ಸ್ವಂತ ಬಿಸಿನೆಸ್ ಅಥವಾ ಸ್ವಯಂ ಉದ್ಯೋಗ (Self Employed) ಮಾಡಿ ಕೈ ತುಂಬಾ ಹಣ ಗಳಿಸುವುದು ಬಹುತೇಕರ ಕನಸು. ಆದರೆ ಈ ಕನಸನ್ನು ಸಾಕಾರಗೊಳಿಸುವಲ್ಲಿ ಅಡಚಣೆಯಾಗುವ ಪ್ರಮುಖ ಅಂಶವೆಂದರೆ ಬಂಡವಾಳದ ಕೊರತೆ. ಇಂಥವರಿಗಾಗಿಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ರೀತಿಯ ಸಾಲ ಯೋಜನೆಗಳನ್ನು (Govt Loan Schemes) ಅನುಷ್ಠಾನಗೊಳಿಸಿವೆ.
ಈ ಸಾಲ ಯೋಜನೆಗಳ ಮೂಲಕ ಮೂಲಕ ಹಳ್ಳಿಯಲ್ಲಿಯೇ ಉದ್ಯಮ ಮಾಡುವವರಿಗೆ ಅರ್ಥಿಕ ನೆರವು ನೀಡುತ್ತಿವೆ. ಇಲ್ಲಿ ನಾವು 10 ಲಕ್ಷ ರೂ.ದಿಂದ 1 ಕೋಟಿ ರೂ. ತನಕ ಲಭ್ಯವಿರುವ ಪ್ರಮುಖ ಸರಕಾರಿ ಸಾಲ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೇವೆ. ಈ ಯೋಜನೆಗಳ ಮೂಲಕ ನೀವು ಸ್ವಂತ ಉದ್ಯಮ ಆರಂಭಿಸಿ ಆರ್ಥಿಕ ಸ್ವಾವಲಂಬನೆ ಪಡೆದುಕೊಳ್ಳಬಹುದು.
ಯಾವೆಲ್ಲ ಸಾಲ ಯೋಜನೆಗಳಿವೆ?
- MSME ಲೋನ್ ಸ್ಕೀಮ್
- ಕ್ರೆಡಿಟ್ ಗ್ಯಾರಂಟಿ ಫಂಡ್ ಸ್ಕೀಮ್
- ಮುದ್ರಾ ಲೋನ್ – Mudra loan
- ಕ್ರೆಡಿಟ್ ಲಿಂಕ್ಡ್ ಕ್ಯಾಪಿಟಲ್ ಸಬ್ಸಿಡಿ ಸ್ಕೀಮ್
Welfare Schemes- ಉಚಿತ ಎಲೆಕ್ಟ್ರಿಕ್ ಸ್ಕೂಟರ್, ಲ್ಯಾಪ್‌ಟಾಪ್ ಮತ್ತು ಹೊಲಿಗೆ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ
ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಉದ್ಯಮ ಸಾಲ ಯೋಜನೆ (MSME)
ಇದು ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾಗಿದ್ದು, ನಿರುದ್ಯೋಗಿ ಯುವಕರು, ಮಹಿಳೆಯರು ಮತ್ತು ಹಳ್ಳಿಗಳಲ್ಲಿರುವವರು ಇದರ ಪ್ರಮುಖ ಫಲಾನುಭವಿಗಳು. ಸ್ವಂತ ಉದ್ಯಮ ಆರಂಭಿಸಲು ಬಯಸುವವರಿಗೆ ಆರಂಭಿಕ ಬಂಡವಾಳವನ್ನು ಈ ಯೋಜನೆಯ ಮೂಲಕ ಪಡೆಯಬಹುದು.
ಗರಿಷ್ಠ ₹1 ಕೋಟಿ ವರೆಗೆ ಸಾಲ ಸೌಲಭ್ಯ ಸಿಗಲಿದೆ. ಅರ್ಜಿ ಸಲ್ಲಿಸಿದ 59 ನಿಮಿಷಗಳಲ್ಲಿ ಫಲಿತಾಂಶ ತಿಳಿಯಬಹುದಾದ ವೇಗದ ಪ್ರಕ್ರಿಯೆ ಹೊಂದಿರುವ ಈ ಯೋಜನೆಯಲ್ಲಿ ಮಹಿಳಾ ಉದ್ಯಮಿಗಳಿಗೆ ಶೇಕಡಾ 3ರಷ್ಟು ಮೀಸಲಾತಿ ನೀಡಲಾಗಿದೆ. ಹೆಚ್ಚಿನ ಮಾಹಿತಿ: https://msme.gov.in
ಕ್ರೆಡಿಟ್ ಗ್ಯಾರಂಟಿ ಫಂಡ್ ಸ್ಕೀಮ್ (CGTMSE)
ಕ್ರೆಡಿಟ್ ಗ್ಯಾರಂಟಿ ಫಂಡ್ ಸ್ಕೀಮ್‌ನಿಂದ ಯಾವುದೇ ಆಸ್ತಿಯ ಅಡಮಾನವಿಲ್ಲದೆ ಉದ್ಯಮಕ್ಕೆ ಸಾಲ ಪಡೆಯಬಹುದು. ಇದು ಹೊಸದಾಗಿ ಉದ್ಯಮ ಆರಂಭಿಸಲು ಬಯಸುವವರಿಗೆ ಬಹು ಉಪಯುಕ್ತವಾದ ಯೋಜನೆಯಾಗಿದೆ.
ಈ ಯೋಜನೆಯಡಿಯಲ್ಲಿ ₹10 ಲಕ್ಷ ತನಕ ಅಡಮಾನವಿಲ್ಲದೆ ಸಾಲ ಸಿಗಲಿದ್ದು; ₹10 ಲಕ್ಷಕ್ಕಿಂತ ಹೆಚ್ಚು ಸಾಲ ಬೇಕಾದರೆ ಅಡಮಾನ ನೀಡಬೇಕಾಗುತ್ತದೆ. ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳ ಮೂಲಕ ಸಾಲ ಪಡೆಯಬಹುದಾಗಿದೆ. ಅಧಿಕೃತ ಜಾಲತಾಣ: https://cgtmse.in

ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY)
ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಸೂಕ್ಷ್ಮ ಹಾಗೂ ಸಣ್ಣ ವ್ಯಾಪಾರ ಅಥವಾ ಉದ್ಯಮ ಆರಂಭಿಸಲು 20 ಲಕ್ಷ ರೂ. ವರೆಗೆ ಸಾಲ ಪಡೆಯಬಹುದಾಗಿದೆ. ಈ ಯೋನಜೆಯಡಿಯಲ್ಲಿ ಈ ಕೆಳಗಿನ ಮೂರು ಹಂತಗಳ ಸಾಲ ಯೋಜನೆಗಳಿವೆ:
- ಶಿಶು ಲೋನ್: ₹50,000 ವರೆಗೆ
- ಕಿಶೋರ್ ಲೋನ್: ₹5 ಲಕ್ಷ ವರೆಗೆ
- ತರುಣ್ ಲೋನ್: ₹10 ಲಕ್ಷ ವರೆಗೆ
- ತರುಣ್ ಪ್ಲಸ್: ₹20 ಲಕ್ಷ ವರೆಗೆ
ಹೆಚ್ಚಿನ ಮಾಹಿತಿ ಮತ್ತು ಅರ್ಜಿ ಲಿಂಕ್: https://www.mudra.org.in/
ಕ್ರೆಡಿಟ್ ಲಿಂಕ್ಡ್ ಕ್ಯಾಪಿಟಲ್ ಸಬ್ಸಿಡಿ ಸ್ಕೀಮ್ (CLCSS)
ಕ್ರೆಡಿಟ್ ಲಿಂಕ್ಡ್ ಕ್ಯಾಪಿಟಲ್ ಸಬ್ಸಿಡಿ ಸ್ಕೀಮ್’ನಲ್ಲಿ ಹೊಸ ತಂತ್ರಜ್ಞಾನ ಹೊಂದಿದ ಯಂತ್ರೋಪಕರಣಗಳನ್ನು ಖರೀದಿಸಲು ಸಾಲ ಮತ್ತು ಸಬ್ಸಿಡಿ ಸಿಗುತ್ತದೆ. ಬರೋಬ್ಬರಿ ₹1 ಕೋಟಿ ವರೆಗೆ ಸಾಲ ದೊರೆಯಲಿದ್ದು; 15% ನೇರ ಸಬ್ಸಿಡಿ ಇದೆ. ಮರುಪಾವತಿಗೆ ಸಡಿಲ ಅವಕಾಶಗಳಿವೆ. ಹೆಚ್ಚಿನ ಮಾಹಿತಿಗೆ: https://msme.gov.in
Personal Loans Guide- ವಿಶೇಷ ವೈಯಕ್ತಿಕ ಸಾಲ ಯೋಜನೆಗಳು | ಟಾಪ್ ಫೈವ್ ಪರ್ಸನಲ್ ಲೋನ್ ಲಿಸ್ಟ್ ಇಲ್ಲಿದೆ…
ಸಾಲ ಪಡೆಯಲು ಬೇಕಾಗುವ ಪ್ರಾಥಮಿಕ ಅರ್ಹತೆಗಳು
- ಉದ್ಯಮದ ಯೋಜನಾ ವರದಿ (ಬಿಸಿನೆಸ್ ಪ್ಲಾನ್)
- ಅರ್ಜಿ ಸಲ್ಲಿಸುವವನ ಗುರುತಿನ ಪ್ರಮಾಣ ಪತ್ರಗಳು (ಆಧಾರ್, ಪಾನ್, ವಿಳಾಸ ಪತ್ರ)
- ಬ್ಯಾಂಕ್ ಖಾತೆ ವಿವರ ಮತ್ತು ವಹಿವಾಟು ಹಿಸ್ಟರಿ
- ಉದ್ಯಮದ ಸ್ಥಳದ ವಿವರಗಳು
ಈ ಯೋಜನೆಗಳ ಜೊತೆಗೆ ಕೇಂದ್ರ ಸರ್ಕಾರದ ಜತೆಗೆ, ಕರ್ನಾಟಕ ರಾಜ್ಯ ಸರ್ಕಾರ ಕೂಡಾ ಸ್ವಯಂ ಉದ್ಯೋಗಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಸಾಲ ಸೌಲಭ್ಯಗಳು ನಿಮ್ಮ ಕನಸಿನ ಉದ್ಯಮವನ್ನು ಆರಂಭಿಸಲು ದಾರಿದೀಪವಾಗಬಹುದು. ನಿಮ್ಮಲ್ಲಿರುವ ಪ್ರತಿಭೆ, ನೈಪುಣ್ಯ ಮತ್ತು ಉತ್ಸಾಹವನ್ನು ಇಂತಹ ಯೋಜನೆಗಳ ಸಹಾಯದಿಂದ ಸದ್ಭಳಕೆ ಮಾಡಿಕೊಳ್ಳಿ.