ ವೇತನ ಚೆಕ್ ಮಾಡಿ…
ಕರ್ನಾಟಕ ಸರ್ಕಾರಿ ನೌಕರರು 7ನೇ ವೇತನ ಆಯೋಗದ ವರದಿ ಅನುಷ್ಠಾನಗೊಂಡ ಬಳಿಕ ಆಗುವ ವೇತನ ಹೆಚ್ಚಳವನ್ನು ಆನ್ಲೈನ್ ಮೂಲಕ ಸುಲಭವಾಗಿ ಪರಿಶೀಲಿಸಬಹುದು. ಇದಕ್ಕಾಗಿಯೇ ವೆಬ್ಸೈಟ್ ತಯಾರು ಮಾಡಲಾಗಿದ್ದು; ಈ ವೆಬ್ಸೈಟ್ ಮೂಲಕ ವೇತನ ಎಷ್ಟು ಹೆಚ್ಚಳವಾಗಿದೆ? ಆಗಸ್ಟ್ ತಿಂಗಳಿAದ ತಮಗೆ ಸಿಗಲಿರುವ ಹೆಚ್ಚುವರಿ ಸೌಲಭ್ಯಗಳನ್ನು ಮೊಬೈಲ್’ನಲ್ಲಿ ಚೆಕ್ ಮಾಡಿ ಲೆಕ್ಕ ಹಾಕಬಹುದು.
6ನೇ ವೇತನ ಆಯೋಗದಲ್ಲಿದ್ದ ನಿಮ್ಮ ಸಂಬಳ, ಭತ್ಯೆ ಸೌಲಭ್ಯಗಳು ಹಾಗೂ ಇದೀಗ 7ನ ವೇತನ ಆಯೋಗದಲ್ಲಿ ಸಿಗಲಿರುವ ಪರಿಷ್ಕೃತ ಸಂಬಳ, ಭತ್ಯೆ ಹಾಗೂ ಕುಟುಂಬ ಪಂಚಣಿ ಸೌಲಭ್ಯಗಳ ವಿವರವನ್ನು ಈ ಕೆಳಗಿನ ಸರ್ಕಾರಿ ವೆಬ್ಸೈಟ್ ಲಿಂಕ್ ಬಳಸಿ ಚೆಕ್ ಮಾಡಿಕೊಳ್ಳಿ…. 👇
ವೆಬ್ಸೈಟ್ ಲಿಂಕ್ : ಇಲ್ಲಿ ಒತ್ತಿ
7ನೇ ವೇತನ ಆಯೋಗ ವರದಿ ಜಾರಿಯ ಅಧಿಕೃತ ಆದೇಶ ಪ್ರತಿ ಹಾಗೂ ಪರಿಷ್ಕೃತ ವೇತನ ಶ್ರೇಣಿ ಪಟ್ಟಿ (Download)

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.