Govt Land Encroachment Clearance : ಸರ್ಕಾರಿ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆಗೆ ಸರ್ಕಾರ ಭರದ ಸಿದ್ಧತೆ ನಡೆಸಿದ್ದು; ಬರಲಿರುವ ಸೆಪ್ಟೆಂಬರ್’ನಿ೦ದ ರಾಜ್ಯಾದ್ಯಂತ ಒತ್ತುವರಿಯಾಗಿರುವ ಸರ್ಕಾರಿ ಭೂಮಿ (Govt Land) ತೆರವು ಕಾರ್ಯ ನಡೆಯಲಿದೆ. ಆದರೆ ಸರ್ಕಾರಿ ಭೂಮಿ ಒತ್ತುವರಿ ಮಾಡಿ ಕೃಷಿ ಮಾಡುತ್ತಿರುವ ರೈತರಿಗೆ ರಿಯಾಯ್ತಿ (Concession for farmers) ನೀಡುವ ಸೂಚನೆಯನ್ನು ಕಂದಾಯ ಸಚಿವರು ನೀಡಿದ್ದಾರೆ.
ಹೌದು, ಸರ್ಕಾರ ರಾಜ್ಯದ ಸರ್ಕಾರಿ ಭೂಮಿ ರಕ್ಷಣೆಗಾಗಿಯೇ ‘ಲ್ಯಾಂಡ್ ಬೀಟ್’ ಆ್ಯಪ್ (Land Beat App) ಅಭಿವೃದ್ಧಿಪಡಿಸಿದೆ. ಕಳೆದ ಎಂಟು ತಿಂಗಳಿ೦ದ ಈ ಆ್ಯಪ್ ಆಧರಿಸಿ ರಾಜ್ಯದಲ್ಲಿ ಒತ್ತುವರಿಯಾದ ಸರ್ಕಾರಿ ಭೂಮಿ ಸರ್ವೇ (Government land survey) ಮಾಡಲಾಗಿದೆ. ಕೋಟ್ಯಾಂತರ ಎಕರೆ ಭೂಮಿ ಒತ್ತುವರಿಯಾಗಿರುವುದು ಖಚಿತವಾಗಿದ್ದು; ಸೆಪ್ಟೆಂಬರ್’ನಿ೦ದ ಇದರ ತೆರವು ಕಾರ್ಯ ನಡೆಯಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಸರ್ಕಾರಿ ಭೂಮಿ ಒತ್ತುವರಿ ಪತ್ತೆ ಹೇಗೆ?
ನಿನ್ನೆ ಆಗಸ್ಟ್ 1ರಂದು ಬೆಂಗಳೂರು ವಿಭಾಗದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವರು ರಾಜ್ಯದಲ್ಲಿ ಬರೋಬ್ಬರಿ 1.41 ಕೋಟಿ ಎಕರೆ ಸರಕಾರಿ ಜಮೀನು ಒತ್ತುವರಿಯಾಗಿದ್ದು; ಇದೆಲ್ಲವು ಕಂದಾಯ, ಅರಣ್ಯ, ಶಿಕ್ಷಣ ಹಾಗೂ ಲೋಕೋಪಯೋಗಿ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳಿಗೆ ಸೇರಿದ ಸ್ವತ್ತಾಗಿದೆ ಎಂದು ಹೇಳಿದ್ದಾರೆ.
ಗ್ರಾಮ ಆಡಳಿತ ಅಧಿಕಾರಿಗಳ ಮೂಲಕ ತಮ್ಮ ವ್ಯಾಪ್ತಿಯ ಸರಕಾರಿ ಜಮೀನು ಎಷ್ಟಿದೆ? ಎಂಬ ಮಾಹಿತಿಯನ್ನು ಲ್ಯಾಂಡ್ ಬೀಟ್ ಆ್ಯಪ್‌ನಲ್ಲಿ ಅಪ್ಲೋಡ್ ಮಾಡುವಂತೆ ಸರ್ಕಾರ ಸೂಚಿಸಿತ್ತು. ಆ ಪ್ರಕಾರ ಕಳೆದ ಎಂಟು ತಿಂಗಳಿ೦ದ ಈ ಕಾರ್ಯ ನಡೆದಿದ್ದು; ಇದೀಗ ರಾಜ್ಯದ ಪ್ರತೀ ಜಿಲ್ಲೆ, ತಾಲ್ಲೂಕು, ಗ್ರಾಮ ಹಾಗೂ ಸರ್ವೇ ನಂಬರ್‌ವಾರು ಲೊಕೇಷನ್ ಮತ್ತು ವಿಸ್ತೀಣದ ಮಾಹಿತಿ ಸಿಕ್ಕಿದೆ.
ಈ ಮಾಹಿತಿ ಲಭ್ಯವಾದ ಆನಂತರ ಗ್ರಾಮ ಆಡಳಿತ ಅಧಿಕಾರಿಗಳ ಮೂಲಕ 14 ಲಕ್ಷ ಸರ್ವೇ ನಂಬರ್‌ಗೆ ಖುದ್ದು ಬೀಟ್ ಮಾಡಿಸಲಾಗಿದ್ದು, 13,04,885 ಜಾಗಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಹಲವೆಡೆ ಒತ್ತುವರಿ ಪತ್ತೆಯಾಗಿದ್ದು, ಸೆಪ್ಟೆಂಬರ್ ತಿಂಗಳಿ೦ದ ರೈತರ ಭೂಮಿ ಬಿಟ್ಟು ಉಳಿದೆಲ್ಲಾ ಒತ್ತುವರಿಗಳನ್ನು ತಹಶೀಲ್ದಾರ್‌ಗಳ ಮೂಲಕ ತೆರವುಗೊಳಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: ಇನ್ಮುಂದೆ ಗ್ರಾಮ ಪಂಚಾಯತಿ ಹಗರಣಗಳಿಗೆ ಅಧ್ಯಕ್ಷ, ಸದಸ್ಯರಿಗೂ ಶಿಕ್ಷೆ | ಬಂತು ಹೊಸ ರೂಲ್ಸ್ Gram Panchayat Scam New Rules
ಈ ರೈತರಿಗೆ ಸಿಗಲಿದೆ ರಿಯಾಯ್ತಿ
ಅರ್ಹ ರೈತರು ಕಳೆದ 15 ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ಜಮೀನಿನಲ್ಲಿ ನಿಜಕ್ಕೂ ಕೃಷಿ ಚಟುವಟಿಕೆ ನಡೆಯುತ್ತಿದೆಯಾ ಎಂಬುವುದು ಖಚಿತವಾದ ಭೂಮಿಗೆ ಒತ್ತುವರಿಯಿಂದ ರಿಯಾಯ್ತಿ ಸಿಗುವ ಸಾಧ್ಯತೆ ಇದೆ. ಈ ಬಗ್ಗೆ ಈಗಾಗಲೇ ‘ಬಗರ್ ಹುಕುಂ’ ಆ್ಯಪ್ ಮೂಲಕ ಸ್ಯಾಟಲೈಟ್ ಇಮೇಜ್ ಸಂಗ್ರಹಿಸಿ, ಅರ್ಹ ರೈತರ ಜಮೀನು ಖಚಿತಪಡಿಸುವ ಕಾರ್ಯ ಆಗಿದೆ.
ಮೊದಲ ಹಂತದಲ್ಲಿ ಈಗಾಗಲೇ ಗ್ರಾಮ ಆಡಳಿತಾಧಿಕಾರಿಗಳು ಖುದ್ದು ಭೇಟಿ ನೀಡಿ ಪರೀಶಿಸಲಾದ 13,04,885 ಜಾಗಗಳ ತೆರವು ಕಾರ್ಯ ಇದೇ ಸೆಪ್ಟೆಂಬರ್ ವೇಳೆಗೆ ನಡೆಯಲಿದೆ. ಆನಂತರ ಕೃಷಿ ಭೂಮಿ ಹೆಸರಿನಲ್ಲಿ ಹಕ್ಕೊತ್ತಾಯ ಮಂಡಿಸುತ್ತಿರುವವರ ಪರೀಶಿಲನೆ ನಡೆದು ಅದರಲ್ಲೂ ಅನರ್ಹರರೆಂದು ಪತ್ತೆಯಾದ ಜಮೀನು ಒತ್ತುವರಿ ತೆರವು ನಡೆಯಲಿದೆ.
ಆಧಾರ್ ಸೀಡಿಂಗ್ (Aadhaar Seeding) ಮೂಲಕ ಸರ್ಕಾರಿ ಭೂಮಿ ಪತ್ತೆ
ಇನ್ನೊಂದೆಡೆ ರೈತರ ಜಮೀನು ಪಹಣಿಗಳಿಗೆ ಆಧಾರ್ ದೃಢೀಕರಣ ಕಾರ್ಯ ವೇಗವಾಗಿ ನಡೆಯುತ್ತಿದೆ. ರಾಜ್ಯದ ಒಟ್ಟು 4.8 ಕೋಟಿ ಜಮೀನಿನು ಮಾಲೀಕತ್ವಗಳ ಪೈಕಿ 2.68 ಕೋಟಿ ರೈತರ ಖಾತೆಗಳಿಗೆ ಆಧಾರ್ ಸೀಡಿಂಗ್ ಮುಕ್ತಾಯವಾಗಿದೆ. ಆಗಸ್ಟ್ ಕೊನೆಯ ವೇಳೆಗೆ ಆಧಾರ ಸೀಡಿಂಗ್ ಕಾರ್ಯ ಪೂರ್ಣವಾಗಲಿದೆ ಎಂದು ಕಂದಾಯ ಸಚಿವರು ಹೇಳಿದ್ದಾರೆ.
ಆಧಾರ್ ಸೀಡಿಂಗ್‌ನಿ೦ದಾಗಿ (Aadhaar Seeding) ದಾಖಲೆಗಳಲ್ಲಿ ಕೈಬಿಟ್ಟು ಹೋಗಿದ್ದ ಮತ್ತು ಒತ್ತುವರಿಯಾಗಿದ್ದ ಸರ್ಕಾರಿ ಭೂಮಿಯ ವಿವರಗಳು ಸಿಕ್ಕಿವೆ. ಒಟ್ಟು 2.20 ಲಕ್ಷ ಎಕರೆ ಜಮೀನು ಸರ್ಕಾರಿ ಭೂಮಿ ಎಂದು ಗುರುತಿಸದ ಆಸ್ತಿಗಳು ಪತ್ತೆಯಾಗಿದ್ದು, ಆಧಾರ್ ಸೀಡಿಂಗ್‌ನಿ೦ದ 3 ಲಕ್ಷದಿಂದ 3.50 ಲಕ್ಷ ಎಕರೆ ಹೆಚ್ಚುವರಿ ಸರಕಾರಿ ಭೂಮಿ ಪತ್ತೆಯಾಗುವ ನಿರೀಕ್ಷೆಯಿದೆ ಎಂದಿದ್ದಾರೆ ಕಂದಾಯ ಸಚಿವರು.