Government Schemes for Women : ಮಹಿಳೆಯರಿಗಾಗಿ ಇರುವ ವಿಶೇಷ ಸರಕಾರಿ ಯೋಜನೆಗಳು

Spread the love

Government Schemes for Women : ಕೇಂದ್ರ ಸರ್ಕಾರವು ಮಹಿಳೆಯರ ಶಿಕ್ಷಣ, ಸುರಕ್ಷತೆ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರ ಅಭಿವೃದ್ಧಿ ಮತ್ತು ಸುರಕ್ಷತೆಗೆ ಸರ್ಕಾರದ ಈ ಯೋಜನೆಗಳು ಲಾಭದಾಯಕ ಮತ್ತು ಸಹಾಯಕವಾಗಿವೆ. ಕೇಂದ್ರ ಸರ್ಕಾರದಿಂದ ಲಭ್ಯವಿರುವ ಕೆಲವು ಮುಖ್ಯ ಯೋಜನೆಗಳ ಬಗ್ಗೆ ಮಾಹಿತಿ ಈ ಕೆಳಗಿನ ಲೇಖನದಲ್ಲಿದೆ…

1. ಮಹಿಳಾ ಸಮ್ಮಾನ್ ಯೋಜನೆ (Mahila Samman Yojana)
WhatsApp Group Join Now
Telegram Group Join Now

2023ರ ಕೇಂದ್ರ ಬಜೆಟ್ ಮಂಡನೆಯಲ್ಲಿ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಘೋಷಿಸಿದ ಯೋಜನೆ ಇದಾಗಿದ್ದು ಇದನ್ನು ‘ಮಹಿಳಾ ಸಮ್ಮಾನ್ ಬಚತ್ ಪತ್ರ ಯೋಜನೆ’ ಎಂದು ಕೂಡ ಕರೆಯಲಾಗುತ್ತದೆ.

ಈ ಯೋಜನೆಯ ಪ್ರಯೋಜನ ಪಡೆಯಲು ಬಾಲಕಿಯರು ಅಥವಾ ಮಹಿಳೆಯರು ಮಾತ್ರ ಅರ್ಹತೆ ಹೊಂದಿದ್ದು; ಆಸಕ್ತರು ಸಮೀಪದ ಅಂಚೆ ಕಚೇರಿಯಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವನ್ನು ಖರೀದಿಸಬಹುದು.

ಮಹಿಳಾ ಸಮ್ಮಾನ್ ಯೋಜನೆಯಿಂದ ಲಾಭವೇನು?
  • ಈ ಯೋಜನೆಯು ಮಹಿಳೆಯರಿಗೆ ಹಣ ಉಳಿತಾಯದ ಜತೆಗೆ ಎರಡು ವರ್ಷಗಳ ವರೆಗೆ 7.5% ಬಡ್ಡಿ ದರ ಪಡೆಯಲು ಸಹಾಯಕವಾಗಿದೆ.
  • ಒಂದು ಬಾರಿಯ ಸಣ್ಣ ಉಳಿತಾಯ ಯೋಜನೆಯಾಗಿದ್ದು, ಗರಿಷ್ಠ 2 ಲಕ್ಷ ಠೇವಣಿಗೆ ಶೇಕಡಾ 7.5ರ ಬಡ್ಡಿದರವನ್ನು ನೀಡುತ್ತದೆ.
  • ಸರ್ಕಾರದ ಸ್ಥಿರ ಆದಾಯ ಉಳಿತಾಯ ಯೋಜನೆಯಾಗಿದ್ದು, ಅಪಾಯ ಮುಕ್ತ ಹೂಡಿಕೆಯಾಗಿದೆ. (Risk free investment) ಉಳಿತಾಯದ ಹಣದ ಮೇಲೆ ಖಚಿತ ಆದಾಯ ಗಳಿಸಬಹುದಾಗಿದೆ.
  • ಈ ಯೋಜನೆಯು ಹೂಡಿಕೆ ಮಾಡುವ ಹೂಡಿಕೆದಾರರಿಗೆ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಉಳಿತಾಯ ಪ್ರಯೋಜನಗಳನ್ನು ಸಹ ನೀಡುತ್ತಿದ್ದು, ನೀವು ತೆರಿಗೆ ಉಳಿತಾಯ ಕೂಡಾ ಮಾಡಬಹುದಾಗಿದೆ.
ಮಹಿಳಾ ಸಮ್ಮಾನ್ ಯೋಜನೆಯ ಹೂಡಿಕೆಯ ಅವಧಿ

ಯೋಜನೆಯ ಅಡಿಯಲ್ಲಿ ಮಹಿಳೆಯರು ಗರಿಷ್ಟ ಎರಡು ವರ್ಷಗಳ ಅವಧಿಯ ವರೆಗೆ ಹೂಡಿಕೆ ಮಾಡಬಹುದಾಗಿದೆ. ಎರಡು ವರ್ಷದ ಒಳಗಾಗಿ ನಿಮಗೆ ಹಣದ ಅವಶ್ಯಕತೆ ಇದ್ದು ನೀವು ಹಿಂಪಡೆಯಬೇಕಾದರೆ, ಯಾವುದೇ ಶುಲ್ಕವಿಲ್ಲದೆ ಹಿಂಪಡೆಯುವ ಸೌಲಭ್ಯವನ್ನು ನೀವು ಪಡೆಯಬಹುದಾಗಿದೆ.

ಪಿಯುಸಿ ಪಾಸಾದವರಿಗೆ ಕೇಂದ್ರ ಸರಕಾರಿಗೆ ಹುದ್ದೆಗಳು | ಅತೀ ಹೆಚ್ಚು ಸಂಬಳದ ಹುದ್ದೆಗಳ ಪಟ್ಟಿ ಇಲ್ಲಿದೆ… PUC Passed Central Government Jobs

2. ಸುಕನ್ಯಾ ಸಮೃದ್ಧಿ ಯೋಜನೆ (Sukanya samruddhi yojane)

ಕೇಂದ್ರ ಸರ್ಕಾರವು ‘ಬೇಟಿ ಪಡಾವೋ ಬೇಟಿ ಬಚಾವೋ’ ಎಂಬ ಕಾರ್ಯಕ್ರಮದ ಅಡಿಯಲ್ಲಿ ಹೆಣ್ಣು ಮಕ್ಕಳಿಗಾಗಿಯೇ ಈ ಯೋಜನೆಯನ್ನು ಪ್ರಾರಂಭಿಸಿದೆ. ಇದೊಂದು ಹೆಣ್ಣು ಮಗುವಿನ ಆರ್ಥಿಕ ಅಗತ್ಯತೆಗಳಿಗಾಗಿ ಸರ್ಕಾರದಿಂದ ಬೆಂಬಲಿತವಾದ ಡೆಪಾಸಿಟ್ ಯೋಜನೆಯಾಗಿದೆ.

ಸುಕನ್ಯಾ ಸಮೃದ್ಧಿ ಯೋಜನೆಯಡಿಯಲ್ಲಿ ಹತ್ತು ವರ್ಷ ತುಂಬಿದ ಅಥವಾ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಗುವಿನ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದಾಗಿದೆ. ಕನಿಷ್ಠ 250 ರೂಪಾಯಿಯಿಂದ ಗರಿಷ್ಠ ಒಂದುವರೆ ಲಕ್ಷ ರೂಪಾಯಿ ಯವರೆಗೆ ಡೆಪಾಸಿಟ್ ಇಡಬಹುದಾಗಿದೆ.

ಒಂದು ಬಾರಿ ಈ ಯೋಜನೆಯ ಅಡಿಯಲ್ಲಿ ಖಾತೆ ತೆರೆದ ನಂತರ ಪ್ರತಿ ಹಣಕಾಸು ವರ್ಷದಲ್ಲಿ ಕನಿಷ್ಠ 250 ರೂಪಾಯಿ ಡೆಪಾಸಿಟ್ ಮಾಡಬೇಕು ಮತ್ತು ಡೆಪಾಸಿಟ್ ಮಾಡುವ ಗರಿಷ್ಠ ಮೊತ್ತವು ಒಂದುವರೆ ಲಕ್ಷ ರೂಪಾಯಿ ಆಗಿದೆ. ಒಂದು ವೇಳೆ ಕನಿಷ್ಠ ಮೊತ್ತವನ್ನು ಡೆಪಾಸಿಟ್ ಮಾಡಲು ಸಾಧ್ಯವಾಗದಿದ್ದರೆ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯು ಡಿಫಾಲ್ಟ್ ಖಾತೆಯಾಗುತ್ತದೆ.

ಒಂದು ಬಾರಿ ಡೀಫಾಲ್ಟ್ ಖಾತೆಯಾದರೆ, ಅದನ್ನು ನೀವು ಪುನಶ್ಚೇತನಗೊಳಿಸಬಹುದು. ಅದು ಹೇಗೆಂದರೆ, ನೀವು ಖಾತೆಯನ್ನು ತೆರೆದು 15 ವರ್ಷ ಪೂರ್ಣಗೊಳ್ಳುವ ಮೊದಲು ಪ್ರತಿ ವರ್ಷದ ಕನಿಷ್ಠ ಡೆಪಾಸಿಟ್ 250 ರೂಪಾಯಿಗೆ 50 ರೂಪಾಯಿ ದಂಡವನ್ನು ಪಾವತಿಸಿ ನಿಮ್ಮ ಡೀಫಾಲ್ಟ್ ಖಾತೆಯನ್ನು ಪುನಶ್ಚೇತನಗೊಳಿಸಬಹುದು.

ಸುಕನ್ಯಾ ಸಮೃದ್ಧಿ ಯೋಜನೆ, ಖಾತೆಯನ್ನು ತೆರೆದ 21 ವರ್ಷಗಳ ನಂತರ ಅಥವಾ ಮಗುವಿನ ವಯಸ್ಸು 18 ವರ್ಷ ತುಂಬಿದ ನಂತರ ಮದುವೆಯ ಸಮಯದಲ್ಲಿ ಈ ಹಣದ ಲಾಭವನ್ನು ಪಡೆಯಬಹುದಾಗಿದೆ. ಇಷ್ಟೇ ಅಲ್ಲದೆ ಈ ಯೋಜನೆಯು ಖಾತೆದಾರರಿಗೆ ಹಲವಾರು ತೆರಿಗೆ ಪ್ರಯೋಜನಗಳನ್ನು ನೀಡುತ್ತಿದ್ದು ಹೆಚ್ಚಿನ ಬಡ್ಡಿ ದರವನ್ನು ಕೂಡ ನೀಡುತ್ತಿದೆ. ಈ ಯೋಜನೆಯ ಲಾಭ ಪಡೆಯಲು ಹತ್ತಿರದ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಭೇಟಿ ನೀಡಿ.

Government Schemes for Women
3. ಸಖಿ ನಿವಾಸ ಯೋಜನೆ (Sakhi Niwas Yojana)

ಹಳ್ಳಿಯಿಂದ ನಗರ ಪ್ರದೇಶಕ್ಕೆ ಬಂದು ಉದ್ಯೋಗ ಮಾಡುತ್ತಿರುವ ಮಹಿಳೆಯರಿಗೆ ಕಡಿಮೆ ದರದಲ್ಲಿ ವಸತಿ ಯೋಜನೆಯನ್ನು ಕಲ್ಪಿಸಿಕೊಡುವ ಯೋಜನೆ ಇದಾಗಿದೆ. ಕೇಂದ್ರ ಸರ್ಕಾರವು ಈ ಮುಂಚೆ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ವಸತಿ ಸೌಲಭ್ಯವನ್ನು ಒದಗಿಸುವ ಸಲುವಾಗಿ ಬಾಡಿಗೆ ಜಾಗದಲ್ಲಿ ಕಟ್ಟಡಗಳನ್ನು ನಿರ್ಮಿಸಿ ಹಾಸ್ಟೆಲ್’ಗಳನ್ನು ನಡೆಸುವ ಯೋಜನೆಯನ್ನು 1972-73ರಲ್ಲೇ ಜಾರಿಗೆ ತಂದಿದೆ.

2022 ಏಪ್ರಿಲ್ 1ರಿಂದ ಇದೆ ಯೋಜನೆಯನ್ನು ಸ್ವಲ್ಪ ತಿದ್ದುಪಡಿ ಮಾಡಿ ಭಾರತದ ವಿವಿಧ ಪ್ರದೇಶಗಳಲ್ಲಿ ‘ಸಖಿ ನಿವಾಸ್ ಯೋಜನೆ’ ಅಡಿಯಲ್ಲಿ ಬಾಡಿಗೆಗೆ ಹಾಸ್ಟೆಲ್ ಸೌಲಭ್ಯವನ್ನು ಒದಗಿಸಲು ಆರಂಭಿಸಿತು. ಈ ಹಾಸ್ಟೆಲ್’ಗಳಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ, ಅವರ ಮಕ್ಕಳಿಗೆ ಮತ್ತು ಉನ್ನತ ಶಿಕ್ಷಣಕ್ಕಾಗಿ ಬೇರೆ ಊರಿಗೆ ಬರುವ ಮಹಿಳೆಯರಿಗೆ ಉಳಿಯಲು ಮಾತ್ರ ಅವಕಾಶವಿದೆ.

ಮಹಿಳೆಯರಿಗೆ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿದ್ದು ಈ ಹಾಸ್ಟೆಲ್’ಗಳನ್ನು ವರ್ಕಿಂಗ್ ವುಮೆನ್ ಹಾಸ್ಟೆಲ್ (working women hostel) ಎಂದು ಕೂಡ ಕರೆಯುತ್ತಾರೆ. ಈ ಯೋಜನೆಯ ಅಡಿಯಲ್ಲಿ ಉನ್ನತ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಗಳಿಗೆ ಬರುವ ಮಹಿಳೆಯರಿಗೆ ಕಡಿಮೆ ದರದಲ್ಲಿ ವಸತಿ ಸೌಕರ್ಯ ಮತ್ತು ಅವರ ಮಕ್ಕಳಿಗೆ ವಸತಿ ಊಟ ಹಾಗೂ ಡೇ ಕೇರ್ ನಂತಹ ಅನೇಕ ಮೂಲ ಸೌಕರ್ಯಗಳು ಸಿಗಲಿವೆ.

ಸಖಿ ನಿವಾಸದ ಸೌಲಭ್ಯವನ್ನು ಯಾವುದೇ ವಿದ್ಯಾರ್ಥಿನಿಯರು, ಉದ್ಯೋಗಸ್ಥ ಮಹಿಳೆಯರು ಪಡೆಯಬಹುದು. ಅವರು ಒಂಟಿಯಾಗಿರಬಹುದು, ವಿಧವೆಯರಾಗಿರಬಹುದು, ವಿಚ್ಛೇದಿತರು, ಪತಿಯಿಂದ ಬೇರ್ಪಟ್ಟವರು, ವಿವಾಹಿತೆಯರು ಎಲ್ಲರಿಗೂ ವಸತಿ ಸೌಕರ್ಯ ಲಭ್ಯವಾಗಲಿದೆ. ಸಮಾಜದ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ.

Honge Krushi : ರೈತರ ಕೈ ಹಿಡಿಯುವ ಹೊಂಗೆ ಕೃಷಿ | ಹೊಂಗೆ ಬೆಳೆಯಲು ಸಿಗಲಿದೆ ನರೇಗಾ ನೆರವು

4. ಮಹಿಳಾ ಶಕ್ತಿ ಕೇಂದ್ರ ಯೋಜನೆ (Mahila Shakti Kendra -MSK)

ಕೇಂದ್ರ ಸರ್ಕಾರವು ಮಹಿಳೆಯರ ಜೀವನ ಮಟ್ಟವನ್ನು ಸುಧಾರಿಸಲು ಹಾಗೂ ಗ್ರಾಮೀಣ ಮಹಿಳೆಯರನ್ನು ಸಬಲೀಕರಣ ಗೊಳಿಸಲು ಮಹಿಳಾ ಶಕ್ತಿ ಕೇಂದ್ರ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆ ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಇಲಾಖೆಯಿಂದ 2017 ರಲ್ಲಿ ಜಾರಿಗೆ ಬಂದಿದೆ.

ಈ ಯೋಜನೆಯ ಮುಖ್ಯ ಉದ್ದೇಶ ಗ್ರಾಮೀಣ ಮಹಿಳೆಯರಿಗೆ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳುವ ವಾತಾವರಣವನ್ನು ಸೃಷ್ಟಿ ಮಾಡುವುದಾಗಿದ್ದು, ಮಹಿಳಾ ಶಕ್ತಿಯನ್ನು ಸಬಲೀಕರಣಗೊಳಿಸುತ್ತಿದೆ. ರಾಷ್ಟ್ರೀಯ, ರಾಜ್ಯ, ಜಿಲ್ಲಾ ಮತ್ತು ಬ್ಲಾಕ್ ಮಟ್ಟ ಸೇರಿ ಒಟ್ಟು 4 ಹಂತಗಳಲ್ಲಿ ಮಹಿಳೆಯರ ಸಮಸ್ಯೆ ಕುರಿತು ತಾಂತ್ರಿಕ ಬೆಂಬಲ ನೀಡಲು ಸಂಪನ್ಮೂಲ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ.

ಈ ಮಹಿಳಾ ಕೇಂದ್ರಗಳಲ್ಲಿ ಮಹಿಳಾ ಕಲ್ಯಾಣ ಅಧಿಕಾರಿ ಮತ್ತು ಜಿಲ್ಲಾ ಸಂಯೋಜಕರ ನೇಮಕ ಮಾಡಲಾಗಿದೆ. ಈ ಹುದ್ದೆಗಳಿಗೆ ಮಹಿಳೆಯರಿಗೆ ಮಾತ್ರ ಹೆಚ್ಚಿನ ಆದ್ಯತೆ ನೀಡಲಾಗುವುದು. ಈ ಹುದ್ದೆಯಲ್ಲಿರುವವರು, ಸರ್ಕಾರದಿಂದ ಮಹಿಳೆಯರಿಗಾಗಿ ಇರುವ ಎಲ್ಲ ಯೋಜನೆಗಳನ್ನು ತಳಮಟ್ಟದ ವರೆಗೂ ತಲುಪಿಸಲು ಸಹಾಯ ಮಾಡುತ್ತಾರೆ ಹಾಗೂ ಇದೇ ಇವರ ಕರ್ತವ್ಯವಾಗಿರುತ್ತದೆ.

5. ಮಹಿಳಾ ಸಹಾಯವಾಣಿ ಯೋಜನೆ (Women helpline scheme)

ಕೇಂದ್ರ ಸರಕಾರ ‘ಮಹಿಳಾ ಸಹಾಯವಾಣಿ ಯೋಜನೆ’ ಮಹಿಳೆಯರ ಸುರಕ್ಷತೆಗಾಗಿಯೇ ಜಾರಿಗೊಳಿಸಿದ ಯೋಜನೆಯಾಗಿದೆ. ಸಾರ್ವಜನಿಕ ಹಾಗೂ ಖಾಸಗಿ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ತಡೆಹಿಡಿಯಲು ಈ ಯೋಜನೆಯು ಸಹಕಾರಿಯಾಗಿದೆ.

ಯಾವುದೇ ಖಾಸಗಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ದೌರ್ಜನಕ್ಕೆ ಒಳಗಾದರೆ, ದೌರ್ಜನಕ್ಕೆ ಒಳಗಾದ ಮಹಿಳೆಯರಿಗೆ 24 ಗಂಟೆಗಳ ಒಳಗಾಗಿ ತುರ್ತು ಸಹಾಯವನ್ನು ಒದಗಿಸುತ್ತದೆ. ಯಾವುದೇ ಸಂದರ್ಭದಲ್ಲಿ ಅಥವಾ ತುರ್ತು ಪರಿಸ್ಥಿತಿಯಲ್ಲಿ ಮಹಿಳೆಯರು 181 ಟೋಲ್ ಫ್ರೀ ಸಂಖ್ಯೆಗೆ ಕಾಲ್ ಮಾಡಿದರೆ ಸಹಾಯ ಸಿಗಲಿದೆ.


Spread the love
WhatsApp Group Join Now
Telegram Group Join Now
error: Content is protected !!