Gruhalakshmi May-June Money- ವಾರದಲ್ಲಿ ಗೃಹಲಕ್ಷ್ಮಿ ಹಣ ಜಮೆ | ಯಜಮಾನಿಯರಿಗೆ ಗುಡ್ ನ್ಯೂಸ್ | ಸಚಿವೆ ಹೆಬ್ಬಾಳ್ಕರ್ ನೀಡಿದ ಮಾಹಿತಿ ಇಲ್ಲಿದೆ…

Spread the love

ವಾರದಲ್ಲಿ ‘ಗೃಹಲಕ್ಷ್ಮಿ’ ಯೋಜನೆಯ ಹಣ ಜಮೆ ಆಗಲಿದ್ದು; ಸಚಿವೆ ಹೆಬ್ಬಾಳ್ಕರ್ ಅವರು ಮೇ ಮತ್ತು ಜೂನ್ ತಿಂಗಳ ಹಣ (Gruhalakshmi May-June Money)  ಯಾವಾಗ ಜಮೆ ಆಗಲಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ…

WhatsApp Group Join Now
Telegram Group Join Now

ಕರ್ನಾಟಕ ಸರ್ಕಾರದ ಪ್ರಮುಖ ಮಹಿಳಾ ಸಬಲೀಕರಣ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಸಿಹಿ ಸುದ್ದಿ ಹೊರಬಿದ್ದಿದೆ. ಯೋಜನೆಯ ಮೇ ತಿಂಗಳ ಹಣ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಿನ್ನೆ (ಜುಲೈ 05) ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ‘ಮೇ ತಿಂಗಳ ಹಣವನ್ನು ಇನ್ನೊಂದು ವಾರದಲ್ಲಿ ಮಹಿಳೆಯರ ಖಾತೆಗೆ ಜಮೆ ಮಾಡಲಾಗುವುದು’ ಎಂದು ಸ್ಪಷ್ಟವಾಗಿ ಘೋಷಿಸಿದ್ದಾರೆ.

CET Mock Seat Allotment- ಸಿಇಟಿ ಅಣಕು ಸೀಟು ಹಂಚಿಕೆ ಪ್ರಾರಂಭ | ಕೆಇಎ ನೀಡಿದ ಸೀಟು ವಿವರದ ಸಂಪೂರ್ಣ ಮಾಹಿತಿ ಇಲ್ಲಿದೆ…

ಮುಂದಿನ ವಾರದಲ್ಲಿ ಮೇ ತಿಂಗಳ ₹2,000

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ‘ಈ ಯೋಜನೆಗೆ ಹಣಕಾಸಿನ ಯಾವುದೇ ತೊಂದರೆ ಇಲ್ಲ. ಈಗಾಗಲೇ ಹಣ ಬಿಡುಗಡೆ ಪ್ರಕ್ರಿಯೆ ನಡೆದಿದ್ದು, ಕೆಲ ತಾಂತ್ರಿಕ ಕಾರಣಗಳಿಂದ ಮೇ ತಿಂಗಳ ಹಣ ವರ್ಗಾವಣೆ ವಿಳಂಬವಾಗಿದೆ. ಆದರೆ ಎಲ್ಲವೂ ಶೀಘ್ರ ಸರಿಯಾಗಲಿದೆ’ ಎಂದಿದ್ದಾರೆ. ಅಂದರೆ, ಸರ್ಕಾರದ ಬಜೆಟ್‌ನಲ್ಲಿ ಹಣ ಒದಗಿಸಿದ್ದು, ಬಿಡುಗಡೆ ತಂತ್ರಾಂಶದ ಸಮಸ್ಯೆ ಮಾತ್ರ ಇರುವುದರಿಂದ ಹಣ ತಡವಾಗಿದೆ.

ಈ ಯೋಜನೆ ಅಡಿಯಲ್ಲಿ ಫಲಾನುಭವಿ ಪ್ರತಿ ಮಹಿಳೆಗೆ ಮಾಸಿಕ ₹2,000 ನಗದು ಸಹಾಯಧನ ನೀಡಲಾಗುತ್ತದೆ. ಮೇ ತಿಂಗಳ ₹2,000 ಹಣವನ್ನು ಇನ್ನೊಂದು ವಾರದಲ್ಲಿ ಖಾತೆಗೆ ಜಮೆ ಮಾಡುವುದಾಗಿ ಸಚಿವೆ ಭರವಸೆ ನೀಡಿದ್ದಾರೆ.

ವಾರದಲ್ಲಿ ‘ಗೃಹಲಕ್ಷ್ಮಿ’ ಯೋಜನೆಯ ಹಣ ಜಮೆ ಆಗಲಿದ್ದು; ಸಚಿವೆ ಹೆಬ್ಬಾಳ್ಕರ್ ಅವರು ಮೇ ಮತ್ತು ಜೂನ್ ತಿಂಗಳ ಹಣ ಯಾವಾಗ ಜಮೆ ಆಗಲಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ...
Gruhalakshmi May-June Money Credit Update July 2025
ಜೂನ್ ತಿಂಗಳ ಹಣಕ್ಕೆ ದಿನಾಂಕ ಘೋಷಣೆ

ಸಚಿವೆ ಹೆಬ್ಬಾಳ್ಕರ್ ಮತ್ತೊಂದು ಮಹತ್ವದ ವಿಷಯವನ್ನು ತಿಳಿಸಿದ್ದು; ‘ಜೂನ್ ತಿಂಗಳ ಹಣವನ್ನು ಜುಲೈ 15ರೊಳಗೆ ಮಹಿಳೆಯರ ಖಾತೆಗೆ ಜಮೆ ಮಾಡಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.

ಇದೇ ಮೊದಲ ಬಾರಿಗೆ ಸರ್ಕಾರ ಈ ಡೇಡ್‌ಲೈನ್ ಸ್ಪಷ್ಟವಾಗಿ ತಿಳಿಸಿದೆ. ಇದರಿಂದ ಫಲಾನುಭವಿಗಳಿಗೆ ಸಮಯದ ಆಧಾರದ ಮೇಲೆ ತಮ್ಮ ಖರ್ಚಿನ ಯೋಜನೆ ರೂಪಿಸಬಹುದು.

Pradhan Mantri Awas Yojana- ಪ್ರಧಾನ ಮಂತ್ರಿ ಆವಾಸ್ ಯೋಜನೆ ₹2.50 ಲಕ್ಷ ಸಹಾಯಧನಕ್ಕೆ ಅರ್ಜಿ ಆಹ್ವಾನ | ಮನೆ ನಿರ್ಮಾಣಕ್ಕೆ ಸರ್ಕಾರದ ನೆರವು

ಬಾಕಿ ಇರುವ ಫಲಾನುಭವಿಗಳಿಗೆ ಹಣ ಖಾತ್ರಿ

ಕೆಲವರಿಗೆ ಬ್ಯಾಂಕ್ ಖಾತೆಗೆ ಹಣ ಜಮೆ ಆಗದೆ ಬಾಕಿ ಉಳಿದ ವಿಷಯದ ಬಗ್ಗೆ ಸಚಿವೆ ‘ಯಾವ ಮಹಿಳೆಯರ ಖಾತೆಗೆ ಹಣ ಬಂದಿಲ್ಲವೋ, ಅವರಿಗೆ ಒಂದು ವಾರದಲ್ಲಿ ಮೇ ತಿಂಗಳ ಹಣ ಜಮೆ ಮಾಡಲಾಗುವುದು. ಹಾಗೆ ಉಳಿದ ಎಲ್ಲರಿಗೂ ಹಣ ತಲುಪಲು ನಾವು ಬದ್ಧರಾಗಿದ್ದೇವೆ’ ಎಂದು ಹೇಳಿದ್ದಾರೆ.

ಯಾವುದೇ ಫಲಾನುಭವಿಯು ಹಣದಿಂದ ವಂಚಿತರಾಗಬಾರದು ಎನ್ನುವುದು ಸರ್ಕಾರದ ಉದ್ದೇಶ. ಯೋಜನೆಯ ಮೊತ್ತವು ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಬಂತು ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.

e-Swathu Online- ಮೊಬೈಲ್‌ನಲ್ಲೇ ಉಚಿತವಾಗಿ ನಿಮ್ಮ ಇ-ಸ್ವತ್ತು ಡಿಜಿಟಲ್ ದಾಖಲೆಯನ್ನು ಪಡೆಯಿರಿ | ಹಂತ ಹಂತದ ಸಂಪೂರ್ಣ ಮಾಹಿತಿ

ಹಣ ಬಂದಿಲ್ಲದಿದ್ದರೆ ಏನು ಮಾಡಬೇಕು?

ಹಣ ಬಂದಿಲ್ಲದ ಅಥವಾ ಯೋಜನೆಯ ಪಾವತಿ ವಿಳಂಬವಾದ ಮಹಿಳೆಯರಿಗೆ ಪ್ರಮುಖ ಸೂಚನೆ:

  • ಹತ್ತಿರದ ಸಿಡಿಪಿಓ (CDPO) ಕಚೇರಿಗೆ ತೆರಳಿ ತಮ್ಮ ಯೋಜನೆ ಸ್ಥಿತಿಯನ್ನು ಪರಿಶೀಲಿಸಬೇಕು.
  • ಸಿಬ್ಬಂದಿಯವರು ನಿಮ್ಮ ಹೆಸರು, ಆಧಾರ್ ನಂಬರ್, ಖಾತೆ ವಿವರಗಳು ಪರಿಶೀಲಿಸುತ್ತಾರೆ.
  • ಖಾತೆಯಲ್ಲಿ ‘NPCI FAILURE – ಬ್ಯಾಂಕ್ – ಆಧಾರ್ ಲಿಂಕ್ ಸಮಸ್ಯೆ’ ಹಾಗೂ ‘E-KYC FAILURE – ದಾಖಲೆ ದೃಢೀಕರಣ ವಿಳಂಬ/ತಪ್ಪು’ ದೋಷಗಳು ಕಂಡುಬರಬಹುದು.
  • ಇಂತಹ ಸಮಸ್ಯೆ ಇದ್ದರೆ  ರೇಷನ್ ಕಾರ್ಡ್, ಆಧಾರ್ ಕಾರ್ಡ್, ಆಧಾರ್ ಲಿಂಕ್ ಆಗಿರುವ ಮೊಬೈಲ್, ಬ್ಯಾಂಕ್ ಪಾಸ್ ಪುಸ್ತಕ ದಾಖಲೆಗಳನ್ನು CDPO ಕಚೇರಿಗೆ ತೆಗೆದುಕೊಂಡು ಹೋಗಿ.

ಒಟ್ಟಾರೆ ಮೇ ತಿಂಗಳ ಹಣ ಇನ್ನೊಂದು ವಾರದಲ್ಲಿ ಖಾತೆಗೆ ಬರಲಿದೆ. ಜೂನ್ ತಿಂಗಳ ಹಣ ಜುಲೈ 15ರೊಳಗೆ ಖಾತೆಗೆ ಬರಲಿದೆ. ಹಣ ಬಂದಿಲ್ಲದವರು ಅಆPಔ ಕಚೇರಿಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಿ.ದಾಖಲೆಗಳಲ್ಲಿ ದೋಷವಿದ್ದರೆ ತುರ್ತುವಾಗಿ ಸರಿಪಡಿಸಿಕೊಳ್ಳಿ.

Karnataka PM-Kisan- 7.19 ಲಕ್ಷ ರೈತರಿಗೆ ಪಿಎಂ ಕಿಸಾನ್ ಹಣ ಬಂದ್ | ನಿಮ್ಮ ಹೆಸರು ಈ ಪಟ್ಟಿಯಲ್ಲಿದೆಯಾ? ತಕ್ಷಣ ಚೆಕ್ ಮಾಡಿ…


Spread the love
WhatsApp Group Join Now
Telegram Group Join Now
error: Content is protected !!