ಪಿಯುಸಿ ಪಾಸಾದವರಿಗೆ 2,500 ಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಒಟ್ಟು ವೇತನ ₹10.4 ಲಕ್ಷ Agniveer Recruitment 2024

Spread the love

Agniveer Recruitment 2024 : ಭಾರತೀಯ ವಾಯುಪಡೆಯಲ್ಲಿ ಅಗ್ನಿಪಥ್ ಯೋಜನೆಯಡಿ (Agnipath Yojana) ನೇಮಕಾತಿ ಆರಂಭವಾಗಲಿದ್ದು, ಈ ಬಾರಿ ಬರೊಬ್ಬರಿ 2,500 ಹುದ್ದೆಗಳಿಗೆ ನೇಮಕ ನಡೆಯಲಿದೆ. ಅರ್ಹ ಅವಿವಾಹಿತ ಪುರುಷರು ಮತ್ತು ಮಹಿಳಾ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ವಾಯುಪಡೆ ಅವಕಾಶ ನೀಡಲಿದೆ.

WhatsApp Group Join Now
Telegram Group Join Now

ಭಾರತೀಯ ವಾಯುಪಡೆಯು (Indian Air Force) ವರ್ಷಕ್ಕೆ ಎರಡು ಬಾರಿ ಅಗ್ನಿವೀರರ ನೇಮಕಾತಿಗೆ (Agniveer Recruitment) ಅಧಿಸೂಚನೆ ಪ್ರಕಟಿಸುತ್ತದೆ. ಕಳೆದ ಜನವರಿಯಲ್ಲಿ ಮೊದಲನೇ ಅಧಿಸೂಚನೆ ಪ್ರಕಟಿಸಿ, ನೇಮಕಾತಿಗೆ ಚಾಲನೆ ನೀಡಲಾಗಿತ್ತು. ಇದೀಗ 2ನೇ ಅಧಿಸೂಚನೆ ಪ್ರಕಟಿಸಿದ್ದು; ಅರ್ಜಿ ಸಲ್ಲಿಕೆಯ ದಿನಾಂಕವನ್ನು ನಿಗದಿಪಡಿಸಿದೆ.

8,000+ ಕೇಂದ್ರ ಸರಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಭರ್ಜರಿ ಅವಕಾಶ Central Government Jobs

ಅರ್ಜಿ ಸಲ್ಲಿಸಲು ವಿದ್ಯಾರ್ಹತೆಗಳೇನು?
  • ಪಿಯುಸಿಯಲ್ಲಿ ವಿಜ್ಞಾನ ವಿಷಯದಲ್ಲಿ ಕನಿಷ್ಠ ಶೇಕಡಾ 50 ಅಂಕಗಳೊ೦ದಿಗೆ ತೇರ್ಗಡೆಯಾದವರು
  • ಮೂರು ವರ್ಷಗಳ ಎಂಜಿನಿಯರಿ೦ಗ್ ಡಿಪ್ಲೊಮಾ ಕೋರ್ಸ್ ಓದಿದವರು
  • ಎರಡು ವರ್ಷಗಳ ವೊಕೇಶನಲ್ ಜೊತೆಗೆ ನಾನ್ ವೊಕೇಶನಲ್ ಕೋರ್ಸ್ (ಫಿಸಿಕ್ಸ್ ಮ್ಯಾಕ್ಸ್) ಓದಿದವರು

…ಈ ಮೇಲಿನ ಯಾವುದೇ ಒಂದು ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಆದರೆ, ಅಭ್ಯರ್ಥಿಗಳು ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಕನಿಷ್ಠ ಶೇಕಡಾ 50 ಅಂಕಗಳೊ೦ದಿಗೆ ತೇರ್ಗಡೆಯಾಗಿರಬೇಕು. ಒಂದು ವೇಳೆ ಅಭ್ಯರ್ಥಿಗಳು ವಿಜ್ಞಾನ ಓದಿಲ್ಲವೆಂದರೆ ಪಿಯುಸಿ ಅಥವಾ ಎರಡು ವರ್ಷಗಳ ವೊಕೇಷನಲ್ ಕೋರ್ಸ್ ವ್ಯಾಸಂಗ ಮಾಡಿದ್ದರೂ ಅರ್ಜಿ ಸಲ್ಲಿಸುವ ಅವಕಾಶವಿದೆ.

ಉಚಿತ ಆರ್ಮಿ ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನ | ಎಸ್‌ಎಸ್‌ಎಎಲ್‌ಸಿ ಪಾಸಾಗಿದ್ರೆ ಅರ್ಜಿ ಸಲ್ಲಿಸಿ… free Army job Training 2024

ದೈಹಿಕ ಅರ್ಹತೆ ಮತ್ತು ವಯೋಮಿತಿ ವಿವರ

ದೈಹಿಕ ಅರ್ಹತೆ ನೋಡುವುದಾದರೆ ಪುರುಷ ಅಭ್ಯರ್ಥಿಗಳ ಕನಿಷ್ಠ ಎತ್ತರ 152.5 ಸೆಂಟಿ ಮೀಟರ್ ಹಾಗೂ ಎದೆಯ ಸುತ್ತಳತೆ 77 ಸೆಂಟಿ ಮೀಟರ್ ಇರಬೇಕು. ಮಹಿಳೆಯರು 152 ಸೆಂಟಿ ಮೀಟರ್ ಎತ್ತರವಿರಬೇಕು.

ಅಭ್ಯರ್ಥಿಗಳ ಗರಿಷ್ಠ ವಯೋಮಿತಿ ಯಾವುದೇ ಕಾರಣಕ್ಕೂ 21 ವರ್ಷ ಮೀರಿರಬಾರದು. 2004ರ ಜುಲೈ 3 ಮತ್ತು 2008ರ ಜನವರಿ 3ರ ನಡುವೆ ಜನಿಸಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಕರ್ನಾಟಕ ವಿದ್ಯಾಧನ್ : ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ 75,000 ರೂಪಾಯಿ ಆರ್ಥಿಕ ನೆರವು | ಜೂನ್ 30ರೊಳಗೇ ಅರ್ಜಿ ಹಾಕಿ Karnataka Vidyadhan Scholarship

ನೇಮಕ ಹೇಗಿರುತ್ತದೆ?

ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಮುಂಚಿತವಾಗಿಯೇ ಆನ್‌ಲೈನ್ ಪರೀಕ್ಷೆಯ ದಿನಾಂಕ ಮತ್ತು ಪರೀಕ್ಷಾ ಕೇಂದ್ರಗಳ ವಿವರಗಳನ್ನು ನೀಡಲಾಗುತ್ತದೆ. ಇದಕ್ಕಾಗಿ ಅಭ್ಯರ್ಥಿಗಳ ಇ-ಮೇಲ್ ಐಡಿಗೆ ಪ್ರವೇಶ ಪತ್ರಗಳನ್ನು ಕಳುಹಿಸಲಾಗುತ್ತದೆ. ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಪ್ರಶ್ನೆ ಪತ್ರಿಕೆಗಳಿರಲಿದ್ದು, ವಸ್ತುನಿಷ್ಠ ಮಾದರಿಯ ಪ್ರಶ್ನೆಗಳಿಗೆ ಅಭ್ಯರ್ಥಿಗಳು ಉತ್ತರಿಸಬೇಕು.

ಬಹುಮುಖ್ಯವಾಗಿ ವಿಜ್ಞಾನ ವಿಷಯಗಳಿಗೆ ಸಂಬ೦ಧಪಟ್ಟ೦ತೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅಂದರೆ, ಅಭ್ಯರ್ಥಿಗಳು ಅಧ್ಯಯನಕ್ಕೆ ದ್ವಿತೀಯ ಪಿಯುಸಿ ಸಿಬಿಎಸ್‌ಸಿ ಪಠ್ಯಕ್ರಮವನ್ನು ಅನುಸರಿಸಬೇಕು. ತಪ್ಪು ಉತ್ತರಗಳಿಗೆ 0.25 ನೆಗೆಟಿವ್ ಅಂಕಗಳು ಕೂಡ ಇರುತ್ತವೆ.

Agniveer Recruitment 2024
ಅರ್ಜಿ ಶುಲ್ಕದ ವಿವರ

ವಾಯುಪಡೆ ಅಗ್ನಿವೀರ್ ಹುದ್ದೆಗಳಿಗೆ ನೋಂದಣಿ ಮಾಡಿಕೊಳ್ಳಲು ಉಚಿತ ಅವಕಾಶ ನೀಡಲಾಗಿದೆ. ಆದರೆ, ಎಲ್ಲಾ ವರ್ಗದ ಅಭ್ಯರ್ಥಿಗಳೂ ಪರೀಕ್ಷಾ ಶುಲ್ಕವಾಗಿ 550 ರೂಪಾಯಿ ನಿಗದಿಪಡಿಸಲಾಗಿದೆ. ಒಮ್ಮೆ ಪಾವತಿಸಿದ ಶುಲ್ಕವನ್ನು ಮರಳಿ ಹಿಂಪಡೆಯಲಾಗುವುದಿಲ್ಲ. ಆನ್‌ಲೈನ್ ಮೂಲಕ ಶುಲ್ಕ ಪಾವತಿಸಬಹುದಾಗಿದೆ.

SSLC ಪಾಸಾದವರಿಗೆ 1,500 ಪೊಲೀಸ್ ಹುದ್ದೆಗಳಿಗೆ ಅರ್ಜಿ | ಯಾವೆಲ್ಲ ಜಿಲ್ಲೆಗಳಿಗೆ ನೇಮಕ ನಡೆಯಲಿದೆ? KSRP SRPC Constable Recruitment 2024

ವೇತನ ಹಾಗೂ ಸೇವಾನಿಧಿ ಮೊತ್ತದ ವಿವರ

ಅಗ್ನಿವೀರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದೊ೦ದು ವರ್ಷಕ್ಕೆ ಒಂದೊ೦ದು ರೀತಿಯ ವೇತನ ನಿಗದಿ ಮಾಡಲಾಗಿದೆ. ವೇತನದ ಜೊತೆಗೆ ಸರಕಾರದ ಸೇವಾನಿಧಿ ಸೇರಿ ನಾಲ್ಕು ವರ್ಷಕ್ಕೆ ಒಟ್ಟು 10.4 ಲಕ್ಷ ರೂಪಾಯಿ ಸಿಗಲಿದೆ. ವೇತನ ಹಾಗೂ ಸೇವಾನಿಧಿ ಮೊತ್ತದ ವಿವರ ಕೆಳಗಿನಂತಿದೆ:

ವೇತನದ ವಿವರ

  • 1ನೇ ವರ್ಷದ ಮಾಸಿಕ ವೇತನ 30,000 ರೂಪಾಯಿ
  • 2ನೇ ವರ್ಷದ ಮಾಸಿಕ ವೇತನ 33,000 ರೂಪಾಯಿ
  • 3ನೇ ವರ್ಷದ ಮಾಸಿಕ ವೇತನ 36,500 ರೂಪಾಯಿ
  • 4ನೇ ವರ್ಷದ ಮಾಸಿಕ ವೇತನ 40,000 ರೂಪಾಯಿ

ಸೇವಾನಿಧಿ ವಿವರ

  • 1ನೇ ವರ್ಷದ ಮಾಸಿಕ ಸೇವಾನಿಧಿ 9,000 ರೂಪಾಯಿ
  • 2ನೇ ವರ್ಷದ ಮಾಸಿಕ ಸೇವಾನಿಧಿ 9,900 ರೂಪಾಯಿ
  • 3ನೇ ವರ್ಷದ ಮಾಸಿಕ ಸೇವಾನಿಧಿ 10,950 ರೂಪಾಯಿ
  • 4ನೇ ವರ್ಷದ ಮಾಸಿಕ ಸೇವಾನಿಧಿ 12,00 ರೂಪಾಯಿ

ಪಿಯುಸಿ ಪಾಸಾದವರಿಗೆ ಕೃಷಿ ಇಲಾಖೆಯ ಸರ್ಕಾರಿ ಹುದ್ದೆಗಳು | ಟೈಪಿಸ್ಟ್, ಎಸ್‌ಡಿಎ, ಎಫ್‌ಡಿಎ ಹುದ್ದೆಗಳ ಶೀಘ್ರ ನೇಮಕಾತಿ Karnataka Agriculture Dept Recruitment 2024

ನಾಲ್ಕು ವರ್ಷದಲ್ಲಿ ಮಾಸಿ ವೇತನ ಹಾಗೂ ಸೇವಾನಿಧಿ ಸೇರಿ ಸಿಗುವ ಒಟ್ಟು ಮೊತ್ತ : 10.4 ಲಕ್ಷ ರೂಪಾಯಿ

ಪ್ರಮುಖ ದಿನಾಂಕಗಳು
  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ : ಜುಲೈ 8, 2024
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : ಜುಲೈ 28, 2024
  • ನೇಮಕ ಪ್ರಕ್ರಿಯೆ ಆರಂಭ : ಅಕ್ಟೋಬರ್ 18ರಿಂದ

ಹೆಚ್ಚಿನ ವಿವರಗಳಿಗೆ : ಇಲ್ಲಿ ಒತ್ತಿ

ಸೂರ್ಯ ಘರ್ ಯೋಜನೆಗೆ ಅಧಿಕೃತ ಚಾಲನೆ | ನಿಮ್ಮ ಮನೆಗೆ ಉಚಿತ ಸೋಲಾರ್ ವಿದ್ಯುತ್ ಪಡೆಯಲು ಈಗಲೇ ಅರ್ಜಿ ಸಲ್ಲಿಸಿ… PM Surya Ghar Muft Bijli Yojana 2024


Spread the love
WhatsApp Group Join Now
Telegram Group Join Now

1 thought on “ಪಿಯುಸಿ ಪಾಸಾದವರಿಗೆ 2,500 ಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಒಟ್ಟು ವೇತನ ₹10.4 ಲಕ್ಷ Agniveer Recruitment 2024”

Leave a Comment

error: Content is protected !!