E-Swathu- ದೀಪಾವಳಿ ನಂತರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೆ ಇ-ಸ್ವತ್ತು ವಿತರಣೆ

Spread the love

WhatsApp Group Join Now
Telegram Group Join Now

ಕಡೆಗೂ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೆ ‘ಇ-ಸ್ವತ್ತು’ (E-Swathu) ವಿತರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಹೊಸ ನಿಯಮಾವಳಿ ರೂಪಿಸಿದ್ದು; ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

ರಾಜ್ಯಾದ್ಯಂತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎಲ್ಲಾ ಆಸ್ತಿಗಳಿಗೆ ‘ಇ-ಸ್ವತ್ತು’ (E-Swahu) ವಿತರಣೆ ಮಾಡಲು ರಾಜ್ಯ ಸರ್ಕಾರ ಸನ್ನದ್ಧವಾಗಿದೆ. ದೀಪಾವಳಿ ನಂತರ ಗ್ರಾ.ಪಂ ವ್ಯಾಪ್ತಿಯ ಪ್ರತಿಯೊಂದು ಮನೆ, ನಿವೇಶನ, ವಾಣಿಜ್ಯ ಕಟ್ಟಡಕ್ಕೂ ‘ಇ-ಸ್ವತ್ತು’ ಪ್ರಮಾಣಪತ್ರ ವಿತರಣೆ ಆರಂಭವಾಗಲಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರೂಪಿಸಿರುವ ಹೊಸ ಇ-ಸ್ವತ್ತು ನಿಯಮಾವಳಿ ಈಗ ಅಂತಿಮ ಹಂತ ತಲುಪಿದ್ದು, ಸಚಿವಾಲಯದ ಅನುಮೋದನೆ ದೊರೆತ ಕೂಡಲೇ ಜಾರಿಗೆ ಬರಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: KVAFSU Bidar Recruitment 2025- ಪದವಿ, ಪಿಯುಸಿ ಪಾಸಾದವರಿಗೆ ಕರ್ನಾಟಕ ಪಶು ಯೂನಿವರ್ಸಿಟಿ ಹುದ್ದೆಗಳಿಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆ ಮಾಹಿತಿ ಇಲ್ಲಿದೆ…

ಪ್ರತಿಯೊಂದು ಆಸ್ತಿಗೂ ಇ-ಸ್ವತ್ತು

ಇಂದು ಗ್ರಾಮೀಣ ಪ್ರದೇಶದಲ್ಲಿ ನಿವೇಶನ ಅಥವಾ ಮನೆ ಖರೀದಿಸಿದರೂ ಆಸ್ತಿಯ ದಾಖಲೆ ಸ್ಪಷ್ಟವಾಗದಿರುವುದು ಸಾಮಾನ್ಯವಾಗಿದೆ. ಇ-ಖಾತೆ ಇಲ್ಲದ ಕಾರಣ ಮನೆ ಕಟ್ಟಲು ಅನುಮತಿ ಸಿಗುತ್ತಿಲ್ಲ, ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ, ಮಾರಾಟಕ್ಕೂ ತೊಂದರೆ ಉಂಟಾಗಿದೆ.

ಈ ಎಲ್ಲಾ ಗೊಂದಲಗಳಿಗೆ ಈಗ ತೆರೆ ಬೀಳಲಿದೆ. ಇ-ಸ್ವತ್ತು ಪ್ರಮಾಣಪತ್ರ ನೀಡಿದ ಬಳಿಕ, ಪ್ರತಿಯೊಂದು ಆಸ್ತಿಯಿಗೂ ಕಾನೂನಾತ್ಮಕ ದಾಖಲೆ ಸಿಗಲಿದೆ. ನೋಂದಣಿ ಕಚೇರಿಯಲ್ಲಿ ವಹಿವಾಟು ಮಾಡುವಾಗ ಇ-ಸ್ವತ್ತು ಪ್ರದರ್ಶನ ಕಡ್ಡಾಯವಾಗಲಿದೆ.

ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೆ ‘ಇ-ಸ್ವತ್ತು’ ವಿತರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಹೊಸ ನಿಯಮಾವಳಿ ರೂಪಿಸಿದ್ದು; ಮಾಹಿತಿ ಇಲ್ಲಿದೆ...
E-Swathu For Rural Properties
1.45 ಕೋಟಿ ಆಸ್ತಿಗಳು ಇ-ಸ್ವತ್ತು ಅಡಿಯಲ್ಲಿ

ರಾಜ್ಯಾದ್ಯಂತ ಸುಮಾರು 1.45 ಕೋಟಿ ಆಸ್ತಿಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿವೆ. ಇವುಗಳನ್ನೆಲ್ಲಾ ಹಂತ ಹಂತವಾಗಿ ಇ-ಸ್ವತ್ತು ಪೋರ್ಟಲ್‌ನಲ್ಲಿ ದಾಖಲಿಸುವ ಪ್ರಕ್ರಿಯೆ ನಡೆಯಲಿದೆ.

ಈ ಯೋಜನೆ ಜಾರಿಯಾದರೆ ಪ್ರತಿಯೊಂದು ಮನೆ ಮತ್ತು ನಿವೇಶನಕ್ಕೆ ಡಿಜಿಟಲ್ ದಾಖಲೆ ಸಿಗುತ್ತದೆ. ಖರೀದಿ-ಮಾರಾಟ, ಸಾಲ, ನಿರ್ಮಾಣ ಪರವಾನಗಿ ಎಲ್ಲವೂ ಆನ್‌ಲೈನ್‌ನಲ್ಲಿ ಸಾಧ್ಯವಾಗುತ್ತದೆ. ಆಸ್ತಿ ವಿವಾದಗಳು ಮತ್ತು ಭೂ ಹಗರಣಗಳಿಗೆ ತಡೆ ಸಿಗುತ್ತದೆ.

ಇದನ್ನೂ ಓದಿ: PUC Pass Head Constable – ಪಿಯುಸಿ ಪಾಸಾದವರಿಗೆ ಹೆಡ್ ಕಾನ್‌ಸ್ಟೆಬಲ್ ಹುದ್ದೆಗಳು | 509 ಹುದ್ದೆಗಳಿಗೆ ಅರ್ಜಿ ಆಹ್ವಾನ

ಕಾನೂನು ತಿದ್ದುಪಡಿ ಮತ್ತು ಹೊಸ ನಿಯಮಾವಳಿ

ವಿಧಾನ ಮಂಡಲ ಅಧಿವೇಶನದ ವೇಳೆ ಪಂಚಾಯತ್ ರಾಜ್ ಕಾಯ್ದೆಯ 199 (ಬಿ) ನಿಯಮಕ್ಕೆ ತಿದ್ದುಪಡಿ ತರಲಾಗಿದ್ದು, ಇ-ಸ್ವತ್ತು ವಿತರಣೆ ಪ್ರಕ್ರಿಯೆಗೆ ಕಾನೂನಾತ್ಮಕ ಬಲ ನೀಡಲಾಗಿದೆ.

ಈ ತಿದ್ದುಪಡಿಯಿಂದ ಗ್ರಾಮ ಪಂಚಾಯತಿಗಳಿಗೆ ಆಸ್ತಿ ದಾಖಲೆ ನಿರ್ವಹಣೆಯ ಹಕ್ಕು ದೊರೆತಿದ್ದು, ಇ-ಸ್ವತ್ತು ವಿತರಣೆಗೆ ಯಾವುದೇ ಕಾನೂನು ಅಡೆತಡೆ ಉಳಿದಿಲ್ಲ. ಹೊಸ ನಿಯಮಾವಳಿ ಪ್ರಕಟವಾದ ನಂತರ, ಆಸ್ತಿ ನೋಂದಣಿ ವೇಳೆ ಇ-ಸ್ವತ್ತು ಪ್ರಮಾಣಪತ್ರ ಪ್ರದರ್ಶನ ಕಡ್ಡಾಯವಾಗಲಿದೆ.

ಇದನ್ನೂ ಓದಿ: Karnataka Jatiganati Mobile Self Survey- ಮೊಬೈಲ್‌ನಲ್ಲಿ ನೀವೇ ಮಾಡಿಕೊಳ್ಳಿ ಜಾತಿಗಣತಿ ಸಮೀಕ್ಷೆ | ನೇರ ಲಿಂಕ್ ಇಲ್ಲಿದೆ…

ಎರಡು ತಿಂಗಳಲ್ಲಿ ಇ-ಸ್ವತ್ತು ವಿತರಣೆ

ಕಳೆದ ಮೂರು ತಿಂಗಳಿನಿಂದ ಇ-ಗವರ್‌ನನ್ಸ್, ಕಂದಾಯ, ಕಾನೂನು ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ಸಚಿವ ಪ್ರಿಯಾಂಕ್ ಖರ್ಗೆ ಅವರ ನೇತೃತ್ವದಲ್ಲಿ ಹಲವಾರು ಸುತ್ತಿನ ಸಭೆಗಳು ನಡೆದಿವೆ.

ಇದೀಗ ಸರ್ವರ್ ಮತ್ತು ಸಾಫ್ಟ್ವೇರ್ ವೇದಿಕೆ ಸಿದ್ಧವಾಗುತ್ತಿದ್ದು, ದೀಪಾವಳಿ ನಂತರದ ಎರಡು ತಿಂಗಳೊಳಗೆ ಇ-ಸ್ವತ್ತು ವಿತರಣೆ ಪ್ರಾರಂಭವಾಗಲಿದೆ. ಹೆಚ್ಚು ಶುಲ್ಕದ ಭಾರವಿಲ್ಲದೇ ನಿವೇಶನ ಅಥವಾ ಮನೆಗಳ ಗಾತ್ರದ ಆಧಾರದ ಮೇಲೆ ಮಿತಿಗೊಳಿಸಿದ ಶುಲ್ಕ ನಿಗದಿಪಡಿಸಲಾಗುತ್ತಿದೆ.

WhatsApp Group Join Now
Telegram Group Join Now

ಗ್ರಾಮ ಪಂಚಾಯಿತಿ ಮಟ್ಟದಿಂದ ಸಚಿವಾಲಯದ ವರೆಗೂ ಸಕಲ ಸಿದ್ಧತೆಗಳು ನಡೆಯುತ್ತಿವೆ. ಪ್ರಾರಂಭಿಕ ಹಂತದಲ್ಲಿ ಕೆಲವು ಜಿಲ್ಲೆಗಳಲ್ಲಿ ಪೈಲಟ್ ಯೋಜನೆ ಜಾರಿಯಾಗಲಿದೆ, ನಂತರ ಸಂಪೂರ್ಣ ರಾಜ್ಯಕ್ಕೆ ವಿಸ್ತರಿಸಲಾಗುತ್ತದೆ.

ಇದನ್ನೂ ಓದಿ: Karnataka Old Age Pension- 4,52,451 ಜನರ ವೃದ್ಧಾಪ್ಯ ವೇತನಕ್ಕೆ ಕತ್ತರಿ | ಅನರ್ಹರ ಪತ್ತೆ ಅಭಿಯಾನಕ್ಕೆ ಮುಂದಾದ ಸರ್ಕಾರ

ಗ್ರಾಮೀಣ ಡಿಜಿಟಲೀಕರಣದ ಹೊಸ ಅಧ್ಯಾಯ

ಇ-ಸ್ವತ್ತು ಯೋಜನೆಯು ಗ್ರಾಮೀಣ ಕರ್ನಾಟಕಕ್ಕೆ ಹೊಸ ಡಿಜಿಟಲ್ ಕ್ರಾಂತಿಯ ಬಾಗಿಲು ತೆರೆಯಲಿದೆ. ನಗರ ಪ್ರದೇಶದಂತೆಯೇ ಗ್ರಾಮೀಣ ಜನರಿಗೆ ತಮ್ಮ ಆಸ್ತಿಯ ಸಂಪೂರ್ಣ ದಾಖಲೆಗಳು, ತೆರಿಗೆ ಪಾವತಿ, ಮತ್ತು ಸ್ವತ್ತು ದೃಢೀಕರಣ ಸಿಗಲಿದೆ.

ದೀಪಾವಳಿ ಬಳಿಕ ಆರಂಭಗೊಳ್ಳಲಿರುವ ಇ-ಸ್ವತ್ತು ವಿತರಣೆ ಗ್ರಾಮೀಣ ಆಸ್ತಿಗಳ ಪರಿವರ್ತನೆಯ ಕ್ರಾಂತಿ ಎಂದೇ ಹೇಳಬೇಕು. ಇದು ಗ್ರಾಮೀಣ ನಾಗರಿಕರಿಗೆ ತಮ್ಮ ಸ್ವತ್ತಿನ ಮೇಲೆ ಭದ್ರ ಹಕ್ಕು ನೀಡುವುದರ ಜೊತೆಗೆ, ಸರ್ಕಾರದ ಆಡಳಿತದ ಪಾರದರ್ಶಕತೆಯನ್ನೂ ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಮಹತ್ವದ ಹೆಜ್ಜೆಯಾಗಿದೆ.

Minimum Balance Rule Cancelled- ಇನ್ಮುಂದೆ ಈ ಬ್ಯಾಂಕ್ ಖಾತೆಗಳಲ್ಲಿ `ಕನಿಷ್ಠ ಬ್ಯಾಲೆನ್ಸ್’ ನಿಯಮ ರದ್ದು!


Spread the love
error: Content is protected !!