7ನೇ ತರಗತಿ ಪಾಸಾದವರಿಗೆ ಕೆಎಸ್‌ಆರ್‌ಟಿಸಿ ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ… KSRTC Contract Basis Driver Recruitment 2024

Spread the love

KSRTC Contract Basis Driver Recruitment 2024 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (Karnataka State Road Transport Corporation) ಜಿಲ್ಲಾ ವಿಭಾಗದಲ್ಲಿ ಖಾಲಿ ಇರುವ ಚಾಲಕ ಹುದ್ದೆಗಳನ್ನು (Driver Jobs) ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಸಂಪೂರ್ಣ ಮಾಹಿತಿಯು ಇಲ್ಲಿದೆ…

WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಜಿಲ್ಲಾ ವಿಭಾಗದಲ್ಲಿ ಖಾಲಿ ಇರುವಂತಹ ಚಾಲಕ ಹುದ್ದೆಗಳ ಗುತ್ತಿಗೆ ಆಧಾರದ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಯ ಚಾಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಅರ್ಹತೆಗಳು, ಅರ್ಜಿ ಸಲ್ಲಿಸುವುದು ಹೇಗೆ, ಆಯ್ಕೆಯಾದವರಿಗೆ ಸಿಗುವ ಮಾಸಿಕ ವೇತನ ಹಾಗೂ ನೇಮಕಾತಿಗೆ ಸಂಬ೦ಧಿಸಿದ ಇತರೆ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ನೀಡಲಾಗಿದೆ.

ಇದನ್ನೂ ಓದಿ: ಕಾರು, ಗೂಡ್ಸ್ ವಾಹನ ಖರೀದಿಗೆ 3 ಲಕ್ಷ ರೂಪಾಯಿ ಸಹಾಯಧನಕ್ಕೆ ಅರ್ಜಿ ಆಹ್ವಾನ | ಆಗಸ್ಟ್ 30ರೊಳಗೆ ಅರ್ಜಿ ಸಲ್ಲಿಸಿ… Karnataka Swavalambi Sarathi Scheme 2024

ಯಾವೆಲ್ಲಾ ಡಿಪೋದಲ್ಲಿ ಉದ್ಯೋಗ?

ಶಿವಮೊಗ್ಗ ಕೆಎಸ್‌ಆರ್‌ಟಿಸಿ ವಿಭಾಗದ ಅಡಿಯಲ್ಲಿ ಬರುವಂತಹ ಶಿವಮೊಗ್ಗ, ಭದ್ರಾವತಿ, ಹೊನ್ನಾಳಿ, ಸಾಗರ ಹಾಗೂ ಶಿಕಾರಿಪುರದಲ್ಲಿ ಖಾಲಿ ಇರುವ ಚಾಲಕ ಹುದ್ದೆಗಳನ್ನು (KSRTC Driver Jobs) ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆಗಳು
  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 7ನೇ ತರಗತಿಯಲ್ಲಿ ಪಾಸಾಗಿರಬೇಕು.
  • ಮಾನ್ಯತೆ ಪಡೆದಿರುವ ವಾಹನ ಚಾಲನಾ ಪರವಾನಗಿ (Driving license) ಹೊಂದಿರಬೇಕು.
  • ಲಘು ಮೋಟಾರ್ ವಾಹನ ಚಾಲಕರಾಗಿ ಕನಿಷ್ಠ 2 ವರ್ಷಗಳ ಸೇವಾನುಭವ ಹೊಂದಿರಬೇಕು.
  • ಅರ್ಜಿ ಸಲ್ಲಿಸುವವರು ಕನಿಷ್ಠ 18 ವರ್ಷ ಮೇಲ್ಪಟ್ಟಿರಬೇಕು.
KSRTC Contract Basis Driver Recruitment 2024

ಇದನ್ನೂ ಓದಿ: ಅಂಗನವಾಡಿ ನೇಮಕಾತಿ ಜಿಲ್ಲಾವಾರು ಖಾಲಿ ಹುದ್ದೆಗಳು | ಈ ಜಿಲ್ಲೆಗಳಿಂದ ಅರ್ಜಿ ಆಹ್ವಾನ… Karnataka Anganwadi Vacancies

ವೇತನ ಹಾಗೂ ಇತರೆ ಸೌಲಭ್ಯಗಳ ಮಾಹಿತಿ

ಇದು ಹೊರಗುತ್ತಿಗೆ ಆಧಾರದ (Contract Basis) ನೇಮಕಾತಿಯಾಗಿದ್ದು; ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 23,000 ರೂ. ವೇತನವನ್ನು ನೀಡಲಾಗುತ್ತದೆ ಹಾಗೂ ಇದರ ಜೊತೆಗೆ ಇಎಸ್‌ಐ, ಇಪಿಎಫ್ ಸೌಲಭ್ಯವನ್ನು ಕೂಡ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನೀಡಿರುವ ದಾಖಲಾತಿಗಳನ್ನು ಸಿದ್ಧಪಡಿಸಿಕೊಂಡು ನಿಗದಿಪಡಿಸಿದ ದಿನಾಂಕದ೦ದು ನೇರವಾಗಿ ಸಂಬ೦ಧಪಟ್ಟ ಡಿಪೋಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: ಕರ್ನಾಟಕ ಪೋಲಿಸ್ ಇಲಾಖೆಯಲ್ಲಿ 4,115 ಕಾನ್’ಸ್ಟೇಬಲ್ ಹಾಗೂ ಪಿಎಸ್‌ಐ ಹುದ್ದೆಗಳು : ನೇಮಕಾತಿ ಯಾವಾಗ? ಅರ್ಹತೆಗಳೇನು? Karnataka Police Constable & PSI Recruitment 2024

ಅರ್ಜಿ ಸಲ್ಲಿಸಲು ಈ ದಾಖಲಾತಿಗಳು ಕಡ್ಡಾಯ
  • ಅಭ್ಯರ್ಥಿಯ ಆಧಾರ್ ಕಾರ್ಡ್
  • ಡ್ರೈವಿಂಗ್ ಲೈಸೆನ್ಸ್
  • ವೈದ್ಯಕೀಯ ಫಿಟ್’ನೆಸ್ ಪ್ರಮಾಣ ಪತ್ರ
  • ಅಭ್ಯರ್ಥಿಯ ಭಾವಚಿತ್ರ
  • ಶೈಕ್ಷಣಿಕ ದಾಖಲಾತಿಗಳು
  • ಬ್ಯಾಂಕ್ ಪಾಸ್ ಬುಕ್
  • ವಾಸ ಸ್ಥಳ ದೃಢೀಕರಣ ಪತ್ರ

ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನೀಡಿರುವ ಸಂಬ೦ಧಪಟ್ಟ ಡಿಪೋಗಳ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಬಹುದು.

ಸಹಾಯವಾಣಿ ಸಂಖ್ಯೆಗಳು
  • 0821-3588801
  • 9110692229
  • 8618943513

ಇದನ್ನೂ ಓದಿ: ಹೋಮ್‌ಗಾರ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ | 10ನೇ ತರಗತಿ ಪಾಸಾದ್ರೆ ಅರ್ಜಿ ಹಾಕಿ Home Guard Recruitment Shivamogga


Spread the love
WhatsApp Group Join Now
Telegram Group Join Now

Leave a Comment

error: Content is protected !!