ಹಾಸ್ಟೆಲ್ ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆ ಲಿಂಕ್ ಇಲ್ಲಿದೆ… Govt Hostel Admission Application 2024

Spread the love

Govt Hostel Admission Application 2024 : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕ, ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಹೊಸದಾಗಿ ಪ್ರವೇಶ ಬಯಸುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಕೋರಲಾಗಿದೆ.

WhatsApp Group Join Now
Telegram Group Join Now

ರಾಜ್ಯದ ಎಲ್ಲ ಜಿಲ್ಲೆ, ತಾಲ್ಲೂಕುಗಳಲ್ಲಿ ಇರುವ ಮೆಟ್ರಿಕ್ ಪೂರ್ವ ಬಾಲಕ, ಬಾಲಕಿಯರ ವಿದ್ಯಾರ್ಥಿ ನಿಲಯಗಳು ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ವರದಾನವಾಗಿವೆ. ಈ ಹಾಸ್ಟೆಲ್’ಗಳಲ್ಲಿ ಪ್ರವೇಶ ಪಡೆಯುವ ಮೂಲಕ ಅರ್ಹ ವಿದ್ಯಾರ್ಥಿಗಳು ಉಚಿತ ಊಟೋಪಚಾರ ಸಹಿತ ವಸತಿ ಸೌಲಭ್ಯವನ್ನು ಪಡೆಯಬಹುದಾಗಿದೆ.

ರಾಜ್ಯದ ವಿವಿಧ ಜಿಲ್ಲೆ, ತಾಲ್ಲೂಕುವಾರು ಮೆಟ್ರಿಕ್ ಪೂರ್ವ ಬಾಲಕ, ಬಾಲಕಿಯರ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಇರಬೇಕಾದ ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳು, ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕದ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 825 ಹಾಸ್ಟೆಲ್ ಹುದ್ದೆಗಳ ನೇಮಕಾತಿ | SSLC ಪಾಸಾದವರಿಗೂ ಅವಕಾಶ BCWD Hostel Recruitment 2024

ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿಗೆ ಅರ್ಜಿ ಆಹ್ವಾನಿಸಿದ್ದು; ಪ್ರವರ್ಗ-1, 2ಎ, 2ಬಿ, 3ಎ, 3ಬಿ ಹಾಗೂ ಇತರ ವರ್ಗಗಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ವಿದ್ಯಾರ್ಥಿ ಕುಟುಂಬ ಆದಾಯ ಮಿತಿ

ಮೇಲ್ಕಂಡ ಪ್ರವರ್ಗಗಳ ವಿದ್ಯಾರ್ಥಿಗಳ ಕುಟುಂಬಗಳಿಗೆ ವಾರ್ಷಿಕ ಆದಾಯ ಮಿತಿ ನಿಗದಿಪಡಿಸಿದ್ದು; ಪ್ರವರ್ಗ-1ರ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ಒಂದು ಲಕ್ಷ ರೂಪಾಯಿ ಮಿತಿಯಲ್ಲಿರಬೇಕು. ಇತರ ವರ್ಗಗಳ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ 44,500 ರೂಪಾಯಿ ಮಿತಿಯೊಳಗಿರಬೇಕು ಎಂಬ ಷರತ್ತು ವಿಧಿಸಲಾಗಿದೆ.

PUC, 7th ಪಾಸಾದವರಿಗೆ ಗ್ರಾಮ ಪಂಚಾಯತಿ ಹುದ್ದೆಗಳ ನೇಮಕ | ನಿಮ್ಮೂರ ಪಂಚಾಯ್ತಿಯಲ್ಲೇ ಕೆಲಸ | ಖಾಲಿ ಹುದ್ದೆಗಳ ವಿವರ ಇಲ್ಲಿದೆ… Gram Panchayat Recruitment 2024

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು
  • ಎಸ್‌ಎಸ್‌ಪಿ ವಿದ್ಯಾರ್ಥಿ ಐಡಿ
  • ಮೊಬೈಲ್ ನಂಬರ್
  • ಜಾತಿ ಆರ್‌ಡಿ ಸಂಖ್ಯೆ
  • ಆದಾಯ ಆರ್‌ಡಿ ಸಂಖ್ಯೆ
  • ಕಾಲೇಜು ನೋಂದಣಿ ಸಂಖ್ಯೆ
  • ಕಾಲೇಜು ಅಧ್ಯಯನ ಪ್ರಮಾಣಪತ್ರ
  • ಅಂಕ ಪಟ್ಟಿ
  • ವಿದ್ಯಾರ್ಥಿ ವಿಳಾಸ
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ :
10-07-2024

ರಾಜ್ಯದ ವಿವಿಧ ತಾಲ್ಲೂಕುವಾರು ವಿದ್ಯಾರ್ಥಿ ನಿಲಯಗಳ ವಿವರ ಹಾಗೂ ವಿದ್ಯಾರ್ಥಿ ನಿಲಯದ ಪ್ರವೇಶಕ್ಕಾಗಿ ಇರಬೇಕಾದ ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳ ವಿವರಗಳಿಗಾಗಿ bcwd.karnataka.gov.in/ ಗಮನಿಸಬಹುದು. ವೇಳೆ ತಾಂತ್ರಿಕ ಸಲ್ಲಿಸುವ ತೊಂದರೆಗಳಾದರೆ 8050770004 / 8050770005 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.

ಆನ್‌ಲೈನ್ ಅರ್ಜಿ ಸಲ್ಲಿಕೆ ಲಿಂಕ್: Apply now

ಸರಕಾರಿ ನೌಕರರ ಸಂಬಳ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ | ಯಾರಿಗೆ ಎಷ್ಟು ಹೆಚ್ಚಳವಾಗಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ… Govt employees Basic Salary Increment


Spread the love
WhatsApp Group Join Now
Telegram Group Join Now

Leave a Comment

error: Content is protected !!