Gruha Lakshmi Mobile Bank Link: ಮೊಬೈಲ್ ಸಂಖ್ಯೆ ಬ್ಯಾಂಕ್ ಖಾತೆಗೆ ಲಿಂಕ್ ಇದ್ದರೆ ಮಾತ್ರ ಗೃಹಲಕ್ಷ್ಮಿ ಹಣ ಜಮೆಯಾಗುವ ಪ್ರಸ್ತಾಪ, ಮರುನವೀಕರಣ, ಬಯೋಮೆಟ್ರಿಕ್ ಪರಿಶೀಲನೆ ಹಾಗೂ ಸರ್ಕಾರದ ತಾಜಾ ಮಾಹಿತಿ ಇಲ್ಲಿದೆ…
ರಾಜ್ಯದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯಲ್ಲಿ (Gruha Lakshmi Scheme) ಕೆಲವು ಬದಲಾವಣೆಗಳನ್ನು ತರಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ಇದನ್ನೂ ಓದಿ: 18 Lakh Pension Stopped: ರಾಜ್ಯದಲ್ಲಿ 18 ಲಕ್ಷಕ್ಕೂ ಹೆಚ್ಚು ಜನರ ಪಿಂಚಣಿ ಬಂದ್ | ಫಲಾನುಭವಿಗಳಿಗೆ ಮಹತ್ವದ ಮಾಹಿತಿ
ಮುಂದಿನ ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಮಾಸಿಕ ₹2,000 ಹಣ ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗಬೇಕಾದರೆ, ಮನೆ ಯಜಮಾನಿಯ ಮೊಬೈಲ್ ಸಂಖ್ಯೆ (Mobile Number) ಆಕೆಯ ಬ್ಯಾಂಕ್ ಖಾತೆಗೆ ಲಿಂಕ್ (Bank Account Linking) ಆಗಿರಬೇಕು ಎಂಬ ನಿಯಮ ಜಾರಿಗೆ ಬರುವ ಸಾಧ್ಯತೆ ಇದೆ.
ಈಚೆಗೆ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಕುರಿತು ಮಾಹಿತಿ ನೀಡಿದರು. ಮಹಿಳೆಯರನ್ನು ಆರ್ಥಿಕವಾಗಿ ಇನ್ನಷ್ಟು ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: SIR Status Check By SMS: ಎಸ್ಐಆರ್ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ? ಜಸ್ಟ್ ಒಂದು ಎಸ್ಎಂಎಸ್ ಮೂಲಕ ಚೆಕ್ ಮಾಡಿ!
ಯಾಕೆ ಹೊಸ ನಿಯಮ ತರಲು ಸರ್ಕಾರ ಮುಂದಾಗಿದೆ?
ಗೃಹಲಕ್ಷ್ಮಿ ಯೋಜನೆಯ ಹಣ ನೇರವಾಗಿ ಅರ್ಹ ಮಹಿಳೆಯ ಖಾತೆಗೆ ತಲುಪಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಆದರೆ ಕೆಲವೊಂದು ಪ್ರಕರಣಗಳಲ್ಲಿ ಫಲಾನುಭವಿಯ ಪತಿ, ಮಕ್ಕಳು ಅಥವಾ ಕುಟುಂಬದ ಇತರ ಸದಸ್ಯರ ಖಾತೆಗೆ ಹಣ ಜಮೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.
ಇAತಹ ಸಮಸ್ಯೆಗೆ ಕಡಿವಾಣ ಹಾಕಲು, ಯಜಮಾನಿಯ ಹೆಸರಿನ ಬ್ಯಾಂಕ್ ಖಾತೆಗೆ ಆಕೆಯ ಮೊಬೈಲ್ ಸಂಖ್ಯೆ ಲಿಂಕ್ ಆಗಿದ್ದರೆ ಮಾತ್ರ ಹಣ ಜಮೆ ಮಾಡುವ ವ್ಯವಸ್ಥೆ ರೂಪಿಸುವ ಕುರಿತು ಸರ್ಕಾರ ಚರ್ಚೆ ನಡೆಸಿದೆ.
ಮುಖ್ಯಮಂತ್ರಿಯವರ ಮಾತಿನ ಪ್ರಕಾರ, ಗೃಹಲಕ್ಷ್ಮಿ ಯೋಜನೆಯ ಲಾಭವನ್ನು ಬೇರೆ ಯಾರೂ ಪಡೆಯಬಾರದು. ನಿಜವಾದ ಫಲಾನುಭವಿಯೇ ಹಣ ಪಡೆಯಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ.
ಇದನ್ನೂ ಓದಿ: Intense Pushya rain: ಕರ್ನಾಟಕದಲ್ಲಿ ಪುಷ್ಯ ಮಳೆ ಅಬ್ಬರ: ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ
ಬಯೋಮೆಟ್ರಿಕ್ ಪರಿಶೀಲನೆಯೂ ಬರಬಹುದು
ಮೊಬೈಲ್ ಸಂಖ್ಯೆ ಲಿಂಕ್ ಮಾಡುವುದರ ಜೊತೆಗೆ ಫಲಾನುಭವಿಯ ಬಯೋಮೆಟ್ರಿಕ್ ದೃಢೀಕರಣದ (Biometric Authentication) ಬಗ್ಗೆಯೂ ಸಚಿವ ಸಂಪುಟದಲ್ಲಿ ಚರ್ಚೆ ನಡೆದಿದೆ.
ಯೋಜನೆಯ ಹಣ ಸರಿಯಾದ ವ್ಯಕ್ತಿಗೆ ತಲುಪುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ಅಂತಿಮ ತೀರ್ಮಾನವಾಗಿಲ್ಲ.
ಮೇ ತಿಂಗಳವರೆಗಿನ ಹಣ ಬಿಡುಗಡೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡಿರುವ ಮಾಹಿತಿಯಂತೆ, ಗೃಹಲಕ್ಷ್ಮಿ ಯೋಜನೆಯಡಿ ಮೇ ತಿಂಗಳವರೆಗಿನ ಹಣವನ್ನು ಈಗಾಗಲೇ ಫಲಾನುಭವಿಗಳ ಖಾತೆಗೆ ಬಿಡುಗಡೆ ಮಾಡಲಾಗಿದೆ. ಹೀಗಾಗಿ ಸದ್ಯಕ್ಕೆ ಹಣ ಬಿಡುಗಡೆಯ ಬಗ್ಗೆ ಫಲಾನುಭವಿಗಳು ಆತಂಕಪಡುವ ಅಗತ್ಯವಿಲ್ಲ.
ಇದನ್ನೂ ಓದಿ: Gruhalakshmi Biometric: ಗೃಹಲಕ್ಷ್ಮಿ ಹಣ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ | ಸಚಿವ ಸಂಪುಟದ ಮಹತ್ವದ ನಿರ್ಧಾರ

ಮರುನವೀಕರಣ ಏಕೆ?
ಯೋಜನೆಯಡಿ ಕೆಲ ಅನರ್ಹರು ಕೂಡ ಹಣ ಪಡೆಯುತ್ತಿರುವುದು ಸರ್ಕಾರದ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ. ಆದಾಯ ತೆರಿಗೆ ಪಾವತಿದಾರರು, ನಿಧನರಾದವರ ಹೆಸರಿನ ಖಾತೆಗಳಿಗೂ ಹಣ ಜಮೆಯಾಗಿರುವ ಪ್ರಕರಣಗಳು ಪತ್ತೆಯಾಗಿವೆ.
ಈ ಕಾರಣದಿಂದಲೇ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಅನರ್ಹರನ್ನು ಯೋಜನೆಯಿಂದ ಹೊರಗಿಡುವ ಉದ್ದೇಶದಿಂದ ಸರ್ಕಾರ ಮರುನವೀಕರಣ (Re-verification) ಪ್ರಕ್ರಿಯೆ ಕೈಗೊಳ್ಳಲು ತೀರ್ಮಾನಿಸಿದೆ.
ಇದನ್ನೂ ಓದಿ: e-Swathu New Committee: ಇ-ಸ್ವತ್ತು ಪಡೆಯುವುದು ಇನ್ನು ಸುಲಭ! ಸರ್ಕಾರದಿಂದ ಮಹತ್ವದ ನಿರ್ಧಾರ
ಇನ್ನೂ ಸರ್ಕಾರದ ಅಧಿಸೂಚನೆ ಬಂದಿಲ್ಲ
ಗೃಹಲಕ್ಷ್ಮಿ ಯೋಜನೆಯ ಮರುನವೀಕರಣ ಅಥವಾ ಬಯೋಮೆಟ್ರಿಕ್ ಪರಿಶೀಲನೆಗೆ ಸಂಬಂಧಿಸಿದಂತೆ ಇನ್ನೂ ಸರ್ಕಾರ ಯಾವುದೇ ಅಧಿಕೃತ ಅಧಿಸೂಚನೆ (Notification) ಹೊರಡಿಸಿಲ್ಲ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಾರ್ಗಸೂಚಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದೆ. ಸಚಿವ ಸಂಪುಟದ ಅನುಮೋದನೆ ದೊರೆತ ಬಳಿಕವೇ ಹೊಸ ನಿಯಮಗಳು ಜಾರಿಗೆ ಬರಲಿವೆ.
ಇದನ್ನೂ ಓದಿ: Gruha Lakshmi 31st Installment: ಗೃಹಲಕ್ಷ್ಮಿ 31ನೇ ಕಂತಿನ ಹಣ ಬಿಡುಗಡೆ: ಮಹಿಳೆಯರ ಖಾತೆಗೆ ಹಣ ಜಮೆ ಆರಂಭ
ನವೀಕರಣ ಹೇಗೆ ನಡೆಯಲಿದೆ?
ಸರ್ಕಾರದ ಪ್ರಾಥಮಿಕ ಯೋಜನೆಯ ಪ್ರಕಾರ, ಅಂಗನವಾಡಿ ಕಾರ್ಯಕರ್ತೆಯರು ಮನೆ-ಮನೆಗೆ ಭೇಟಿ ನೀಡಿ ಫಲಾನುಭವಿಗಳ ದಾಖಲೆಗಳನ್ನು ಪರಿಶೀಲಿಸಲಿದ್ದಾರೆ.
ಇದರ ಜೊತೆಗೆ ಬೆಂಗಳೂರು ಒನ್, ಗ್ರಾಮ ಒನ್ ಸೇರಿದಂತೆ ವಿವಿಧ ಸೇವಾ ಕೇಂದ್ರಗಳಲ್ಲೂ ಫಲಾನುಭವಿಗಳಿಗೆ ಮರುನವೀಕರಣ ಮಾಡಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ನವೀಕರಣದ ವೇಳೆ ಆಧಾರ್ ಕಾರ್ಡ್, ಪಡಿತರ ಚೀಟಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗಬಹುದು.
ಇದನ್ನೂ ಓದಿ: Voter ID SIR Status: ಮತದಾರರೇ ಗಮನಿಸಿ | ನಿಮ್ಮ SIR ಯಶಸ್ವಿಯಾಗಿದೆಯೇ? ಮೊಬೈಲ್ನಲ್ಲಿಯೇ ನಿಮ್ಮ SIR ಸ್ಟೇಟಸ್ ಚೆಕ್ ಮಾಡಿ..
ಫಲಾನುಭವಿಗಳು ಈಗ ಏನು ಮಾಡಬೇಕು?
ಸದ್ಯಕ್ಕೆ ಯಾವುದೇ ಹೊಸ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಬಯೋಮೆಟ್ರಿಕ್ ಅಥವಾ ಮೊಬೈಲ್ ಸಂಖ್ಯೆ ಲಿಂಕ್ ಕಡ್ಡಾಯವಾಗಿದೆ ಎಂಬ ಅಧಿಕೃತ ಆದೇಶವೂ ಇನ್ನೂ ಹೊರಬಂದಿಲ್ಲ.
ಆದರೆ ಮುನ್ನೆಚ್ಚರಿಕೆಯಾಗಿ, ಯಜಮಾನಿಯ ಬ್ಯಾಂಕ್ ಖಾತೆ ಸಕ್ರಿಯವಾಗಿದೆಯೇ, ಮೊಬೈಲ್ ಸಂಖ್ಯೆ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆಯೇ ಎಂಬುದನ್ನು ಪರಿಶೀಲಿಸಿಕೊಂಡರೆ ಮುಂದಿನ ದಿನಗಳಲ್ಲಿ ಅನುಕೂಲವಾಗಬಹುದು.
ಇದನ್ನೂ ಓದಿ: Gruhalakshmi Scheme Money Transfer: ಗೃಹಲಕ್ಷ್ಮಿ ಹಣ ಜಮೆ ಆರಂಭ: ರಾಜ್ಯದ ಮಹಿಳೆಯರಿಗೆ ಸರ್ಕಾರದಿಂದ ಮಹತ್ವದ ಮಾಹಿತಿ
ಇದು ನಿಮ್ಮ ಗಮನದಲ್ಲಿರಲಿ…
ಗೃಹಲಕ್ಷ್ಮಿ ಯೋಜನೆಯಲ್ಲಿ ಬದಲಾವಣೆ ಮಾಡುವ ಬಗ್ಗೆ ಸರ್ಕಾರ ಪ್ರಸ್ತಾಪ ಮಾಡಿದೆ. ಆದರೆ ಮೊಬೈಲ್ ಸಂಖ್ಯೆ ಲಿಂಕ್ ಕಡ್ಡಾಯ, ಬಯೋಮೆಟ್ರಿಕ್ ಪರಿಶೀಲನೆ ಹಾಗೂ ಮರುನವೀಕರಣದ ನಿಯಮಗಳು ಇನ್ನೂ ಅಂತಿಮಗೊAಡಿಲ್ಲ.
ಸಚಿವ ಸಂಪುಟದ ಅಧಿಕೃತ ಅನುಮೋದನೆ ಹಾಗೂ ಸರ್ಕಾರದ ಅಧಿಸೂಚನೆ ಹೊರಬಂದ ನಂತರವೇ ಹೊಸ ನಿಯಮಗಳು ಜಾರಿಗೆ ಬರಲಿವೆ. ಆದ್ದರಿಂದ ಫಲಾನುಭವಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವದಂತಿಗಳನ್ನು ನಂಬದೆ, ಸರ್ಕಾರದಿಂದ ಬರುವ ಅಧಿಕೃತ ಮಾಹಿತಿಯನ್ನೇ ಗಮನಿಸುವುದು ಉತ್ತಮ.
SIR Status Check By SMS: ಎಸ್ಐಆರ್ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ? ಜಸ್ಟ್ ಒಂದು ಎಸ್ಎಂಎಸ್ ಮೂಲಕ ಚೆಕ್ ಮಾಡಿ!

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.