ಸರ್ಕಾರಿ ಶಾಲೆಗಳಲ್ಲಿ ಎಲ್‌ಜಿ, ಯುಕೆಜಿ ಆರಂಭ : 5,000 ಶಿಕ್ಷಕರ ನೇಮಕಾತಿ | ಹೇಗೆ ನಡೆಯಲಿದೆ ನೇಮಕಾತಿ? Govt School LKG UKG Teacher Recruitment 2024

Spread the love

Govt School LKG UKG Teacher Recruitment 2024 : ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ (Government LKG UKG Class) ಆರಂಭಿಸುವ ಪ್ರಕ್ರಿಯೆಗೆ ಮತ್ತೆ ಚಾಲನೆ ಸಿಕ್ಕಿದ್ದು; ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಕ್ಲಾಸ್ ಶುರುವಾಗಲಿವೆ. ಈ ಸಂಬ೦ಧ ಶಿಕ್ಷಕರ ನೇಮಕಾತಿ (Recruitment of teachers) ಪ್ರಕ್ರಿಯೆ ನಡೆಯಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭ
WhatsApp Group Join Now
Telegram Group Join Now

ಈಚೆಗಷ್ಟೇ ಕರ್ನಾಟಕ ರಾಜ್ಯದ ಆಯ್ದ ಜಿಲ್ಲೆಗಳ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ (LKG UKG In Govt Schools) ತರಗತಿ ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಈ ಬಗ್ಗೆ ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರು ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಿದ್ದರು.

ಆದರೆ, ಅಂಗನವಾಡಿ ಸಿಬ್ಬಂದಿ ಈ ನಿರ್ಣಯವನ್ನು ವಿರೋಧಿ ಪ್ರತಿಭಟನೆ ನಡೆಸಿದ್ದರು. ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಆರಂಭವಾದರೆ ಅಂಗನವಾಡಿಗಳಿಗೆ ಮಕ್ಕಳ ಸಂಖ್ಯೆ ಕಮ್ಮಿಯಾಗಲಿದೆ ಎಂಬ ಆತಂಕ ಅಂಗನವಾಡಿ ಸಿಬ್ಬಂದಿಗಳಿಗಿತ್ತು. ಇವರ ವಿರೋಧದ ಕಾರಣಕ್ಕೆ ಎಲ್‌ಕೆಜಿ, ಯುಕೆಜಿ ತರಗತಿಯನ್ನು ಸರ್ಕಾರ ಅಂಗನವಾಡಿಯಲ್ಲೇ ಆರಂಭಿಸಿದೆ.

ಇದನ್ನೂ ಓದಿ: 30 ದಿನ ವ್ಯಾಲಿಡಿಟಿ, ಕಮ್ಮಿ ಬೆಲೆಯ ಹೊಸ ರಿಚಾರ್ಜ್ ಪ್ಲಾನ್‌ಗಳು 30 days validity Recharge Plans

ಎಲ್‌ಕೆಜಿ ಯಿಂದ ಪಿಯುಸಿ ವರೆಗೂ ಒಂದೇ ಕಡೆಗೆ ಶಿಕ್ಷಣ

ಇದೀಗ ಅಂಗನವಾಡಿಯಲ್ಲಿ ಮಾತ್ರವಲ್ಲದೇ ಸರ್ಕಾರಿ ಶಾಲೆಗಳಲ್ಲೂ ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾವಿರ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಿದ್ದು, ಮುಂದೆ ರಾಜ್ಯಾದ್ಯಂತ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ಸಮತ್ವ ಸಿಎಸ್‌ಆರ್ ಶಿಕ್ಷಣ ಸಮಾವೇಶದಲ್ಲಿ ಮಾತನಾಡಿದ ಸಚಿವರು ಎಲ್‌ಕೆಜಿ ಯಿಂದ 12ನೇ ತರಗತಿ ವರೆಗೂ ಒಂದೇ ಆವರಣದಲ್ಲಿ ಶಿಕ್ಷಣ ಸಿಗುವಂತೆ ಮಾಡುವ ಗುರಿಯೊಂದಿಗೆ ಸಿಎಸ್‌ಆರ್ ನಿಧಿ ಬಳಸಿಕೊಂಡು ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕದ ಸಾವಿರ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಿದ್ದೇವೆ. ಮುಂದೆ ಎಲ್ಲ ಶಾಲೆಗಳಲ್ಲೂ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

Govt School LKG UKG Teacher Recruitment 2024

ಇದನ್ನೂ ಓದಿ: ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಅನ್ವಯ ಮನೆ ಬಾಡಿಗೆ ಭತ್ಯೆ ಎಷ್ಟು ಸಿಗಲಿದೆ? | ಜಿಲ್ಲಾವಾರು ಹೊಸ ಎಚ್‌ಆರ್‌ಎ ದರ ಇಲ್ಲಿದೆ… Govt Employees House Rent Allowance

ಶೀಘ್ರ 5,000 ಶಿಕ್ಷಕರ ನೇಮಕ

ಸರ್ಕಾರಿ ಶಾಲೆಗಳಲ್ಲಿ 56,000 ಶಿಕ್ಷಕರ ಕೊರತೆ ಇದೆ. 45,000 ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. 12,500 ಶಿಕ್ಷಕರ ನೇಮಕಾತಿಯಾಗುತ್ತಿದೆ. 5,000 ಶಿಕ್ಷಕರ ನೇಮಕಾತಿ ಸದ್ಯದಲ್ಲೇ ಆಗಲಿದೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.

ಈ ಹಿಂದೆ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲು ಸಿದ್ಧತೆ ನಡೆಸಿದಾಗ ಶಿಕ್ಷಣ ಸಚಿವಾಲದ ಸೂಚನೆಯಂತೆ ಸರಕಾರಿ ಎಲ್‌ಕೆಜಿ ಹಾಗೂ ಯುಕೆಜಿ ಶಾಲಾ ಶಿಕ್ಷಕರು ಹಾಗೂ ಆಯಾಗಳನ್ನು ನೇಮಕಾತಿ ಮಾಡಲು ಕಡ್ಡಾಯವಾದ ಮಾರ್ಗದರ್ಶಿಯನ್ನು ಸರಕಾರ ಬಿಡುಗಡೆ ಮಾಡಿತ್ತು. ಆ ಮಾರ್ಗದರ್ಶಿ ಪ್ರಕಾರ ಶಿಕ್ಷಕರ ನೇಮಕಾತಿಗೆ ಅರ್ಹತೆಗಳು ಈ ಕೆಳಗಿನಂತಿವೆ:

ಇದನ್ನೂ ಓದಿ: 10th, 12th ಪಾಸಾದ ಮಹಿಳೆಯರಿಗೆ 875 ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ… Anganwadi 875 Posts Applications invited

ಎಲ್‌ಕೆಜಿ, ಯುಕೆಜಿ ಶಿಕ್ಷಕರ ನೇಮಕಾತಿಗೆ ಅರ್ಹತೆಗಳು
  • ಸರಕಾರಿ ಎಲ್‌ಕೆಜಿ ಹಾಗೂ ಯುಕೆಜಿ ಶಾಲಾ ಶಿಕ್ಷಕಿ/ ಶಿಕ್ಷಕರಾಗಲು ಪಿಯುಸಿಯಲ್ಲಿ ಕನಿಷ್ಠ ಶೇ.50 ಅಂಕಗಳನ್ನು ಪಡೆದು ಉತ್ತೀರ್ಣರಾದವರಿಗೆ ಅವಕಾಶ ನೀಡಲಾಗಿದೆ. ವಯೋಮಿತಿಯು 45 ವರ್ಷಕ್ಕಿಂತ ಕಡಿಮೆ ಇರಬೇಕು.
  • ಅಥವಾ NCTE ಮಾನ್ಯತೆ ಪಡೆದ ಸಂಸ್ಥೆಯಿ೦ದ ಎರಡು ಅಥವಾ ಎರಡು ವರ್ಷಕ್ಕಿಂತ ಹೆಚ್ಚಿನ ಅವಧಿಯ ಡಿಪ್ಲೊಮಾ ಇನ್ ನರ್ಸರಿ ಟೀಚರ್ಸ್ ಎಜ್ಯುಕೇಶನ್/ ಪ್ರೀ- ಸ್ಕೂಲ್ ಎಜ್ಯುಕೇಶನ್/ ಅರ್ಲಿ ಚೈಲ್ಡ್ಹುಡ್ ಎಜುಕೇಶನ್ ಪ್ರೊಗ್ರಾಂ (ಡಿ.ಇ.ಸಿ.ಇಡಿ) ಅಥವಾ ಬಿ.ಇಡಿ (ನರ್ಸರಿ) ಅರ್ಹತೆ ಹೊಂದಿದವರಿಗೆ ಅವಕಾಶ ನೀಡಲಾಗಿದೆ.
  • ಒಂದು ವೇಳೆ ಈ ಮೇಲಿನ ಪೂರ್ವ ಪ್ರಾಥಮಿಕ ಶಿಕ್ಷಕರ ತರಬೇತಿ ಪಡೆದ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ ಪಿಯುಸಿಯಲ್ಲಿ ಕನಿಷ್ಠ ಶೇ.50 ಅಂಕಗಳನ್ನು ಪಡೆಯುವುದರ ಜತೆಗೆ NCTE ಮಾನ್ಯತೆ ಪಡೆದ ಸಂಸ್ಥೆಯಿ೦ದ ಡಿ.ಎಡ್ ತರಬೇತಿ ಹೊಂದಿದವರು ನೇಮಕಾತಿ ಮಾಡಲು ಸೂಚಿಸಲಾಗಿದೆ.

ಇದನ್ನೂ ಓದಿ: ಪಿಯುಸಿ ಪಾಸಾದವರಿಗೆ ಗ್ರಾಮ ಪಂಚಾಯತಿಗಳಲ್ಲಿ 6,599 ಹೊಸ ಗ್ರಂಥಾಲಯ ಹುದ್ದೆಗಳು | ಸ್ಥಳೀಯ ಅಭ್ಯರ್ಥಿಗಳಿಗೆ ಭರ್ಜರಿ ಅವಕಾಶ Gram Panchayat Arivu kendra Recruitment 2024

ನೇಮಕಾತಿ ಪ್ರಕ್ರಿಯೆ ಹೇಗೆ?

ಶಿಕ್ಷಕರ ನೇಮಕಾತಿಯು ಕ್ಷೇತ್ರ ಶಿಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರು, ಪ್ರಾಥಮಿಕ ವಿಭಾಗದ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಒಬ್ಬ ಹಿರಿಯ ಸಹ ಶಿಕ್ಷಕ / ಶಿಕ್ಷಕಿ ಸದಸ್ಯರಾಗಿರುವ ಆಯ್ಕೆ ಸಮಿತಿಯ ಮೂಲಕ ನಡೆಸಲಾಗುತ್ತದೆ.

ಅರ್ಹ ಅಭ್ಯರ್ಥಿಗಳ ಪೈಕಿ ನಿಗದಿತ ಮಾನದಂಡದ೦ತೆ ಅತೀ ಹೆಚ್ಚು ಅಂಕ ಗಳಿಸಿದವರನ್ನು ಪರಿಗಣಿಸಲು ಸಂಬ೦ಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಸಂಬAಧ ಸದ್ಯದಲ್ಲಿಯೇ ಸ್ಥಳೀಯ ಆಯ್ಕೆ ಸಮಿತಿ ಮೂಲಕ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಆಯಾ ಶಾಲಾ ಎಸ್‌ಡಿಎಂಸಿ ಭೇಟಿ ಮಾಡಿ ವಿಚಾರಿಸಬಹುದಾಗಿದೆ.

ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಶಿಕ್ಷಕರ ನೇಮಕಾತಿ ಕುರಿತ ಅಧಿಸೂಚನೆ (Download)

ಇದನ್ನೂ ಓದಿ: ಇನ್ಮುಂದೆ ಗ್ರಾಮ ಪಂಚಾಯತಿ ಹಗರಣಗಳಿಗೆ ಅಧ್ಯಕ್ಷ, ಸದಸ್ಯರಿಗೂ ಶಿಕ್ಷೆ | ಬಂತು ಹೊಸ ರೂಲ್ಸ್ Gram Panchayat Scam New Rules


Spread the love
WhatsApp Group Join Now
Telegram Group Join Now
error: Content is protected !!