Free Solar Rooftop Yojana 2024 : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಜುಲೈ 23ರಂದು ಮಂಡಿಸಿರುವ 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್’ನಲ್ಲಿ (Union Budget 2024-25) ಪ್ರತಿ ತಿಂಗಳು 300 ಯೂನಿಟ್‌ಗಳ ವರೆಗೆ ಉಚಿತ ಸೋಲಾರ್ ವಿದ್ಯುತ್ ಯೋಜನೆಗೆ (Free solar electricity Yojana) ಅಧಿಕೃತ ಚಾಲನೆ ನೀಡಿದ್ದಾರೆ.
ಕಳೆದ ಫೆಬ್ರುವರಿಯಲ್ಲಿ ಮಂಡಿಸಿದ್ದ ಕೇಂದ್ರ ಮಧ್ಯಂತರ ಬಜೆಟ್‌ನಲ್ಲಿ ‘ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್’ (Prime Minister Surya Ghar Muft Yojana) ಸೋಲಾರ್ ವಿದ್ಯುತ್ ಯೋಜನೆ ಘೋಷಣೆ ಮಾಡಲಾಗಿತ್ತು. ಈ ಯೋಜನೆಗೆ ದೇಶಾದ್ಯಂತ ಉತ್ತಮ ಸ್ಪಂದನೆ ದೊರೆತಿದ್ದು; ಈಗಾಗಲೇ 1.28 ಕೋಟಿ ಮಂದಿ ಹೆಸರು ನೋಂದಾಯಿಸಿದ್ದಾರೆ. 14 ಲಕ್ಷ ಜನ ಅರ್ಜಿ ಸಲ್ಲಿಕೆ ಮಾಡಿದ್ದಾರೆ ಎಂಬ ಮಾಹಿತಿಯನ್ನು ಕೇಂದ್ರ ಹಣಕಾಸು ಸಚಿವರು ಬಜೆಟ್ ಭಾಷಣದಲ್ಲಿ ನೀಡಿದ್ದಾರೆ.
ಹಾಗಾದರೆ, ಏನಿದು ಉಚಿತ ಸೋಲಾರ್ ವಿದ್ಯುತ್ ಯೋಜನೆ? ಯಾರಿಗೆಲ್ಲ ಇದರ ಪ್ರಯೋಜನ ಸಿಗಲಿದೆ? ನೋಂದಣಿ ಮತ್ತು ಅರ್ಜಿ ಸಲ್ಲಿಕೆ ಹೇಗೆ? ಅರ್ಜಿ ಸಲ್ಲಿಸಲು ಏನೆಲ್ಲ ಬೇಕು? ಇತ್ಯಾದಿ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ…
ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಆಗಸ್ಟ್’ನಿಂದ ಎಷ್ಟೆಷ್ಟು ಸಂಬಳ ಏರಿಕೆ? ಮೊಬೈಲ್’ನಲ್ಲೇ ಚೆಕ್ ಮಾಡಿ… 7th Pay Commission Calculation
ರಾಜ್ಯದಲ್ಲಿ 10,000 ಅರ್ಜಿ ಸಲ್ಲಿಕೆ
‘ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್’ ಸೋಲಾರ್ ವಿದ್ಯುತ್ ಯೋಜನೆ ಘೋಷಣೆಯಾದ ನಂತರ ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವಾಲಯವು ಸೋಲಾರ್ ವಿದ್ಯುತ್ ಯೋಜನೆ ಕುರಿತು ಪ್ರಚಾರಾಂದೋಲನಕ್ಕಾಗಿ ‘ಸೂರ್ಯ ರಥ ಯಾತ್ರೆ’ ಆರಂಭಿಸಿತ್ತು. ಸದರಿ ಸೂರ್ಯ ರಥ ಯಾತ್ರೆಗೆ ರಾಜ್ಯ ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರು ಜೂನ್ 8ರಂದು ಹಸಿರು ನಿಶಾನೆ ತೋರಿಸುವ ಮೂಲಕ ಅಧಿಕೃತ ಚಾಲನೆ ನೀಡಿದ್ದರು.
ದೇಶಾದ್ಯಂತ ಅರ್ಹ ಒಂದು ಕೋಟಿ ಕುಟುಂಬಗಳ ಮನೆಗಳಿಗೆ ಉಚಿತ ಸೋಲಾರ್ ವಿದ್ಯುತ್ ಒದಗಿಸುವ ಈ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು; ಈ ತನಕ ರಾಜ್ಯದಲ್ಲಿ ಒಟ್ಟಾರೆ 10,000 ಜನ ಪಿಎಂ ಸೂರ್ಯ ಘರ್ ಯೋಜನೆಯ ಉಚಿತ ಸೋಲಾರ್ ವಿದ್ಯುತ್ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರು ತಿಳಿಸಿದ್ದರು.
ಏನಿದು ಪಿಎಂ ಘರ್ ಯೋಜನೆ?
ದೇಶದಲ್ಲಿ ಸೌರಶಕ್ತಿಯ ಬಳಕೆ ಹೆಚ್ಚಿಸುವುದರೊಂದಿಗೆ ಜನರ ವಿದ್ಯುತ್ ಬಿಲ್ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ‘ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್’ ಸೋಲಾರ್ ವಿದ್ಯುತ್ ಯೋಜನೆ ಅನುಷ್ಠಾನಗೊಳಿಸಿದೆ. 2024-25ನೇ ಸಾಲಿನಲ್ಲಿ ಈ ಯೋಜನೆಗಾಗಿ 10,000 ಕೋಟಿ ರೂಪಾಯಿ ಮೀಸಲಿಡಲಾಗಿದೆ.
ಕರ್ನಾಟಕದ ಗೃಹಜ್ಯೋತಿ ಯೋಜನೆಯಂತೆ ಈ ಯೋಜನೆಯಲ್ಲಿ ನೇರವಾಗಿ ಉಚಿತ ವಿದ್ಯುತ್ ಸಿಗುವುದಿಲ್ಲ. ಬದಲಾಗಿ ಸರ್ಕಾರದ ಸಹಾಯಧನ ಬಳಸಿಕೊಂಡು ಮನೆ ಛಾವಣಿ ಮೇಲೆ ಸೋಲಾರ್ ಘಟಕ ಸ್ಥಾಪಿಸಿಕೊಳ್ಳುವ ಮೂಲಕ ಪ್ರತಿ ತಿಂಗಳು 300 ಯೂನಿಟ್ ವರೆಗಿನ ಉಚಿತ ವಿದ್ಯುತ್ ಪಡೆದುಕೊಳ್ಳಬಹುದು.
ಒಮ್ಮೆ ಸೋಲಾರ್ ಘಟಕ ಸ್ಥಾಪಿಸಿದರೆ ಬರೋಬ್ಬರಿ 25 ವರ್ಷಗಳ ಕಾಲ ವಿದ್ಯುತ್ ಬಿಲ್ ಪಾವತಿಸಬೇಕಿಲ್ಲ. 5 ವರ್ಷಗಳ ಗ್ಯಾರಂಟಿ ಕೂಡ ನೀಡಲಾಗುತ್ತದೆ. ಅಗತ್ಯತೆಗಿಂತ ಹೆಚ್ಚುವರಿ ವಿದ್ಯುತ್ ತಯಾರಿಸಿದರೆ ಅದನ್ನು ಮಾರಾಟ ಮಾಡಿ ಆದಾಯ ಕೂಡ ಹಣ ಗಳಿಸಬಹುದಾಗಿದೆ.
ಸರ್ಕಾರದ ಸಬ್ಸಿಡಿ ವಿವರ
‘ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್’ ಸೋಲಾರ್ ವಿದ್ಯುತ್ ಯೋಜನೆಯಡಿಯಲ್ಲಿ ವಿದ್ಯುತ್ ಘಟಕ ಸ್ಥಾಪನೆಗೆ ಕೇಂದ್ರ ಸರ್ಕಾರ ನೀಡುವ ಸಬ್ಸಿಡಿ ವಿವರ ಈ ಕೆಳಗಿನಂತಿದೆ:
- 1 ಕಿಲೋ ವ್ಯಾಟ್ ಸೋಲಾರ್ ಘಟಕ : 30,000 ರೂಪಾಯಿ
- 2 ಕಿಲೋ ವ್ಯಾಟ್ ಘಟಕ : 60,000 ರೂಪಾಯಿ
- 3 ಕಿಲೋ ವ್ಯಾಟ್ ಘಟಕ : 78,000 ರೂಪಾಯಿ
ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು?
‘ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್’ ಸೋಲಾರ್ ವಿದ್ಯುತ್ ಯೋಜನೆಯಡಿ ಅರ್ಜಿ ಸಲ್ಲಿಸಲು ಪ್ರಮುಖವಾಗಿ ಸ್ವಂತ ಮನೆ ಹೊಂದಿರಬೇಕು. ಕುಟುಂಬದ ವಾರ್ಷಿಕ ಆದಾಯ 1.5 ಲಕ್ಷ ರೂಪಾಯಿ ಮೇಲಿರಬಾರದು ಕುಟುಂಬದ ಸದಸ್ಯರು ಯಾರೂ ಸರ್ಕಾರಿ ಉದ್ಯೋಗದಲ್ಲಿರಬಾರದು. ಅರ್ಜಿದಾರರ ಬ್ಯಾಂಕ್ ಖಾತೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.
ಮೇಲ್ಕಾಣಿಸಿದ ಅರ್ಹತೆಯುಳ್ಳವರು ಮೊಬೈಲ್ ನಂಬರ್, ಆಧಾರ್ ಕಾರ್ಡ್, ರೇಷನ್ ಕಾರ್ಡ್, ವೋಟರ್ ಐಡಿ, ಪ್ಯಾನ್ ಕಾರ್ಡ್, 6 ತಿಂಗಳ ವಿದ್ಯುತ್ ಬಿಲ್, ಅರ್ಜಿದಾರರ ಭಾವಚಿತ್ರ, ಬ್ಯಾಂಕ್ ಪಾಸ್ ಬುಕ್, ಆದಾಯ ಪ್ರಮಾಣ ಪತ್ರ ಹಾಗೂ ವಿಳಾಸ ದೃಢೀಕರಣ ಪತ್ರ ಹಾಗೂ ಮನೆಗೆ ಸಂಬ೦ಧಿಸಿದ ದಾಖಲೆಗಳೊಂದಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಹೇಗೆ ಸಲ್ಲಿಸಬೇಕು?
ಈ ಲೇಖನದ ಕೊನೆಯಲ್ಲಿ ‘ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್’ ಸೋಲಾರ್ ವಿದ್ಯುತ್ ಯೋಜನೆಯ ಅಧಿಕೃತ ಜಾಲತಾಣದ ಲಿಂಕ್ ನೀಡಲಾಗಿದೆ. ಆ ಲಿಂಕ್ ಬಳಸಿಕೊಂಡು ಈ ಕೆಳಗಿನ ಹಂತಗಳನ್ನು ಅನುಸರಿಸಿ…
- PM – SURYA GHAR: MUFT BIJLI YOJANA National Portal ಹೋಂ ಪೇಜ್‌ನಲ್ಲಿ ಕಾಣುವ ‘Apply for rooftop’ ಎಂಬ ಆಯ್ಕೆ ಮೇಲೆ ಒತ್ತಿ.
- Registration ಪೇಜ್ ತೆಗೆದುಕೊಳ್ಳುತ್ತದೆ. ಅಲ್ಲಿ ರಾಜ್ಯ, ಜಿಲ್ಲೆ, ನಿಮ್ಮ ಜಿಲ್ಲಾ ವ್ಯಾಪ್ತಿಯ ಎಸ್ಕಾಂ ಹಾಗೂ ನಿಮ್ಮ ವಿದ್ಯುತ್ ಬಿಲ್’ನಲ್ಲಿರುವ Consumer Account Number ಹಾಕಿ, ಕೆಳಗಿರುವ Captcha ಕೋಡ್ ನಮೂದಿಸಿ NEXT ಮೇಲೆ ಕ್ಲಿಕ್ ಮಾಡಿ.
- ನಂತರ ನಿಮ್ಮ ಮೊಬೈಲ್ ನಂಬರ್ ಹಾಕಿ Sent OTP ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಮೊಬೈಲ್’ಗೆ OTP ಬರುತ್ತದೆ. ಆ OTP ನಮೂದಿಸುವ ಮೂಲ ಮುಂದಿನ ಹಂತವಾಗಿ ಅಲ್ಲಿ ಕೇಳಲಾಗುವ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಅರ್ಜಿ ಸಲ್ಲಿಕೆಯ ಬಳಿಕ ವಿದ್ಯುತ್ ಸರಬರಾಜು ಕಂಪನಿಯಿ೦ದ ಅನುಮೋದನೆ ಬಂದ ನಂತರ ಗ್ರಾಹಕರಿಂದ ಪ್ಲಾಂಟ್ ಪಡೆದು ಅಳವಡಿಸಿಕೊಳ್ಳಬೇಕು.
- ಪ್ಲಾಂಟ್ ಅಳವಡಿಸಿಕೊಂಡ ನಂತರ ಸಂಬ೦ಧಿಸಿದ ಮಾಹಿತಿಯನ್ನು ಸಬ್ಮಿಟ್ ಮಾಡಿ ನೆಟ್ ಮೀಟರ್’ಗೆ ಅರ್ಜಿ ಸಲ್ಲಿಸಬೇಕು. ಮುಂದೆ ನಿಮ್ಮ ಜಿಲ್ಲಾ ವ್ಯಾಪ್ತಿಯ ಎಸ್ಕಾಂ ನವರು ಪರಿಶೀಲನೆ ನಡೆಸಿ ಪ್ರಮಾಣ ಪತ್ರ ನೀಡುತ್ತಾರೆ.
- ಪ್ರಮಾಣ ಪತ್ರ ದೊರೆತ ನಂತರ ಬ್ಯಾಂಕ್ ಖಾತೆ ವಿವರ ಹಾಗೂ ರದ್ದಾದ ಚೆಕ್ ಅನ್ನು ವೆಬ್‌ಸೈಟ್ ಮುಖಾಂತರ ಸಬ್ಮಿಟ್ ಮಾಡಿದರೆ, ಅರ್ಜಿದಾರನ ಖಾತೆಗೆ 30 ದಿನಗಳ ಒಳಗಾಗಿ ಸಬ್ಸಿಡಿ ಹಣ ಜಮೆಯಾಗುತ್ತದೆ.
Hirelingadahalli
Dis-Haveri
Tq-Haveri
Post-Kurubagonda