FID Registration : ರೈತರು ಬರ ಪರಿಹಾರ ಪಡೆಯಲು ಎಫ್‌ಐಡಿ ನೋಂದಣಿ ಕಡ್ಡಾಯವಾಗಿದೆ. ಕೂಡಲೇ ಈ ಕೆಲಸ ಮಾಡಿದರೆ ಮಾತ್ರ ಬರಗಾಲದ ನೆರವು ಸಿಗಲಿದೆ. ಈ ಕುರಿತು ಕೃಷಿ ಇಲಾಖೆ ಹೊರಡಿಸಿರುವ ಪ್ರಕಣೆಯ ವಿವರ ಇಲ್ಲಿದೆ….
ರಾಜ್ಯದಲ್ಲಿ ಬರ ಪರಿಹಾರ ವಿತರಿಸುವ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಈಗಾಗಲೇ ಬರಪೀಡ ತಾಲ್ಲೂಕುಗಳ 32.12 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರವನ್ನು ಜಮಾ ಮಾಡಲಾಗಿದೆ. ಕೆಲವು ತಾಂತ್ರಿಕ ದೋಷದಿಂದಾಗಿ ಸುಮಾರು 2 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರದ ಹಣ ಜಮೆ ಆಗಿಲ್ಲ. ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಇದಕ್ಕೆ ಪರಿಹಾರ ಕಲ್ಪಿಸುವ ದಿಸೆಯಲ್ಲಿ ಪ್ರಯತ್ನಿಸುತ್ತಿದ್ದಾರೆ.
ಈ ನಡುವೆ ರಾಜ್ಯದಲ್ಲಿ ಇನ್ನೂ ಸಾವಿರಾರು ರೈತರು ಎಫ್‌ಐಡಿ ನೋಂದಣಿ ಮಾಡಿಸಿಕೊಂಡಿಲ್ಲ. ಇಂತಹ ರೈತರಿಗೆ ‘ಬರ ಪರಿಹಾರ’ ಅವರ ಬ್ಯಾಂಕ್ ಖಾತೆಗೆ ಜಮೆ ಆಗಿಲ್ಲ. ರೈತರು ಬರ ಪರಿಹಾರ ಪಡೆಯಲು ಹಲವು ನಿಯಮಗಳಿದ್ದು; ಈ ಪೈಕಿ ಎಫ್‌ಐಡಿ ನೋಂದಣಿ ಕೂಡ ಒಂದಾಗಿದೆ. ಎಫ್‌ಐಡಿ (ರೈತರ ಗುರುತಿನ ಚೀಟಿ) ಹೊಂದಿರದಿದ್ದರೆ ಯಾವುದೇ ರೀತಿಯಿಂದ ಪರಿಹಾರ ದೊರಕುವುದಿಲ್ಲ. ಹೀಗಾಗಿ ಇನ್ನೂ ಎಫ್‌ಐಡಿ ಹೊಂದಿರದ ರೈತರು ಕೂಡಲೇ ಎಫ್‌ಐಡಿಯನ್ನು ಮಾಡಿಸಿಕೊಳ್ಳುವಂತೆ ಕೃಷಿ ಇಲಾಖೆ ಅಧಿಕಾರಿಗಳು ರೈತರಲ್ಲಿ ಮನವಿ ಮಾಡಿದ್ದಾರೆ.
ರೈತರಿಗೆ ಸಿಗುವ ತೋಟಗಾರಿಕೆ ಇಲಾಖೆ ಸಬ್ಸಿಡಿ ಯೋಜನೆಗಳು Horticulture Department Subsidy Schemes
ಎಫ್‌ಐಡಿ ಎಂದರೆ…
ಎಫ್‌ಐಡಿ ಎಂದರೆ ಫಾರ್ಮರ್ಸ್ ಐಡೆಂಟಿಟಿ ಡೀಟೈಲ್ಸ್ ಎಂದರ್ಥ. ಇದೊಂದು ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ. ಸರಕಾರ ಇದಕ್ಕಾಗಿಯೇ FRUITS ಎಂದು ಕರೆಯಲ್ಪಡುವ ಸಾಫ್ಟ್‌ವೇರ್ ಅಪ್ಲಿಕೇಶನ್ ಸಿದ್ಧಪಡಿಸಲಾಗಿದೆ. Farmers Registration and Unified Beneficiary Information System (FRUITS) ಎಂಬುವುದು ಇದರ ಪೂರ್ಣಾರ್ಥ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು NIC ಸಹಯೋಗದೊಂದಿಗೆ FRUITS ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗಿದೆ. FRUITS ವೆಬ್‌ಸೈಟ್‌ನಲ್ಲಿ ರೈತರು ಒಮ್ಮೆ ತಮ್ಮ ವಿವರ ನೋಂದಾಯಿಸಿದರೆ ಅನೇಕ ಸರ್ಕಾರಿ ಸಬ್ಸಿಡಿ ಯೋಜನೆಗಳ ಲಾಭ ಸಿಗಲಿದೆ. ಇದು ರೈತರು ಪ್ರಯೋಜನಗಳನ್ನು ಪಡೆಯಲು ಇಲಾಖೆಗಳಿಗೆ ಅಲೆದಾಡುವುದನ್ನು ತಪ್ಪಿಸುತ್ತದೆ.
ಬರ ಪರಿಹಾರಕ್ಕೆ ಎಫ್‌ಐಡಿ ಕಡ್ಡಾಯ
ರಾಜ್ಯದಲ್ಲಿ ಒಟ್ಟು 236 ತಾಲ್ಲೂಕುಗಳಲ್ಲಿ 223 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳು ಎಂದು ಘೋಷಿಸಲಾಗಿದೆ. ಈ ಬರಪೀಡಿತ ತಾಲ್ಲೂಕುಗಳ ರೈತರಿಗೆ ವಿಶೇಷ ‘ಬರ ಪರಿಹಾರ’ ಸಿಗಲಿದೆ. ಇದರ ಪ್ರಯೋಜನೆ ಪಡೆಯಲು ಬರ ಪೀಡಿತ ಎಂದು ಘೋಷಣೆಯಾಗಿರುವ ತಾಲ್ಲೂಕುಗಳ ರೈತರು ಸರ್ಕಾರದಿಂದ ಪರಿಹಾರದ ಹಣ ಪಡೆಯಲು ಕಡ್ಡಾಯವಾಗಿ ಎಫ್‌ಐಡಿ ಮಾಡಿಸಿಕೊಳ್ಳಬೇಕು.
ಬರ ಪರಿಹಾರವು ನೇರವಾಗಿ ರೈತರ ಖಾತೆಗೆ ನಗದು ವರ್ಗಾವಣೆ (DBT) ಮೂಲಕ ವರ್ಗಾವಣೆ ಮಾಡಲಾಗುವುದು. ಹೀಗಾಗಿ ಪ್ರತಿಯೊಬ್ಬ ರೈತರು ಕಡ್ಡಾಯವಾಗಿ ಎಫ್‌ಐಡಿ ಮಾಡಿಸಿಕೊಳ್ಳಬೇಕು. ಈಗಾಗಲೇ ರೈತರು ಫ್ರೂಟ್ಸ್ ನೋಂದಣಿ ಮಾಡಿಕೊಂಡಿದ್ದರೆ, ತಮ್ಮ ಎಲ್ಲ ಜಮೀನುಗಳ ಸರ್ವೇ ನಂಬರ್‌ಗಳನ್ನು ಸೇರ್ಪಡೆಯಾಗಿರುವ ಕುರಿತು ಖಚಿತಪಡಿಸಿಕೊಳ್ಳಬೇಕು.
Government Schemes for Women : ಮಹಿಳೆಯರಿಗಾಗಿ ಇರುವ ವಿಶೇಷ ಸರಕಾರಿ ಯೋಜನೆಗಳು
ಎಲ್ಲ ಸರ್ವೇ ನಂಬರ್‌ಗಳನ್ನೂ ನಮೂದಿಸಿ
ಒಂದಕ್ಕಿ೦ತ ಹೆಚ್ಚು ಸರ್ವೆ ನಂಬರ್‌ಗಳು ಇದ್ದಲ್ಲಿ, ಪ್ರತಿಯೊಂದು ಸರ್ವೆ ನಂಬರ್‌ಗಳನ್ನು ಎಫ್‍ಐಡಿಯಲ್ಲಿ ನಮೂದಿಸಬೇಕು. ಅದೇ ರೀತಿ ಜಂಟಿ ಖಾತೆಗಳಿದ್ದಲ್ಲಿ ಪ್ರತಿಯೊಬ್ಬ ಖಾತೆದಾರರು ಪ್ರತ್ಯೇಕವಾಗಿ ಎಫ್‍ಐಡಿ ಮಾಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಬರ ಪರಿಹಾರದ ಹಣ ರೈತರ ಖಾತೆಗೆ ಜಮೆಯಾಗುವುದಿಲ್ಲ. ಈಗಾಗಲೇ ಎಫ್‌ಐಡಿ ಮಾಡಿಸಿದ್ದಲ್ಲಿ ಮತ್ತೆ ಮಾಡಿಸುವ ಅವಶ್ಯಕತೆ ಇರುವುದಿಲ್ಲ.
ಎಫ್‌ಐಡಿ ಮಾಡಿಸಿಕೊಳ್ಳಲು ರೈತರ ಆಧಾರ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್‌ಬುಕ್, ಮೊಬೈಲ್ ಸಂಖ್ಯೆ ಹಾಗೂ ಭಾವಚಿತ್ರದೊಂದಿಗೆ ಸಮೀಪದ ನಾಗರೀಕ ಸೇವಾ ಕೇಂದ್ರ (ಸಿಎಸ್‌ಸಿ), ಹೋಬಳಿಯ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ ಅಥವಾ ಕಂದಾಯ ಇಲಾಖೆಯ ಆಡಳಿತಾಧಿಕಾರಿಗಳನ್ನು ಸಂಪರ್ಕಿಸಬಹುದು.
Honge Krushi : ರೈತರ ಕೈ ಹಿಡಿಯುವ ಹೊಂಗೆ ಕೃಷಿ | ಹೊಂಗೆ ಬೆಳೆಯಲು ಸಿಗಲಿದೆ ನರೇಗಾ ನೆರವು
1 thought on “ಎಫ್‌ಐಡಿ ಹೊಂದಿದ ರೈತರಿಗೆ ಮಾತ್ರ ಬರ ಪರಿಹಾರ : ಇಲ್ಲಿದೆ ಕೃಷಿ ಇಲಾಖೆ ಮಾಹಿತಿ FID Registration”