BDA Flats Sale Mela 2025- ಸರ್ಕಾರದಿಂದ ಬಿಡಿಎ ಫ್ಲ್ಯಾಟ್ ಹಂಚಿಕೆ | ಸ್ಥಳದಲ್ಲಿಯೇ ಬ್ಯಾಂಕ್ ಸಾಲ ಸೌಲಭ್ಯ | ಸಂಪೂರ್ಣ ಮಾಹಿತಿ ಇಲ್ಲಿದೆ…

Spread the love

2BHK ಹಾಗೂ 3BHK ಒಟ್ಟು 1,176 ಫ್ಲ್ಯಾಟ್ ಮಾರಾಟಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (Bangalore Development Authority-BDA) ಮೇಳ ಆಯೋಜಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ..

WhatsApp Group Join Now
Telegram Group Join Now

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ವತಿಯಿಂದ 2BHK ಹಾಗೂ 3BHK ಫ್ಲ್ಯಾಟ್‌ಗಳ ಹಂಚಿಕೆಗಾಗಿ ಭರ್ಜರಿ ವಸತಿ ಮೇಳವನ್ನು ಮೇ 17, 2025ರಂದು ಆಯೋಜಿಸಿದೆ. ಈ ಮೇಳವು ಮಧ್ಯಮ ವರ್ಗದ ಮತ್ತು ಉದ್ಯೋಗಸ್ಥ ಕುಟುಂಬಗಳಿಗೆ ಕಡಿಮೆ ಬಡ್ಡಿದರದ ಸಾಲ ಸೌಲಭ್ಯದೊಂದಿಗೆ ಕನಸಿನ ಮನೆ ಖರೀದಿಸಲು ಭರ್ಜರಿ ಅವಕಾಶ ಒದಗಿಸುತ್ತಿದೆ.

ಈ ಮೇಳದಲ್ಲಿ ಭಾಗವಹಿಸುವ ಖರೀದಿದಾರರು ಆಯ್ದ ಫ್ಲ್ಯಾಟ್ ಬೆಲೆಯ ಶೇ.25ರಷ್ಟು ಮೊತ್ತವನ್ನು ಮುಂಗಡ ಪಾವತಿಸಿದರೆ, ಸ್ಥಳದಲ್ಲಿಯೇ ಹಂಚಿಕೆ, ಸ್ಥಳದಲ್ಲಿಯೇ ಬ್ಯಾಂಕ್ ಸಾಲ ಸೌಲಭ್ಯ ಪಡೆಯಬಹುದಾಗಿದೆ. ಹೀಗಾಗಿ, ಹೆಚ್ಚು ಪರದಾಟವಿಲ್ಲದೆ ತಕ್ಷಣವೇ ಮನೆ ಖರೀದಿ ಪ್ರಕ್ರಿಯೆ ಆರಂಭಿಸಲು ಅವಕಾಶ ಒದಗಿದೆ.

ಮೇಳದ ವಿವರಗಳು
  • ಮೇಳ ದಿನಾಂಕ: 17-05-2025
  • ಸಮಯ: ಬೆಳಿಗ್ಗೆ 9 ಗಂಟೆಯಿAದ ಸಂಜೆ 5 ಗಂಟೆಯ ವರೆಗೆ
  • ಸ್ಥಳ: ನಾಡಪ್ರಭು ಕೆಂಪೇಗೌಡ ಬಡಾವಣೆ, ಕೊಮ್ಮಘಟ್ಟ, ಬೆಂಗಳೂರು ದಕ್ಷಿಣ

CBSE 10th-12th Results 2025- ಸಿಬಿಎಸ್‌ಇ ಫಲಿತಾಂಶ ಬಿಡುಗಡೆಗೆ ದಿನಗಣನೆ ಆರಂಭ | ಈ ವಾರವೇ ಫಲಿತಾಂಶ ಪ್ರಕಟಣೆ | ಹೊಸ ಅಪ್ಡೇಟ್ ಇಲ್ಲಿದೆ…

ಮಾರಾಟಕ್ಕೆ ಲಭ್ಯವಿರುವ ಫ್ಲ್ಯಾಟ್ ವಿವರ

ಒಟ್ಟು 1,176 ಫ್ಲ್ಯಾಟ್‌ಗಳು ಲಭ್ಯವಿದ್ದು; ಇವುಗಳ ವಿಸ್ತೀರ್ಣ, ಬೆಲೆ ಕುರಿತ ವಿವರ ಈ ಕೆಳಗಿನಂತಿದೆ:

ಬೆಂಗಳೂರು ದಕ್ಷಿಣ ತಾಲೂಕು ಕೆಂಗೇರಿ ಹೋಬಳಿ, ಕೊಮ್ಮಘಟ್ಟ, ಎನ್‌ಪಿಎಲ್ ಫೇಸ್-1: 3 ಬಿಎಚ್‌ಕೆ 480 ಮನೆಗಳಿದ್ದು; (1314.54 ಚದರ ಅಡಿ ವಿಸ್ತೀರ್ಣ) ಬೆಲೆಯನ್ನು ₹65.20 ಲಕ್ಷ ನಿಗದಿಪಡಿಸಲಾಗಿದೆ.

ಬೆಂಗಳೂರು ದಕ್ಷಿಣ ತಾಲೂಕು, ಕೆಂಗೇರಿ ಹೋಬಳಿ, ಕೊಮ್ಮಘಟ್ಟ, ಎನ್‌ಪಿಎಲ್ ಫೇಸ್-2: 2 ಬಿಎಚ್‌ಕೆ 360 ಫ್ಲ್ಯಾಟ್‌ಗಳಿದ್ದು; (978 ಚದರ ಅಡಿ ವಿಸ್ತೀರ್ಣ) ₹53.85 ಲಕ್ಷ ಬೆಲೆ ನಿಗದಿಪಡಿಸಲಾಗಿದೆ.

ಬೆಂಗಳೂರು ದಕ್ಷಿಣ ತಾಲೂಕು, ಕೆಂಗೇರಿ ಹೋಬಳಿ, ಕೊಮ್ಮಘಟ್ಟ, ಎನ್‌ಪಿಕೆಎಲ್ ಫೇಸ್-3: 2 ಬಿಎಚ್‌ಕೆ 336 ಮನೆಗಳಿದ್ದು; (904.27 ಚದರ ಅಡಿ ವಿಸ್ತೀರ್ಣ) ₹48.70 ಲಕ್ಷ ಬೆಲೆ ನಿಗದಿಪಡಿಸಲಾಗಿದೆ.

ಈ ಫ್ಲ್ಯಾಟ್‌ಗಳು ಎಲ್ಲಾ ಮೂಲಭೂತ ಸೌಕರ್ಯಗಳಿಂದ ಕೂಡಿದ್ದು, ಗುಣಮಟ್ಟದ ನಿರ್ಮಾಣ, ಆರಾಮದಾಯಕ ವಾತಾವರಣ ಮತ್ತು ವಸತಿ ಸುಧಾರಿತತೆಯನ್ನು ಹೊಂದಿವೆ.

PUC Admission New Rules 2025- ಪಿಯುಸಿ ಪ್ರವೇಶಕ್ಕೆ ಖಾಸಗಿ ಕಾಲೇಜುಗಳು ಹೆಚ್ಚುವರಿ ಶುಲ್ಕ ಪಡೆಯುವಂತಿಲ್ಲ | ರೋಸ್ಟರ್ ನಿಯಮ ಕಡ್ಡಾಯಗೊಳಿಸಿದ ಸರ್ಕಾರ

2BHK ಹಾಗೂ 3BHK ಒಟ್ಟು 1,176 ಫ್ಲ್ಯಾಟ್ ಮಾರಾಟಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಮೇಳ ಆಯೋಜಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ...
BDA Flats Sale Mela 2025
ವಿಶೇಷ ಸೌಲಭ್ಯಗಳು ಮತ್ತು ತಂತ್ರಜ್ಞಾನ
  • ಇವು ಆಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿರುವ ಮನೆಗಳಾಗಿದ್ದು; ಹಸಿರು ಪರಿಸರ, ಸ್ವಚ್ಛ ವಾತಾವರಣ, ಪಕ್ಕದಲ್ಲೇ ಉದ್ಯಾನವನಗಳ ವ್ಯವಸ್ಥೆ ಇದೆ.
  • ಜಲಮಂಡಳಿ ಸಂಪರ್ಕದ ಯೋಜನೆ ಪ್ರಗತಿಯಲ್ಲಿದ್ದು; ಪ್ರಸ್ತುತ ಕೊಳವೆಬಾವಿಗಳಿಂದ ನೀರು ಪೂರೈಕೆ ವ್ಯವಸ್ಥೆ ಕಲ್ಪಿಸಲಾಗಿದೆ.
  • ಎಲ್ಲ ಮನೆಗಳು ರೇರಾ (RERA) ಪ್ರಮಾಣೀಕೃತವಾಗಿದ್ದು, ಖರೀದಿದಾರರಿಗೆ ಸಂಪೂರ್ಣ ನಂಬಿಕೆಯ ವಾತಾವರಣವಿದೆ.
  • ಮೆಟ್ರೋ ಮತ್ತು ಹೆದ್ದಾರಿ ಸಂಪರ್ಕ: ಬೆಂಗಳೂರು-ಮೈಸೂರು ಹೆದ್ದಾರಿ ಕೇವಲ 1.6 ಕಿ.ಮೀ., ಚಲ್ಲಘಟ್ಟ ಮೆಟ್ರೋ ನಿಲ್ದಾಣ ಕೇವಲ 2.5 ಕಿ.ಮೀ. ದೂರದಲ್ಲಿದೆ.
ಸ್ಥಳದಲ್ಲಿಯೇ ಬ್ಯಾಂಕ್ ಸಾಲ ಸೌಲಭ್ಯ

ಈ ಮೇಳದ ಪ್ರಮುಖ ಆಕರ್ಷಣೆ ಎಂದರೆ, ಹೆಚ್ಚು ಪ್ರಮಾಣದ ಬ್ಯಾಂಕ್‌ಗಳು ಸ್ಥಳದಲ್ಲಿಯೇ ಭಾಗವಹಿಸುತ್ತಿದ್ದು, ಮನೆ ಖರೀದಿಗೆ ಅಗತ್ಯವಿರುವ ಮನೆ ಸಾಲ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಬಹುದು. SBI, Canara Bank, HDFC, LIC Housing Finance ಸೇರಿದಂತೆ ಪ್ರಮುಖ ಬ್ಯಾಂಕ್‌ಗಳು ಈ ಮೇಳದಲ್ಲಿ ಪಾಲ್ಗೊಳ್ಳಲಿದ್ದು, ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಮಂಜೂರು ಮಾಡಲಿವೆ.

ಬಿಡಿಎ ಹಮ್ಮಿಕೊಂಡಿರುವ ಈ ಮೇಳದಲ್ಲಿ ಕೊಮ್ಮಘಟ್ಟವಲ್ಲದೆ ಇನ್ನೂ ಎರಡು ಪ್ರಮುಖ ಯೋಜನೆಗಳಾದ ಕಣಿಮಿಣಿಕೆ ವಸತಿ ಯೋಜನೆ ಹಾಗೂ ಡಾ. ಪುನೀತ್ ರಾಜ್‌ಕುಮಾರ್ ಫ್ರೆöÊಡ್ ವಿಲ್ಲಾ ಯೋಜನೆಗಳ ಮನೆಗಳಿಗೂ ಹಂಚಿಕೆ ನೀಡಲಾಗುತ್ತಿದೆ. ಇವು ಕೂಡ ಬಡವರಿಗೂ ಮಧ್ಯಮವರ್ಗದವರಿಗೆ ತಕ್ಕಂತೆ ನಿರ್ಮಿಸಲ್ಪಟ್ಟ ಗುಣಮಟ್ಟದ ಗೃಹ ಯೋಜನೆಗಳಾಗಿವೆ.

E-Swathu Rural Property- ಸರ್ಕಾರಿ ಜಾಗ, ಕೃಷಿ ಭೂಮಿಯಲ್ಲಿ ಕಟ್ಟಿರುವ ಮನೆ, ಸೈಟುಗಳಿಗೆ ಸಕ್ರಮ ಭಾಗ್ಯ | ಇ-ಸ್ವತ್ತು ಸಮಸ್ಯೆಗಳಿಗೆ ಸರ್ಕಾರದ ಪರಿಹಾರ

ಈ ಮೇಳ ಯಾಕೆ ಪ್ರಮುಖ?
  • ತಕ್ಷಣದ ಹಂಚಿಕೆ ಪತ್ರದ ಸಿಗಲಿದೆ.
  • ಭದ್ರತೆ, ನೈರ್ಮಲ್ಯ ಮತ್ತು ಮೂಲಭೂತ ಸೌಕರ್ಯಗಳಿಂದ ಕೂಡಿದ ನಿವಾಸ
  • ಹತ್ತಿರದ ಮೆಟ್ರೋ ಸಂಪರ್ಕದಿಂದ ಸಹಜ ಸಾರಿಗೆ
  • ಕಡಿಮೆ ಬಡ್ಡಿದರದಲ್ಲಿ ಬ್ಯಾಂಕ್ ಸಾಲ
  • ಸರ್ಕಾರದಿಂದಲೇ ಅಭಿವೃದ್ಧಿಪಡಿಸಲ್ಪಟ್ಟ ವಿಶ್ವಾಸಾರ್ಹ ಯೋಜನೆ
ಆಸಕ್ತರು ಏನು ಮಾಡಬೇಕು?

ಆಸಕ್ತರು ಹತ್ತಿರದ ವಾಣಿಜ್ಯ ಬ್ಯಾಂಕ್ ಮೂಲಕ ಮುಂಗಡ ಪಾವತಿ ಮಾಡಲು ಸಿದ್ಧರಿದ್ದರೆ, ಈ ಮೇಳಕ್ಕೆ ನೇರವಾಗಿ ಬಂದು ಅರ್ಜಿ ಸಲ್ಲಿಸಬಹುದು. ಸೂಕ್ತ ದಾಖಲಾತಿಗಳೊಂದಿಗೆ (ಆಧಾರ್, ಪ್ಯಾನ್, ಆದಾಯ ಪ್ರಮಾಣಪತ್ರ, ವಿಳಾಸ ದಾಖಲೆ) ಹಾಜರಾಗಬೇಕು.

ಕನಸಿನ ಮನೆ ಖರೀದಿಸಲು ಕಾಯುತ್ತಿರುವವರಿಗೆ ಇದು ಒಂದು ಅಮೂಲ್ಯ ಅವಕಾಶವಾಗಿದ್ದು; ಕೇವಲ ಶೇ. 25ರಷ್ಟು ಮೊತ್ತ ಪಾವತಿಸಿ ತಕ್ಷಣವೇ ಹಂಚಿಕೆ ಪತ್ರವನ್ನು ಪಡೆಯಬಹುದಾಗಿದೆ. ಮಧ್ಯಮ ವರ್ಗದವರಿಗೆ ಹಾಗೂ ಉದ್ಯೋಗಸ್ಥರಿಗೆ ಅನುಕೂಲವಾಗುವ ಈ ಯೋಜನೆಯಲ್ಲಿ ತಡ ಮಾಡದೆ ಭಾಗವಹಿಸಿ, ನಿಮ್ಮ ಕನಸಿನ ಮನೆಗೆ ಮೊದಲ ಹೆಜ್ಜೆ ಇಡಿ!

ಹೆಚ್ಚಿನ ಮಾಹಿತಿಗೆ:

SBI Loan Interest Rate Cut- ಎಸ್‌ಬಿಐ ಬ್ಯಾಂಕಿನಲ್ಲಿ ಅತೀ ಕಡಿಮೆ ಬಡ್ಡಿ ಸಾಲ ಸೌಲಭ್ಯ | ಹೊಸ ಬಡ್ಡಿದರಗಳ ಮಾಹಿತಿ ಇಲ್ಲಿದೆ…


Spread the love
WhatsApp Group Join Now
Telegram Group Join Now
error: Content is protected !!