ಕೇಂದ್ರ ಸರ್ಕಾರದ ಎಎಐ (AAI Recruitment 2025) 976 ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳ ಭರ್ತಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
ಭಾರತ ಸರ್ಕಾರದ ಅಧೀನದ ವಿಮಾನ ನಿಲ್ದಾಣಗಳ ಪ್ರಾಧಿಕಾರವು (Airports Authority of India- AAI) ವಿವಿಧ ವಿಭಾಗಗಳಲ್ಲಿ ಖಾಲಿಯಿರುವ 976 ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ.
ಅರ್ಹರು ಹುದ್ದೆಗೆ ಸಂಬಂಧಿಸಿದಂತೆ ಬಿಇ, ಬಿ.ಟೆಕ್, ಆರ್ಕಿಟೆಕ್ಚರ್’ನಲ್ಲಿ ಪದವಿ ಪಡೆದಿರುವ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈ ಎಲ್ಲಾ ಹುದ್ದೆಗಳಿಗೆ ಯಾವುದೇ ಅನುಭವದ ಅಗತ್ಯ ಇರುವುದಿಲ್ಲ.
ಏನಿದು ವಿಮಾನ ನಿಲ್ದಾಣಗಳ ಪ್ರಾಧಿಕಾರ?
ವಿಮಾನ ನಿಲ್ದಾಣಗಳ ಪ್ರಾಧಿಕಾರವು (Airports Authority of India- AAI) ಕೇಂದ್ರ ಸರ್ಕಾರದ ಸಾರ್ವಜನಿಕ ವಲಯದ ಉದ್ದಿಮೆಯಾಗಿದ್ದು; ಇದಕ್ಕೆ ಮಿನಿರತ್ನ ಕೆಟಗಿರಿ-1 ದರ್ಜೆ ನೀಡಲಾಗಿದೆ.
ಸದರಿ ಪ್ರಾಧಿಕಾರವು ದೇಶದಲ್ಲಿ ನಾಗರಿಕ ವಿಮಾನಯಾನ ಮೂಲಸೌಕರ್ಯವನ್ನು ರಚಿಸುವುದು, ಉನ್ನತೀಕರಿಸುವುದು ಹಾಗೂ ವಿಮಾನಯಾನ ಸೌಲಭ್ಯಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದೆ.
ಹುದ್ದೆಗಳ ವಿವರ
- ಆರ್ಕಿಟೆಕ್ಟರ್: 11
- ಸಿವಿಲ್: 199
- ಎಲೆಕ್ಟಿçಕಲ್: 208
- ಎಲೆಕ್ಟ್ರಾನಿಕ್ಸ್: 527
- ಐಟಿ: 31
- ಒಟ್ಟು ಹುದ್ದೆಗಳು: 976

ವಯೋಮಿತಿ ಮತ್ತು ವೇತನ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಇದೇ ಸೆಪ್ಟೆಂಬರ್ 27ಕ್ಕೆ ಅನ್ವಯವಾಗುವಂತೆ 27 ವರ್ಷದೊಳಗಿರಬೇಕು. ನೇಮಕಾತಿ ಮಂಡಳಿ ನಿಯಮಾನುಸಾರ ಮೀಸಲು ವರ್ಗಗಳಿಗೆ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.
ಎಎಐ ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ. 40,000 ರಿಂದ 1,40,000 ಮಾಸಿಕ ವೇತನ ಶ್ರೇಣಿಯಿದ್ದು, ವಾರ್ಷಿಕವಾಗಿ ಶೇ.3ರ ವೇತನ ಬಡ್ತಿ ಅನ್ವಯವಾಗಲಿದೆ.
ಮೂಲ ವೇತನದ ಜತೆಗೆ ತುಟ್ಟಿಭತ್ಯೆ, ಮೂಲ ವೇತನದ ಶೇ.35 ಭತ್ಯೆಗಳು, ಮನೆ ಬಾಡಿಗೆ ಭತ್ಯೆ, ಸಿಪಿಎಫ್, ಗ್ರಾಚ್ಯುಟಿ, ಸಾಮಾಜಿಕ ಭದ್ರತಾ ಯೋಜನೆಗಳು, ವೈದ್ಯಕೀಯ ಸೌಲಭ್ಯಗಳು ಸಂಸ್ಥೆ ನಿಯಮಗಳಿಗೆ ಅನುಗುಣವಾಗಿ ಒದಗಿಸಲಾಗುತ್ತದೆ.
ಅರ್ಜಿ ಸಲ್ಲಿಕೆ ವಿಧಾನ ಮತ್ತು ಅರ್ಜಿ ಶುಲ್ಕ
ಅಧಿಕೃತ ಜಾಲತಾಣ aai.aero/en/careers ವೆಬ್ಸೈಟ್ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಸೆಪ್ಟೆಂಬರ್ 27ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಎಎಐ ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗೆ 300 ರೂ., ಗಳ ಅರ್ಜಿ ಶುಲ್ಕವಿದೆ. ಪ.ಜಾತಿ, ಪ.ಪಂಗಡ, ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಅನ್ವಯವಾಗುವುದಿಲ್ಲ. ಈ ವರ್ಷದ ಅಭ್ಯರ್ಥಿಗಳು ಉಚಿತವಾಗಿ ಅರ್ಜಿ ಸಲ್ಲಿಸಬಹುದು.
ಆಯ್ಕೆ ಪ್ರಕ್ರಿಯೆ ಹೇಗೆ?
ಸ್ವೀಕೃತ ಅರ್ಜಿಗಳನ್ನು ಪರಿಶೀಲಿಸಿ ಗೇಟ್ 2023, 2024 ಅಥವಾ 2025 ಸಂಬಂಧಿತ ಪರೀಕ್ಷೆಯಲ್ಲಿ ಪಡೆದ ಅಂಕಗಳ ಅನುಸಾರ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್’ಗೊಳಿಸಿ ಅರ್ಹರನ್ನು, ದಾಖಲೆಗಳ ಪರಿಶೀಲನೆಗೆ ಆಹ್ವಾನಿಸಲಾಗುತ್ತದೆ. ಅಂತಿಮವಾಗಿ AAIನ ಎಲ್ಲ ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳ ಮೆರಿಟ್ ಪಟ್ಟಿ ಬಿಡುಗಡೆಗೊಳಿಸಲಾಗುತ್ತದೆ.
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: 27-09-2025

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.