Unified Pension Scheme- ಏಪ್ರಿಲ್‌ನಿಂದ ಸರ್ಕಾರಿ ನೌಕರರಿಗೆ ಭರ್ಜರಿ ಪಿಂಚಣಿ | ಯಾರಿಗೆ ಎಷ್ಟು ಸಿಗಲಿದೆ ಪೆನ್ಶನ್‌?

Spread the love

2025ರ ಏಪ್ರಿಲ್ 1ರಿಂದ ಕೇಂದ್ರ ಸರ್ಕಾರವು ‘ಏಕೀಕೃತ ಪಿಂಚಣಿ ಯೋಜನೆ’ಯನ್ನು (Unified Pension Scheme – UPS) ಜಾರಿಗೆ ತಂದಿದ್ದು, ಇದು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ವ್ಯಾಪ್ತಿಯಲ್ಲಿರುವ ಸರ್ಕಾರಿ ನೌಕರರಿಗೆ (Govt Employees) ಅನ್ವಯವಾಗಲಿದೆ. ಈ ಯೋಜನೆಯಡಿ, ಸರ್ಕಾರಿ ನೌಕರರಿಗೆ ನಿವೃತ್ತಿ ಬಳಿಕ ಅನೇಕ ಸೌಲಭ್ಯಗಳನ್ನು ಪಡೆಯಬಹುದಾಗಿದೆ.

WhatsApp Group Join Now
Telegram Group Join Now

ಸದ್ಯ ದೇಶಾದ್ಯಂತ 50 ಲಕ್ಷ ಕೇಂದ್ರ ಸರಕಾರಿ ನೌಕರರಿದ್ದು 23 ಲಕ್ಷ ಕೇಂದ್ರ ಸರಕಾರಿ ನೌಕರರಿಗೆ ಯುಪಿಎಸ್ ಯೋಜನೆಯಿಂದ ಅನುಕೂಲವಾಗಲಿದೆ. ಯುಪಿಎಸ್ ಯೋಜನೆಗೆ ಯಾರು ಅರ್ಹರು, ಯಾವೆಲ್ಲ ಸೌಲಭ್ಯಗಳು ಸಿಗಲಿವೆ? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ…

ಇದನ್ನೂ ಓದಿ: BPL Ration Card Update- ಹೊಸ ರೇಷನ್ ಕಾರ್ಡ್ ಅರ್ಜಿ | ಆಹಾರ ಇಲಾಖೆಯ ಮಹತ್ವದ ಮಾಹಿತಿ ಇಲ್ಲಿದೆ…

ಯುಪಿಎಸ್ ಯೋಜನೆಗೆ ಯಾರು ಅರ್ಹರು?

2025ರ ಏಪ್ರಿಲ್ 1ರಂದು ಸೇವೆಯಲ್ಲಿ ಇರುವ ಮತ್ತು ಈಗಾಗಲೇ ಯುಪಿಎಸ್ ವ್ಯಾಪ್ತಿಗೆ ಒಳಪಟ್ಟಿರುವ ಕೇಂದ್ರ ಸರ್ಕಾರಿ ನೌಕರರು ಯುಪಿಎಸ್ ಅನ್ನು ಆಯ್ಕೆ ಮಾಡಿಕೊಳ್ಳÀಬಹುದು.

2025ರ ಏಪ್ರಿಲ್ 1 ಅಥವಾ ನಂತರ ಸರ್ಕಾರಿ ಸೇವೆಗೆ ಸೇರುವ ನೌಕರರು ಯುಪಿಎಸ್ ಆಯ್ಕೆ ಮಾಡುವುದು ಕಡ್ಡಾಯವಾಗಿದೆ. ಅವರಲ್ಲಿ ಯಾರಾದರೂ 30 ದಿನಗಳೊಳಗೆ ಯುಪಿಎಸ್ ಆಯ್ಕೆ ಮಾಡದಿದ್ದರೆ, ಅವರು ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗುವುದಿಲ್ಲ.

ಇನ್ನು 10 ವರ್ಷಗಳಿಗಿಂತ ಕಡಿಮೆ ಸೇವೆ ಸಲ್ಲಿಸಿದವರು ಅಥವಾ ಸೇವೆಯಲ್ಲಿ ಇದ್ದುಕೊಂಡು ರಾಜೀನಾಮೆ ನೀಡಿದವರು ಅಥವಾ ಕೆಲಸದಿಂದ ವಜಾಗೊಂಡವರು ಯುಪಿಎಸ್ ಯೋಜನೆಯಡಿ ಪಿಂಚಣಿ ಪಡೆಯಲು ಅರ್ಹರಾಗುವುದಿಲ್ಲ.

ಇದನ್ನೂ ಓದಿ: New Traffic Rules- ದಂಡ ಕಟ್ಟದಿದ್ದರೆ ಡ್ರೈವಿಂಗ್ ಲೈಸೆನ್ಸ್ ರದ್ದು | ಟ್ರಾಫಿಕ್ ನಿಯಮ ಉಲ್ಲಂಘನೆಗೆ ಕಠಿಣ ಕ್ರಮ

ಯುಪಿಎಸ್ ಅಡಿಯಲ್ಲಿ ಸಿಗುವ ಪಿಂಚಣಿ ಸೌಲಭ್ಯಗಳು

ಯುಪಿಎಸ್ ಯೋಜನೆಯಡಿ ನೌಕರರಿಗೆ ದೊರೆಯುವ ಪ್ರಮುಖ ಸೌಲಭ್ಯಗಳನ್ನು ನೋಡುವುದಾದರೆ, ಕನಿಷ್ಠ 10 ವರ್ಷ ಸೇವೆ ಸಲ್ಲಿಸಿದ ನೌಕರರಿಗೆ ನಿವೃತ್ತಿಯ ನಂತರ ತಿಂಗಳಿಗೆ ರೂ.10,000 ಪಿಂಚಣಿ ಸಿಗಲಿದೆ.

25 ವರ್ಷ ಅಥವಾ ಹೆಚ್ಚು ಸೇವೆ ಸಲ್ಲಿಸಿದ ನೌಕರರಿಗೆ, ನಿವೃತ್ತಿಯ ಮೊದಲು 12 ತಿಂಗಳ ಸರಾಸರಿ ಮೂಲ ವೇತನದ ಶೇಕಡಾ 50ರಷ್ಟು ಮೊತ್ತವನ್ನು ಪಿಂಚಣಿಯಾಗಿ ನೀಡಲಾಗುತ್ತದೆ.

ಗ್ರಾಚುಟಿ ಸೌಲಭ್ಯ

ಯುಪಿಎಸ್ ಯೋಜನೆಯಡಿಯಲ್ಲಿ ಸರ್ಕಾರಿ ನೌಕರರಿಗೆ ನಿವೃತ್ತಿ ಗ್ರಾಚುಟಿ ಹಾಗೂ ಡೆತ್ ಗ್ರಾಚುಟಿ ಎಂಬ ಎರಡು ವಿಧದ ಗ್ರಾಚುಟಿ ಲಭ್ಯವಿದೆ. ಕನಿಷ್ಠ 5 ವರ್ಷ ಸೇವೆ ಸಲ್ಲಿಸಿದ ನೌಕರರಿಗೆ ನಿವೃತ್ತಿ ಗ್ರಾಚುಟಿ ಸಿಗುತ್ತದೆ. ಈ ಮೊತ್ತದ ಗರಿಷ್ಠ ಮಿತಿ ರೂ.25 ಲಕ್ಷವಾಗಿದೆ. ಇನ್ನು ಸರ್ಕಾರಿ ನೌಕರನ ಅಕಾಲಿಕ ಮರಣ ಸಂಭವಿಸಿದರೆ, ಅವರ ಸೇವಾ ಅವಧಿಯ ಆಧಾರದ ಮೇಲೆ ಕುಟುಂಬಕ್ಕೆ ಡೆತ್ ಗ್ರಾಚುಟಿ ನೀಡಲಾಗುತ್ತದೆ.

ಇದನ್ನೂ ಓದಿ: East Monsoon Rain- ಕರ್ನಾಟಕದ ಈ ಜಿಲ್ಲೆಗಳಲ್ಲಿ ಒಂದು ವಾರ ಮಳೆ | ರಾಜ್ಯಾದ್ಯಂತ ಪೂರ್ವ ಮುಂಗಾರು ಮಳೆ ಅಬ್ಬರ

ಯುಪಿಎಸ್ ಯೋಜನೆಗೆ ಕೊಡುಗೆ

ಯುಪಿಎಸ್ ಯೋಜನೆಯಡಿ ನೌಕರರು ಮತ್ತು ಸರ್ಕಾರದಿಂದ ಆಗುವ ಆರ್ಥಿಕ ಕೊಡುಗೆಗಳು ಈ ಕೆಳಗಿನಂತಿವೆ:

  • ನೌಕರರ ಕೊಡುಗೆ: ನೌಕರರು ತಮ್ಮ ಮೂಲ ವೇತನ ಮತ್ತು ತುಟ್ಟಿಭತ್ಯೆಯ ಶೇಕಡಾ 10ರಷ್ಟು ಯುಪಿಎಸ್ ಯೋಜನೆಗೆ ನೀಡಬೇಕು.
  • ಸರ್ಕಾರದ ಕೊಡುಗೆ: ಕೇಂದ್ರ ಸರ್ಕಾರವು ನೌಕರರ ಮೂಲ ವೇತನ ಮತ್ತು ತುಟ್ಟಿಭತ್ಯೆಯ ಶೇಕಡಾ 18ರಷ್ಟು ಯುಪಿಎಸ್ ಯೋಜನೆಗೆ ನೀಡುತ್ತದೆ.

ಯುಪಿಎಸ್ ಯೋಜನೆಯು ಕೇಂದ್ರ ಸರ್ಕಾರಿ ನೌಕರರಿಗೆ ನಿವೃತ್ತಿ ನಂತರ ಭದ್ರಿತ ಪಿಂಚಣಿ ಮತ್ತು ಸೌಲಭ್ಯಗಳನ್ನು ಒದಗಿಸಲು ಉದ್ದೇಶ ಹೊಂದಿದೆ. ಈ ಹೊಸ ವ್ಯವಸ್ಥೆಯ ಮೂಲಕ, ಕೇಂದ್ರ ಸರ್ಕಾರವು ತನ್ನ ನೌಕರರಿಗೆ ಉತ್ತಮ ಆರ್ಥಿಕ ಭದ್ರತೆ ಒದಗಿಸುತ್ತಿದೆ. 2025ರ ಏಪ್ರಿಲ್ 1ರಿಂದ ಜಾರಿಗೆ ಬಂದಿರುವ ಈ ಯೋಜನೆಯು ನೌಕರರ ಭವಿಷ್ಯವನ್ನು ಸುರಕ್ಷಿತಗೊಳಿಸಲು ಸಹಾಯಕವಾಗಲಿದೆ.

KASS Free Health Care- ಇನ್ಮುಂದೆ ಸರ್ಕಾರಿ ನೌಕರರಿಗೆ ಉಚಿತ ಚಿಕಿತ್ಸೆ | ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ಸಂಪುಟ ಸಭೆ ನಿರ್ಣಯ


Spread the love
WhatsApp Group Join Now
Telegram Group Join Now
error: Content is protected !!