ಅನುದಾನಿತ ಸರ್ಕಾರಿ ಶಾಲೆಗಳಿಗೆ 5,000 ಶಿಕ್ಷಕರ ನೇಮಕಾತಿ | ಆರ್ಥಿಕ ಇಲಾಖೆಯಿಂದ ಅನುಮೋದನೆ Govt Funded Schools Teachers Recruitment 2024

Spread the love

Govt Funded Schools Teachers Recruitment 2024 : ರಾಜ್ಯದಲ್ಲಿರುವ 15,000 ಅನುದಾನಿತ ಶಾಲೆಗಳಲ್ಲಿ (Govt Funded Schools) ಅಗತ್ಯವಿರುವ 5,000 ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಪ್ರಕಟಣೆಯಲ್ಲಿ ತಿಳಿಸಿದ್ದು ಇದರ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಸಚಿವ ಮಧು ಬಂಗಾರಪ್ಪ ಅವರು ರಾಜ್ಯದ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ (Government funded Schools) ಅಗತ್ಯವಿರುವ 5,000 ಶಿಕ್ಷಕರ ಹುದ್ದೆಗಳನ್ನು ಶೀಘ್ರದಲ್ಲಿಯೆ ನೇಮಕಾತಿ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಅಂಗನವಾಡಿ ನೇಮಕಾತಿ ಜಿಲ್ಲಾವಾರು ಖಾಲಿ ಹುದ್ದೆಗಳು | ಈ ಜಿಲ್ಲೆಗಳಿಂದ ಅರ್ಜಿ ಆಹ್ವಾನ… Karnataka Anganwadi Vacancies

ಶಿಕ್ಷಕರ ನೇಮಕಾತಿ ಪರ್ವ

ರಾಜ್ಯದ್ಯಂತ ಒಟ್ಟು 46,000 ಶಾಲಾ-ಕಾಲೇಜುಗಳಿದ್ದು ಇವುಗಳ ಪೈಕಿ 15,000 ಅನುದಾನಿತ ಶಾಲೆಗಳಿವೆ. ಇಲ್ಲಿಯ ತನಕ 42,000 ಅತಿಥಿ ಶಿಕ್ಷಕರ ನೇಮಕಾತಿ ಹಾಗೂ 13,500 ಖಾಯಂ ಶಿಕ್ಷಕರ ನೇಮಕಾತಿಯನ್ನು ಮಾಡಿಕೊಂಡಿದ್ದು, ಇನ್ನೂ 53,000 ಕಾಯಂ ಶಿಕ್ಷಕರ ನೇಮಕಾತಿಯಾಗಬೇಕಾಗಿದೆ.

ಈ ನೇಮಕಾತಿಗೆ ಸಂಬ೦ಧಿಸಿದ೦ತೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆಗಳೇನು? ಆಯ್ಕೆಯಾದವರಿಗೆ ಸಿಗುವ ವೇತನವೆಷ್ಟು? ನೇಮಕಾತಿ ಯಾವಾಗ ಆರಂಭವಾಗಲಿದೆ? ಸೇರಿದಂತೆ ವಿವಿಧ ಹೆಚ್ಚಿನ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ನೀಡಲಾಗಿದೆ.

ಇದನ್ನೂ ಓದಿ: ಕರ್ನಾಟಕ ಪೋಲಿಸ್ ಇಲಾಖೆಯಲ್ಲಿ 4,115 ಕಾನ್’ಸ್ಟೇಬಲ್ ಹಾಗೂ ಪಿಎಸ್‌ಐ ಹುದ್ದೆಗಳು : ನೇಮಕಾತಿ ಯಾವಾಗ? ಅರ್ಹತೆಗಳೇನು? Karnataka Police Constable & PSI Recruitment 2024

ಅನುದಾನಿತತ ಶಾಲೆ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು?

ಸರ್ಕಾರಿ ಅನುದಾನಿತ ಶಾಲೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವ ಶಿಕ್ಷಕರ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಖಾಲಿ ಇರುವ ಹುದ್ದೆಗಳಿಗೆ ಸಂಬ೦ಧಪಟ್ಟ ವಿಷಯದಲ್ಲಿ ಪದವಿ ಶಿಕ್ಷಣ ಮುಗಿಸಿರಬೇಕು. ನಂತರದಲ್ಲಿ ಬಿ.ಎಡ್ ಪದವಿ ಶಿಕ್ಷಣವನ್ನು ಮುಗಿಸಬೇಕು.

ವಯೋಮಿತಿ ಅರ್ಹತೆಗಳೇನು?

ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಕನಿಷ್ಠ 21 ವರ್ಷ ಹೊಂದಿರಬೇಕು ಹಾಗೂ ಗರಿಷ್ಠ ವಯೋಮಿತಿಯು ವರ್ಗಗಳಿಗೆ ಅನುಗುಣವಾಗಿ ಈ ಕೆಳಗಿನಂತಿದೆ:

  • ಸಾಮಾನ್ಯ ವರ್ಗದವರಿಗೆ : 42 ವರ್ಷ
  • 2ಎ, 2ಬಿ, 3ಎ, 3ಬಿ ವರ್ಗದವರಿಗೆ : 45 ವರ್ಷ
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1 ಹಾಗೂ ಅಂಗವಿಕಲ ವರ್ಗದ ಅಭ್ಯರ್ಥಿಗಳಿಗೆ : 47 ವರ್ಷ

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಆಗಸ್ಟ್’ನಿಂದ ಸಿಗುವ ಪರಿಷ್ಕೃತ ಪಿಂಚಣಿ ಹಣವೆಷ್ಟು? ಮೊಬೈಲ್’ನಲ್ಲೇ ಹೀಗೆ ಚೆಕ್ ಮಾಡಿ…. 7th pay pension calculator

Govt Funded Schools Teachers Recruitment 2024
ಶಿಕ್ಷಕರ ಹುದ್ದೆಗಳಿಗೆ ಹೇಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ?

ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ 5000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಎರಡು ಹಂತಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಮೊದಲನೆಯ ಹಂತದಲ್ಲಿ ಅಭ್ಯರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ನಡೆಸುವಂತಹ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ (TET) ಶೇ.60 ರಷ್ಟು ಅಂಕಗಳೊ೦ದಿಗೆ ಪಾಸಾಗಿರಬೇಕು. ನಂತರದಲ್ಲಿ ಇವರಿಗೆ ಸಾಮಾನ್ಯ ಅರ್ಹತಾ ಪರೀಕ್ಷೆಯನ್ನು ನಡೆಸಿ ಆಯ್ಕೆ ಮಾಡಿಕೊಳ್ಳಲಾಗುವುದು.

ಸರ್ಕಾರಿ ಶಿಕ್ಷಕರಿಗೆ ಸಿಗುವ ಮಾಸಿಕ ವೇತನ

ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಶಿಕ್ಷಕರಾಗಿ ನೇಮಕಗೊಂಡವರಿಗೆ ಮಾಸಿಕ 27,650 ರೂಪಾಯಿ ಯಿಂದ 52,650 ರೂಪಾಯಿ ತನಕ ವೇತನ ಸಿಗಲಿದೆ. ಜೊತೆಗೆ ಸರ್ಕಾರಿ ನೌಕರರಿಗೆಸಿಗುವಂತಹ ಎಲ್ಲ ಸವಲತ್ತುಗಳೂ ಅನ್ವಯವಾಗಲಿವೆ.

ಇದನ್ನೂ ಓದಿ: 5000 ಅಂಗನವಾಡಿ ಸರ್ಕಾರಿ ಮಾಂಟೆಸ್ಸರಿ ಟೀಚರ್ ನೇಮಕಾತಿ: ಯಾರಿಗೆಲ್ಲ ಸಿಗಲಿದೆ ಅವಕಾಶ? Govt Montessori Teacher Recruitment 2024

ರಾಜ್ಯ ಸರಕಾರ ಈಚೆಗೆ 7ನೇ ವೇತನ ಆಯೋಗ ವರದಿಯ ಶಿಫಾರಸು ಜಾರಿ ಮಾಡಿದ್ದು; ಎಲ್ಲ ವೃಂದದ ನೌಕರರಿಗೆ ಸಿಗುವ ಸೌಲಭ್ಯಗಳನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳ ನೌಕರರು ಮತ್ತು ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗಳಿಗೂ ಸಹ ಸರ್ಕಾರ ವಿಸ್ತರಿಸಿದೆ.

ನೇಮಕಾತಿ ಯಾವಾಗ ನಡೆಯಲಿದೆ?

ಆರ್ಥಿಕ ಇಲಾಖೆಯು ಕರ್ನಾಟಕ ರಾಜ್ಯದಲ್ಲಿರುವ 2013ರ ನಂತರ ಇಲ್ಲಿಯ ವರೆಗೆ ಸರ್ಕಾರಿ ಅನುದಾನಕ್ಕೆ ಮಾನ್ಯತೆ ಹೊಂದಿರುವ ಶಾಲೆಗಳಲ್ಲಿ ಅಗತ್ಯವಿರುವ ಶಿಕ್ಷಕರ ನೇಮಕಾತಿಗೆ ಆರ್ಥಿಕ ಇಲಾಖೆಯು ಅನುಮೋದನೆ ನೀಡಿದೆ. ಆದ್ದರಿಂದ ಈ ನೇಮಕಾತಿಯೂ ಕೂಡ ಶೀಘ್ರದಲ್ಲಿಯೇ ನಡೆಯುವ ಸಾಧ್ಯತೆಗಳಿವೆ. TET ಹಾಗೂ CET ಪರೀಕ್ಷೆಗಳಿಗೆ ಅಗತ್ಯವಿರುವ ಸಂಪೂರ್ಣ ತಯಾರಿಯನ್ನು ಈಗಿನಿಂದಲೇ ಆರಂಭಿಸಿ.

ಇದನ್ನೂ ಓದಿ: ಕೃಷಿ ಇಲಾಖೆಯ 1,138 ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆ ಅನುಮೋದನೆ | ಪಿಯುಸಿ ಪಾಸಾದವರಿಗೂ ಅವಕಾಶ Karnataka Agri Officers Recruitment 2024


Spread the love
WhatsApp Group Join Now
Telegram Group Join Now

Leave a Comment

error: Content is protected !!