Bhu Odetan Yojana- ಸ್ವಂತ ಜಮೀನು ಖರೀದಿಸಲು ಸರ್ಕಾರದಿಂದ 12.50 ಲಕ್ಷ ರೂ. ವರೆಗೆ ಹಣಕಾಸು ನೆರವು!

Spread the love

WhatsApp Group Join Now
Telegram Group Join Now

‘ಭೂ ಒಡೆತನ ಯೋಜನೆ’ (Bhu Odetan Yojana) ಅಡಿಯಲ್ಲಿ ಮಹಿಳಾ ಕೃಷಿ ಕಾರ್ಮಿಕರಿಗೆ ಸ್ವಂತ ಜಮೀನು ಖರೀದಿಸಲು ಕರ್ನಾಟಕ ಸರ್ಕಾರದಿಂದ 12.50 ಲಕ್ಷ ರೂ.ವರೆಗೆ ಹಣಕಾಸು ನೆರವು ನೀಡಲಾಗುತ್ತಿದೆ.

ಭೂ ಒಡೆತನ ಯೋಜನೆ (Karnataka Land Ownership Scheme) ಬಡ ಮಹಿಳಾ ಕೃಷಿ ಕಾರ್ಮಿಕರ ಬದುಕಿಗೆ ಹೊಸ ದಿಕ್ಕು ನೀಡುವಂತಹ ಯೋಜನೆಯಾಗಿದೆ. 12.50 ಲಕ್ಷ ರೂ.ವರೆಗೆ ಸರ್ಕಾರದ ನೇರ ಸಹಾಯಧನ, ಕಡಿಮೆ ಬಡ್ಡಿದರದ ಸಾಲ, ದೀರ್ಘಾವಧಿಯ ಮರುಪಾವತಿ ಈ ಎಲ್ಲ ಸೌಲಭ್ಯಗಳು ಸ್ವಂತ ಜಮೀನು ಖರೀದಿಸುವ ಕನಸನ್ನು ನಿಜವಾಗಿಸುತ್ತವೆ.

2026ನೇ ಸಾಲಿಗೆ ಜಮೀನುಗಳ ಮಾರುಕಟ್ಟೆ ಬೆಲೆ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರ ಘಟಕ ವೆಚ್ಚ ಹಾಗೂ ಸಹಾಯಧನದ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಿದೆ. ಇದರ ಪರಿಣಾಮವಾಗಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ವರ್ಗದ ಭೂಹೀನ ಮಹಿಳಾ ಕೃಷಿ ಕಾರ್ಮಿಕರು 12.50 ಲಕ್ಷ ರೂ.ವರೆಗೆ ಸರ್ಕಾರದ ನೇರ ಸಹಾಯಧನದೊಂದಿಗೆ ಸ್ವಂತ ಜಮೀನು ಖರೀದಿಸಬಹುದಾಗಿದೆ.

ಇದನ್ನೂ ಓದಿ: Small Savings Schemes Interest Rates 2026- ಸರ್ಕಾರದ ಈ ಉಳಿತಾಯ ಯೋಜನೆಗಳಲ್ಲಿ ಸಿಗಲಿದೆ ಭರ್ಜರಿ ಬಡ್ಡಿ | ಯಾವುದಕ್ಕೆ ಎಷ್ಟು ಬಡ್ಡಿ? ಇಲ್ಲಿದೆ ಸಂಪೂರ್ಣ ಪಟ್ಟಿ…

ಏನಿದು ಭೂ ಒಡೆತನ ಯೋಜನೆ?

ಭೂ ಒಡೆತನ ಯೋಜನೆ ಎನ್ನುವುದು ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಕಲ್ಯಾಣ ಯೋಜನೆಯಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಭೂಹೀನ ಮಹಿಳಾ ಕೃಷಿ ಕಾರ್ಮಿಕರಿಗೆ ಕೃಷಿ ಭೂಮಿಯನ್ನು ಒದಗಿಸುವುದು ಇದರ ಮುಖ್ಯ ಉದ್ದೇಶ.

ಈ ಯೋಜನೆಯಡಿ ಫಲಾನುಭವಿಗಳಿಗೆ ಜಮೀನು ಖರೀದಿಸಲು ಅಗತ್ಯವಿರುವ ಹಣವನ್ನು ಶೇ.50 ಸಹಾಯಧನವಾಗಿ ಸರ್ಕಾರ ನೀಡುತ್ತದೆ. ಉಳಿದ ಶೇ.50 ಮೊತ್ತವನ್ನು ಕಡಿಮೆ ಬಡ್ಡಿದರದ ಸಾಲವಾಗಿ ಒದಗಿಸಲಾಗುತ್ತದೆ.

ಅತ್ಯಂತ ಮಹತ್ವದ ಅಂಶವೆAದರೆ, ಖರೀದಿಸಲಾದ ಜಮೀನು ಕುಟುಂಬದ ಹಿರಿಯ ಮಹಿಳೆಯ ಹೆಸರಿನಲ್ಲಿ ನೇರವಾಗಿ ನೋಂದಾಯಿಸಲಾಗುತ್ತದೆ. ಇದರಿಂದ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಮತ್ತು ಸಾಮಾಜಿಕ ಗೌರವ ಎರಡೂ ಸಿಗುತ್ತದೆ.

ಇದನ್ನೂ ಓದಿ: SBI Digital Personal Loan- ಎಸ್‌ಬಿಐ ಡಿಜಿಟಲ್ ಪರ್ಸನಲ್ ಲೋನ್ | ₹35 ಲಕ್ಷದ ವರೆಗೆ ಸಾಲ ಸೌಲಭ್ಯ | ಸಂಪೂರ್ಣ ಮಾಹಿತಿ ಇಲ್ಲಿದೆ…

2026ರ ಸಾಲಿನ ಪರಿಷ್ಕೃತ ಘಟಕ ವೆಚ್ಚ – ಜಿಲ್ಲಾವಾರು ವಿವರ

ಭೂಮಿಯ ಬೆಲೆ ಜಿಲ್ಲೆಗೊಂದು ರೀತಿಯಾಗಿರುವುದರಿಂದ, ಸರ್ಕಾರ ಘಟಕ ವೆಚ್ಚವನ್ನು ಎರಡು ವಿಭಾಗಗಳಾಗಿ ನಿಗದಿಪಡಿಸಿದೆ.

  1. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಗಳಿಗೆ ಒಟ್ಟು ಘಟಕ ವೆಚ್ಚ ₹25.00 ಲಕ್ಷ ನಿಗದಿಪಡಿಸಲಾಗಿದೆ. ಇದರಲ್ಲಿ ಸರ್ಕಾರದ ಸಹಾಯಧನ (50%) ₹12.50 ಲಕ್ಷ ಹಾಗೂ ಸಾಲ ಮೊತ್ತ (50%) ₹12.50 ಲಕ್ಷ ಆಗಿರುತ್ತದೆ.
  2. ರಾಜ್ಯದ ಇತರ 27 ಜಿಲ್ಲೆಗಳಿಗೆ ಒಟ್ಟು ಘಟಕ ವೆಚ್ಚ ₹20.00 ಲಕ್ಷ ನಿಗದಿಪಡಿಸಲಾಗಿದ್ದು; ಇದರಲ್ಲಿ ಸರ್ಕಾರದ ಸಹಾಯಧನ (50%) ₹10.00 ಲಕ್ಷ ಹಾಗೂ ಸಾಲ ಮೊತ್ತ (50%) ₹10.00 ಲಕ್ಷ ಒದಗಿಸಲಾಗುತ್ತದೆ.

ಸಾಲದ ಬಡ್ಡಿ ದರ ಮತ್ತು ಮರುಪಾವತಿ ವ್ಯವಸ್ಥೆ

ಭೂ ಒಡೆತನ ಯೋಜನೆಯಡಿ ನೀಡುವ ಸಾಲಕ್ಕೆ ವಾರ್ಷಿಕ ಕೇವಲ 6% ಬಡ್ಡಿದರ ನಿಗದಿಪಡಿಸಲಾಗಿದೆ. 10 ರಿಂದ 20 ಅರ್ಧವಾರ್ಷಿಕ ಕಂತುಗಳಲ್ಲಿ ಮರುಪಾವತಿ ಅವಕಾಶ ನೀಡಲಾಗಿದೆ.

ಅಂದರೆ, ಸುಮಾರು 10 ವರ್ಷಗಳ ಅವಧಿಯಲ್ಲಿ ಸಾಲ ತೀರಿಸಬಹುದು. ಈ ದೀರ್ಘಾವಧಿ ಮತ್ತು ಕಡಿಮೆ ಬಡ್ಡಿದರದ ವ್ಯವಸ್ಥೆ, ಮಹಿಳಾ ಕೃಷಿ ಕಾರ್ಮಿಕರ ಮೇಲೆ ಆರ್ಥಿಕ ಒತ್ತಡ ಬಾರದಂತೆ ರೂಪಿಸಲಾಗಿದೆ.

ಇದನ್ನೂ ಓದಿ: Karnataka Yashasvini Yojana 2026- ಯಶಸ್ವಿನಿ ಯೋಜನೆಯಡಿ ಹಸುಗೂಸಿನಿಂದ ವೃದ್ಧರ ವರೆಗೂ 5 ಲಕ್ಷ ರೂ. ಉಚಿತ ಚಿಕಿತ್ಸೆ | ಹೊಸ ಮಾರ್ಗಸೂಚಿ ಬಿಡುಗಡೆ

ಎಷ್ಟು ಜಮೀನು ಖರೀದಿಸಬಹುದು?

ಸರ್ಕಾರ ನಿಗದಿಪಡಿಸಿದ ಘಟಕ ವೆಚ್ಚದ ಒಳಗೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ಜಮೀನನ್ನು ಖರೀದಿಸಲು ಅವಕಾಶವಿದೆ. ಯೋಜನೆಯಡಿ ಫಲಾನುಭವಿಗಳು ಕೆಳಕಂಡAತೆ ಜಮೀನು ಖರೀದಿಸಬಹುದು:

  • ಖುಷ್ಕಿ (ಒಣ) ಜಮೀನು: ಕನಿಷ್ಠ 2 ಎಕರೆ
  • ತರಿ / ನೀರಾವರಿ ಜಮೀನು: 1 ಎಕರೆ ವರೆಗೆ
  • ತೋಟಗಾರಿಕಾ ಜಮೀನು: ಕನಿಷ್ಠ ಅರ್ಧ ಎಕರೆ (20 ಗುಂಟೆ)
Bhu Odetan Yojana
Bhu Odetan Yojana

ಯೋಜನೆಯ ಪ್ರಮುಖ ಉದ್ದೇಶವೇನು?

ಭೂಹೀನ ಮಹಿಳಾ ಕೃಷಿ ಕಾರ್ಮಿಕರಿಗೆ ಸ್ವಂತ ಭೂಮಿ ಒದಗಿಸುವುದು. ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಿಸುವುದು. ಗ್ರಾಮೀಣ ಮಹಿಳೆಯರ ಸಾಮಾಜಿಕ ಸ್ಥಾನಮಾನ ಹೆಚ್ಚಿಸುವುದು ಹಾಗೂ ಕುಟುಂಬದ ಆದಾಯ ಮತ್ತು ಭದ್ರತೆಯನ್ನು ಸುಧಾರಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

WhatsApp Group Join Now
Telegram Group Join Now

ಇದನ್ನೂ ಓದಿ: February New Ration Card Application- ಫೆಬ್ರವರಿಯಿಂದ ಹೊಸ ರೇಷನ್ ಕಾರ್ಡ್ ಅರ್ಜಿ ಆಹ್ವಾನ | ಆಹಾರ ಸಚಿವರ ಮಹತ್ವದ ಮಾಹಿತಿ

ಭೂ ಒಡೆತನ ಯೋಜನೆಗೆ ಯಾರೆಲ್ಲ ಅರ್ಹರು?

  • ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು
  • ಮಹಿಳಾ ಕೃಷಿ ಕಾರ್ಮಿಕರಾಗಿರಬೇಕು
  • ಸ್ವಂತ ಕೃಷಿ ಭೂಮಿ ಇರಬಾರದು
  • ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು

ಅರ್ಜಿ ಸಲ್ಲಿಸುವ ವಿಧಾನ ಹೇಗೆ?

ಸೇವಾ ಸಿಂಧು sevasindhu.karnataka.gov.in ವೆಬ್‌ಸೈಟ್’ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ಅವಕಾಶವಿದೆ.

ಹೊಸ ಬಳಕೆದಾರರಾದರೆ ನೋಂದಣಿ ಮಾಡಿ. ಲಾಗಿನ್ ಆಗಿ. ನಂತರ ಇಲಾಖೆಗಳು ಮತ್ತು ಸೇವೆಗಳು ವಿಭಾಗಕ್ಕೆ ಹೋಗಿ ‘ಭೂ ಮಾಲೀಕತ್ವ ಯೋಜನೆ’ ಸರ್ಚ್ ಮಾಡಿ.

ಆನ್‌ಲೈನ್‌ನಲ್ಲಿ ಅನ್ವಯಿಸು ಮೇಲೆ ಕ್ಲಿಕ್ ಮಾಡಿ. ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ. ದಾಖಲೆಗಳನ್ನು ಅಪ್‌ಲೋಡ್ ಮಾಡಿ. ಅರ್ಜಿ ಸಲ್ಲಿಸಿ ಮತ್ತು ಸ್ವೀಕೃತಿ ಸಂಖ್ಯೆ ಉಳಿಸಿಕೊಳ್ಳಿ.

ಇದನ್ನೂ ಓದಿ: 1.5 Lakh Kotak Kanya Scholarship- 1.5 ಲಕ್ಷ ರೂ. ಕೋಟಕ್ ಕನ್ಯಾ ವಿದ್ಯಾರ್ಥಿವೇತನ | ಈಗಲೇ ಅರ್ಜಿ ಹಾಕಿ…

ಅರ್ಜಿ ಸಲ್ಲಿಕೆಗೆ ಅಗತ್ಯ ದಾಖಲೆಗಳು

  • ಇತ್ತೀಚಿನ ಭಾವಚಿತ್ರ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಆಧಾರ್ ಕಾರ್ಡ್
  • ಪಡಿತರ ಚೀಟಿ
  • ಭೂಹೀನ ಕೃಷಿ ಕಾರ್ಮಿಕ ಪ್ರಮಾಣ ಪತ್ರ (ತಹಶೀಲ್ದಾರ್)

ಭೂಮಿ ಪಡೆದ ಫಲಾನುಭವಿಗಳಿಗೆ ನೀರಾವರಿ ಸೌಲಭ್ಯ ಇಲ್ಲದಿದ್ದರೆ, ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಉಚಿತ ಬೋರ್‌ವೆಲ್ ಪಡೆಯುವ ಹೆಚ್ಚುವರಿ ಸೌಲಭ್ಯ ಪಡೆಯುವ ಅವಕಾಶವೂ ಇದೆ. ಅರ್ಹರಾಗಿರುವವರು ಈ ಅವಕಾಶವನ್ನು ತಪ್ಪಿಸಿಕೊಳ್ಳದೇ, ಕೂಡಲೇ ಅರ್ಜಿ ಸಲ್ಲಿಸಿ ಸ್ವಂತ ಭೂಮಿಯ ಮಾಲೀಕರಾಗಿರಿ.

ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ 94823 00400 ಸಂಪರ್ಕಿಸಿ.

Karnataka Bank Personal Loan- ಕರ್ನಾಟಕ ಬ್ಯಾಂಕ್ ಪರ್ಸನಲ್ ಲೋನ್ | ಕಡಿಮೆ ಬಡ್ಡಿಯಲ್ಲಿ ₹25 ಲಕ್ಷವರೆಗೆ ಸುಲಭ ಸಾಲ


Spread the love
error: Content is protected !!