Unified Pension Scheme- ಏಪ್ರಿಲ್‌ನಿಂದ ಸರ್ಕಾರಿ ನೌಕರರಿಗೆ ಭರ್ಜರಿ ಪಿಂಚಣಿ | ಯಾರಿಗೆ ಎಷ್ಟು ಸಿಗಲಿದೆ ಪೆನ್ಶನ್‌?

2025ರ ಏಪ್ರಿಲ್ 1ರಿಂದ ಕೇಂದ್ರ ಸರ್ಕಾರವು ‘ಏಕೀಕೃತ ಪಿಂಚಣಿ ಯೋಜನೆ’ಯನ್ನು (Unified Pension Scheme – UPS) ಜಾರಿಗೆ ತಂದಿದ್ದು, ಇದು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ವ್ಯಾಪ್ತಿಯಲ್ಲಿರುವ ಸರ್ಕಾರಿ ನೌಕರರಿಗೆ (Govt Employees) ಅನ್ವಯವಾಗಲಿದೆ. ಈ ಯೋಜನೆಯಡಿ, ಸರ್ಕಾರಿ ನೌಕರರಿಗೆ ನಿವೃತ್ತಿ ಬಳಿಕ ಅನೇಕ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಸದ್ಯ ದೇಶಾದ್ಯಂತ 50 ಲಕ್ಷ ಕೇಂದ್ರ ಸರಕಾರಿ ನೌಕರರಿದ್ದು 23 ಲಕ್ಷ ಕೇಂದ್ರ ಸರಕಾರಿ ನೌಕರರಿಗೆ ಯುಪಿಎಸ್ ಯೋಜನೆಯಿಂದ ಅನುಕೂಲವಾಗಲಿದೆ. ಯುಪಿಎಸ್ ಯೋಜನೆಗೆ ಯಾರು ಅರ್ಹರು, ಯಾವೆಲ್ಲ … Read more

New Traffic Rules- ದಂಡ ಕಟ್ಟದಿದ್ದರೆ ಡ್ರೈವಿಂಗ್ ಲೈಸೆನ್ಸ್ ರದ್ದು | ಟ್ರಾಫಿಕ್ ನಿಯಮ ಉಲ್ಲಂಘನೆಗೆ ಕಠಿಣ ಕ್ರಮ

ಸಂಚಾರ ನಿಯಮ ಉಲ್ಲಂಘನೆಗೆ (Traffic Violation) ಗಂಭೀರ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ನಿಯಮ ಉಲ್ಲಂಘನೆ ಮಾಡಿದವರಿಗೆ ವಿಧಿಸಲಾಗುವ ದಂಡವನ್ನು (E-challan) 90 ದಿನಗಳೊಳಗೆ ಪಾವತಿಸದೇ ಇದ್ದರೆ, ಅವರ ಚಾಲನಾ ಪರವಾನಗಿಯನ್ನು (Driving License -DL) ರದ್ದುಪಡಿಸಲು ಹೊಸ ನಿಯಮ ರೂಪಿಸಲಾಗುತ್ತಿದೆ. ಭಾರತದಲ್ಲಿ ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಸಂಚಾರ ನಿಯಮಗಳ ಪಾಲನೆಯಲ್ಲಿ ಆಗುತ್ತಿರುವ ನಿರ್ಲಕ್ಷ್ಯವೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಈ ಹೊಸ ನಿಯಮ ಅನುಷ್ಠಾನಗೊಂಡರೆ ಸಂಚಾರ ನಿಯಮ ಉಲ್ಲಂಘನೆ ಕಡಿಮೆಯಾಗಬಹುದು ಮತ್ತು ರಸ್ತೆ … Read more

BPL Ration Card Update- ಹೊಸ ರೇಷನ್ ಕಾರ್ಡ್ ಅರ್ಜಿ | ಆಹಾರ ಇಲಾಖೆಯ ಮಹತ್ವದ ಮಾಹಿತಿ ಇಲ್ಲಿದೆ…

ರಾಜ್ಯಾದ್ಯಂತ ಹೊಸ ರೇಷನ್ ಕಾರ್ಡ್’ಗೆ ಅರ್ಜಿ ಸಲ್ಲಿಸಲು ಕಾತರದಿಂದ ಕಾಯುತ್ತ ಕೂತಿರುವವರಿಗೆ ರಾಜ್ಯ ಸರ್ಕಾರ ಶಾಕಿಂಗ್ ನ್ಯೂಸ್ ನೀಡಿದೆ. ಬಿಪಿಎಲ್ ಸೇರಿದಂತೆ ಹೊಸ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆಯಾಗಿದ್ದು, ಸದ್ಯಕ್ಕೆ ಹೊಸ ಪಡಿತರ ಚೀಟಿ ಹಂಚಿಕೆ ಮಾಡಲ್ಲ ಎಂದು ಆಹಾರ ಇಲಾಖೆ ಹೇಳಿದೆ. ರಾಜ್ಯದಲ್ಲಿ ಬಿಪಿಎಲ್ (Below Poverty Line) ಪಡಿತರ ಚೀಟಿಗಾಗಿ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತಿಲ್ಲ. ಕಳೆದ ಎರಡು ವರ್ಷಗಳಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ಆನ್‌ಲೈನ್ ಪೋರ್ಟಲ್ ಪುನರಾರಂಭವಾಗದೆ ಇರುವುದರಿಂದ, ಸಾವಿರಾರು ಅರ್ಹ ಕುಟುಂಬಗಳು … Read more

Karnataka SSLC Result 2025- ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ: ಪ್ರಮುಖ ಮಾಹಿತಿ ಇಲ್ಲಿದೆ…

2025ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಗಳು ಯಶಸ್ವಿಯಾಗಿ ಮುಗಿದಿವೆ. ಇದೀಗ ವಿದ್ಯಾರ್ಥಿಗಳು ತಮ್ಮ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ. ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯಮಾಪನ ಮಂಡಳಿ (KSEAB) ಈ ವರ್ಷ ಮೌಲ್ಯಮಾಪನ ಕಾರ್ಯವನ್ನು ಹಿಂದಿನ ವರ್ಷಕ್ಕಿಂತ ಕೊಂಚ ಬೇಗ ನಡೆಸಲಿದ್ದು; ಶೀಘ್ರದಲ್ಲೇ ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶಗಳನ್ನು 2025ರ ಮೇ ಮೊದಲ ವಾರದಲ್ಲಿ ಪ್ರಕಟಿಸಲಾಗಬಹುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಕಳೆದ ವರ್ಷ 2024ರಲ್ಲಿ ಫಲಿತಾಂಶವನ್ನು ಮೇ 9ರಂದು ಬೆಳಿಗ್ಗೆ 10:40 … Read more

Karnataka April Rain- ಏಪ್ರಿಲ್ 1ರಿಂದ ರಾಜ್ಯಾದ್ಯಂತ ಮಳೆ | ಹವಾಮಾನ ಇಲಾಖೆ ಮುನ್ಸೂಚನೆ

ಯುಗಾದಿಯ ಬೆನ್ನಲ್ಲೇ ರಾಜ್ಯಾದ್ಯಂತ ಮಳೆಯಾಗಲಿದ್ದು; ಕಾದ ಕಾವಲಿಯಂತಾಗಿರುವ ಭೂಮಿಗೆ ತಂಪೆರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ… ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ಮೈಸೂರು, ಚಾಮರಾಜನಗರ, ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಕಲಬುರಗಿಯಲ್ಲಿ ಏಪ್ರಿಲ್ 1ರಿಂದ 4ರ ವರೆಗೆ ಗುಡುಗು- ಮಿಂಚು ಸಹಿತ ಆಲಿಕಲ್ಲು ಮಳೆಯಾಗುವ ಸಂಭವವಿದೆ. ಏಪ್ರಿಲ್ 2ರಂದು ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ ಹಾಗೀ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮತ್ತು ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಹಗುರ … Read more

Bagair Hukum Arji- ಬಗರ್ ಹುಕುಂ ಅರ್ಜಿ ವಿಲೇವಾರಿಗೆ ಆರು ತಿಂಗಳ ಗಡುವು | ತಹಸೀಲ್ದಾರ್‌ಗಳಿಗೆ ಕಂದಾಯ ಸಚಿವರ ಚಾಟಿ

ಮುಂದಿನ ಆರು ತಿಂಗಳ ಒಳಗೆ ಬಗರ್‌ಹುಕುಂ (Bagair Hukum) ಅರ್ಜಿಗಳ ವಿಲೇವಾರಿ ಮಾಡಿ ಮುಗಿಸಿ ಭೂ ಮಂಜೂರಾತಿಗೆ ಅನುಕೂಲ ಮಾಡಿಕೊಡಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ರಾಜ್ಯದ ತಹಸೀಲ್ದಾರರಿಗೆ ತಾಕೀತು ಮಾಡಿದ್ದಾರೆ… ರಾಜ್ಯದಲ್ಲಿ ಬಗರ್‌ಹುಕುಂ ಅರ್ಜಿಗಳನ್ನು ವಿಲೇವಾರಿ ಮಾಡುವ ಪ್ರಕ್ರಿಯೆಗೆ ವೇಗದ ಅಗತ್ಯವಿದ್ದು, ಮುಂದಿನ ಆರು ತಿಂಗಳೊಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಹಸೀಲ್ದಾರರಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ತ್ವರಿತ ಅರ್ಜಿ ವಿಲೇವಾರಿಗೆ ಕಟ್ಟುನಿಟ್ಟಿನ ಆದೇಶ ರಾಜ್ಯದಲ್ಲಿ … Read more

KASS Free Health Care- ಇನ್ಮುಂದೆ ಸರ್ಕಾರಿ ನೌಕರರಿಗೆ ಉಚಿತ ಚಿಕಿತ್ಸೆ | ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ಸಂಪುಟ ಸಭೆ ನಿರ್ಣಯ

ಕಡೆಗೂ ರಾಜ್ಯ ಸರ್ಕಾರಿ ನೌಕರರ ಮಹತ್ವಾಕಾಂಕ್ಷಿ ಯೋಜನೆಯಾದ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ಯನ್ನು (Karnataka Arogya Sanjeevini Scheme KASS) ಜಾರಿಗೆ ತರಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಣಯಿಸಿದೆ… ರಾಜ್ಯ ಸರಕಾರಿ ನೌಕರರು (Govt Employees) ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಸೌಲಭ್ಯ ಒದಗಿಸುವ ಸದರಿ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ಯು 2021-22ನೇ ಸಾಲಿನ ಬಜೆಟ್’ನಲ್ಲಿ ಘೋಷಣೆಯಾಗಿ, 2021ರ ಜುಲೈ 22 ರಂದು ಕ್ಯಾಬಿನೆಟ್ ಅನುಮೋದನೆ ಪಡೆಯಲಾಗಿತ್ತು. ಆದರೆ, ಅನೇಕ … Read more

East Monsoon Rain- ಕರ್ನಾಟಕದ ಈ ಜಿಲ್ಲೆಗಳಲ್ಲಿ ಒಂದು ವಾರ ಮಳೆ | ರಾಜ್ಯಾದ್ಯಂತ ಪೂರ್ವ ಮುಂಗಾರು ಮಳೆ ಅಬ್ಬರ

ರಾಜ್ಯದಲ್ಲಿ ಈ ವರ್ಷ ಮಾರ್ಚ್’ನಿಂದ ಪೂರ್ವ ಮುಂಗಾರು ಮಳೆ ಆರಂಭಗೊ೦ಡಿದೆ. ರಾಜ್ಯದಲ್ಲಿ ವಾಡಿಕೆ ಪ್ರಕಾರ ಸರಾಸರಿ 8.8 ರಷ್ಟು ಮಳೆಯಾಗಬೇಕು. ಆದರೆ, ಈ ಬಾರಿ 14.8 ಸೆಂ.ಮೀ.ನಷ್ಟು ಮಳೆಯಾಗುವ ಮೂಲಕ ವಾಡಿಕೆ ಪ್ರಮಾಣಕ್ಕಿಂತ ಶೇ.69 ರಷ್ಟು ಹೆಚ್ಚಿನ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈ ಪೈಕಿ ಕರಾವಳಿಯಲ್ಲಿ ಶೇ.49ರಷ್ಟು ಮಳೆ ಹೆಚ್ಚಾಗಿದ್ದರೆ, ಉತ್ತರ ಒಳನಾಡಿನಲ್ಲಿ ಕೇವಲ ಶೇ.5 ರಷ್ಟು ಮಳೆ ಸುರಿದಿದೆ. ದಕ್ಷಿಣ ಒಳನಾಡಿನಲ್ಲಿ ಶೇ.107ರಷ್ಟು ಮಳೆ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು … Read more

RRB ALP Recruitment 2025- 9.970 ರೈಲ್ವೆ ಅಸಿಸ್ಟೆಂಟ್ ಲೋಕೋ ಪೈಲಟ್ ಹುದ್ದೆಗಳ ನೇಮಕಾತಿ | 10ನೇ, ಐಟಿಐ, ಡಿಪ್ಲೋಮಾ ಅಭ್ಯರ್ಥಿಗಳಿಗೆ ಅವಕಾಶ

ರೈಲ್ವೆ ನೇಮಕಾತಿ ಮಂಡಳಿಯು (Railway Recruitment Board- RRB) ಮತ್ತೊಂದು ಬೃಹತ್ ನೇಮಕಾತಿ (Railway Recruitment) ಅಧಿಸೂಚನೆಯನ್ನು ಹೊರಡಿಸಿದೆ. ಕಳೆದ ಮಾರ್ಚ್ 19ರಂದು ಪ್ರಕಟಣೆ ಹೊರಡಿಸಿರುವ ಆರ್‌ಆರ್‌ಬಿ, ಒಟ್ಟು 9,970 ಅಸಿಸ್ಟೆಂಟ್ ಲೋಕೋ ಪೈಲಟ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದಾಗಿ ತಿಳಿಸಿದೆ. ದೇಶದ 16 ರೈಲ್ವೆ ವಿಭಾಗಗಳಲ್ಲಿ ಈ ನೇಮಕಾತಿ ನಡೆಯಲಿದೆ. ಕೋಲ್ಕತ ಮೆಟ್ರೋ ರೈಲಿಗಾಗಿ 255 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದ್ದು; ಒಟ್ಟು ಹುದ್ದೆಗಳ ಸಂಖ್ಯೆ 10,195ಕ್ಕೆ ತಲುಪಲಿದೆ. ರಾಜ್ಯದ ನೈಋತ್ಯ ರೈಲ್ವೆ ವಿಭಾಗದಲ್ಲಿ ಬರೋಬ್ಬರಿ 796 ಹುದ್ದೆಗಳು … Read more

Pan Card for a Minor- 18 ವಯಸ್ಸಿನ ಒಳಗಿನ ಮಕ್ಕಳಿಗೂ ಇನ್ಮುಂದೆ ಪ್ಯಾನ್ ಕಾರ್ಡ್ ಕಡ್ಡಾಯ | ಇದರ ಪ್ರಯೋಜನವೇನು? ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ Pan Card for a Minor

ಯಾವುದೇ ಹಣಕಾಸು ವ್ಯವಹಾರಗಳನ್ನು (Finance Issues) ಮಾಡಲು ಪ್ರತಿಯೊಬ್ಬರಿಗೂ ಪ್ಯಾನ್ ಕಾರ್ಡ್ ಕಡ್ಡಾಯವಾಗಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಇನ್ನು ಮುಂದೆ 18 ವಯಸ್ಸಿನ ಒಳಗಿನ ಮಕ್ಕಳಿಗೂ ಕೂಡ ಹಣಕಾಸು ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಮಾಡಿದ್ದು, ಇದರ ಪ್ರಯೋಜನಗಳೇನು ಹಾಗೂ ಅರ್ಜಿ ಸಲ್ಲಿಸುವುದು ಹೇಗೆ? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ… ಅಪ್ರಾಪ್ತ ವಯಸ್ಸಿನವರಿಗೂ ಪಾನ್ ಕಾರ್ಡ್ ಭಾರತದಲ್ಲಿ ಎಲ್ಲಾ ತೆರಿಗೆದಾರರು (Tax Payers) ಪ್ರತಿಯೊಂದು ಹಣಕಾಸು ವ್ಯವಹಾರಗಳಿಗೆ 10 ಅಂಕಿಯ ಗುರುತಿನ ಸಂಖ್ಯೆ ಪ್ಯಾನ್ ಕಾರ್ಡ್ … Read more

error: Content is protected !!