Constable GD Recruitment- ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಕಾನ್‌ಸ್ಟೆಬಲ್ ಹುದ್ದೆಗಳು | 25,487 ಹುದ್ದೆಗಳಿಗೆ ಅರ್ಜಿ ಆಹ್ವಾನ

Spread the love

WhatsApp Group Join Now
Telegram Group Join Now

ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಒಟ್ಟು 25,487 ಕಾನ್‌ಸ್ಟೆಬಲ್ ಹುದ್ದೆಗಳ (Constable GD Recruitment) ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು; ಅರ್ಜಿ ಸಲ್ಲಿಕೆ ಸಂಪೂರ್ಣ ಮಾಹಿತಿ ಇಲ್ಲಿದೆ…

ಕೇಂದ್ರೀಯ ಪೊಲೀಸ್ ಪಡೆಗಳು, ಅಸ್ಲಾಂ ರೈಫಲ್ಸ್, ವಿಶೇಷ ಭದ್ರತಾ ಪಡೆಗಳಿಗಾಗಿ ಕಾನ್‌ಸ್ಟೆಬಲ್‌ಗಳನ್ನು (ಜನರಲ್ ಡ್ಯೂಟಿ) ನೇಮಕಾತಿ ಮಾಡಿಕೊಳ್ಳುತ್ತಿದೆ. ಈ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ಪಾಸಾದವರು ಅರ್ಜಿ ಸಲ್ಲಿಸಬಹುದಾಗಿದ್ದು, ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶವಿದೆ.

ಇದನ್ನೂ ಓದಿ: E-Svattu 2.0- ಇ-ಸ್ವತ್ತು ಅರ್ಜಿ ಸಲ್ಲಿಕೆ ಆರಂಭ | ಮನೆಯಲ್ಲಿ ಕೂತೆ ಅರ್ಜಿ ಸಲ್ಲಿಸಿ | ಅರ್ಜಿ ಲಿಂಕ್ ಇಲ್ಲಿದೆ…

ಹುದ್ದೆಗಳ ವಿವರ

ಬಿಎಸ್‌ಎಫ್, ಸಿಐಎಸ್‌ಎಫ್, ಸಿಆರ್‌ಪಿಎಫ್, ಎಸ್‌ಎಸ್‌ಬಿ, ಐಟಿಬಿಟಿ, ಅಸ್ಸಾಂ ರೈಫಲ್ಸ್ (ಎಆರ್) ಹಾಗೂ ವಿಶೇಷ ಭದ್ರತಾ ಪಡೆ (ಎಸ್‌ಎಸ್‌ಎಫ್) ಸೇರಿ ಒಟ್ಟು ಏಳು ಭದ್ರತಾ ಪಡೆಗಳಲ್ಲಿ ಪುರುಷರಿಗೆ 23,467 ಹಾಗೂ ಮಹಿಳೆಯರಿಗೆ 2,020 ಹುದ್ದೆಗಳು ಸೇರಿ ಒಟ್ಟು 25,487 ಹುದ್ದೆಗಳಿಗೆ ನೇಮಕ ನಡೆಯಲಿದೆ.

ಆಯಾ ರಾಜ್ಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಮೆರಿಟ್ ಪಟ್ಟಿಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಕಳೆದ ಬಾರಿ ಕರ್ನಾಟಕಕ್ಕೆ 897 ಹುದ್ದೆಗಳಿದ್ದವು. ಈ ಬಾರಿ ವರ್ಗೀಕರಣ ಇನ್ನಷ್ಟೇ ನೀಡಬೇಕಿದೆ.

ಸೆಕ್ಯುರಿಟಿ ಫೋರ್ಸ್’ನಲ್ಲಿನ (ಎಸ್‌ಎಸ್‌ಎಫ್) ಹುದ್ದೆಗಳು ಅಖಿಲ ಭಾರತ ಮಟ್ಟದ ಹುದ್ದೆಗಳಾಗಿವೆ. ಕೇಂದ್ರೀಯ ಪೊಲೀಸ್ ಪಡೆಯಲ್ಲಿನ ಸ್ಥಾನಗಳನ್ನು ಆಯಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿರುವಂತೆ ಭರ್ತಿ ಮಾಡಲಾಗುತ್ತದೆ. ಗಡಿ ಜಿಲ್ಲೆಗಳು ಹಾಗೂ ನಕ್ಸಲ್ ಪೀಡಿತ ಪ್ರದೇಶಗಳಲ್ಲಿನ ಸ್ಥಾನಗಳು ಆಯಾ ಜಿಲ್ಲೆಗಳ ಅಭ್ಯರ್ಥಿಗಳಿಗೆ ಮೀಸಲಾಗಿರುತ್ತವೆ.

ಇದನ್ನೂ ಓದಿ: Karnataka Bank Personal Loan- ಕರ್ನಾಟಕ ಬ್ಯಾಂಕ್ ಪರ್ಸನಲ್ ಲೋನ್ | ಕಡಿಮೆ ಬಡ್ಡಿಯಲ್ಲಿ ₹25 ಲಕ್ಷವರೆಗೆ ಸುಲಭ ಸಾಲ

ವಯೋಮಿತಿ ವಿವರ

2026ರ ಜನವರಿ 1ಕ್ಕೆ ಅನ್ವಯವಾಗುವಂತೆ ಎಲ್ಲ ಹುದ್ದೆಗಳಿಗೂ 18 ರಿಂದ 23ರ ವರೆಗಿನ ವಯೋಮಿತಿ ನಿಗದಿಯಾಗಿದೆ. ಅಂದರೆ, ಅಭ್ಯರ್ಥಿಗಳು 02-01-2003 ಹಾಗೂ 01-01-2008ರ ನಡುವೆ ಜನಿಸಿರಬೇಕು. ವಿವಿಧ ಮೀಸಲಾತಿ ಅನ್ವಯ ವಯೋಮಿತಿಯಲ್ಲಿ ಸಡಿಲಿಕೆ ಇದೆ. 10ನೇ ತರಗತಿ ಅಂಕಪಟ್ಟಿಯಲ್ಲಿನ ಜನ್ಮ ದಿನವನ್ನೇ ಪರಿಗಣಿಸಲಾಗುತ್ತದೆ.

ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಒಟ್ಟು 25,487 ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು; ಅರ್ಜಿ ಸಲ್ಲಿಕೆ ಸಂಪೂರ್ಣ ಮಾಹಿತಿ ಇಲ್ಲಿದೆ...
Constable GD Recruitment 2025
ಅರ್ಜಿ ಶುಲ್ಕ

ಸಾಮಾನ್ಯ ಅಭ್ಯರ್ಥಿಗಳಿಗೆ 100 ರೂ. ಮಾತ್ರ ಅರ್ಜಿ ಶುಲ್ಕ ನಿಗದಿಪಡಿಸಲಾಗಿದ್ದು; ಎಸ್‌ಸಿ, ಎಸ್‌ಟಿ ಹಾಗೂ ಮಾಜಿ ಸೈನಿಕರಿಗೆ ವಿನಾಯ್ತಿ ಇದೆ. ಈ ವರ್ಗದ ಅಭ್ಯರ್ಥಿಗಳು ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ವಿದ್ಯಾರ್ಹತೆ ವಿವರ

ಮೊದಲೇ ಹೇಳಿದಂತೆ 10ನೇ ತರಗತಿ ಪಾಸಾಗಿರು ಪುರುಷರು ಮತ್ತು ಮಹಿಳೆಯರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. 2026ರ ಜನವರಿ 1ರೊಳಗೆ ಈ ಅರ್ಹತೆ ಪಡೆಯುವವರು ಕೂಡ ಅರ್ಜಿ ಸಲ್ಲಿಸಬಹುದು. ದೂರಶಿಕ್ಷಣ ಹಾಗೂ ಮುಕ್ತಶಾಲೆಯ ಮೂಲಕ ಶಿಕ್ಷಣ ಪಡೆದವರು ನೇಮಕಾತಿಗೆ ಅರ್ಹರಾಗಿದ್ದಾರೆ.

ವೇತನಶ್ರೇಣಿ ಎಷ್ಟು?

7ನೇ ವೇತನ ಆಯೋಗದ ಮೂರನೇ ಹಂತದ ವೇತನ ಶ್ರೇಣಿ ಈ ಹುದ್ದೆಗಳಿಗೆ ನಿಗದಿಪಡಿಸಲಾಗಿದ್ದು, 21,700 ರಿಂದ 69,100 ರೂ.ವರೆಗಿನ ಸಂಬಳ ನೀಡಲಾಗುತ್ತದೆ. ಜೊತೆಗೆ ವಿವಿಧ ಸರ್ಕಾರಿ ಸವಲತ್ತುಗಳು ಅನ್ವಯವಾಗುತ್ತವೆ.

ಇದನ್ನೂ ಓದಿ: NWKRTC Officer Recruitment 2025- ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿ ಹುದ್ದೆಗಳ ನೇಮಕಾತಿ | 33 ಹುದ್ದೆಗಳಿಗೆ ಅರ್ಜಿ ಆಹ್ವಾನ

ಕನಾಟಕದಲ್ಲಿ ಪರೀಕ್ಷಾ ಕೇಂದ್ರಗಳು

ಕರ್ನಾಟಕ ರಾಜಧಾನಿ ಬೆಂಗಳೂರು, ಬೆಳಗಾವಿ, ಧಾರವಾಡ-ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿಯಲ್ಲಿ ಪರೀಕ್ಷಾ ಕೇಂದ್ರಗಳು ಇರಲಿವೆ.

ಒಟ್ಟು 13 ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಕನ್ನಡದಲ್ಲೂ ಪರೀಕ್ಷೆ ಬರೆಯಬಹುದಾಗಿದ್ದು, ಜತೆಗೆ, ಇತರ 12 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ನಡೆಯಲಿದೆ.

ದೈಹಿಕ ಸಹಿಷ್ಣುತಾ ಪರೀಕ್ಷೆ
WhatsApp Group Join Now
Telegram Group Join Now

ಮೊದಲಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುತ್ತದೆ. ಕಂಪ್ಯೂಟರ್ ಪರೀಕ್ಷೆಯಲ್ಲಿ ಅರ್ಹತೆ ಪಡೆದವರನ್ನು ದೈಹಿಕ ಸಹಿಷ್ಣುತಾ ಪರೀಕ್ಷೆಗೆ ಆಹ್ವಾನಿಸಲಾಗುತ್ತದೆ. ಇದನ್ನು ಆಯಾ ಸಿಎಪಿಎಫ್ ಕೇಂದ್ರಗಳಲ್ಲಿ ನಡೆಸಲಾಗುತ್ತದೆ.

ಪುರುಷರು 5 ಕಿ.ಮೀ. ಅನ್ನು 24 ನಿಮಿಷಗಳಲ್ಲಿ, ಮಹಿಳೆಯರು 1.6 ಕಿಮೀ. ಅನ್ನು ಎಂಟೂವರೆ ನಿಮಿಷಗಳಲ್ಲಿ ಕ್ರಮಿಸಬೇಕು. ಜತೆಗೆ ನಿಗದಿತ ದೈಹಿಕ ಮಾನದಂಡ ಪೂರೈಸಬೇಕಿರುತ್ತದೆ.

ಇದನ್ನೂ ಓದಿ: RDCC Bank Recruitment 2025- ಕೋ-ಅಪರೇಟಿವ್ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಎಸ್ಸೆಸ್ಸೆಲ್ಸಿ, ಪದವೀಧರರಿಗೆ ಅವಕಾಶ

ಎನ್‌ಸಿಸಿ ಕೆಡೆಟ್‌ಗಳಿಗೆ ಪ್ರೋತ್ಸಾಹ

ಶಾಲಾ- ಕಾಲೇಜು ಹಂತದಲ್ಲಿ ಎನ್‌ಸಿಸಿ ಕೆಡೆಟ್‌ಗಳಾಗಿದ್ದವರಿಗೆ ನೇಮಕಾತಿಯಲ್ಲಿ ಆದ್ಯತೆ ನೀಡಲಾಗುತ್ತದೆ. ‘ಸಿ’ ಪ್ರಮಾಣಪತ್ರ ಪಡೆದಿದ್ದರೆ ಶೇ.5, ‘ಬಿ’ ಸರ್ಟಿಫಿಕೇಟ್‌ಗೆ ಶೇ.3 ಹಾಗೂ ‘ಎ’ ಸರ್ಟಿಫಿಕೇಟ್‌ಗೆ ಶೇ. 2 ಅಂಕಗಳನ್ನು ಹೆಚ್ಚುವರಿಯಾಗಿ ನೀಡಲಾಗುತ್ತದೆ.

ಆನ್‌ಲೈನ್ ಅರ್ಜಿ ಸಲ್ಲಿಕೆ ವೇಳೆ ಎನ್‌ಸಿಸಿ ಪ್ರಮಾಣಪತ್ರ ಹೊಂದಿರುವ ಬಗ್ಗೆ ಸ್ಪಷ್ಟವಾಗಿ ನಮೂದಿಸಬೇಕು. ದಾಖಲಾತಿ ಪರಿಶೀಲನೆ ವೇಳೆ ಮೂಲಪ್ರಮಾಣಪತ್ರಗಳನ್ನು ಸಲ್ಲಿಸಿದಲ್ಲಿ ಮಾತ್ರ ಅರ್ಹತೆ ಪಡೆಯಲಿದ್ದಾರೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ

ಎಸ್‌ಎಸ್‌ಸಿ ಪೋರ್ಟಲ್‌ ssc.gov.inನಲ್ಲಿ ಒಂದು ಬಾರಿಯ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡಬೇಕಿದೆ. ಆಧಾರ್ ಸಂಖ್ಯೆ ಬಳಸಿ ಅರ್ಜಿ ಸಲ್ಲಿಸಿದಲ್ಲಿ ಫೋಟೋ ಕಾರಣಕ್ಕೆ ತಿರಸ್ಕೃತಗೊಳ್ಳುವ ಹಾಗೂ ಪರೀಕ್ಷಾ ಕೇಂದ್ರಕ್ಕೆ ಭಾವಚಿತ್ರವಿರುವ ಗುರುತಿನ ಚೀಟಿ ಹಾಜರುಪಡಿಸುವ ಅಗತ್ಯವಿರುವುದಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಪ್ರಮುಖ ದಿನಾಂಕಗಳು
  • ಅರ್ಜಿ ಸಲ್ಲಿಕೆ ಕೊನೇ ದಿನಾಂಕ: ದಿನ: 31-12-2025
  • ಆನ್‌ಲೈನ್ ಶುಲ್ಕ ಪಾವತಿಗೆ ಕಡೇ ದಿನ: 01-01-2026
  • ಅರ್ಜಿ ತಿದ್ದುಪಡಿಗೆ ಅವಕಾಶ: ಜನವರಿ 08-10ರ ವರೆಗೆ
  • ಸಂಭಾವ್ಯ ಪರೀಕ್ಷಾ ಅವಧಿ: ಫೆಬ್ರವರಿ-ಏಪ್ರಿಲ್ 2026

ಅಧಿಸೂಚನೆ: Download
ಅಧಿಕೃತ ವೆಬ್‌ಸೈಟ್: ssc.gov.in

BWSSB Recruitment 2025- ಪದವಿ, ಪಿಯುಸಿ ಅಭ್ಯರ್ಥಿಗಳಿಂದ ಬೆಂಗಳೂರು ಜಲಮಂಡಳಿ 224 ಹುದ್ದೆಗಳಿಗೆ ಅರ್ಜಿ ಆಹ್ವಾನ


Spread the love
error: Content is protected !!