Mobile Canteen Subsidy Scheme- ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಸಂಚಾರಿ ಕ್ಯಾಂಟೀನ್ ವಾಹನ ಖರೀದಿಗೆ ₹5 ಲಕ್ಷ ಸಹಾಯಧನ | ಅರ್ಜಿ ಆಹ್ವಾನ

Spread the love

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ (Karnataka State Tourism Development) ಎಸ್.ಸಿ.ಎಸ್.ಪಿ., ಟಿ.ಎಸ್.ಪಿ ಯೋಜನೆ ಅಡಿಯಲ್ಲಿ ಮೊಬೈಲ್ ಕ್ಯಾಂಟೀನ್ (Mobile Canteen) ಖರೀದಿಗೆ ಸಹಾಯಧನ ನೀಡಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆ 2024-25ನೇ ಸಾಲಿನ ಕಾರ್ಯಕ್ರಮಗಳ ಭಾಗವಾಗಿ ನಿರುದ್ಯೋಗಿಗಳಿಗೆ ಹೊಸ ಅವಕಾಶವೊಂದನ್ನು ನೀಡುತ್ತಿದೆ. ತಮ್ಮದೇ ಆದ ಮೊಬೈಲ್ ಕ್ಯಾಂಟೀನ್ (ಸಂಚಾರಿ ಆಹಾರ ವಾಹನ) ಆರಂಭಿಸಲು ಬಯಸುವ ಅಭ್ಯರ್ಥಿಗಳಿಗೆ ಸರ್ಕಾರದಿಂದ ಘಟಕ ವೆಚ್ಚದ ಶೇ.70ರಷ್ಟು ಅಥವಾ ಗರಿಷ್ಠ ₹5 ಲಕ್ಷದ ವರೆಗೆ ಹಣಕಾಸು ಸಹಾಯಧನ (Subsidy) ನೀಡಲಾಗುತ್ತಿದೆ.

ಈ ಯೋಜನೆ ಯುವಕರಲ್ಲಿ ಉದ್ಯಮಶೀಲತೆಯ ಬೆಳೆವಣಿಗೆಗೆ ಸಹಾಯ ಮಾಡುವುದು ಜೊತೆಗೆ ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ ನೀಡುವುದಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ ನಿರುದ್ಯೋಗಿ ಯುವಕರು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು.

Gold Silver Price- ಚಿನ್ನದ ಬೆಲೆ ಭಾರೀ ಇಳಿಕೆ | 10 ಗ್ರಾಂಗೆ ಕೇವಲ ₹55,000 ಇಳಿಯಲಿದೆಯೇ?

ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಹತಾ ಮಾನದಂಡಗಳೇನು?

ಮೊಬೈಲ್ ಕ್ಯಾಂಟೀನ್ ವಾಹನ ಖರೀದಿಗೆ ಸಹಾಯಧನ ಪಡೆಯಲಿಚ್ಛಿಸುವ ಅರ್ಜಿದಾರರು ಪ್ರಮುಖವಾಗಿ ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು. ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು. ಕನಿಷ್ಠ ಎಸ್‌ಎಸ್‌ಎಲ್‌ಸಿ (10ನೇ ತರಗತಿ) ಪಾಸಾಗಿರಬೇಕು.

ಅರ್ಜಿದಾರರ ವಯಸ್ಸು ಕನಿಷ್ಠ 20 ರಿಂದ ಗರಿಷ್ಠ 45 ವರ್ಷಗಳ ಒಳಗಿರಬೇಕು. ನಾಲ್ಕು ಚಕ್ರದ ಲಘು ವಾಹನ (Light Motor Vehicle) ಚಾಲನೆ ಮಾಡಲು ಬರುವ ಹಾಗೂ ಚಾಲನಾ ಪರವಾನಗಿ ಹೊಂದಿರಬೇಕು.

ಅರ್ಜಿದಾರರ ಆದಾಯ ಮಿತಿ ನಗರ ಪ್ರದೇಶವರಾದರೆ ವಾರ್ಷಿಕ ಆದಾಯ ₹2 ಲಕ್ಷದ ಒಳಗೆ ಹಾಗೂ ಗ್ರಾಮೀಣ ಪ್ರದೇಶದವರಾದರೆ ವಾರ್ಷಿಕ ಆದಾಯ ₹1.5 ಲಕ್ಷದ ಒಳಗೆ ಇರಬೇಕು. ಅರ್ಜಿದಾರರ ಕುಟುಂಬದ ಯಾರೂ ಸರ್ಕಾರಿ ಸಂಸ್ಥೆಗಳ ಖಾಯಂ ಹುದ್ದೆಯಲ್ಲಿ ಕೆಲಸ ಮಾಡುತ್ತಿರಬಾರದು.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಮೊಬೈಲ್ ಕ್ಯಾಂಟೀನ್ ಖರೀದಿಗೆ ಸಹಾಯಧನ ನೀಡಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ...
Mobile Canteen Subsidy Scheme

Welfare Schemes- ಉಚಿತ ಮನೆ, ಕಾರು, ಆಟೋ, ಬೈಕ್ ಸಬ್ಸಿಡಿ ವಿತರಣೆಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

ಯೋಜನೆಯ ಅನುಷ್ಠಾನ ವಿಧಾನ

ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಒಂದು ತಿಂಗಳ ಕಾಲ ಉಚಿತ ಉದ್ಯಮಶೀಲತಾ ತರಬೇತಿ (Entrepreneurship Development Program) ನೀಡಲಾಗುತ್ತದೆ. ಈ ತರಬೇತಿಯು ಕೌಶಲ್ಯಾಭಿವೃದ್ಧಿಗೆ ಸಂಬ೦ಧಪಟ್ಟ ಮಾಹಿತಿಯೊಂದಿಗೆ, ಮೊಬೈಲ್ ಕ್ಯಾಂಟೀನ್ ನಿರ್ವಹಣೆಯ ಅರಿವು ಹಾಗೂ ವ್ಯವಹಾರ ನಿರ್ವಹಣಾ ಪರಿಣತಿಯನ್ನು ಕಲಿಸುತ್ತದೆ. ತರಬೇತಿ ಯಶಸ್ವಿಯಾಗಿ ಪೂರೈಸಿದ ಅಭ್ಯರ್ಥಿಗಳಿಗೆ ಮಾತ್ರ ಅನುದಾನ ಮಂಜೂರು ಮಾಡಲಾಗುತ್ತದೆ.

ಅರ್ಜಿ ಸಲ್ಲೆಕೆಗೆ ಬೇಕಾಗುವ ಪ್ರಮುಖ ದಾಖಲೆಗಳು
  • ಆಧಾರ್ ಕಾರ್ಡ್ ಪ್ರತಿ
  • ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಲಘು ವಾಹನ ಚಾಲನಾ ಪರವಾನಗಿ ಪ್ರತಿ
  • ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
  • ಬ್ಯಾ೦ಕ್ ಪಾಸ್ ಬುಕ್
  • ರೇಷನ್ ಕಾರ್ಡ್ ಪ್ರತಿ
  • ₹50 ಬಾಂಡ್ ಪೇಪರ್

Google Pay Instant Loan Info- 9 ಲಕ್ಷ ರೂ. ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲಿಯೇ ಅರ್ಜಿ ಹಾಕಿ | ಇಲ್ಲಿದೆ ಸಂಪೂರ್ಣ ಮಾಹಿತಿ…

ಅರ್ಜಿ ಸಲ್ಲಿಕೆಯ ವಿಧಾನ

ಮೇಲ್ಕಾಣಿಸಿದ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿದಾರರು ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಸಹಾಯಕ ನಿರ್ದೇಶಕರ ಕಚೇರಿ, ರಂಗಾಯಣ ಆವರಣ, ಬೆಂಗಳೂರು ಇಲ್ಲಿ ತಮ್ಮ ಅರ್ಜಿಯನ್ನು ದ್ವಿಪ್ರತಿಯಲ್ಲಿ ಸಲ್ಲಿಸಬೇಕು.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ: 0836-2955522

ಈ ಯೋಜನೆ ಅನುದಾನ ಲಭ್ಯತೆಯ ಆಧಾರದ ಮೇಲೆ ರಾಜ್ಯದ ಕೆಲವು ಆಯ್ದ ಜಿಲ್ಲೆಗಳಿಗೆ ಮಾತ್ರ ಅನ್ವಯಿಸುತ್ತದೆ. ಅರ್ಜಿದಾರರು ತಮ್ಮ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಕಚೇರಿಯನ್ನು ಭೇಟಿಯಾಗಿ ಯೋಜನೆಯ ಲಭ್ಯತೆ, ಅರ್ಜಿ ಸ್ವೀಕಾರ ದಿನಾಂಕ, ತರಬೇತಿ ಕೇಂದ್ರಗಳ ವಿವರಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.

BPL Ration Card- ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ | ಅಧಿಕಾರಿಗಳ ಮೇಲೆ ಹೆಚ್ಚಿದ ಒತ್ತಡ | ಹೊಸ ಕಾರ್ಡ್ ಯಾವಾಗ?


Spread the love
WhatsApp Group Join Now
Telegram Group Join Now
error: Content is protected !!