ಅರ್ಹ ಫಲಾನುಭವಿಗಳಿಗೆ ಹೈನುರಾಸು ಘಟಕ ಹಾಗೂ ಮೇವು ಕತ್ತರಿಸುವ ಯಂತ್ರ ಸೌಲಭ್ಯ (Cow and Chaff Cutter Subsidy) ಒದಗಿಸಲು ಪಶುಪಾಲನಾ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ…
2025-26ನೇ ಸಾಲಿನ ಪಶುಪಾಲನಾ ಅಭಿವೃದ್ಧಿ ಕಾರ್ಯಕ್ರಮದಡಿ, ಗಣಿ ಭಾದಿತ ಹಾಗೂ ಗಣಿ ಪ್ರಭಾವಕ್ಕೊಳಗಾದ ಗ್ರಾಮಗಳಲ್ಲಿ ನೆಲೆಸಿರುವ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಹಾಗೂ ಸಾಮಾನ್ಯ ವರ್ಗದ ಫಲಾನುಭವಿಗಳಿಗಾಗಿ ಉಚಿತವಾಗಿ ಹೈನುರಾಸು ಘಟಕ (1 ಹಸು + 1 ಎಮ್ಮೆ) ಹಾಗೂ ಮೇವು ಕತ್ತರಿಸುವ ಯಂತ್ರ (2 ಊP) ಯೋಜನೆಯಡಿಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಮಹತ್ವದ ಯೋಜನೆಯನ್ನು ಕರ್ನಾಟಕ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಅನುಷ್ಠಾನಗೊಳಿಸುತ್ತಿದ್ದು, ಗ್ರಾಮೀಣ ಭಾಗದ ಆರ್ಥಿಕವಾಗಿ ದುರ್ಬಲ ಸಮುದಾಯಗಳಿಗೆ ಆಧುನಿಕ ಪಶುಪಾಲನೆ, ಹೈನುಗಾರಿಕೆ ಹಾಗೂ ಸ್ವ ಉದ್ಯೋಗ ಸೃಷ್ಟಿಗಾಗಿ ಈ ಯೋಜನೆ ರೂಪುಗೊಳಿಸಲಾಗಿದೆ.
ಯೋಜನೆಯ ಉದ್ದೇಶ
- ಹೈನುಗಾರಿಕೆಯನ್ನು ಉತ್ತೇಜಿಸುವ ಮೂಲಕ ಗ್ರಾಮೀಣ ಕುಟುಂಬಗಳ ಆದಾಯವನ್ನು ಹೆಚ್ಚಿಸುವುದು
- ಗಣಿ ಪ್ರಭಾವಿತ ಪ್ರದೇಶಗಳ ಜನರಿಗೆ ನೇರ ಆರ್ಥಿಕ ನೆರವು ನೀಡುವುದು
- ಮೇವು ಸಂಸ್ಕರಣೆಗಾಗಿ ಯಂತ್ರಜ್ಞಾನ ಬಳಸಿ ಕಾರ್ಮಿಕ ವೆಚ್ಚ ಕಡಿಮೆ ಮಾಡುವುದು
ಸಹಾಯಧನ ಸೌಲಭ್ಯಗಳ ವಿವರ
- ಘಟಕ ವೆಚ್ಚ: ₹1,20,000/-
- SC/ST ಸಹಾಯಧನ ಪ್ರಮಾಣ: ಶೇಕಡಾ 90 (₹1,08,000/-)
- ಸಾಮಾನ್ಯ ವರ್ಗ ಸಹಾಯಧನ ಪ್ರಮಾಣ: ಶೇಕಡಾ 60 (₹72,000/-)
- ಬಾಕಿ ಮೊತ್ತ: ಫಲಾನುಭವಿಯ ವಂತಿಕೆ ಅಥವಾ ಬ್ಯಾಂಕ್ ಸಾಲ
- ಮೇವು ಕತ್ತರಿಸುವ ಯಂತ್ರ: 2 ಹೆಚ್.ಪಿ ಸಾಮರ್ಥ್ಯದ ಯಂತ್ರ ಉಚಿತವಾಗಿ ಲಭ್ಯವಿದೆ
- ಹೈನುರಾಸು ಘಟಕ: 1 ಮಿಶ್ರತಳಿ ಹಸು + 1 ಸುಧಾರಿತ ಎಮ್ಮೆ

ಅರ್ಹತೆಯ ಮಿತಿಗಳು ಮತ್ತು ಆದ್ಯತೆಗಳು
- ಅರ್ಜಿದಾರರು ಗಣಿ ಭಾದಿತ ಅಥವಾ ಗಣಿ ಪ್ರಭಾವಿತ ಗ್ರಾಮಗಳಿಗೆ ಸೇರಿದವರಾಗಿರಬೇಕು
- ಆದಾಯ ಪ್ರಮಾಣಪತ್ರ ಮತ್ತು ಜಾತಿ ಪ್ರಮಾಣಪತ್ರ ಹೊಂದಿರಬೇಕು
- ಮಹಿಳಾ ಫಲಾನುಭವಿಗಳಿಗೆ ಶೇಕಡಾ 33% ಮೀಸಲು
- ವಿಕಲಚೇತನ ಫಲಾನುಭವಿಗಳಿಗೆ ಶೇಕಡಾ 3% ಮೀಸಲು
ಅರ್ಜಿಯೊಂದಿಗೆ ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್ ಪ್ರತಿಗೆ
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ನಿವಾಸದ ದಾಖಲೆ
- ಬ್ಯಾಂಕ್ ಖಾತೆ ವಿವರಗಳು
- ಪಾಸ್‌ಪೋರ್ಟ್ ಗಾತ್ರದ ಫೋಟೋ
- ಬಿಪಿಎಲ್ ಕಾರ್ಡ್
ಸದ್ಯಕ್ಕೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕು ಮಟ್ಟದಲ್ಲಿ ಒಟ್ಟು 1,323 ಹೈನುರಾಸು ಘಟಕ ಹಾಗೂ ಒಟ್ಟು 104 ಮೇವು ಕತ್ತರಿಸುವ ಯಂತ್ರಗಳ ವಿತರಣಾ ಗುರಿಯನ್ನು ಹೊಂದಿದ್ದು; ಈ ತಾಲೂಕಿನ ಅರ್ಹ ರೈತರು ಇದರ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.
ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕ: ಜೂನ್ 25, 2025
ಹೆಚ್ಚಿನ ಮಾಹಿತಿಗಾಗಿ ಸಂಬಂಧಿತ ಪಶುವೈದ್ಯಕೀಯ ಆಸ್ಪತ್ರೆ ಅಥವಾ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿ. ಅರ್ಜಿ ನಮೂನೆಗಳು ಹಾಗೂ ಮಾರ್ಗದರ್ಶಿ ಸೂಚನೆಗಳನ್ನು ಕೂಡ ಅಲ್ಲಿ ಪಡೆಯಬಹುದಾಗಿದೆ.