ನಿರಂತರ ಆದಾಯ ತರುವ ಬಿದಿರು ಕೃಷಿ Bamboo Farming Constant income

Spread the love

Bamboo Farming Constant income : ಬಿದಿರು ಕೃಷಿ ರೈತರಿಗೆ ಆದಾಯ ತರುವ ಜೊತೆಗೆ ಅಳಿವಿನಂಚಿನಲ್ಲಿರುವ ಗುಡಿ ಕೈಗಾರಿಕೆ ಮತ್ತು ಬುಡಕಟ್ಟು ಜನಾಂಗದ ಆರ್ಥಿಕ ಸ್ಥಿತಿ ಸುಧಾರಿಸುವಂತಹ ಲಾಭದಾಯಕ ಕೃಷಿ. ಆದರೆ ಬಿದಿರು ಕೃಷಿ ಮತ್ತು ಸಂರಕ್ಷಣೆಗೆ ಕಟ್ಟುನಿಟ್ಟಿನ ನಿಯಮಗಳಿರುವ ಹಿನ್ನಲೆಯಲ್ಲಿ ಹೆಚ್ಚಿನ ಬಳಕೆಗೆ ಸಿಗುತ್ತಿರಲಿಲ್ಲ.

WhatsApp Group Join Now
Telegram Group Join Now

ಹೀಗಾಗಿ ಕೇಂದ್ರ ಸರ್ಕಾರ ಬಿದಿರಿಗಿದ್ದ ಸಂರಕ್ಷಣೆ ನಿಯಮಗಳನ್ನು ಸಡಿಲಿಸುವ ಮೂಲಕ, ಅರಣ್ಯೇತರ ಪ್ರದೇಶಗಳಲ್ಲಿ ಬೆಳೆದ ಬಿದಿರಿನ ಮಾರಾಟಕ್ಕೆ ಅನುಕೂಲ ಕಲ್ಪಿಸಿದೆ. ಪರಿಸರ ಸಂರಕ್ಷಣೆ ಮತ್ತು ನೈತಿಕ ಸಂಪತ್ತಿನ ಸದ್ಭಳಕೆ ಮಾಡುವ ಉದ್ಧೇಶದಿಂದ ರೈತರ ಆದಾಯ ಹೆಚ್ಚುಗೊಳಿಸುವ ಸಂಕಲ್ಪವಿಟ್ಟುಕೊ೦ಡು ಸರ್ಕಾರ ಕಾರ್ಯಪ್ರವೃತ್ತವಾಗಿದೆ.

ಅರಣ್ಯೇತರ ಪ್ರದೇಶಗಳಲ್ಲಿ ಬೆಳೆದ ಬಿದಿರನ್ನು ಕಡಿದು ಸಾಗಣೆ ಮಾಡಲು ಅನುಕೂಲವಾಗುವಂತೆ ಅರಣ್ಯ ಕಾಯ್ದೆಗೆ ತಿದ್ದುಪಡಿ ತಂದಿದೆ. ಈ ಕುರಿತು ಈಗಾಗಲೇ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು. ಹಾಗೆಯೇ 1927ರ ಅರಣ್ಯ ಕಾಯ್ದೆ ಜಾರಿಗೆ ಬಿದಿರಿನ ಕುರಿತು ಮಹತ್ತರ ತಿದ್ದುಪಡಿಗೆ ಒಳಗೊಂಡ ಭಾರತೀಯ ಅರಣ್ಯ ಮಸೂದೆ 2017ಕ್ಕೆ ಡಿಸೆಂಬರ್ 20ರಂದು ಲೋಕಸಭೆ ಅನುಮೋದನೆ ನೀಡಿದೆ.

ಆಧಾರ್ ಕಾರ್ಡ್ ಜೂನ್ 14ರ ನಂತರ ನಿಷ್ಕ್ರಿಯವಾಗುತ್ತಾ? ಏನಿದು ಹೊಸ ವದಂತಿ? ಇಲ್ಲಿದೆ ಯುಐಡಿಎಐ ಕೊಟ್ಟ ಮಾಹಿತಿ Aadhaar Update Online Process

ಬಿದಿರು ಕೃಷಿ ಹೇಗೆ?

ಬಿದಿರು ಕೃಷಿ ಸುಲಭ ಮತ್ತು ಲಾಭದಾಯಕ. ಗದ್ದೆಯ ಬದು, ಇಲ್ಲವೇ ತೋಟದ ಅಕ್ಕಪಕ್ಕ, ಖುಷ್ಕಿ ಜಾಗಗಳಲ್ಲೂ ಬೆಳೆಯಬಹುದು. ಮತ್ತೆ ವಿಶೇಷ ಆರೈಕೆ ಬೇಕಿಲ್ಲ. ಹನಿ ನೀರಾವರಿಯ ವ್ಯವಸ್ಥೆ ಮಾಡಿದರೆ ಮುಖ್ಯ ಬೆಳೆಯಾಗಿಯೇ ಬಿದಿರನ್ನು ಬೆಳೆಯಬಹುದು. ಬಿದಿರು ಮಣ್ಣಿನ ಸವಕಳಿ ತಪ್ಪಿಸುವುದಲ್ಲದೆ ನೀರಿನ ಇಂಗಿಸುವಿಕೆಗೂ ಅನುಕೂಲವಾಗಿದೆ. ಬಿದಿರಿನಲ್ಲಿ ಬರ್ಮಾ, ಭೀಮಾ, ಶಮೆ, ಡೌಗಾ, ಮಾರಿಹಾಳ ಸೇರಿ ಸುಮಾರು 150ಕ್ಕೂ ಹೆಚ್ಚು ತಳಿಗಳಿವೆ.

UNIDO (United Nations Industrial Development organisation) ವರದಿ ಪ್ರಕಾರ, ಮುಂದಿನ 10 ವರ್ಷಗಳಲ್ಲಿ ಕೇವಲ ಈಶಾನ್ಯ ಭಾಗದ ಪ್ರದೇಶಗಳಲ್ಲಿ ಸುಮಾರು 5000 ಕೋಟಿ ರೂಪಾಯಿ ವಹಿವಾಟು ನಡೆಸುವ ಸಾಮರ್ಥ್ಯ ಬಿದಿರು ಆಧಾರಿತ ಉದ್ಯಮಕ್ಕಿದೆ. ಕಾನೂನು ಸಡಿಲಗೊಂಡಿರುವುದರಿ೦ದ ಈಗಾಗಲೇ ಬೆಳೆಯಲು ಯೋಗ್ಯವಿದ್ದೂ ಪಾಳು ಬಿಟ್ಟಿದ್ದ ಅಂದಾಜು 1.26 ಕೋಟಿ ಹೆಕ್ಟೇರ್ ಪ್ರದೇಶದಲ್ಲಿ ಬಿದಿರು ಕೃಷಿ ಮಾಡಬಹುದು ಎಂದು ಕೇಂದ್ರ ಪರಿಸರ ಸಚಿವಾಲಯ ವರದಿಯೊಂದು ತಿಳಿಸಿದೆ.

ಅರಣ್ಯ ಕಾಯ್ದೆ 1927 ಸೆಕ್ಷನ್ 2(7)ಕ್ಕೆ ತಿದ್ದುಪಡಿ ತರಲಾಗಿದ್ದು, ಇದರ ಪ್ರಕಾರ ಅರಣ್ಯೇತರ ಪ್ರದೇಶದಲ್ಲಿ ಬೆಳೆದ ಬಿದಿರು ಮರ ಅಲ್ಲ. ಹಾಗಾಗಿ ಕಟಾವು, ಸಾಗಣೆಗೆ ಅರಣ್ಯ ಇಲಾಖೆಯ ಅನುಮತಿ ಪಡೆಯುವ ಅಗತ್ಯವಿಲ್ಲ. ಆದರೆ, ಅರಣ್ಯದಲ್ಲಿ ಬೆಳೆದ ಬಿದಿರು ಮಾತ್ರ ಮರವಾಗಿಯೇ ಪರಿಗಣನೆ ಆಗಲಿದ್ದು, ಇದನ್ನು ಕಡಿಯುವುದು ಅಪರಾಧವಾಗಿದೆ.

ಬಿದಿರಿನಲ್ಲಿ ಅಂದಾಜು 150 ಪ್ರಭೇದಗಳು ನೈಸರ್ಗಿಕವಾಗಿ ಭಾರತದಲ್ಲಿ ಕಂಡು ಬರುತ್ತವೆ. ಅದರಲ್ಲಿ ಬಹುಪಯೋಗಿ ಬಿದಿರುಗಳ ಪ್ರಭೇದಗಳಲ್ಲಿ ಮುಳ್ಳು ಬಿದಿರು, ಗಂಡು ಬಿದಿರು, ಹೆಬ್ಬಿದಿರು, ಸೀಮೆ ಬಿದಿರು, ಬರ್ಮಾ ಬಿದಿರು, ಅಸ್ಪರ್ ಬಿದಿರು, ಸಿಹಿ ಬಿದಿರು, ರಾಗಿ ಬಿದಿರು, ಗಡುವಾ ಬಿದಿರು, ಟುಲ್ಡ ಬಿದಿರು ಹಾಗೂ ಭೀಮಾ ಬಿದಿರು ಪ್ರಮುಖವು.

Bamboo Farming Constant income

ಅರ್ಜಿದಾರರಿಗೆ ಹೊಸ ರೇಷನ್ ಕಾರ್ಡ್ ಯಾವಾಗ ಸಿಗುತ್ತದೆ? ಇಲ್ಲಿದೆ ಮಹತ್ವದ ಮಾಹಿತಿ… New APL BPL Ration Card Application

ಆರ್ಥಿಕವಾಗಿ ಲಾಭದಾಯಕ ಬಿದಿರು

ಈ ಪೈಕಿ ಬರ್ಮ ಬಿದಿರು ಸ್ಥಳೀಯ ಬಿದಿರಿಗಿಂತ ವಿಭಿನ್ನವಾಗಿದೆ. ಇದನ್ನು ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ 1913ರಲ್ಲಿ ಕಂಡುಕೊಳ್ಳಲಾಯಿತು. ಈ ಬಿದಿರು ಮುಳ್ಳುರಹಿತವಾಗಿದ್ದು ನೇರವಾಗಿ ಬೆಳೆಯುವ ಗುಣಗಳನ್ನು ಹೊಂದಿರುವುದರಿ೦ದ ಉದ್ಯಮಶೀಲರಲ್ಲಿ ಆಸಕ್ತಿಯನ್ನು ಹುಟ್ಟಿಸಿದೆ. ಸದರಿ ಬಿದಿರನ್ನು ಸಾಂಪ್ರದಾಯಿಕವಾಗಿ ಏಣಿ, ಬುಟ್ಟಿ, ನೇಯ್ಗೆ ಇತ್ಯಾದಿಗಳಲ್ಲಿ ಬಳಸಲಾಗುತ್ತಿದೆ.

ಬರ್ಮ ಬಿದಿರು 13-30 ಸೆಂ. ಮೀ. ಸುತ್ತಳತೆ ಹೊಂದಿದ್ದು ಸುಮಾರು 20 ಮೀಟರ್ ಎತ್ತರದವರೆಗೆ ಬೆಳೆಯುತ್ತದೆ. ಬರ್ಮ ಬಿದಿರನ್ನು ಹಲವು ವಿಧದ ಮಣ್ಣಿನಲ್ಲಿ ಬೆಳೆಸಬಹುದು. ಮರಳು ಮಿಶ್ರಿತ ನೀರು ಬಸಿದು ಹೋಗುವ ಭೂಮಿಯಲ್ಲಿ ಚೆನ್ನಾಗಿ ಬೆಳೆಯುತ್ತದೆ. ನೆಡುವ ಗಿಡಗಳ ಅಳತೆಯ ಆಧಾರದ ಮೇಲೆ 45 ಸೆಂ.ಮೀ ಘಿ 45 ಸೆಂ.ಮೀ ಘಿ 45 ಸೆಂ.ಮೀ ಗಾತ್ರದ ಗುಂಡಿಗಳನ್ನು ತೆಗೆಯಬೇಕು. ಪ್ರತಿ ಗುಂಡಿಗೆ 5 ಕಿ.ಗ್ರಾಂ ಎರೆಹುಳು ಗೊಬ್ಬರ ಹಾಕಬೇಕು.

ಗೆದ್ದಲು ಬಾಧಿತ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆಯಾಗಿ ರಾಸಾಯನಿಕಗಳನ್ನು ಹಾಕಬೇಕು. ನರ್ಸರಿಯಲ್ಲಿ ಮೊದಲೇ ಸಿದ್ಧಪಡಿಸಿದ ಗುಂಡಿಯಲ್ಲಿ 25-50 ಸೆಂ.ಮೀ ಎತ್ತರಕ್ಕೆ ಬೆಳೆದ ಗಿಡಗಳನ್ನು ನಾಟಿ ಮಾಡಬೇಕು. ಮೊದಲನೆಯ ಎರಡು ವರ್ಷಗಳಲ್ಲಿ ಅಂತರ ಬೆಳೆಗಳಾಗಿ ಶುಂಠಿ, ಅರಿಶಿಣ ಅಥವಾ ಬೇರೆ ವಾರ್ಷಿಕ ಬೆಳೆಗಳನ್ನು ಬೆಳೆಯಬಹುದಾಗಿದೆ.

ಗಿಡ ನೆಟ್ಟ ನಾಲ್ಕನೇ ವರ್ಷದ ನಂತರ ಪ್ರತಿ ಹಿಂಡಿನಿAದ 2 ಗಳವನ್ನು 40 ವರ್ಷಗಳವರೆಗೆ ಪಡೆಯಬಹುದಾಗಿದೆ. ಒಂದು ಎಕರೆಗೆ 110 ಹಿಂಡುಗಳಿದ್ದಲ್ಲಿ ಸರಾಸರಿ 880 ಗಳವನ್ನು ಪ್ರತಿ ವರ್ಷ ಪಡೆಯಬಹುದು. 20 ಅಡಿ ಉದ್ದದ ಒಂದು ಗಳದ ಬೆಲೆ 80 ರಿಂದ 120 ರೂಪಾಯಿ ಇರುತ್ತದೆ. ಬಿದಿರು ನೆಟ್ಟ ನಾಲ್ಕು ವರ್ಷಗಳ ನಂತರ ಪ್ರತಿ ಹೆಕ್ಟೇರಿಗೆ ಮುಂದಿನ 20 ವರ್ಷಗಳ ವರೆಗೆ 1,20,000 ರೂಪಾಯಿಯಿಂದ ರೂ. 2,25,000 ರೂಪಾಯಿ ವರೆಗೆ ಸರಾಸರಿ ಆದಾಯ ಪಡೆಯಬಹುದಾಗಿದೆ.

ರೈತರಿಗೆ ಸಿಗುವ ತೋಟಗಾರಿಕೆ ಇಲಾಖೆ ಸಬ್ಸಿಡಿ ಯೋಜನೆಗಳು Horticulture Department Subsidy Schemes


Spread the love
WhatsApp Group Join Now
Telegram Group Join Now
error: Content is protected !!