Cancellation of Ineligible BPL Card : ರಾಜ್ಯ ಸರಕಾರದಿಂದ ಬಿಪಿಎಲ್ ರೇಷನ್ ಕಾರ್ಡ್ ರದ್ದತಿ ಅಭಿಯಾನ ಚುರುಕುಗೊಂಡಿದೆ. ಅನರ್ಹರ ಬಿಪಿಎಲ್ ಕಾರ್ಡ್ (Ineligible BPL Card) ರದ್ದು ಮಾಡಲು ಈಗಾಗಲೇ ಸಾಕಷ್ಟು ಪ್ರಯೋಗ ನಡೆಸಿರುವ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಇದೀಗ ಮತ್ತಷ್ಟು ಕಠಿಣ ಹಾದಿ ಹಿಡಿಯಲು ಮುಂದಾಗಿದೆ.
ರಾಜ್ಯದಲ್ಲಿ ಶೇ.80ರಷ್ಟು ಬಿಪಿಎಲ್ ಕಾರ್ಡು’ದಾರರಿದ್ದು; ಬರೋಬ್ಬರಿ 1.27 ಕೋಟಿ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ನೀಡಲಾಗಿದೆ. ಇದರಲ್ಲಿ 20 ಲಕ್ಷಕ್ಕೂ ಹೆಚ್ಚು ಕಾರ್ಡ್’ಗಳು ಅನರ್ಹರ ಪಾಲಾಗಿವೆ. ಇವೆಲ್ಲವನ್ನು ರದ್ದುಗೊಳಿಸಿ ಅರ್ಹರಿಗೆ ಮಾತ್ರ ಬಿಪಿಎಲ್ ಕಾರ್ಡ್ ನೀಡಿ ಎಂಬ ಗಂಭೀರ ಸೂಚನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದಾರೆ.
ಅನರ್ಹ ಬಿಪಿಎಲ್ ಕಾರ್ಡ್ ರದ್ದತಿ ಹೇಗೆ?
ಈಗಾಗಲೇ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನಿಯಮಗಳನ್ನು ನಿಗದಿಯಾಗಿದ್ದು; ಆಹಾರ ಇಲಾಖೆ ಈ ನಿಯಮಗಳನ್ನು ಮೀರಿದ ಕುಟುಂಬಗಳ ಕಾರ್ಡ್ ರದ್ದತಿ ಕಾರ್ಯಾಚರಣೆ ನಡೆಸುತ್ತದೆ. ಇದಕ್ಕಾಗಿ ಸಾರಿಗೆ ಇಲಾಖೆ, ಕಂದಾಯ ಇಲಾಖೆ, ಐಟಿ ಇಲಾಖೆ ಹಾಗೂ ಸರಕಾರಿ ಪ್ರಾಯೋಜಿತ ಇಲಾಖೆ ಸೇರಿ ನಾಲ್ಕು ಇಲಾಖೆಗಳ ಸಹಕಾರದಲ್ಲಿ ಅನರ್ಹರ ಬಿಪಿಎಲ್ ಕಾರ್ಡ್ ರದ್ದತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ರಾಜ್ಯದಲ್ಲಿ ಸದ್ಯಕ್ಕೆ 1,27,35,786 ಬಿಪಿಎಲ್ ಕಾರ್ಡ್’ಗಳಿವೆ. 4,36,84,635 ಜನರು ಸೌಲಭ್ಯ ಪಡೆಯುತ್ತಿದ್ದಾರೆ. 3 ಲಕ್ಷ ಜನರಿಂದ ಹೊಸದಾಗಿ ಬಿಪಿಎಲ್ ಕಾರ್ಡ್ಗಾಗಿ ಅರ್ಜಿ ಸಲ್ಲಿಕೆಯಾಗಿದೆ. ಇದೀಗ ಅನರ್ಹ ಕಾರ್ಡ್ ರದ್ದು ಮಾಡಲು ಆಹಾರ ಇಲಾಖೆಗೆ ನಾಲ್ಕು ಇಲಾಖೆಗಳು ಸಾಥ್ ನೀಡುತ್ತಿವೆ.

ನಿಮ್ಮ ಕಾರ್ಡ್ ರದ್ದಾಗುತ್ತಾ?
ಅನರ್ಹರ ಬಿಪಿಎಲ್ ಕಾರ್ಡ್ ರದ್ದತಿ ಕುರಿತು ಸಿಎಂ ಸೂಚನೆ ನೀಡಿದ ನಂತರ ಅನೇಕರಿಗೆ ಆತಂಕ ಶುರುವಾಗಿದೆ. ನಮ್ಮ ಕಾರ್ಡ್ ರದ್ದಾಗುತ್ತಾ? ರದ್ದಾದರೆ ಏನು ಮಾಡುವುದು? ಎಂಬ ಗೊಂದಲ ಶುರುವಾಗಿದೆ. ಅರ್ಹ ಫಲಾನುಭವಿಗಳು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಈ ಕೆಳಗಿನ ನಿಯಮಗಳ ಅನ್ವಯ ಬಿಪಿಎಲ್ ಕಾರ್ಡ್ ರದ್ದತಿ ಕಾರ್ಯಾಚರಣೆ ನಡೆಯಲಿದೆ:
- ಸ್ವಂತ ಬಳಕೆಗಾಗಿ ಇಟ್ಟುಕೊಂಡಿರುವ ವೈಟ್ ಬೋರ್ಡ್ನ ನಾಲ್ಕು ಚಕ್ರದ ವಾಹನ ಹೊಂದಿದ್ದರೆ ಅವರ ಕಾರ್ಡ್ ರದ್ದಾಗಲಿದೆ.
- ತೆರಿಗೆ ಪಾವತಿಸುತ್ತಿರುವ ಕುಟುಂಬದವರಲ್ಲಿ ಬಿಪಿಎಲ್ ಕಾರ್ಡ್ ಇದ್ದರೆ ಅಂಥವರು ಬಿಪಿಎಲ್ ಕಾರ್ಡ್ ಉಳಿಸಿಕೊಳ್ಳುವುದು ಕಷ್ಟ.
- 3 ಹೆಕ್ಟೇರ್ ಕೃಷಿಭೂಮಿ ಅಂದರೆ ಏಳೂವರೆ ಎಕರೆಗಿಂತ ಹೆಚ್ಚಿನ ಕೃಷಿಭೂಮಿ ಹೊಂದಿದವರು ಅಥವಾ ತತ್ಸಮಾನ ನೀರಾವರಿ ಭೂಮಿ ಇದ್ದವರ ಕಾರ್ಡ್ ಕೂಡ ರದ್ದಾಗಲಿದೆ.
- ನಗರ ಪ್ರದೇಶಗಳಲ್ಲಿ 1,000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆ ಹೊಂದಿರುವವರ ಕಾರ್ಡ್ ಕೂಡ ಉಳಿಯುವುದಿಲ್ಲ.
- ಪ್ರತಿ ತಿಂಗಳು 150 ಯುನಿಟ್‌ಗಳಿಂಗಿತಲೂ ಹೆಚ್ಚಿನ ಕರೆಂಟ್ ಬಳಕೆ ಮಾಡುವ ಕುಟುಂಬದ ಕಾರ್ಡು ಕೂಡ ರದ್ದಾಗುತ್ತದೆ ಎನ್ನಲಾಗುತ್ತಿದೆ.
- ಕುಟುಂಬದ ವಾರ್ಷಿಕ ಆದಾಯವು 1.20 ಲಕ್ಷಕ್ಕಿಂತಲೂ ಹೆಚ್ಚಿದ್ದರೂ ಕೂಡ ಬಿಪಿಎಲ್ ಕಾರ್ಡು ರದ್ದಾಗುವ ಸಂಭವವಿದೆ.
- ಸರಕಾರಿ ಹಾಗೂ ಅರೆ ಸರಕಾರಿ ನೌಕರರಾಗಿದ್ದರೆ, ಅಂಥವರ ಬಿಪಿಎಲ್ ಕಾರ್ಡ್ ನಿರ್ದಾಕ್ಷಿಣ್ಯವಾಗಿ ರದ್ದಾಗಲಿದೆ. ಜೊತೆಗೆ ದಂಡವೂ ಬೀಳಲಿದೆ.
ನಿಮ್ಮ ಮನೆಗೆ ಉಚಿತ ಸೋಲಾರ್ ವಿದ್ಯುತ್ ಪಡೆಯಲು ಈಗಲೇ ಅರ್ಜಿ ಸಲ್ಲಿಸಿ… PM Surya Ghar Muft Bijli Yojana 2024