Indian Air Force Lower Division Clerk Recruitment 2024 : ಭಾರತೀಯ ವಾಯುಪಡೆಯು ತನ್ನ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಿದ್ದು, ಗ್ರೂಪ್ ‘ಸಿ’ ಸಿವಿಲಿಯನ್ (Group ‘C’ Civilian) ಹುದ್ದೆಗಳಾದ ಹಿಂದಿ ಟೈಪಿಸ್ಟ್ (Hindi Typist), ಲೋವರ್ ಡಿವಿಷನ್ ಕ್ಲರ್ಕ್ (Lower Division Clerk -LDC)ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
10ನೇ ತರಗತಿ ಮತ್ತು 12ನೇ ತರಗತಿ ಪಾಸಾಗಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಒಟ್ಟು 182 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು; ಹುದ್ದೆಗಳ ಹೆಸರು ಮತ್ತು ಖಾಲಿ ಹುದ್ದೆಗಳ ಸಂಖ್ಯೆ ಈ ಕೆಳಗಿನಂತಿದೆ:
- ಲೋವರ್ ಡಿವಿಷನ್ ಕ್ಲರ್ಕ್ : 157
- ಹಿಂದಿ ಟೈಪಿಸ್ಟ್ : 18
- ಸಿವಿಲಿಯನ್ ಮೆಕಾನಿಕಲ್ ಸಾರಿಗೆ ಚಾಲಕ : 07
ಇದನ್ನೂ ಓದಿ: ಆಗಸ್ಟ್ 31ರೊಳಗೆ ಇ-ಕೆವೈಸಿ ಮಾಡದಿದ್ದರೆ ರೇಷನ್ ಕಾರ್ಡ್ ರದ್ದು | ಆಹಾರ ಇಲಾಖೆ ಖಡಕ್ ಸೂಚನೆ Ration Card eKYC Last Date
ಶೈಕ್ಷಣಿಕ ಅರ್ಹತೆ ಏನಿರಬೇಕು?
ಲೋವರ್ ಡಿವಿಷನ್ ಕ್ಲರ್ಕ್ ಮತ್ತು ಹಿಂದಿ ಟೈಪಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು 12ನೇ ತರಗತಿ ಪಾಸಾಗಿರಬೇಕು. ಇಂಗ್ಲಿಷ್‌ನಲ್ಲಿ 35 wpm / ಹಿಂದಿಯಲ್ಲಿ 30 wpm ಟೈಪಿಂಗ್ ವೇಗವನ್ನು ಹೊಂದಿರಬೇಕು.
ಅದೇ ರೀತಿ ಸಿವಿಲಿಯನ್ ಮೆಕಾನಿಕಲ್ ಸಾರಿಗೆ ಚಾಲಕ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು 10ನೇ ತರಗತಿ ಪೂರ್ಣಗೊಳಿಸಿರಬೇಕು. ಜೊತೆಗೆ ಎರಡು ವರ್ಷಗಳ ಅನುಭವದೊಂದಿಗೆ ಹೆವಿ ಮೋಟಾರ್ ವೆಹಿಕಲ್ (HMV) ಮಾನ್ಯ ಚಾಲನಾ ಪರವಾನಗಿಯನ್ನು ಹೊಂದಿರಬೇಕು.
ವಯೋಮಿತಿ, ಶುಲ್ಕದ ವಿವರ
ಭಾರತೀಯ ವಾಯುಪಡೆಯ ನೇಮಕಾತಿ ಅಧಿಸೂಚನೆಯ ಪ್ರಕಾರ, ಇನ್ನು ವಯಸ್ಸಿನ ಮಿತಿಯು 2024ರ ಸೆಪ್ಟೆಂಬರ್ 2ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಯು ಕನಿಷ್ಠ 18 ವರ್ಷದಿಂದ ಗರಿಷ್ಠ 25 ವರ್ಷದೊಳಗಿರಬೇಕು.
ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10-15 ವರ್ಷ ವಯೋಸಡಿಲಿಕೆ ಅನ್ವಯವಾಗಲಿದೆ. ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕವಿರುವುದಿಲ್ಲ.
ಹೇಗೆ ಅರ್ಜಿ ಸಲ್ಲಿಸಬೇಕು?
ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿ¸ಬೇಕು. ಅಭ್ಯರ್ಥಿಯು ಅರ್ಜಿ ನಮೂನೆಯನ್ನು ಸಂಬAಧಿತ ಸ್ವಯಂ ದೃಢೀಕರಿಸಿದ ದಾಖಲೆಗಳೊಂದಿಗೆ ವೆಸ್ಟರ್ನ್ ಏರ್ ಕಮಾಂಡ್, ಟ್ರೈನಿಂಗ್ ಕಮಾಂಡ್, ಮೆಂಟೇನೆನ್ಸ್ ಕಮಾಂಡ್, ಸೆಂಟ್ರಲ್ ಏರ್ ಕಮಾಂಡ್, ಈಸ್ಟರ್ನ್ ಕಮಾಂಡ್‌ನಲ್ಲಿರುವ ಸಂಬ೦ಧಪಟ್ಟ ಏರ್‌ಪೋರ್ಸ್ ಸ್ಟೇಷನ್’ಗಳಿಗೆ ನಿಗದಿತ ದಿನಾಂಕದೊಳಗೆ ತಲುಪುವಂತೆ ಕಳುಹಿಸಬೇಕು.
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
02-09-2024
ಅಧಿಸೂಚನೆ : Download