BDA Sites Auction 2025- ರಿಯಾಯ್ತಿ ದರಲ್ಲಿ ಬೆಂಗಳೂರಿನಲ್ಲಿ ಸರ್ಕಾರದ ಸೈಟು | ಆಸಕ್ತರಿಗೆ ಬಿಡಿಎ ಮುಕ್ತ ಆಹ್ವಾನ

Spread the love

WhatsApp Group Join Now
Telegram Group Join Now

ಬೆಂಗಳೂರಿನಲ್ಲಿ ಮನೆ ಕಟ್ಟುವ ಕನಸು ಹೊಂದಿರುವವರಿಗೆ ಸರ್ಕಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿವೇಶನ ಖರೀದಿಗೆ (BDA Sites Auction 2025) ಆಹ್ವಾನ ನೀಡಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

ಬೆಂಗಳೂರು ನಗರದಲ್ಲಿ ಸೈಟ್ (ನಿವೇಶನ) ಖರೀದಿಸುವ ಕನಸು ಹೊಂದಿರುವವರಿಗೆ ಈಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) ಸಿಹಿ ಸುದ್ದಿ ನೀಡಿದೆ. ಬಿಡಿಎ ಅಭಿವೃದ್ಧಿಪಡಿರುವ ಬಡಾವಣೆಗಳಲ್ಲಿರುವ ನಿವೇಶನಗಳನ್ನು ರಿಯಾಯಿತಿ ದರದಲ್ಲಿ ಹರಾಜು ಮೂಲಕ ಮಾರಾಟ ಮಾಡಲು ಮುಂದಾಗಿದೆ.

ಈ ಬಾರಿ ಬಿಡಿಎ ಹಲವು ಕಾರ್ನರ್ ಮತ್ತು ಮಧ್ಯಂತರ ನಿವೇಶನಗಳನ್ನು ಹರಾಜು ಮಾಡಲು ನಿರ್ಧರಿಸಿದ್ದು, ಇದು ಆಸಕ್ತರು ಯಾವುದೇ ನಿರ್ಬಂಧವಿಲ್ಲದೆ ಭಾಗವಹಿಸಬಹುದಾದ ಸಾರ್ವಜನಿಕ ಹರಾಜಾಗಿದೆ. ಈ ಹರಾಜು ಪ್ರಕ್ರಿಯೆ ಸಂಪೂರ್ಣವಾಗಿ ಸರ್ಕಾರದ ನಿಯಮಾನುಸಾರ ನಡೆಯಲಿದೆ.

KCET Verification Slip Details- ಕೆಸಿಇಟಿ 2025 ಸೀಟು ಹಂಚಿಕೆ ಪ್ರಕ್ರಿಯೆ ಆರಂಭ | ವೆರಿಫಿಕೇಷನ್ ಸ್ಲಿಪ್ ಬಿಡುಗಡೆ | ಸಂಪೂರ್ಣ ಮಾಹಿತಿ ಇಲ್ಲಿದೆ…

ಹರಾಜು ನಡೆಯುವ ದಿನಾಂಕಗಳು

ಹರಾಜು ಎರಡು ಹಂತಗಳಲ್ಲಿ ನಡೆಯಲಿದೆ. ಈ ಕೆಳಕಂಡ ದಿನಗಳಲ್ಲಿ ನಡೆಯುವ ಹರಾಜು ಪ್ರಕ್ರಯೆಯಲ್ಲಿ ಭಾಗವಹಿಸಿ, ನಿಮ್ಮ ಕನಸಿನ ನಿವೇಶನವನ್ನು ಮೇಲೆ biಜ ಹಾಕಬಹುದಾಗಿದೆ.

  • ಇ-ಹರಾಜು (Online Auction): ಜುಲೈ 19, 2025
  • ನೇರ ಹರಾಜು (Live Auction): ಜುಲೈ 21, 2025 (ಕೊನೆ ದಿನ)
ಎಲ್ಲಿ ಲಭ್ಯ ಇವೆ ಈ ನಿವೇಶನಗಳು?

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಹರಾಜಿಗೆ ಇಡಲಿರುವ 133 ನಿವೇಶನಗಳು ನಗರದ ವಿವಿಧ ಬಡಾವಣೆಗಳಲ್ಲಿ ಹಂಚಿಕೊಂಡಿವೆ. ಈ ಕೆಳಗಿನ ಬಡಾವಣೆಗಳಲ್ಲಿ ಸೈಟ್‌ಗಳು ಲಭ್ಯವಿವೆ:

  • ಅಂಜನಾಪುರ ಟೌನ್‌ಶಿಪ್
  • ಜೆ.ಪಿ. ನಗರ 9ನೇ ಹಂತ
  • ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆ
  • ನಾಗರಭಾವಿ 2ನೇ ಹಂತ
  • ಬಿಟಿಎಂ ಲೇಔಟ್ 4ನೇ ಹಂತ
  • ಬನಶಂಕರಿ 3ನೇ ಹಂತ
  • ಆಸ್ಟಿನ್ ಟೌನ್
  • ಎಚ್‌ಬಿಆರ್ ಲೇಔಟ್ 1ನೇ ಹಂತ, 2ನೇ ಬ್ಲಾಕ್
  • ಅರ್ಕಾವತಿ ಲೇಔಟ್ (ಜಕ್ಕೂರು) 7ನೇ ಬ್ಲಾಕ್

ಇದಲ್ಲದೆ ಇನ್ನೂ ಕೆಲವು ಪ್ರದೇಶಗಳಲ್ಲಿ ಕೂಡ ನಿವೇಶನಗಳು ಮಾರಾಟಕ್ಕೆ ಲಭ್ಯವಿದ್ದು, BDA ಅಧಿಕೃತ ವೆಬ್‌ಸೈಟ್‌ನಲ್ಲಿ ವಿವರಗಳು ಪ್ರಕಟವಾಗಲಿವೆ.

ಬೆಂಗಳೂರಿನಲ್ಲಿ ಮನೆ ಕಟ್ಟುವ ಕನಸು ಹೊಂದಿರುವವರಿಗೆ ಸರ್ಕಾರ BDA ನಿವೇಶನ ಖರೀದಿಗೆ ಆಹ್ವಾನ ನೀಡಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ...
BDA Sites Auction 2025 Bangalore Corner Sites Details

Free Sewing Machine- ಮಹಿಳೆಯರಿಗೆ ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆ ಸಂಪೂರ್ಣ ಮಾಹಿತಿ ಇಲ್ಲಿದೆ…

ಸೈಟ್ ಗಾತ್ರಗಳು ಮತ್ತು ಪ್ರಾರಂಭಿಕ ಬೆಲೆ

ಈ ಹರಾಜಿನಲ್ಲಿ 600 ಚದರ ಅಡಿಗಳಿಂದ ಆರಂಭವಾಗಿ 4,500 ಚದರ ಅಡಿಗಳ ವರೆಗೆ ಭಿನ್ನ ಗಾತ್ರದ ನಿವೇಶನಗಳು ಲಭ್ಯವಿವೆ. ಆಸಕ್ತರು ತಮ್ಮ ಬಜೆಟ್‌ಗೆ ಅನುಗುಣವಾಗಿ ನಿವೇಶನವನ್ನು ಆಯ್ಕೆ ಮಾಡಬಹುದು.

  • ಪ್ರಾರಂಭಿಕ ಹರಾಜು ದರ: ₹500 ಪ್ರತಿ ಚದರ ಮೀಟರ್‌ಗೆ (ಅಂದಾಜು ₹46.45 ಪ್ರತಿ ಚದರ ಅಡಿ)
  • ಉದಾಹರಣೆಗೆ: 30×40 ಅಡಿ (1200 sq ft) ನಿವೇಶನಕ್ಕೆ ಪ್ರಾರಂಭಿಕ ಬೆಲೆ ₹5.58 ಲಕ್ಷ (ಅಂದಾಜು)
  • ಉದಾಹರಣೆಗೆ: 40×60 ಅಡಿ (2400 sq ft) ನಿವೇಶನಕ್ಕೆ ₹11.16 ಲಕ್ಷ

ಹರಾಜು ಪ್ರಕ್ರಿಯೆಯಲ್ಲಿಯೇ ಈ ದರ ಹೆಚ್ಚಾಗಬಹುದಾದರೂ, ಬಿಟ್ ಮಟ್ಟದಲ್ಲಿ ಖರೀದಿದಾರರಿಗೆ ಇದು ಸ್ವಚ್ಛ ಹಾಗೂ ಸ್ಪರ್ಧಾತ್ಮಕ ಪ್ರಕ್ರಿಯೆಯಾಗಿರುತ್ತದೆ.

PMAY Housing Loan Subsidy- ಸ್ವಂತ ಮನೆ ನಿರ್ಮಾಣಕ್ಕೆ ಸರ್ಕಾರದಿಂದ ₹2.67 ಲಕ್ಷ ವರೆಗೆ ಸಹಾಯಧನ | ಪಿಎಂ ಆವಾಸ್ ಯೋಜನೆಗೆ ಅರ್ಜಿ ಆಹ್ವಾನ

ಯಾರೆಲ್ಲ ಹರಾಜಿನಲ್ಲಿ ಭಾಗವಹಿಸಬಹುದು?

ಈ ಹರಾಜು ಪ್ರಕ್ರಿಯೆ ಎಲ್ಲಾ ನಾಗರಿಕರಿಗೆ ತೆರೆಯಲ್ಪಟ್ಟಿದೆ. ಸರ್ಕಾರಿ ಮತ್ತು ಖಾಸಗಿ ಉದ್ಯೋಗಸ್ಥರು, ಉದ್ಯಮಿಗಳು, ನಿವೃತ್ತರು, ಬಂಡವಾಳ ಹೂಡಲು ಬಯಸುವವರು, ಬೆಂಗಳೂರಿನಲ್ಲಿ ಮನೆಯ ಕಟ್ಟುವ ಕನಸು ಇಟ್ಟುಕೊಂಡಿರುವ ಕುಟುಂಬಗಳು ಈ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು.

ಈ ಯೋಜನೆಯಿಂದ ರಿಯಾಯಿತಿ ಬೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಭದ್ರವಾದ ಕಾನೂನುಬದ್ಧ ನಿವೇಶನ ಸಿಗಲಿದೆ. ಈ ಹರಾಜು ಪ್ರಕ್ರಿಯೆ ನಿಮ್ಮ ಮನೆ ಕನಸು ಪೂರೈಸಿಕೊಳ್ಳಲು ಸರಿಯಾದ ಅವಕಾಶ. ಯಾವುದೇ ತಕರಾರುಗಳಿಲ್ಲದ, ನೇರ ಹಾಗೂ ಪಾರದರ್ಶಕ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿ.

ಹೆಚ್ಚು ಮಾಹಿತಿಗೆ

Solar Electricity Subsidy- ನಿಮ್ಮ ಮನೆಗೆ ಉಚಿತ ಸೋಲಾರ್ ವಿದ್ಯುತ್ ಪಡೆಯಲು ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…


Spread the love
error: Content is protected !!