ಸರ್ಕಾರಿ ನೌಕರರು (Govt Employees) ಕಡ್ಡಾಯವಾಗಿ ಆಸ್ತಿ ವಿವರ (Property details) ಸಲ್ಲಿಸುವಂತೆ ರಾಜ್ಯ ಸರ್ಕಾರ (Government of Karnataka) ಆದೇಶ ಹೊರಡಿಸಿದೆ. ವಿಳಂಬ ಧೋರಣೆ ಅನುಸರಿಸಿದರೆ ಕ್ರಮದ ಎಚ್ಚರಿಕೆಯನ್ನೂ ನೀಡಿದೆ.
ಹೌದು, ನೌಕರರ ಆಸ್ತಿ ಪಾರದರ್ಶಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರದ ಎಲ್ಲಾ ಇಲಾಖಾ ನೌಕರರಿಗೆ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಆಸ್ತಿ ಹಾಗೂ ಹೊಣೆಗಾರಿಕೆ ವಿವರ ಸಲ್ಲಿಕೆ ಸಂಬಂಧ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದೆ.
ಆಸ್ತಿ ವಿವರ ಸಲ್ಲಿಕೆ ಕಡ್ಡಾಯ
ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು, 2021ರ ನಿಯಮ 24ರ ಪ್ರಕಾರ, ಪ್ರತಿಯೊಬ್ಬ ಸರ್ಕಾರಿ ನೌಕರನು ಸರ್ಕಾರಿ ಸೇವೆಗೆ ಸೇರುವ ಸಮಯದಲ್ಲಿ ಮತ್ತು ನಂತರದಲ್ಲಿ ಪ್ರತಿ ವರ್ಷದ ಆರಂಭದಲ್ಲಿ (ಸಾಮಾನ್ಯವಾಗಿ ಜನವರಿ ತಿಂಗಳೊಳಗೆ) ತಮಗಿರುವ ಆಸ್ತಿಗಳು ಹಾಗೂ ಆತನ ಕುಟುಂಬದ ಸದಸ್ಯರ ಆಸ್ತಿ ಹೆಚ್ಚಳ/ಹೊಂದಿಕೆಗಳ ವಿವರಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
ಸರ್ಕಾರಿ ನೌಕರ ಆಸ್ತಿ ಸ್ಥಿತಿಯನ್ನು ಸರಿಯಾಗಿ ದಾಖಲು ಮಾಡುವ ಮೂಲಕ ಅವ್ಯವಹಾರ, ಭ್ರಷ್ಟಾಚಾರ ತಡೆಯುವುದು ಹಾಗೂ ಸಾರ್ವಜನಿಕ ನಂಬಿಕೆಗೆ ಧಕ್ಕೆ ಬಾರದಂತೆ ಮಾಡುವುದು ಈ ನಿಯಮದ ಉದ್ದೇಶವಾಗಿದೆ.
SSLC 2025 Results- SSLC ಫಲಿತಾಂಶ | ಮೌಲ್ಯಮಾಪನ, ರಿಸೆಲ್ಟ್ ಕುರಿತ KSEAB ಪ್ರಮುಖ ಮಾಹಿತಿ ಇಲ್ಲಿದೆ…
ಲೋಕಾಯುಕ್ತ ಸೂಚನೆಯ ಬೆನ್ನಲ್ಲೇ ಕ್ರಮ
ಇತ್ತೀಚೆಗಷ್ಟೇ ಲೋಕಾಯುಕ್ತ ಸಂಸ್ಥೆಯು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, ಸರ್ಕಾರಿ ನೌಕರರ ಹಾಗೂ ಅವರ ಕುಟುಂಬದ ಸದಸ್ಯರ ಆಸ್ತಿ ಹೆಚ್ಚಳ/ ಹೊಂದಿಕೆ ವಿವರಗಳನ್ನು ಸಾರ್ವಜನಿಕಗೊಳಿಸಿ, ಸಂಬಂಧಿತ ಇಲಾಖೆಯ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸುವಂತೆ ಶಿಫಾರಸು ಮಾಡಿತ್ತು.
ಆದರೆ, ನೌಕರರ ಸಂಘವು ಆಸ್ತಿ ವಿವರಗಳನ್ನು ಸಾರ್ವಜನಿಕಗೊಳಿಸುವ ಕುರಿತು ಆತಂಕ ವ್ಯಕ್ತಪಡಿಸಿತ್ತು. ವೆಬ್‌ಸೈಟ್‌ನಲ್ಲಿ ಈ ವಿವರಗಳನ್ನು ಪ್ರಕಟಿಸುವುದರಿಂದ ಕೆಲ ವ್ಯಕ್ತಿಗಳು RTI (ಮಾಹಿತಿ ಹಕ್ಕು) ಕಾರ್ಯಕರ್ತರ ಹೆಸರಿನಲ್ಲಿ ನಿಷ್ಠಾವಂತ ನೌಕರರಿಗೆ ತೊಂದರೆ ನೀಡಬಹುದು ಎಂಬ ಭೀತಿಯನ್ನು ವ್ಯಕ್ತಪಡಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿತ್ತು.

ಸರ್ಕಾರದ ಖಡಕ್ ಎಚ್ಚರಿಕೆ
ಈ ಕಾರಣದಿಂದ ಆಸ್ತಿ ವಿವರ ಸಲ್ಲಿಕೆಗೆ ನೌಕರರು ವಿಳಂಬ ಧೋರಣೆ ಅನುಸರಿಸಿದ್ದರು. ಆದರೆ, ಲೋಕಾಯುಕ್ತವು ಸರ್ಕಾರಕ್ಕೆ ಒತ್ತಡ ಹೇರಿದ ನಂತರ ಲೋಕಾಯುಕ್ತ ಅಥವಾ ಸಕ್ರಮ ಅಧಿಕಾರಿಗಳು ಯಾವುದೇ ನೌಕರರ ಅಥವಾ ಅವರ ಕುಟುಂಬದ ಆಸ್ತಿ ವಿವರಗಳನ್ನು ಕೇಳಿದಾಗ, ಯಾವುದೇ ವಿಳಂಬವಿಲ್ಲದೆ ನೀಡಬೇಕು ಸರ್ಕಾರ ಹೊಸ ಖಡಕ್ ಆದೇಶ ಹೊರಡಿಸಿದೆ.
ಇಲಾಖಾ ಮುಖ್ಯಸ್ಥರು ಮತ್ತು ಸಕ್ಷಮ ಪ್ರಾಧಿಕಾರಗಳು ಈ ಮಾಹಿತಿ ಒದಗಿಸುವಲ್ಲಿ ವಿಫಲರಾದರೆ, ಅವರನ್ನು ನೇರ ಹೊಣೆಗಾರರಾಗಿ ಪರಿಗಣಿಸಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಎಚ್ಚರಿಕೆಯನ್ನೂ ಕೂಡ ರಾಜ್ಯ ಸರ್ಕಾರ ಆದೇಶದಲ್ಲಿ ತಿಳಿಸಿದೆ.
8th Pay Commission Delay- ಸರಕಾರಿ ನೌಕರರ ಸಂಬಳ ಏರಿಕೆಗೆ ತಾತ್ಕಾಲಿಕ ತಡೆ | 8ನೇ ವೇತನ ಆಯೋಗ ಜಾರಿಗೆ ವಿಳಂಬ
ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಳಕ್ಕೆ ಒತ್ತು
ಈ ಹೊಸ ಆದೇಶವು ಆಡಳಿತದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಲು, ಭ್ರಷ್ಟಾಚಾರ ನಿವಾರಣೆಗೆ ಸ್ಪಷ್ಟ ನಿಲುವು ತಾಳಲು ಮತ್ತು ಸಾರ್ವಜನಿಕರ ನಂಬಿಕೆಯನ್ನು ಹೆಚ್ಚಿಸಲು ಪೂರಕವಾಗಿದೆ. ಈ ಕ್ರಮದಿಂದ ಸರ್ಕಾರ ಹಾಗೂ ನೌಕರರ ನಡುವಿನ ನೈತಿಕ ಸಂಬಂಧವನ್ನು ಗಟ್ಟಿ ಮಾಡಬಹುದು.
ಸರ್ಕಾರದ ಈ ಖಡಕ್ ಕ್ರಮದಿಂದ ಆಡಳಿತ ವ್ಯವಸ್ಥೆಯಲ್ಲಿ ನೈತಿಕತೆಯ ಗುರಿ ಸಾಧಿಸಲು ಸಹಕಾರಿಯಾಗಲಿದೆ. ನೌಕರರು ತಮ್ಮ ಸೇವಾ ಹೊಣೆಗಾರಿಕೆಯ ಭಾಗವಾಗಿ ತಮ್ಮ ಆಸ್ತಿ ವಿವರಗಳನ್ನು ನಿಷ್ಠೆಯಿಂದ ಸಲ್ಲಿಸುವ ಮೂಲಕ ಸರ್ಕಾರದ ದೃಷ್ಟಿಯನ್ನು ಬೆಂಬಲಿಸಲು ಕೋರಲಾಗಿದೆ.
ಆಸ್ತಿ ವಿವರ ಸಲ್ಲಿಕೆ ಕುರಿತ ಸರ್ಕಾರದ ಸುತ್ತೋಲೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ…
Salary Package Account- ರಾಜ್ಯ ಸರ್ಕಾರಿ ನೌಕರರ ಸಂಬಳ ಪ್ಯಾಕೇಜ್ ಖಾತೆ | ಮಹತ್ವದ ಮಾಹಿತಿ ಇಲ್ಲಿದೆ…

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.