ಪ್ರತಿಷ್ಠಿತ ಜಿಆರ್‌ಟಿ ಜ್ಯುವೆಲರ್ಸ್ (GRT Jewellers) ಪಿಯುಸಿ ಪಾಸಾದ ವಿದ್ಯಾರ್ಥಿಗಳಿಂದ ವಿದ್ಯಾರ್ಥಿವೇತನಕ್ಕೆ (GRT Endowment Scholarship 2025) ಅರ್ಜಿ ಆಹ್ವಾನಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಶಿಕ್ಷಣವೇ ಬದುಕು ರೂಪಿಸುವ ಶಕ್ತಿಯಾಗಿದೆ. ಆದರೆ ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳು ಆರ್ಥಿಕ ಕಾರಣಕ್ಕೆ ತಮ್ಮ ಕನಸುಗಳನ್ನು ಮುರಿದುಕೊಳ್ಳಬೇಕಾದ ಸ್ಥಿತಿಗೆ ಬರುತ್ತಾರೆ. ಇಂತಹ ಪ್ರತಿಭಾನ್ವಿತ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಬೆಂಬಲವಾಗಿ, ಪ್ರಸಿದ್ಧ ಜಿಆರ್‌ಟಿ ಜ್ಯುವೆಲರ್ಸ್ (GRT Jewellers) ಸಂಸ್ಥೆ 2025ರ ಶೈಕ್ಷಣಿಕ ವರ್ಷದ ವಿದ್ಯಾರ್ಥಿವೇತನವನ್ನು ಘೋಷಿಸಿದೆ.
ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು
ಈ ವಿದ್ಯಾರ್ಥಿವೇತನ ಯೋಜನೆಯು “GRT Endowment Scholarship 2025” ಎಂಬ ಹೆಸರಿನಲ್ಲಿ ನಡೆಯುತ್ತಿದ್ದು, ದ್ವಿತೀಯ ಪಿಯುಸಿ (PUC) ಪಾಸಾದ ವಿದ್ಯಾರ್ಥಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಮುಂದಿನ ಪದವಿ ಶಿಕ್ಷಣ ಮುಂದುವರಿಸಲು ಈ ವಿದ್ಯಾರ್ಥಿವೇತನವು ಆರ್ಥಿಕ ಸಹಾಯವನ್ನು ನೀಡಲಿದೆ.
ಪ್ರತಿಭಾನ್ವಿತ ಆದರೆ, ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಪ್ರೋತ್ಸಾಹ ನೀಡುವುದು, ಅವರ ಉನ್ನತ ವಿದ್ಯಾಭ್ಯಾಸಕ್ಕೆ ಆರ್ಥಿಕ ಪ್ರೋತ್ಸಾಹ ಒದಗಿಸುವುದು ಜಿಆರ್‌ಟಿ ಜ್ಯುವೆಲರ್ಸ್ ವಿದ್ಯಾರ್ಥಿವೇತನ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಪ್ರತಿಯೊಂದು ವರ್ಷದಂತೆಯೇ, ಈ ವರ್ಷವೂ ಸಂಸ್ಥೆಯು ವಿದ್ಯಾರ್ಥಿವೇತನವನ್ನು ಘೋಷಿಸಿದ್ದು, 2025ರ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದವರು ಈ ವೇತನಕ್ಕೆ ಅರ್ಜಿ ಹಾಕಬಹುದಾಗಿದೆ.
Karnataka Weather Alert- ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ | ನಾಲ್ಕು ದಿನ ಯೆಲ್ಲೋ ಅಲರ್ಟ್ ಘೋಷಣೆ
ಯಾರೆಲ್ಲ ಅರ್ಜಿ ಸಲ್ಲಿಸಬಹುದು?
- ಜಿಆರ್‌ಟಿ ಜ್ಯುವೆಲರ್ಸ್ ವಿದ್ಯಾರ್ಥಿವೇತನ ಪಡೆಯಲು ಇಚ್ಛಿಸುವ ಅರ್ಹ ವಿದ್ಯಾರ್ಥಿಗಳು ಪ್ರಮುಖವಾಗಿ 2025ರಲ್ಲಿ ದ್ವಿತೀಯ ಪಿಯುಸಿ ಪಾಸಾಗಿರಬೇಕು.
- ಪ್ರತಿ ವಿಷಯದಲ್ಲಿ ಕನಿಷ್ಠ ಶೇಕಡಾ 70 ಅಥವಾ ಹೆಚ್ಚು ಅಂಕ ಗಳಿಸಿರುವವರು ಮಾತ್ರ ಅರ್ಹರಾಗುತ್ತಾರೆ.
- ವಿದ್ಯಾರ್ಥಿಯು ಆರ್ಥಿಕವಾಗಿ ಹಿಂದುಳಿದ ಕುಟುಂಬದಿAದ ಬಂದವರಾಗಬೇಕು.
- ವಿದ್ಯಾರ್ಥಿಗಳು ಇತ್ತೀಚೆಗೆ ಪಾಸಾದವರೆಂದು ನಿಯಮ ಬದ್ಧವಾಗಿರುವುದರಿಂದ ಹಿಂದಿನ ಸಾಲಿನ ವಿದ್ಯಾರ್ಥಿಗಳು ಅರ್ಹರಾಗಿರುವುದಿಲ್ಲ.

ಯಾವೆಲ್ಲ ರಾಜ್ಯಗಳ ವಿದ್ಯಾರ್ಥಿಗಳಿಗೆ ಅವಕಾಶ?
- ಕರ್ನಾಟಕ
- ಆಂಧ್ರಪ್ರದೇಶ
- ತಮಿಳುನಾಡು
- ಪುದುಚೇರಿ
- ತೆಲಂಗಾಣ
ಈ ರಾಜ್ಯಗಳಿಗೆ ಸೇರಿದ ವಿದ್ಯಾರ್ಥಿಗಳಿಂದ ಮಾತ್ರ ಅರ್ಜಿ ಆಹ್ವಾನಿಸಲಾಗಿದೆ. ಇತರ ರಾಜ್ಯಗಳ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ ಎಂಬುದನ್ನು ಗಮನದಲ್ಲಿಡಬೇಕು.
ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕ
ಇದೇ ಮೇ 31, 2025 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಈ ದಿನಾಂಕದ ನಂತರ ಬಂದ ಯಾವುದೇ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಆದ್ದರಿಂದ ಅರ್ಹ ವಿದ್ಯಾರ್ಥಿಗಳು ಸಮಯಮಿತಿಯೊಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ ಹೇಗೆ?
grtendowment.com ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಕೆ ಅವಕಾಶವಿದ್ದು; ಅರ್ಜಿ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ, ಈ ಕೆಳಗಿನ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು. ಅರ್ಜಿಗೆ ಅಗತ್ಯವಿರುವ ದಾಖಲೆಗಳು:
- ದ್ವಿತೀಯ ಪಿಯುಸಿ ಅಂಕಪಟ್ಟಿ (ಮಾರ್ಕ್ಸ್ ಕಾರ್ಡ್)
- ಆದಾಯ ಪ್ರಮಾಣಪತ್ರ (Income Certificate)
- ಪಾಸ್‌ಪೋರ್ಟ್ ಫೋಟೋ
- ಗುರುತಿನ ಚೀಟಿ (ಆಧಾರ್ ಕಾರ್ಡ್ ಅಥವಾ ಶಾಲಾ ಗುರುತಿನ ಚೀಟಿ)
- ಬ್ಯಾಂಕ್ ಪಾಸ್‌ಬುಕ್ ನಕಲು (ವಿದ್ಯಾರ್ಥಿಯ ಹೆಸರಿನಲ್ಲಿ)
ಎಲ್ಲಾ ದಾಖಲೆಗಳು ಸ್ಪಷ್ಟವಾಗಿರಬೇಕು. ಅಪೂರ್ಣ ಅಥವಾ ತಪ್ಪಾದ ಮಾಹಿತಿ ಇರುವ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.
Education Loan- ₹10 ಲಕ್ಷದಿಂದ ₹60 ಲಕ್ಷದ ವರೆಗೆ ಶಿಕ್ಷಣ ಸಾಲ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
ಸಂಪರ್ಕ ಮಾಹಿತಿ
ಅರ್ಜಿದಾರ ವಿದ್ಯಾರ್ಥಿಗಳು ಕೆಳಗಿನ ವೇದಿಕೆಗಳ ಮೂಲಕ ಅರ್ಜಿ ಸಲ್ಲಿಕೆಗೆ ಸಂಬAಧಿಸಿದ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ:
- ದೂರವಾಣಿ: +91 91501 10384 / +91 73059 53749
- ಇಮೇಲ್: grtendowment@grtjewels.com
ಜೆಆರ್‌ಟಿ ಜ್ಯುವೆಲರ್ಸ್ ವಿದ್ಯಾರ್ಥಿವೇತನ 2025 – ಇದು ನಿಮ್ಮ ಭವಿಷ್ಯದ ಗುರಿಗಳನ್ನು ಸಾಧಿಸಲು ಮೆಟ್ಟಿಲಾಗಲಿದ್ದು. ಅರ್ಹರಾಗಿರುವ ಎಲ್ಲಾ ವಿದ್ಯಾರ್ಥಿಗಳು ಕೂಡಲೇ ಈ ವಿದ್ಯಾರ್ಥಿವೇತನ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಿ, ಈ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳಿ…
ಅರ್ಜಿ ಸಲ್ಲಿಕೆ ಲಿಂಕ್: Apply Now