Bank Holidays June 2025- ಜೂನ್ ತಿಂಗಳಲ್ಲಿ ಬ್ಯಾಂಕುಗಳಿಗೆ ಸಾಲು ಸಾಲು ರಜೆ | ದಿನಾಂಕವಾರು ಮಾಹಿತಿ ಮತ್ತು ಉಪಯುಕ್ತ ಸಲಹೆ ಇಲ್ಲಿದೆ…

Spread the love

WhatsApp Group Join Now
Telegram Group Join Now

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಅಧಿಕೃತ ರಜೆ ಕ್ಯಾಲೆಂಡರ್ ಪ್ರಕಾರ ಜೂನ್ ತಿಂಗಳಲ್ಲಿ (Bank Holidays June 2025) ಬ್ಯಾಂಕುಗಳಿಗೆ ಒಟ್ಟು 12 ರಜೆಗಳಿದ್ದು; ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

ಇನ್ನೇನು 2025ರ ಜೂನ್ ತಿಂಗಳು ಆರಂಭವಾಗಲಿದ್ದು, ಸಾರ್ವಜನಿಕ ರಜೆಗಳು, ವಾರಾಂತ್ಯಗಳು ಮತ್ತು ವಿವಿಧ ರಾಜ್ಯಗಳ ಸ್ಥಳೀಯ ಹಬ್ಬಗಳ ಹಿನ್ನೆಲೆ ದೇಶದಾದ್ಯಂತದ ಬ್ಯಾಂಕುಗಳಿಗೆ ಒಟ್ಟು 12 ದಿನ ರಜೆಗಳು ಇರಲಿವೆ.

ಈ ರಜೆಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಪ್ರಕಟಿಸಿದ ಅಧಿಕೃತ ರಜೆ ಕ್ಯಾಲೆಂಡರ್ ಆಧಾರಿತವಾಗಿವೆ. ಗ್ರಾಹಕರು ತಮ್ಮ ಹಣಕಾಸು ವ್ಯವಹಾರಗಳನ್ನು ಯೋಜಿಸಿಕೊಳ್ಳುವಲ್ಲಿ ಸಹಾಯವಾಗಲೆಂದು ದಿನಾಂಕವಾರು ಸಂಪೂರ್ಣ ಮಾಹಿತಿಯನ್ನು ಇಲ್ಲಿದೆ ನೀಡಲಾಗಿದೆ.

Karnataka Mungaru 2025- ಮುಂಗಾರು ಮಳೆ ಭರ್ಜರಿ ಎಂಟ್ರಿ | ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ | ಹೆಚ್ಚು ಮಳೆ ಬೀಳುವ ಜಿಲ್ಲೆಗಳ ಮಾಹಿತಿ ಇಲ್ಲಿದೆ…

ಜೂನ್ ತಿಂಗಳ ರಜೆಗಳ ಸಂಕ್ಷಿಪ್ತ ವಿವರ
  • ಭಾನುವಾರಗಳು: 05
  • ಶನಿವಾರಗಳು: 02
  • ಹಬ್ಬ/ಸ್ಥಳೀಯ ರಜೆಗಳು: 05
  • ಒಟ್ಟು ರಜೆಗಳು: 12 ದಿನಗಳು
ಹಬ್ಬ ಹಾಗೂ ಸ್ಥಳೀಯ ರಜೆಗಳು
  • ಜೂನ್ 6 (ಶುಕ್ರವಾರ): ಬಕ್ರೀದ್ (Eid-ul-Adha) – ಈ ದಿನ ದೇಶಾದ್ಯಂತ ಬಹುತೇಕ ರಾಜ್ಯಗಳಲ್ಲಿ ರಜೆ ಇರುತ್ತದೆ.
  • ಜೂನ್ 7 (ಶನಿವಾರ): ಬಕ್ರೀದ್ ಆಚರಣೆ – ಬೆಂಗಳೂರು, ಐಜ್ವಾಲ್, ಶಿಲ್ಲಾಂಗ್, ಭೋಪಾಲ್, ಭುವನೇಶ್ವರ, ಹೈದರಾಬಾದ್ ಸೇರಿದಂತೆ ಹಲವೆಡೆ ಬ್ಯಾಂಕ್ ಮುಚ್ಚಲ್ಪಡುತ್ತದೆ.
  • ಜೂನ್ 11 (ಬುಧವಾರ): ಸಂತ ಕಬೀರ್ ಜಯಂತಿ – ಗ್ಯಾಂಗ್ಟಾಕ್ ಮತ್ತು ಶಿಮ್ಲಾದಲ್ಲಿ ಬ್ಯಾಂಕುಗಳಿಗೆ ರಜೆ ಇರುತ್ತದೆ.
  • ಜೂನ್ 27 (ಶುಕ್ರವಾರ): ರಥಯಾತ್ರೆ / ಕಾಂಗ್ – ಭುವನೇಶ್ವರ ಮತ್ತು ಇಂಫಾಲ್‌ನಲ್ಲಿ ಬ್ಯಾಂಕುಗಳಿಗೆ ರಜೆ.
  • ಜೂನ್ 30 (ಸೋಮವಾರ): ರೆಮ್ನಾ ಹಬ್ಬ – ಐಜ್ವಾಲ್‌ನಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ವಾರಾಂತ್ಯ ರಜೆಗಳು
  • ಜೂನ್ 2, 9, 16, 23, 30: ಭಾನುವಾರಗಳು – ದೇಶದಾದ್ಯಂತ ಎಲ್ಲಾ ಬ್ಯಾಂಕುಗಳಿಗೆ ರಜೆ.
  • ಜೂನ್ 14: ಎರಡನೇ ಶನಿವಾರ – ಎಲ್ಲೆಡೆ ಬ್ಯಾಂಕ್ ರಜೆ.
  • ಜೂನ್ 28: ನಾಲ್ಕನೇ ಶನಿವಾರ – ಎಲ್ಲೆಡೆ ಬ್ಯಾಂಕ್ ರಜೆ.
RBI ಅಧಿಕೃತ ರಜೆ ಕ್ಯಾಲೆಂಡರ್ ಪ್ರಕಾರ ಜೂನ್ ತಿಂಗಳಲ್ಲಿ ಬ್ಯಾಂಕುಗಳಿಗೆ ಒಟ್ಟು 12 ರಜೆಗಳಿದ್ದು; ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ...
Bank Holidays June 2025 RBI Holiday Calendar

Karnataka Property Registration- ಮೇ 26ರಿಂದ ಆಸ್ತಿಗಳ ನೋಂದಣಿಗೆ ಹೊಸ ನಿಯಮ | ಜನಸಾಮಾನ್ಯರಿಗೆ ತಿಳಿದಿರಬೇಕಾದ ಮಹತ್ವದ ಮಾಹಿತಿ ಇಲ್ಲಿದೆ…

ಬ್ಯಾಂಕ್ ರಜೆಗಳ ಕುರಿತು ಮುಖ್ಯ ಮಾಹಿತಿ

RBI ರಜೆ ಕ್ಯಾಲೆಂಡರ್ ಪ್ರಕಾರ, ಎಲ್ಲಾ ಬ್ಯಾಂಕುಗಳು ಎಲ್ಲ ರಾಜ್ಯಗಳಲ್ಲಿ ಒಂದೇ ದಿನ ಮುಚ್ಚಿರುವುದಿಲ್ಲ. ಹಬ್ಬದ ಆಚರಣೆಗಳು ರಾಜ್ಯಾನುಸಾರವಾಗಿ ಇರುವುದರಿಂದ, ಸ್ಥಳೀಯ ರಜೆಗಳು ವ್ಯತ್ಯಾಸವಾಗುತ್ತವೆ.

ಕೆಲವು ರಾಜ್ಯಗಳಲ್ಲಿ ಒಂದೇ ಹಬ್ಬವನ್ನು ಬೇರೆ ದಿನಗಳಲ್ಲಿ ಆಚರಿಸಲಾಗುತ್ತದೆ. ಉದಾ: ಬಕ್ರೀದ್ – ಜೂನ್ 6 ಮತ್ತು 7 ರಂದು. ಸ್ಥಳೀಯ ಹಬ್ಬಗಳಾದ ರೆಮ್ನಾ ಹಬ್ಬ, ಕಬೀರ್ ಜಯಂತಿ ಮತ್ತು ರಥಯಾತ್ರೆಗಳು ಪ್ರಾದೇಶಿಕವಾಗಿ ಮಾತ್ರ ಆಚರಿಸಬಹುದಾದ ಹಬ್ಬಗಳಾಗಿವೆ.

ಬ್ಯಾಂಕ್ ಮುಚ್ಚಿದ್ದರೂ ಲಭ್ಯವಿರುವ ಸೇವೆಗಳು

ಬ್ಯಾಂಕುಗಳು ರಜೆ ದಿನ ಮುಚ್ಚಲ್ಪಟ್ಟರೂ, ಗ್ರಾಹಕರು ನಿರಾಳರಾಗಬಹುದು. ಬಹುತೇಕ ಬ್ಯಾಂಕುಗಳು ಈ ಕೆಳಗಿನ ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ಮೂಲಕ ಹಣಕಾಸು ವಹಿವಾಟುಗಳನ್ನು ಮುಂದುವರಿಸುತ್ತವೆ:

  • ಫಂಡ್ ಟ್ರಾನ್ಸ್ಫರ್ (NEFT, RTGS, IMPS, UPI)
  • ಮೊಬೈಲ್ ಬ್ಯಾಂಕಿಂಗ್ ಆಪ್‌ಗಳಲ್ಲಿ ಲಭ್ಯವಿರುವ ಸೇವೆಗಳು
  • ಖಾತಾ ಶಿಲ್ಕು ಪರಿಶೀಲನೆ, ಪಾಸ್‌ಬುಕ್ ಡೌನ್‌ಲೋಡ್
  • ಡಿಜಿಟಲ್ ಪೇಮೆಂಟ್‌ಗಳು (ಬಿಲ್ ಪೇಮೆಂಟ್, ರಿಚಾರ್ಜ್, ಇತರೆ)
  • ATM ಸೇವೆಗಳು – ನಗದು ಬಿಡುಗಡೆ, ಖಾತಾ ಮಾಹಿತಿ, ಪಿನ್ ಮರುಹೊಂದಿಕೆ

Home Loan Low Interest Banks- ಕಡಿಮೆ ಬಡ್ಡಿಗೆ ಸಾಲ | ಯಾವ ಬ್ಯಾಂಕ್ ಉತ್ತಮ? | ಟಾಪ್ 10 ಬ್ಯಾಂಕುಗಳ ಪಟ್ಟಿ ಇಲ್ಲಿದೆ…

ಗ್ರಾಹಕರಿಗೆ ಒಂದಷ್ಟು ಸಲಹೆಗಳು
  • ಹಬ್ಬದ ಒಂದು ದಿನ ಮುಂಚಿತವಾಗಿ ಬ್ಯಾಂಕ್ ಭೇಟಿ ನೀಡಿ. ಅಗತ್ಯವಿದ್ದರೆ ಡ್ರಾಫ್ಟ್, ಚೆಕ್, ನಗದು ಮುಂಗಡವಾಗಿ ತೆಗೆಯಿರಿ.
  • ಮೊಬೈಲ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್‌ನ್ನು ಸುರಕ್ಷಿತವಾಗಿ ಬಳಸುವುದು ಗೊತ್ತಿಲ್ಲದಿದ್ದರೆ, ಬ್ಯಾಂಕ್ ಸಿಬ್ಬಂದಿಯಿಂದ ಸಹಾಯ ಪಡೆದುಕೊಳ್ಳಿ.
  • ಬ್ಯಾಂಕ್ ನೋಟಿಸ್‌ಬೋರ್ಡ್ ಅಥವಾ ಅಧಿಕೃತ ವೆಬ್‌ಸೈಟ್ ಪರಿಶೀಲಿಸಿ, ಅದರಲ್ಲಿ ನಿಮ್ಮ ನಗರಕ್ಕೆ ಸಂಬಂಧಪಟ್ಟ ರಜೆ ಮಾಹಿತಿ ನೀಡಲಾಗಿರುತ್ತದೆ.
  • ಬ್ಯಾಂಕ್ ಸಂಪರ್ಕ ಸಂಖ್ಯೆ/ಕಸ್ಟಮರ್ ಕೇರ್ ನಂಬರ್ ನೋಟ್ ಮಾಡಿಟ್ಟುಕೊಳ್ಳಿ, ತುರ್ತು ಸಂದರ್ಭದಲ್ಲಿ ಉಪಯೋಗಕ್ಕೆ ಬರುತ್ತದೆ.

ಜೂನ್ ತಿಂಗಳಲ್ಲಿ ದೇಶದಾದ್ಯಂತ ಒಟ್ಟು 12 ದಿನಗಳು ಬ್ಯಾಂಕ್ ರಜೆಗಳು ಇರುತ್ತವೆ. ಇದರಲ್ಲಿ ಸ್ಥಳೀಯ ಹಬ್ಬಗಳು, ವಾರಾಂತ್ಯ ರಜೆಗಳು ಸೇರಿವೆ. ಗ್ರಾಹಕರು ಈ ಮಾಹಿತಿ ಆಧರಿಸಿ ತಮ್ಮ ಹಣಕಾಸು ಯೋಜನೆಗಳನ್ನು ರೂಪಿಸಿಕೊಳ್ಳುವುದು ಉತ್ತಮ.

ಆನ್‌ಲೈನ್ ಬ್ಯಾಂಕಿಂಗ್ ಮೂಲಕ ಬಹುತೇಕ ಸೇವೆಗಳು ಲಭ್ಯವಿರುವುದರಿಂದ ತಲೆಬಿಸಿ ಮಾಡಿಕೊಳ್ಳುವ ಅಗತ್ಯವಿಲ್ಲ. ವ್ಯವಸ್ಥಿತ ಯೋಜನೆಯೊಂದಿಗೆ, ಯಾವುದೇ ತೊಂದರೆಯಿಲ್ಲದೆ ನಿಮ್ಮ ಬ್ಯಾಂಕಿಂಗ್ ಕೆಲಸಗಳನ್ನು ನಿರ್ವಹಿಸಬಹುದು.

Vidyadhan Scholarship 2025- ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ 75.000 ರೂ. ವರೆಗೂ ಆರ್ಥಿಕ ನೆರವು | ಕರ್ನಾಟಕ ವಿದ್ಯಾಧನ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ


Spread the love
error: Content is protected !!