Foreign Employment Opportunity IMC-K : ವಿದೇಶದಲ್ಲಿ ಕೆಲಸ ಮಾಡುವ ಆಸಕ್ತಿಯುಳ್ಳವರಿಗೆ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಹೊಸ ಸದಾವಕಾಶ ಕಲ್ಪಿಸಿದೆ. 10ನೇ ತರಗತಿ ಪಾಸಾಗಿರುವ ಅಭ್ಯರ್ಥಿಗಳಿಂದ ವಿದೇಶದ ವಿವಿಧ ಉದ್ಯೋಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ (Skill Development Entrepreneurship and Livelihood Department) ಅಧೀನದ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು (Karnataka Skill Development Corporation) ಈ ಅವಕಾಶ ಕಲ್ಪಿಸಿದ್ದು; ಇದೇ ಜುಲೈ 20ರಂದು ಬೆಂಗಳೂರಿನಲ್ಲಿ ನೇರ ಸಂದರ್ಶನವನ್ನು ಆಯೋಜಿಸಲಾಗಿದ್ದು; ಆಸಕ್ತ ಉದ್ಯೋಗಾಕಾಂಕ್ಷಿಗಳು ಇಲ್ಲಿ ಭಾಗವಹಿಸುವ ಮೂಲಕ ವಿದೇಶದಲ್ಲಿ ಉದ್ಯೋಗಾವಕಾಶ ಪಡೆಯಬಹುದಾಗಿದೆ.
ಪ್ರಪಂಚದ ವೈಭವದ ದೇಶಗಳಲ್ಲೊಂದಾಗಿರುವ ದುಬೈನಲ್ಲಿ (United Arab Emirates- UAE) ಹಲವು ಉದ್ಯೋಗಳಿಗೆ ಸೂಕ್ತ ಅಭ್ಯರ್ಥಿಗಳ ಅಗತ್ಯವಿದೆ. ಕರ್ನಾಟಕದ ಅಂತರಾಷ್ಟ್ರೀಯ ವಲಸೆ ಕೇಂದ್ರದ (International Migration Center- Karnataka IMC-K) ಮೂಲಕ ಯುಎಇ ಅರ್ಹ ಉದ್ಯೋಗಿಗಳನ್ನು ಆಹ್ವಾನ ಮಾಡಿಕೊಳ್ಳಲು ಬಯಸಿದೆ.
ಖಾಲಿ ಹುದ್ದೆಗಳ ವಿವರ
ಒಟ್ಟು 10 ವಿವಿಧ ಉದ್ಯೋಗಳಿಗೆ ಅವಕಾಶ ನೀಡಲಾಗಿದ್ದು; ನೀವು ಯಾವುದರಲ್ಲಿ ಪರಿಣಿತಿ ಹೊಂದಿದ್ದೀರಿ ಎನ್ನುವುದರ ಆಧಾರದ ಮೇಲೆ ಕೆಲಸವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
- ಪ್ಲಂಬರ್ : 06
- ಸ್ಟೀಲ್ ಫಿಕ್ಸರ್ : 43
- ಮೇಸನ್ : 22
- ಕಾರ್ಪೆಂಟರ್ : 20
- ಅಲ್ಯೂಮೀನಿಯಂ ಫ್ಯಾಬ್ರಿಕೇಟರ್ : 20
- ಫರ್ನೀಚರ್ ಕಾರ್ಪೆಂಟರ್ : 18
- ಫರ್ನೀಚರ್ ಪೇಂಟರ್ : 10
- ಏಸಿ ಟೆಕ್ನೀಷಿಯನ್ : 06
- ಡಕ್ಟ್ಮ್ಯಾನ್ : 06
- ಹೆಲ್ಪರ್ : 06
- ಒಟ್ಟು ಖಾಲಿ ಹುದ್ದೆಗಳು : 157
ಅರ್ಹತೆ, ವೇತನ ಇತರೆ ವಿವರ
10ನೇ ತರಗತಿ ಅಥವಾ ಎಸ್‌ಎಸ್‌ಎಲ್‌ಸಿ ಪಾಸ್ ಆಗಿದ್ದರೆ ಸಾಕು ಈ ಉದ್ಯೋಗ ಪಡೆಯಬಹುದಾಗಿದೆ. ಜೊತೆಗೆ ಮೇಲ್ಕಾಣಿಸಿದ ವಿವಿಧ ಉದ್ಯೋಗ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿರಬೇಕು. ವೀಸಾ, ವಸತಿ ಹಾಗೂ ಕೆಲಸಕ್ಕೆ ತೆರಳುವ ವೆಚ್ಚವನ್ನು ಕಂಪನಿ ಭರಿಸುತ್ತವೆ. ವಿಮಾನ ಟಿಕೆಟ್ ಹಾಗೂ ನೇಮಕಾತಿಯ ಸೇವಾ ಶುಲ್ಕವನ್ನು ಅಭ್ಯರ್ಥಿಗಳೇ ಭರಿಸಬೇಕು.
ಒಂದೊ೦ದು ಕೆಲಸಕ್ಕೆ ಒಂದೊ೦ದು ರೀತಿಯ ಮಾಸಿಕ ವೇತನವನ್ನು ನಿಗದಿ ಮಾಡಲಾಗಿದ್ದು; UAEನಲ್ಲಿ ಬಳಕೆಯಲ್ಲಿರುವ ಎಇಡಿ (united arab emirates dirham – EAD) ಲೆಕ್ಕದಲ್ಲಿ ಮಾಸಿಕ 1200 ಎಇಡಿ ಯಿಂದ 1500 ಎಇಡಿ ತನಕ ಸಂಬಳ ನೀಡಲಾಗುವುದು. ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ತಲಾ ಒಂದು ಎಇಡಿಗೆ ರೂ. 22.75 ಇದೆ. ಅಲ್ಲಿಗೆ 27,300 ರೂಪಾಯಿ ಯಿಂದ 34,125 ರೂಪಾಯಿ ತನಕ ಆಯಾ ಕೆಲಸಕ್ಕೆ ತಕ್ಕ ವೇತನ ನೀಡಲಾಗುತ್ತದೆ.
ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಂತರಾಷ್ಟ್ರೀಯ ವಲಸೆ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ. hr.imk@gmail.com ಈ ಇ-ಮೇಲ್ ಐಡಿಗೆ ದಾಖಲೆಗಳನ್ನು ಕಳಿಸಿ ಆನಂತರ ಇದೇ ಜುಲೈ 20, 2024 ರಂದು ನಡೆಯಲಿಯಲಿರುವ ನೇರ ಸಂದರ್ಶನದಲ್ಲಿ ಭಾಗಿಯಾಗಬಹುದಾಗಿದೆ. ಅಲ್ಲಿ ಆಯ್ಕೆಯಾದಲ್ಲಿ ವಿದೇಶಕ್ಕೆ ಹೋಗಿ ಅಲ್ಲಿ ಕೆಲಸ ಮಾಡುವ ಅವಕಾಶ ಸಿಗಲಿದೆ. ಹೆಚ್ಚಿನ ವಿವರಗಳಿಗೆ ಸಹಾಯವಾಣಿ ಸಂಖ್ಯೆ: 9606492213, 9606492214
1 thought on “SSLC ಪಾಸಾದವರಿಗೆ ವಿದೇಶದಲ್ಲಿ ವಿವಿಧ ಉದ್ಯೋಗಕ್ಕೆ ಅರ್ಜಿ ಆಹ್ವಾನ | ಕರ್ನಾಟಕ ಸರ್ಕಾರವೇ ನೇಮಕ ಮಾಡುತ್ತೆ Foreign Employment Opportunity IMC-K”