Welfare Schemes- ಉಚಿತ ಮನೆ, ಕಾರು, ಆಟೋ, ಬೈಕ್ ಸಬ್ಸಿಡಿ ವಿತರಣೆಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

Spread the love

2024-25ನೇ ಸಾಲಿನ ಕಲ್ಯಾಣ ಕಾರ್ಯಕ್ರಮಗಳಿಗೆ (Welfare Schemes) ಅರ್ಜಿ ಆಹ್ವಾನಿಸಲಾಗಿದ್ದು; ಅರ್ಹ ಫಲಾನುಭವಿಗಳು ಮೇ 2ರ ಒಳಗಾಗಿ ಅರ್ಜಿ ಸಲ್ಲಸಲು ಕೋರಲಾಗಿದೆ.

WhatsApp Group Join Now
Telegram Group Join Now

ಹೌದು, ಬಿಬಿಎಂಪಿ (BBMP) ಅರ್ಥಾತ್ ಬೆಂಗಳೂರು ಮಹಾನಗರ ಪಾಲಿಕೆಯ 2024-25ನೇ ಸಾಲಿನ ಬಜೆಟ್ ಅಡಿಯಲ್ಲಿ (BBMP Budget 2024-25)  ಅನುಷ್ಠಾನಗೊಳ್ಳುವ ವಿವಿಧ ಕಲ್ಯಾಣ ಕಾರ್ಯಕ್ರಮಗಳಲ್ಲಿ ವಿವಿಧ ಉಚಿತ ಸೌಲಭ್ಯಗಳನ್ನು ಪಡೆಯಲು ಪಾಲಿಕೆ ವ್ಯಾಪ್ತಿಯ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 2024-25ನೇ ಸಾಲಿನ ಕಲ್ಯಾಣ ಕಾರ್ಯಕ್ರಮಗಳಿಗೆ ಅರ್ಜಿ ಸಲ್ಲಿಸಲು ಕಳೆದ ಮಾರ್ಚ್ 29 ಕೊನೆಯ ದಿನಾಂಕವಾಗಿತ್ತು. ಇದೀಗ ಈ ಅವಧಿಯನ್ನು ಮೇ 2ರ ವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಕಲ್ಯಾಣ ವಿಭಾಗದ ವಿಶೇಷ ಆಯುಕ್ತ ಸುರಳ್ಳರ್ ವಿಕಾಸ್ ಕಿಶೋರ್ ಅವರು ತಿಳಿಸಿದ್ದಾರೆ.

8th Pay Commission Delay- ಸರಕಾರಿ ನೌಕರರ ಸಂಬಳ ಏರಿಕೆಗೆ ತಾತ್ಕಾಲಿಕ ತಡೆ | 8ನೇ ವೇತನ ಆಯೋಗ ಜಾರಿಗೆ ವಿಳಂಬ

ಕಲ್ಯಾಣ ಯೋಜನೆಗಳ ವಿವರ

ವಸತಿ ಯೋಜನೆಗಳು: ನಿರ್ಗತಿಕರು ಅಥವಾ ಸ್ವಂತ ನಿವೇಶನದಲ್ಲಿ ಮನೆ ನಿರ್ಮಿಸಲು ಬಯಸುವವರು ‘ಒಂಟಿ ಮನೆ ನಿರ್ಮಾಣ ಸಹಾಯಧನ’ ಯೋಜನೆಯಡಿ ನೆರವು ಪಡೆಯಬಹುದು.

ಅದೇ ರೀತಿ ಹಿರಿಯ ನಾಗರಿಕರು ಅಥವಾ ದುರ್ಬಲ ವರ್ಗದವರು ‘ಅಮೃತ ಮಹೋತ್ಸವ ಯೋಜನೆ’ಯಡಿ ಮನೆ ನಿರ್ಮಾಣಕ್ಕೆ ಆರ್ಥಿಕ ನೆರವು ಪಡೆಯಬಹುದಾಗಿದೆ.

ಶೈಕ್ಷಣಿಕ ಯೋಜನೆಗಳು: ಅರ್ಹ ವಿದ್ಯಾಥೊಇðಗಳು ಶಾಲಾ ಶುಲ್ಕ ಮರುಪಾವತಿ, ಉನ್ನತ ವ್ಯಾಸಂಗ ಮತ್ತು ವಿದೇಶ ವ್ಯಾಸಂಗಕ್ಕಾಗಿ ಹಣಕಾಸು ನೆರವು, ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣಾ ಯೋಜನೆ ನೆರವು ಪಡೆಯಬಹುದಾಗಿದೆ.

Google Pay Instant Loan Info- 9 ಲಕ್ಷ ರೂ. ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲಿಯೇ ಅರ್ಜಿ ಹಾಕಿ | ಇಲ್ಲಿದೆ ಸಂಪೂರ್ಣ ಮಾಹಿತಿ…

ಆರೋಗ್ಯ ಯೋಜನೆಗಳು: ಗಂಭೀರ ಕಾಯಿಲೆಗಳಿಗೆ ಚಿಕಿತ್ಸಾ ಧನ ಸಹಾಯ, ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ಹಾಗೂ ಅಂಗವೈಕಲ್ಯ ಹೊಂದಿರುವವರಿಗೆ ಅಂಗಜೋಡಣೆ ಅಥವಾ ಶಸ್ತ್ರಚಿಕಿತ್ಸೆಗೆ ಹಣಕಾಸು ಸಹಾಯ ಪಡೆಯಬಹುದಾಗಿದೆ.

ಸ್ವಯಂ ಉದ್ಯೋಗ ಯೋಜನೆಗಳು: ನಿರುದ್ಯೋಗಿ ಅರ್ಹ ಫಲಾನುಭವಿಗಳು ಸ್ವಂತ ಉದ್ಯೋಗಕ್ಕಾಗಿ ಆಟೋ, ಕಾರು, ದ್ವಿಚಕ್ರ ವಾಹನ ಖರೀದಿಗೆ ಸಹಾಯಧನ ಸಹಾಯಧನ ಪಡೆಯಬಹುದಾಗಿದೆ.

ಇದೇ ಕಾರ್ಯಕ್ರಮದಡಿಯಲ್ಲಿ ವಿಶೇಷ ಚೇತನರಿಗೆ ಉಚಿತ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿತರಣೆ, ಬೀದಿಬದಿ ವ್ಯಾಪಾರಿಗಳಿಗೆ ಇ-ಮಾರಾಟ ವಾಹನ ಖರೀದಿಗೆ ಶೇ.90 ಅಥವಾ ₹1.5 ಲಕ್ಷದ ವರೆಗೆ ಸಹಾಯಧನ (ಯಾವುದು ಕಡಿಮೆವೋ ಅದು) ಪಡೆಯಬಹುದಾಗಿದೆ.

ಮಹಿಳಾ ಕಲ್ಯಾಣ ಯೋಜನೆಗಳು: ಆಸಕ್ತ, ಅರ್ಹ ಮಹಿಳೆಯರು ಸ್ವಯಂ ಉದ್ಯೋಗ ಆರಂಭಿಸಲು ‘ಉಚಿತ ಹೊಲಿಗೆ ಯಂತ್ರ ವಿತರಣಾ ಯೋಜನೆ’ಯಡಿಯಲ್ಲಿ ಸಹಾಯ ಪಡೆಯಬಹುದಾಗಿದೆ.

Karnataka SSLC 2025 Exam Result- ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಕ್ತಾಯ | ಏಪ್ರಿಲ್ 15ರಿಂದ ಮೌಲ್ಯಮಾಪನ | ಈ ದಿನವೇ ಫಲಿತಾ೦ಶ ಪ್ರಕಟ

2024-25ನೇ ಸಾಲಿನ ಕಲ್ಯಾಣ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು; ಅರ್ಹ ಫಲಾನುಭವಿಗಳು ಮೇ 2ರ ಒಳಗಾಗಿ ಅರ್ಜಿ ಸಲ್ಲಸಲು ಕೋರಲಾಗಿದೆ...
BBMP Welfare Schemes
ಯಾರೆಲ್ಲ ಅರ್ಜಿ ಸಲ್ಲಿಸಬಹುದು?
  • ಪರಿಶಿಷ್ಟ ಜಾತಿ (SC)
  • ಪರಿಶಿಷ್ಟ ಪಂಗಡ (SಖT)
  • ಆರ್ಥಿಕವಾಗಿ ಹಿಂದುಳಿದ ವರ್ಗಗಳು (EWS)
  • ಅಲ್ಪಸಂಖ್ಯಾತ ಸಮುದಾಯಗಳು
  • ಪೌರಕಾರ್ಮಿಕರು
  • ವಿಶೇಷ ಚೇತನರು
  • ತೃತೀಯ ಲಿಂಗಿಗಳು
  • ಮಹಿಳೆಯರು
ಯಾವೆಲ್ಲ ದಾಖಲೆಗಳು ಬೇಕು?
  • ಗುರುತಿನ ಚೀಟಿ (ಆಧಾರ್, ಮತದಾರರ ಐಡಿ)
  • ಆದಾಯ ಪ್ರಮಾಣಪತ್ರ
  • ಜಾತಿ ಪ್ರಮಾಣಪತ್ರ (ಅರ್ಹರಾಗಿದ್ದರೆ)
  • ವಾಸದ ಪ್ರಮಾಣಪತ್ರ
  • ವಿದ್ಯಾಭ್ಯಾಸ ಪ್ರಮಾಣಪತ್ರ (ವಿದ್ಯಾರ್ಥಿಗಳಿಗೆ)
  • ಅಂಗವೈಕಲ್ಯ ಪ್ರಮಾಣಪತ್ರ (ಅರ್ಹ ಅಭ್ಯರ್ಥಿಗಳಿಗೆ)

ಇನ್ಮುಂದೆ ಸರ್ಕಾರಿ ನೌಕರರಿಗೆ ಕಡಿಮೆ ಬಡ್ಡಿ ಸಾಲ ಸೌಲಭ್ಯ | ಏನೆಲ್ಲ ಸೌಲಭ್ಯ ಸಿಗಲಿದೆ? ಇಲ್ಲಿದೆ ಮಾಹಿತಿ…

ಅರ್ಜಿ ಸಲ್ಲಿಕೆ ಹೇಗೆ?

ಮೇಲ್ಕಾಣಿಸಿದ ವಿವಿಧ ಕಲ್ಯಾಣ ಕಾರ್ಯಕ್ರಮಗಳಿಗೆ ಅರ್ಹ ಫಲಾನುಭವಿಗಳು ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿಯನ್ನು ಭರ್ತಿ ಮಾಡಿ, ನಿಮ್ಮ ವಲಯದ ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ (ಕಲ್ಯಾಣ) ಕಚೇರಿಗೆ ಇದೇ ಮೇ 2ರ ಒಳಗಾಗಿ ಸಲ್ಲಿಸಬೇಕು.

ಆರ್ಥಿಕವಾಗಿ ಹಿಂದುಳಿದ ವರ್ಗಗಳ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡುವುದು ಈ ಯೋಜನೆಗಳ ಉದ್ದೇಶವಾಗಿದೆ. ಅರ್ಹ ಫಲಾನುಭವಿಗಳು ಉಚಿತ ಅಥವಾ ಭಾರೀ ಸಬ್ಸಿಡಿ ಆಧಾರಿತ ಉಪಕರಣಗಳು, ವಾಹನಗಳು ಮತ್ತು ಶೈಕ್ಷಣಿಕ ನೆರವುಗಳ ಪ್ರಯೋಜನ ಪಡೆಯಬಹುದಾಗಿದೆ.

ಅರ್ಜಿ ಸಲ್ಲಿಕೆ ಕೊನೇ ದಿನಾಂಕ: 02-05-2025

Karnataka 2nd PUC Result 2025- ದ್ವಿತೀಯ ಪಿಯುಸಿ ಫಲಿತಾಂಶ 2025 | ಮಹತ್ವದ ಮಾಹಿತಿ ಇಲ್ಲಿದೆ…


Spread the love
WhatsApp Group Join Now
Telegram Group Join Now
error: Content is protected !!