IAF Agniveer Recruitment 2026- ಪಿಯುಸಿ ಪಾಸಾದ ಯುವಕ ಯುವತಿಯರಿಗೆ ವಾಯುಸೇನೆಯಲ್ಲಿ ಅಗ್ನಿವೀರರ ಹುದ್ದೆಗಳು | ಹೀಗೆ ಅರ್ಜಿ ಹಾಕಿ…

Spread the love

WhatsApp Group Join Now
Telegram Group Join Now

ಭಾರತೀಯ ವಾಯುಸೇನೆಯಲ್ಲಿ ಅಗ್ನಿವೀರ ವಾಯು ನೇಮಕಾತಿಗೆ (IAF Agniveer Recruitment 2026) ಅರ್ಜಿ ಆಹ್ವಾನಿಸಲಾಗಿದ್ದು; ಪಿಯುಸಿ ಪಾಸಾದ ಯುವಕ-ಯುವತಿಯರಿಗೆ ಭರ್ಜರಿ ಅವಕಾಶ ಇದಾಗಿದೆ…

ದೇಶಸೇವೆಯ ಕನಸು ಕಂಡಿರುವ ಯುವಕ-ಯುವತಿಯರಿಗೆ ಭಾರತೀಯ ವಾಯುಸೇನೆಯಿಂದ ಭರ್ಜರಿ ಅವಕಾಶ ಬಂದಿದೆ. ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆಯ (Agnipath Scheme) ಅಡಿಯಲ್ಲಿ ಭಾರತೀಯ ವಾಯುಸೇನೆ ಇದೀಗ ‘ಅಗ್ನಿವೀರ್ ವಾಯು’ (Agniveer Vayu Recruitment 2026) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ.

ಈ ನೇಮಕಾತಿಗೆ ಎಸ್‌ಎಸ್‌ಎಲ್‌ಸಿ, ಡಿಪ್ಲೊಮಾ ಹಾಗೂ ದ್ವಿತೀಯ ಪಿಯುಸಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅತ್ಯಂತ ಪ್ರಮುಖ ವಿಷಯವೆಂದರೆ ಅವಿವಾಹಿತ ಪುರುಷರು ಮತ್ತು ಮಹಿಳೆಯರು ಇಬ್ಬರೂ ಅರ್ಜಿ ಹಾಕಬಹುದು. ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗಿದೆ.

ಇದನ್ನೂ ಓದಿ: Govt Employee Pension Withholding- ಇಂಥ ಸರ್ಕಾರಿ ನೌಕರರ ಪಿಂಚಣಿ ಮುಟ್ಟುಗೋಲು: ಹೊಸ ಕಠಿಣ ನಿಯಮ ಜಾರಿ

Age Limit Details – ವಯೋಮಿತಿ ವಿವರ

ಅಗ್ನಿವೀರ್ ವಾಯು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 21 ವರ್ಷಗಳೊಳಗೆ ಇರಬೇಕು. ಅಭ್ಯರ್ಥಿಗಳು 2006ರ ಜನವರಿ 1 ರಿಂದ 2009ರ ಜುಲೈ 9ರ ನಡುವೆ ಜನಿಸಿದ್ದಿರಬೇಕು. ಈ ದಿನಾಂಕದ ಹೊರಗಿನ ಅಭ್ಯರ್ಥಿಗಳು ಅರ್ಹರಾಗಿರುವುದಿಲ್ಲ.

Medical & Physical Eligibility – ವೈದ್ಯಕೀಯ ಹಾಗೂ ದೈಹಿಕ ಅರ್ಹತೆ

ಭಾರತೀಯ ವಾಯುಸೇನೆಗೆ ಸೇರುವುದರಿಂದ ದೈಹಿಕ ಮತ್ತು ವೈದ್ಯಕೀಯ ಅರ್ಹತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಪುರುಷರು ಕನಿಷ್ಠ 152 ಸೆಂ.ಮೀ ಹಾಗೂ ಮಹಿಳೆಯರು ಕನಿಷ್ಠ 150 ಸೆಂ.ಮೀ ಎತ್ತರ ಹೊಂದಿರಬೇಕು.

ಇದನ್ನೂ ಓದಿ: Bajaj Chetak C25 Electric Scooter- ಭಾರೀ ಅಗ್ಗದ ಬೆಲೆಗೆ ಎಲೆಕ್ಟ್ರಿಕ್ ಬಜಾಜ್ ಚೇತಕ್ ಸ್ಕೂಟರ್ | ಭರ್ಜರಿ ಆಫರ್

Medical Examination – ವೈದ್ಯಕೀಯ ಪರೀಕ್ಷೆ

ವಾಯುಸೇನೆಯ ನಿಯಮಾನುಸಾರ ನಡೆಯುವ ವೈದ್ಯಕೀಯ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಕಡ್ಡಾಯವಾಗಿ ಉತ್ತೀರ್ಣರಾಗಬೇಕು. ದೇಹದಲ್ಲಿ ಯಾವುದೇ ರೀತಿಯ ಟ್ಯಾಟೂ ಹೊಂದಿರುವ ಅಭ್ಯರ್ಥಿಗಳು ಸಾಮಾನ್ಯವಾಗಿ ಅನರ್ಹರು.

ಆದರೆ, ಸಂಪ್ರದಾಯ ಅಥವಾ ಧಾರ್ಮಿಕ ಆಚರಣೆಗೆ ಸಂಬಂಧಿಸಿದ ಟ್ಯಾಟೂಗಳಿಗೆ ಮಾತ್ರ ವಿಶೇಷ ಸಂದರ್ಭಗಳಲ್ಲಿ ಅವಕಾಶ ನೀಡಲಾಗುತ್ತದೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಕಾರಣಗಳನ್ನು ಪರಿಗಣಿಸಲಾಗುವುದಿಲ್ಲ.

Service Duration – ಸೇವಾ ಅವಧಿ ಎಷ್ಟು?

ಅಗ್ನಿವೀರ್ ಯೋಜನೆಯಡಿ ಆಯ್ಕೆಯಾಗುವ ಅಭ್ಯರ್ಥಿಗಳು ಭಾರತೀಯ ವಾಯುಪಡೆಯಲ್ಲಿಗೆ 4 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಾರೆ. 4 ವರ್ಷಗಳ ಸೇವೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಅಭ್ಯರ್ಥಿಗಳಿಗೆ ಕೌಶಲ್ಯ ಸೆಟ್ ಪ್ರಮಾಣಪತ್ರ (Skill Certificate) ನೀಡಲಾಗುತ್ತದೆ. ಇದು ಮುಂದಿನ ಉದ್ಯೋಗ ಅಥವಾ ವೃತ್ತಿ ಜೀವನಕ್ಕೆ ಬಹಳ ಉಪಯುಕ್ತವಾಗಿರುತ್ತದೆ.

IAF Agniveer Recruitment 2026
IAF Agniveer Recruitment 2026

ಇದನ್ನೂ ಓದಿ: Ujjwala Yojana 2.0- ಉಜ್ವಲ ಯೋಜನೆ 2.0: ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ

Salary Details – ವೇತನದ ವಿವರ

ಅಗ್ನಿವೀರ್‌ಗಳಿಗೆ ವರ್ಷದಿಂದ ವರ್ಷಕ್ಕೆ ವೇತನ ಹೆಚ್ಚಳವಾಗುತ್ತದೆ. ವೇತನದ ಒಂದು ಭಾಗ ಅಭ್ಯರ್ಥಿಗೆ ದೊರೆಯುತ್ತದೆ, ಮತ್ತೊಂದು ಭಾಗ ಅಗ್ನಿವೀರ್ ಕಾರ್ಪಸ್ ನಿಧಿಗೆ ಜಮೆಯಾಗುತ್ತದೆ. ವೇತನ ವಿವರ ಈ ಕೆಳಗಿನಂತಿದೆ:

  1. ಮೊದಲ ವರ್ಷದ ಒಟ್ಟು ವೇತನ: ₹30,000
    ಕೈಗೆ ಸಿಗುವ ವೇತನ: ₹21,000
    ಕಾರ್ಪಸ್ ನಿಧಿಗೆ: ₹9,000
  2. ಎರಡನೇ ವರ್ಷದ ಒಟ್ಟು ವೇತನ: ₹33,000
    ಕೈಗೆ ಸಿಗುವ ವೇತನ: ₹23,100
    ಕಾರ್ಪಸ್ ನಿಧಿಗೆ: ₹9,900
  3. ಮೂರನೇ ವರ್ಷದ ಒಟ್ಟು ವೇತನ: ₹36,500
    ಕೈಗೆ ಸಿಗುವ ವೇತನ: ₹25,550
    ಕಾರ್ಪಸ್ ನಿಧಿಗೆ: ₹10,950
  4. ನಾಲ್ಕನೇ ವರ್ಷದ ಒಟ್ಟು ವೇತನ: ₹40,000
    ಕೈಗೆ ಸಿಗುವ ವೇತನ: ₹28,000
    ಕಾರ್ಪಸ್ ನಿಧಿಗೆ: ₹12,000

4 ವರ್ಷಗಳ ಸೇವೆ ಮುಗಿದ ನಂತರ, ಅಭ್ಯರ್ಥಿಗಳಿಗೆ ಬಡ್ಡಿ ಸೇರಿದಂತೆ ಸುಮಾರು ₹10.04 ಲಕ್ಷ ರೂ.ಗಳ ಸೇವಾ ನಿಧಿ ಪ್ಯಾಕೇಜ್ ದೊರೆಯುತ್ತದೆ.

ಇದನ್ನೂ ಓದಿ: Mobile Kaladare Enu Madabeku- ಮೊಬೈಲ್ ಕಳುವಾದರೆ ಏನು ಮಾಡಬೇಕು? ಗಾಬರಿಯಾಗದೆ ಕೈಗೊಳ್ಳಬೇಕಾದ ಸರಿಯಾದ ಕ್ರಮಗಳು ಇಲ್ಲಿವೆ…

Educational Qualification – ಶೈಕ್ಷಣಿಕ ಅರ್ಹತೆ

WhatsApp Group Join Now
Telegram Group Join Now

ಅಗ್ನಿವೀರ್ ವಾಯು ಹುದ್ದೆಗೆ ಅರ್ಜಿ ಹಾಕಲು ಅಭ್ಯರ್ಥಿಗಳು ಕೆಳಗಿನ ಯಾವುದಾದರೂ ಒಂದು ಅರ್ಹತೆಯನ್ನು ಹೊಂದಿರಬೇಕು.

ಆಯ್ಕೆ – 1 (ವಿಜ್ಞಾನ ಪಿಯುಸಿ): ದ್ವಿತೀಯ ಪಿಯುಸಿ ಅಥವಾ ಇಂಟರ್‌ಮೀಡಿಯೇಟ್‌ನಲ್ಲಿ ವಿಜ್ಞಾನ ವಿಭಾಗ, ಗಣಿತ, ಭೌತಶಾಸ್ತ್ರ ಮತ್ತು ಇಂಗ್ಲಿಷ್ ವಿಷಯಗಳನ್ನು ಅಭ್ಯಾಸ ಮಾಡಿರಬೇಕು. ಈ ವಿಷಯಗಳಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು

ಆಯ್ಕೆ – 2 (ಡಿಪ್ಲೊಮಾ): ಇಂಜಿನಿಯರಿಂಗ್ ವಿಭಾಗದಲ್ಲಿ 3 ವರ್ಷದ ಡಿಪ್ಲೊಮಾವನ್ನು ಕನಿಷ್ಠ 50% ಅಂಕಗಳೊಂದಿಗೆ ಪೂರ್ಣಗೊಳಿಸಿರಬೇಕು

ಆಯ್ಕೆ – 3 (ವೃತ್ತಿಪರ/ಔದ್ಯೋಗಿಕ ಕೋರ್ಸ್): 2 ವರ್ಷದ ಯಾವುದೇ ವೃತ್ತಿಪರ ಅಥವಾ ಔದ್ಯೋಗಿಕ ಕೋರ್ಸ್ ಅನ್ನು ಇಂಗ್ಲಿಷ್ ಭಾಷೆಯನ್ನು ಒಂದು ವಿಷಯವಾಗಿ ಕಲಿತಿರಬೇಕು.

ಇದನ್ನೂ ಓದಿ: Mobile Kaladare Enu Madabeku- ಮೊಬೈಲ್ ಕಳುವಾದರೆ ಏನು ಮಾಡಬೇಕು? ಗಾಬರಿಯಾಗದೆ ಕೈಗೊಳ್ಳಬೇಕಾದ ಸರಿಯಾದ ಕ್ರಮಗಳು ಇಲ್ಲಿವೆ…

Selection Process – ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಅಗ್ನಿವೀರ್ ವಾಯು ನೇಮಕಾತಿ ಪ್ರಕ್ರಿಯೆ ಹಂತ ಹಂತವಾಗಿ ನಡೆಯುತ್ತದೆ.

  • ಆನ್‌ಲೈನ್ ಲಿಖಿತ ಪರೀಕ್ಷೆ (ಫೇಸ್ – 1)
  • ದೈಹಿಕ ಸಾಮರ್ಥ್ಯ ಪರೀಕ್ಷೆ
  • ವೈದ್ಯಕೀಯ ಪರೀಕ್ಷೆ
  • ದಾಖಲೆ ಪರಿಶೀಲನೆ

ಈ ಎಲ್ಲಾ ಹಂತಗಳ ನಂತರ ಅಗ್ನಿವೀರ್ ಆಯ್ಕೆ ನಿಯಮಗಳ ಪ್ರಕಾರ ಅರ್ಹ ಅಭ್ಯರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ.

How to Apply – ಅರ್ಜಿ ಸಲ್ಲಿಕೆ ವಿಧಾನ

ಅರ್ಜಿಯನ್ನು ಕಡ್ಡಾಯವಾಗಿ ಆನ್‌ಲೈನ್ ಮೂಲಕ ಸಲ್ಲಿಸಬೇಕು. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡುವುದು ಅನಿವಾರ್ಯ. ₹550 ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕು.

IAF Agniveer Recruitment 2026
IAF Agniveer Recruitment 2026

ಇದನ್ನೂ ಓದಿ: Karnataka Morarji Residential School- ಮೊರಾರ್ಜಿ ಸೇರಿ ವಿವಿಧ ಉಚಿತ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ | ಇನ್ನು ನಾಲ್ಕು ದಿನದೊಳಗೇ ಅರ್ಜಿ ಹಾಕಿ

Important Dates – ಪ್ರಮುಖ ದಿನಾಂಕಗಳು

  • ಆನ್‌ಲೈನ್ ಅರ್ಜಿ ಮುಕ್ತಾಯ: ಫೆಬ್ರವರಿ 1, 2026
  • ಆನ್‌ಲೈನ್ ಪರೀಕ್ಷೆ (ಫೇಸ್ – 1): ಮಾರ್ಚ್ 30, 2026
  • ತಾತ್ಕಾಲಿಕ ಆಯ್ಕೆ ಪಟ್ಟಿ: ನವೆಂಬರ್ 14, 2026
  • ಅಂತಿಮ ಆಯ್ಕೆ ಪಟ್ಟಿ: ಡಿಸೆಂಬರ್ 1, 2026

ದೇಶಸೇವೆಯ ಜೊತೆಗೆ ಶಿಸ್ತು, ಗೌರವ ಮತ್ತು ಭವಿಷ್ಯದ ಭದ್ರತೆಗೆ ಇದು ಅತ್ಯುತ್ತಮ ಅವಕಾಶ. ಅರ್ಹತೆ ಹೊಂದಿರುವ ಯುವಕರು ಮತ್ತು ಯುವತಿಯರು ಈ ಅವಕಾಶವನ್ನು ತಪ್ಪಿಸಿಕೊಳ್ಳದೇ ಸಮಯಕ್ಕೆ ಅರ್ಜಿ ಸಲ್ಲಿಸಿ ಭಾರತೀಯ ವಾಯುಸೇನೆಯ ಭಾಗವಾಗಬಹುದು.

ಅಧಿಸೂಚನೆ: Download
ಅರ್ಜಿ ಲಿಂಕ್: cdn.digialm.com

Karnataka Bank Personal Loan- ಕರ್ನಾಟಕ ಬ್ಯಾಂಕ್ ಪರ್ಸನಲ್ ಲೋನ್ | ಕಡಿಮೆ ಬಡ್ಡಿಯಲ್ಲಿ ₹25 ಲಕ್ಷವರೆಗೆ ಸುಲಭ ಸಾಲ


Spread the love
error: Content is protected !!