BGM Foundation Scholarship- ಈ ವಿದ್ಯಾರ್ಥಿಗಳಿಗೆ ಬಿಜಿಎಂ ಫೌಂಡೇಶನ್ ವತಿಯಿಂದ ₹36,000 ವಿದ್ಯಾರ್ಥಿವೇತನ | ಹೀಗೆ ಅರ್ಜಿ ಸಲ್ಲಿಸಿ…

Spread the love

WhatsApp Group Join Now
Telegram Group Join Now

ಈ ವಿದ್ಯಾರ್ಥಿಗಳಿಗೆ ಬಿಜಿಎಂ ಫೌಂಡೇಶನ್ ವತಿಯಿಂದ ₹36,000 ವಿದ್ಯಾರ್ಥಿವೇತನ (BGM Foundation Scholarship) ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

ಶಿಕ್ಷಣ ಪಡೆಯುವ ಆಸೆ ಇದ್ದರೂ ಆರ್ಥಿಕ ಅಡಚಣೆಗಳಿಂದಾಗಿ ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ಅರ್ಧದಲ್ಲೇ ಕೈಬಿಡುವ ಸ್ಥಿತಿ ನಮ್ಮ ದೇಶದಲ್ಲಿ ಇನ್ನೂ ಇದೆ. ಇಂತಹ ವಿದ್ಯಾರ್ಥಿಗಳಿಗೆ ಬೆಂಬಲವಾಗಿ ನಿಲ್ಲುವ ಹಲವು ಸಾಮಾಜಿಕ ಸಂಸ್ಥೆಗಳ ಪೈಕಿ ಬಾಂಬೆ ಗೌರಕ್ಷಕ್ ಮಂಡಳಿ (BGM) ಅಂಗ ಸಂಸ್ಥೆಯಾದ ಬಿಜಿಎಂ ಫೌಂಡೇಶನ್ (BGM Foundation) ಪ್ರಮುಖ ಪಾತ್ರವಹಿಸುತ್ತಿದೆ.

2025-2026ನೇ ಶೈಕ್ಷಣಿಕ ಸಾಲಿಗಾಗಿ ‘ಬಿಜಿಎಂ ಫೌಂಡೇಶನ್ ಪಶು-ಸೇವಾ ವಿದ್ಯಾರ್ಥಿವೇತನ’ (BGM Foundation Pashu Seva Scholarship) ಅಡಿಯಲ್ಲಿ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ₹36,000 ವಿದ್ಯಾರ್ಥಿವೇತನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಪಶುವೈದ್ಯಕೀಯ, ಕೃಷಿ ಮತ್ತು ಸಂಬAಧಿತ ಕ್ಷೇತ್ರಗಳಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಇದು ಅತ್ಯಂತ ಉಪಯುಕ್ತ ಯೋಜನೆಯಾಗಿದೆ.

ಈ ಲೇಖನದಲ್ಲಿ ಯಾರು ಅರ್ಜಿ ಸಲ್ಲಿಸಬಹುದು? ಎಷ್ಟು ವಿದ್ಯಾರ್ಥಿವೇತನ ಸಿಗುತ್ತದೆ? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಬೇಕಾಗುವ ದಾಖಲೆಗಳು ಯಾವುವು? ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಎಂಬ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ.

ಇದನ್ನೂ ಓದಿ: LPG Gas Cylinder ₹300 Subsidy- ನಿಮಗೆ ಗ್ಯಾಸ್ ಸಿಲಿಂಡರ್ ₹300 ಸಬ್ಸಿಡಿ ಬಂತಾ? ಮೊಬೈಲ್‌ನಲ್ಲೇ ಚೆಕ್ ಮಾಡಿ

About the BGM Foundation Scholarship – ಏನಿದು ಬಿಜಿಎಂ ಫೌಂಡೇಶನ್ ಪಶು-ಸೇವಾ ವಿದ್ಯಾರ್ಥಿವೇತನ?

ಬಿಜಿಎಂ ಫೌಂಡೇಶನ್ ಪಶು-ಸೇವಾ ವಿದ್ಯಾರ್ಥಿವೇತನ ಎಂಬುದು ಬಾಂಬೆ ಗೌರಕ್ಷಕ್ ಮಂಡಳಿ (BGM) ಸ್ಥಾಪಿಸಿದ ಶೈಕ್ಷಣಿಕ ನೆರವು ಯೋಜನೆಯಾಗಿದೆ. ಸುಮಾರು 139 ವರ್ಷಗಳಷ್ಟು ಹಳೆಯ ಸಾಮಾಜಿಕ ಸೇವೆಯ ಪರಂಪರೆ ಹೊಂದಿರುವ ಈ ಸಂಸ್ಥೆಯು ಗ್ರಾಮೀಣ ಅಭಿವೃದ್ಧಿ, ಕೃಷಿ ಸಮುದಾಯದ ಶಕ್ತೀಕರಣ ಮತ್ತು ಪ್ರಾಣಿ ಕಲ್ಯಾಣಕ್ಕಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ.

ಪಶುಸಂಗೋಪನೆ, ಡೈರಿ ವಿಜ್ಞಾನ, ಕೃಷಿ ಮತ್ತು ಪಶುವೈದ್ಯಕೀಯ ಕ್ಷೇತ್ರಗಳಲ್ಲಿ ತರಬೇತಿ ಪಡೆದ ಯುವಶಕ್ತಿಯೇ ಭವಿಷ್ಯದ ಗ್ರಾಮೀಣ ಭಾರತದ ಆಧಾರ ಎಂಬ ದೃಷ್ಟಿಯಿಂದ ಈ ವಿದ್ಯಾರ್ಥಿವೇತನ ಯೋಜನೆಯನ್ನು ಜಾರಿಗೆ ತರಲಾಗಿದೆ.

ಈ ಯೋಜನೆಯ ಮೂಲಕ ಆರ್ಥಿಕವಾಗಿ ಹಿಂದುಳಿದ ಆದರೆ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಆತ್ಮವಿಶ್ವಾಸದಿಂದ ಮುಂದುವರಿಸಲು ಸಹಾಯ ಮಾಡಲಾಗುತ್ತದೆ.

ಇದನ್ನೂ ಓದಿ: ಇನ್ಮುಂದೆ ಬ್ಯಾಂಕ್‌ಗಳಿಗೆ ವಾರದಲ್ಲಿ ಎರಡು ದಿನ ರಜೆ? | ನೌಕರರ ಮುಷ್ಕರಕ್ಕೆ ಬಲ ಸಿಗುವುದೇ? ಸಂಪೂರ್ಣ ಮಾಹಿತಿ ಇಲ್ಲಿದೆ…

Eligible Students – ಯಾವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನ?

ಈ ವಿದ್ಯಾರ್ಥಿವೇತನವು ವಿಶೇಷವಾಗಿ ಕೆಳಕಂಡ ಕ್ಷೇತ್ರಗಳಲ್ಲಿ ಡಿಪ್ಲೊಮಾ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮೀಸಲಾಗಿದೆ:

  • ಪಶುವೈದ್ಯಕೀಯ ವಿಜ್ಞಾನ
  • ಪಶುಸಂಗೋಪನೆ
  • ಕೃಷಿ
  • ಡೈರಿ ವಿಜ್ಞಾನ
  • ಜಾನುವಾರು (ಕೊಂಬುಳ್ಳ ದನ) ನಿರ್ವಹಣೆ
  • ಪ್ಯಾರಾ ಪಶುವೈದ್ಯಕೀಯ
  • ಮೇವು ನಿರ್ವಹಣೆ
  • ಇತರ ಸಂಬಂಧಿತ ವಲಯಗಳು

ಪದವಿಪೂರ್ವ ಅಥವಾ ಸ್ನಾತಕೋತ್ತರ ಕೋರ್ಸ್ಗಳಲ್ಲಿರುವ ವಿದ್ಯಾರ್ಥಿಗಳಿಗೆ ಸಹ ಈ ಯೋಜನೆ ಅನ್ವಯವಾಗುತ್ತದೆ.

ಇದನ್ನೂ ಓದಿ: ಕಡಿಮೆ ಬಡ್ಡಿಯಲ್ಲಿ ಹೋಮ್ ಲೋನ್ ನೀಡುವ ಬ್ಯಾಂಕುಗಳ ಪಟ್ಟಿ | ನಿಮ್ಮ ಮನೆ ಕನಸಿಗೆ ಸರಿಯಾದ ಆಯ್ಕೆ ಯಾವುದು?

Scholarship Amount – ಎಷ್ಟು ವಿದ್ಯಾರ್ಥಿವೇತನ ನೀಡಲಾಗುತ್ತದೆ?

ಬಿಜಿಎಂ ಫೌಂಡೇಶನ್ ಪಶು-ಸೇವಾ ವಿದ್ಯಾರ್ಥಿವೇತನದ ಅಡಿಯಲ್ಲಿ ಆಯ್ಕೆಯಾದ ಅರ್ಹ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ₹36,000 ಮೊತ್ತದ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.

ಈ ಹಣವನ್ನು ವಿದ್ಯಾರ್ಥಿಯ ಶೈಕ್ಷಣಿಕ ವೆಚ್ಚಗಳು, ಪುಸ್ತಕಗಳು, ತರಬೇತಿ ಹಾಗೂ ಇತರೆ ಅಗತ್ಯಗಳಿಗೆ ಬಳಸಿಕೊಳ್ಳಬಹುದಾಗಿದೆ.

WhatsApp Group Join Now
Telegram Group Join Now

ಇದನ್ನೂ ಓದಿ: Bajaj Chetak C25 Electric Scooter- ಭಾರೀ ಅಗ್ಗದ ಬೆಲೆಗೆ ಎಲೆಕ್ಟ್ರಿಕ್ ಬಜಾಜ್ ಚೇತಕ್ ಸ್ಕೂಟರ್ | ಭರ್ಜರಿ ಆಫರ್

Eligibility Criteria – ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡಗಳು

ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೆಳಗಿನ ಅರ್ಹತಾ ನಿಯಮಗಳನ್ನು ಪೂರೈಸಿರಬೇಕು:

  • ಅರ್ಜಿದಾರ ವಿದ್ಯಾರ್ಥಿಯು ಭಾರತದ ಖಾಯಂ ನಿವಾಸಿಯಾಗಿರಬೇಕು
  • ಭಾರತದಲ್ಲಿ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ದಾಖಲಾಗಿರಬೇಕು
  • ಪಶುವೈದ್ಯಕೀಯ, ಕೃಷಿ, ಡೈರಿ ವಿಜ್ಞಾನ ಅಥವಾ ಸಂಬಂಧಿತ ಕ್ಷೇತ್ರಗಳಲ್ಲಿ ಡಿಪ್ಲೊಮಾ ಕೋರ್ಸ್ (ಯಾವುದೇ ವರ್ಷ) ಮಾಡುತ್ತಿರಬೇಕು
  • ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 50% ಅಂಕಗಳನ್ನು ಪಡೆದಿರಬೇಕು
  • ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ ₹8 ಲಕ್ಷಕ್ಕಿಂತ ಕಡಿಮೆ ಇರಬೇಕು

ಇದನ್ನೂ ಓದಿ: Nabard Recruitment 2026- ಪದವಿಧರರಿಗೆ ನಬಾರ್ಡ್ ಬ್ಯಾಂಕ್ ಡೆವಲಪ್‌ಮೆಂಟ್ ಅಸಿಸ್ಟೆಂಟ್ ಹುದ್ದೆಗಳು | 162 ಹುದ್ದೆಗಳಿಗೆ ಅರ್ಜಿ ಆಹ್ವಾನ

Required Documents – ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು

ಆನ್‌ಲೈನ್ ಅರ್ಜಿ ಸಲ್ಲಿಸುವ ವೇಳೆ ಕೆಳಕಂಡ ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ:

  • ವಿದ್ಯಾರ್ಥಿಯ ಆಧಾರ್ ಕಾರ್ಡ್
  • ಪ್ರಸ್ತುತ ಶೈಕ್ಷಣಿಕ ವರ್ಷದ ಪ್ರವೇಶದ ಪುರಾವೆ
  • ಹಿಂದಿನ ತರಗತಿಯ ಅಂಕಪಟ್ಟಿ
  • ಶಿಕ್ಷಣ ಸಂಸ್ಥೆಯಿಂದ ನೀಡಿರುವ ಶುಲ್ಕ ರಶೀದಿ
  • ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಪಾಸ್ ಪುಸ್ತಕ (ಖಾತೆ ವಿವರಗಳೊಂದಿಗೆ)
  • ವಿದ್ಯಾರ್ಥಿಯ ಪಾಸ್‌ಪೋರ್ಟ್ ಗಾತ್ರದ ಫೋಟೋ

ಇದನ್ನೂ ಓದಿ: Karnataka CET Application Started 2026- ಸಿಇಟಿ ಅರ್ಜಿ ಸಲ್ಲಿಕೆೆ ಆರಂಭ | ಕೆಇಎ ಮಹತ್ವದ ಮಾಹಿತಿ ಇಲ್ಲಿದೆ…

Online Application Process – ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ

ಬಿಜಿಎಂ ಫೌಂಡೇಶನ್ ಪಶು-ಸೇವಾ ವಿದ್ಯಾರ್ಥಿವೇತನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ:

ಹಂತ-1: ಮೊದಲು ಬಿಜಿಎಂ ಫೌಂಡೇಶನ್‌ನ ಅಧಿಕೃತ ವಿದ್ಯಾರ್ಥಿವೇತನ ವೆಬ್‌ಸೈಟ್‌ಗೆ ಭೇಟಿ ನೀಡಲು BGM Scholarship ಲಿಂಕ್ ಮೇಲೆ ಕ್ಲಿಕ್ ಮಾಡಿ.

ಹಂತ-2: ವೆಬ್‌ಸೈಟ್‌ನ ಮುಖ್ಯ ಪುಟದಲ್ಲಿ ಕಾಣುವ ‘Register Now’ / ‘Create New Account’ ಬಟನ್ ಮೇಲೆ ಕ್ಲಿಕ್ ಮಾಡಿ. ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಹೊಸ ಖಾತೆಯನ್ನು ರಿಜಿಸ್ಟರ್ ಮಾಡಿಕೊಳ್ಳಿ.

ಹಂತ-3: ನಂತರ Login ಮಾಡಿ. ಲಾಗಿನ್ ಆದ ನಂತರ ಅರ್ಜಿ ನಮೂನೆ ಓಪನ್ ಆಗುತ್ತದೆ.

ಹಂತ-4: ಅರ್ಜಿಯಲ್ಲಿ ಕೇಳಿರುವ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ. ಕೊನೆಯಲ್ಲಿ ‘Submit’ ಬಟನ್ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ.

ಇದನ್ನೂ ಓದಿ: National Scholarship Portal- ರಾಷ್ಟ್ರೀಯ ವಿದ್ಯಾರ್ಥಿವೇತನ ಯೋಜನೆ: ವಿದ್ಯಾರ್ಥಿಗಳಿಗೆ 1.25 ಲಕ್ಷ ರೂ. ವರೆಗೆ ಸರ್ಕಾರದ ಆರ್ಥಿಕ ನೆರವು

Apply Immediately – ಕೂಡಲೇ ಅರ್ಜಿ ಸಲ್ಲಿಸಿ

ಪಶುಸಂಗೋಪನೆ, ಕೃಷಿ ಮತ್ತು ಡೈರಿ ಕ್ಷೇತ್ರಗಳು ಭಾರತದ ಆರ್ಥಿಕತೆಯ ಮೂಲಸ್ತಂಭಗಳು. ಈ ಕ್ಷೇತ್ರಗಳಲ್ಲಿ ತರಬೇತಿ ಪಡೆದ ಯುವಕರು ಗ್ರಾಮೀಣ ಭಾರತವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಅಂತಹ ವಿದ್ಯಾರ್ಥಿಗಳಿಗೆ ಬಿಜಿಎಂ ಫೌಂಡೇಶನ್ ನೀಡುತ್ತಿರುವ ₹36,000 ವಿದ್ಯಾರ್ಥಿವೇತನ ದೊಡ್ಡ ಆಸರೆಯಾಗಿದೆ.

ನೀವು ಅಥವಾ ನಿಮ್ಮ ಪರಿಚಯದವರು ಈ ವಿದ್ಯಾರ್ಥಿವೇತನಕ್ಕೆ ಅರ್ಹರಾಗಿದ್ದರೆ, ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಲು ಕಾಯದೇ, ಕೂಡಲೇ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಸದುಪಯೋಗ ಮಾಡಿಸಿಕೊಳ್ಳಿ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 16, 2026

  • ಅಧಿಕೃತ ವೆಬ್‌ಸೈಟ್: bgmfoundation.org
  • ಅರ್ಜಿ ಲಿಂಕ್: Apply Now

KKRTC Driver Recruitment 2026- SSLC ಪಾಸಾದವರಿಗೆ ಸರ್ಕಾರಿ ಉದ್ಯೋಗ | KKRTC 78 ಚಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ


Spread the love
error: Content is protected !!