ಕುರಿ ಶೆಡ್, ದನದ ಕೊಟ್ಟಿಗೆ, ಕೃಷಿ ಹೊಂಡ, ಬದು ನಿರ್ಮಾಣಕ್ಕೆ ₹5 ಲಕ್ಷದ ವರೆಗೆ ಆರ್ಥಿಕ ನೆರವು Mgnrega Personal Work Subsidy

Spread the love

Mgnrega Personal Work Subsidy : ನರೇಗಾ ಯೋಜನೆಯಡಿ (Mgnrega karnataka) ಕುರಿ ಶೆಡ್, ಮೇಕೆ ಶೆಡ್, ದನದ ಕೊಟ್ಟಿಗೆ, ಕೃಷಿ ಹೊಂಡ, ಬದು ನಿರ್ಮಾಣ, ಬಚ್ಚಲು ಗುಂಡಿ ಮತ್ತು ತೋಟಗಾರಿಕೆ, ಕೃಷಿ, ಅರಣ್ಯ, ರೇಷ್ಮೆ ಇಲಾಖೆಯಡಿ ವೈಯಕ್ತಿಕ ಕಾಮಗಾರಿಗಳಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಗ್ರಾಮೀಣ ಭಾಗದ ಒಂದು ಅರ್ಹ ಕುಟುಂಬವು ಜೀವಿತಾವಧಿಯಲ್ಲಿ 5 ಲಕ್ಷ ರೂಪಾಯಿಗಳ ವರಗೆ ವೈಯಕ್ತಿಕ ಕಾಮಗಾರಿ ಪಡೆಯಲು ಮಹಾತ್ಮ ಗಾಂಧಿ ನರೇಗಾ ಯೋಜನೆಯ ಮೂಲಕ ಸೌಲಭ್ಯವನ್ನು ಕಲ್ಪಿಸಲಾಗಿದೆ. ಈ ಬರಗಾಲದಲ್ಲಿ ನರೇಗಾ ಯೋಜನೆ (Mahatma Gandhi Rashtriya Rural Employment Guarantee Scheme) ಸದ್ಭಳಕೆ ಮಾಡಿಕೊಳ್ಳಲು ಹಳ್ಳಿಹಳ್ಳಿಗಳಲ್ಲಿ ಜನಜಾಗೃತಿ ಮೂಡಿಸಲಾಗುತ್ತಿದೆ.

ರಾಜ್ಯದ ವಿವಿಧ ತಾಲ್ಲೂಕುಗಳಲ್ಲಿ 2024-25ನೇ ಸಾಲಿನ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ವಾರ್ಷಿಕ ಕ್ರಿಯಾ ಯೋಜನೆ ತಯಾರಿಸುತ್ತಿದ್ದು, ವೈಯಕ್ತಿಕ ಕಾಮಗಾರಿಗಳ ಸೌಲಭ್ಯ ಪಡೆಯಲು ಇಚ್ಛಿಸುವ ಗ್ರಾಮೀಣ ಪ್ರದೇಶದ ರೈತರು, ಕೂಲಿಕಾರರು ತಮ್ಮ ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಬಹುದು. ಗ್ರಾಮೀಣ ಪ್ರದೇಶದ ಜನರು ತಮಗೆ ಬೇಕಾದ ವೈಯಕ್ತಿಕ ಕಾಮಗಾರಿ ಪಡೆಯಲು ಸಂಬ೦ಧಿಸಿದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ವೈಯಕ್ತಿಕ ಕಾಮಗಾರಿಯ ಹೆಸರು ನೋಂದಾಯಿಸಿಕೊಳ್ಳಬಹುದು.

ಜುಲೈ 15ರಿಂದ ಮುಂಗಾರು ಅಧಿವೇಶನ: ರಾಜ್ಯ ಸರ್ಕಾರಿ ನೌಕರರಿಗೆ ಸಿಗಲಿದೆ ‘ಸಂಬಳ ಏರಿಕೆ’ ಸಿಹಿಸುದ್ದಿ? 7th Pay Commission Report in Monsoon Session

ಯಾವುದಕ್ಕೆಲ್ಲ ಸಿಗಲಿದೆ ನೆರವು?

ಹಸು, ಕುರಿ, ಕೋಳಿ, ಹಂದಿ ಸಾಕಾಣಿಕೆ ಮೂಲಕ ಸ್ವಯಂ ಉದ್ಯೋಗ ಮಾಡಲಿಚ್ಛಿಸುವವರು ಶೆಡ್ ನಿರ್ಮಾಣದಂತಹ ವೈಯಕ್ತಿಕ ಕಾಮಗಾರಿ, ಕೃಷಿ ಹೊಂಡ, ಕ್ಷೇತ್ರ ಬದು, ತೋಟಗಾರಿಕೆ ಬೆಳೆ, ರೇಷ್ಮೆ ಹಾಗೂ ಅರಣ್ಯ ಬೆಳೆಗಳು ಸೇರಿದಂತೆ ಇತರೆ ವೈಯಕ್ತಿಕ ಕಾಮಗಾರಿ ಪಡೆಯಬಹುದು.

ತೋಟಗಾರಿಕೆ ಇಲಾಖೆಯಿಂದಲೂ ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿ ಸೌಲಭ್ಯ ಪಡೆದುಕೊಳ್ಳಲು ರೈತರು ಅರ್ಜಿ ಸಲ್ಲಿಸಬಹುದಾಗಿದೆ. ವೈಯಕ್ತಿಕ ಕಾಮಗಾರಿ ಹಾಗೂ ಅವುಗಳಿಗೆ ಲಭ್ಯವಾಗುವ ಅಂದಾಜು ಮೊತ್ತದ ವಿವರ ಈ ಕೆಳಗಿನಂತಿದೆ:

  • ಕೃಷಿ ಹೊಂಡ :
    15X15X3 ಮೀಟರ್ ₹1,49,000
    12X12X3 ಮೀಟರ್ ₹92,000
    10XX10X3 ಮೀಟರ್ ₹63,000
    9X9X3 ಮೀಟರ್ ₹52,000
  • ತೆರೆದ ಬಾವಿ ₹1,50,000
  • ಕೊಳವೆ ಬಾವಿ ಮರುಪೂರಣ ₹27,000
  • ಜಮೀನು ಸಮತಟ್ಟು ₹10,00
  • ಕಂದಕ ಬದು ನಿರ್ಮಾಣ ₹35,000 ದಿಂದ ₹84,000
  • ಬಚ್ಚಲು ಗುಂಡಿ ₹11,000
  • ಪೌಷ್ಠಿಕ ತೋಟ ₹4,915
  • ದನದ ದೊಡ್ಡಿ ₹57,000
  • ಕುರಿ ದೊಡ್ಡಿ ₹70,000
  • ಮೇಕೆ ಶೆಡ್ ₹70,000
  • ಹಂದಿ ಶೆಡ್ ₹87,000
  • ಕೋಳಿ ಶೆಡ್ ₹60,000
  • ಇರುಳ್ಳಿ ಉಗ್ರಾಣ ಮನರೇಗಾ ₹37,138
  • ತೋಟಗಾರಿಕೆ ಇಲಾಖೆ ₹35,000
    ಫಲಾನುಭವಿ ₹25,862
    ಒಟ್ಟು ₹98,000
  • ಎರೆ ಹುಳು ಗೊಬ್ಬರ ತೊಟ್ಟಿ ₹20,000

ಅಂಗನವಾಡಿ ಸಹಾಯಕಿಯರು, ಕಾರ್ಯಕರ್ತೆಯರು ಹುದ್ದೆಗಳಿಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆ ಲಿಂಕ್ ಇಲ್ಲಿದೆ… Anganwadi Teacher Jobs 2024

Mgnrega Personal Work Subsidy
ನರೇಗಾ ನೆರವು ಪಡೆಯುವುದು ಹೇಗೆ?

ಮೇಲ್ಕಾಣಿಸಿದ ಎಲ್ಲ ಸಹಾಯಧನ ಪಡೆಯಲು ಮುಖ್ಯವಾಗಿ ಜಾಬ್ ಕಾರ್ಡ್ ಹೊಂದಿರಬೇಕು. ಸ್ಥಳೀಯ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ನಮೂನೆ 1ನ್ನು ಭರ್ತಿ ಮಾಡಿ ಕುಟುಂಬದ 18 ವರ್ಷ ಮೇಲ್ಪಟ್ಟ ವಯಸ್ಸಿನ ಎಲ್ಲಾ ಸದಸ್ಯರ ಇತ್ತೀಚಿನ ಭಾವಚಿತ್ರ, ವೈಯಕ್ತಿಕ ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಸಂಖ್ಯೆ ಇವುಗಳ ಜೆರಾಕ್ಸ್ ಪ್ರತಿಯೊಂದಿಗೆ ಅರ್ಜಿಯನ್ನು ಸಲ್ಲಿಸುವ ಮೂಲಕ ಜಾಬ್‌ಕಾರ್ಡ್ ಪಡೆಯಬಹುದು.

ಉದ್ಯೋಗ ಚೀಟಿ ಪಡೆಯಲು ಕುಟುಂಬದ ಪ್ರತಿಯೊಬ್ಬ ವಯಸ್ಕ ಸದಸ್ಯರ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಅಗತ್ಯ. ಉದ್ಯೋಗಕ್ಕಾಗಿ ನಮೂನೆ-6ರಲ್ಲಿ ಗ್ರಾಮ ಪಂಚಾಯ್ತಿಗೆ ಬೇಡಿಕೆ ಸಲ್ಲಿಸಿ, ಸ್ವೀಕೃತಿ ಪಡೆಯಿರಿ ಅಥವಾ ಮನೆಯಲ್ಲಿಯೇ ಕುಳಿತು ಕಾಯಕ ಮಿತ್ರಮೊಬೈಲ್ ಆ್ಯಪ್ ಮೂಲಕವೂ ಅರ್ಜಿ ಸಲ್ಲಿಸಬಹುದು.

ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ: ಕುರಿ-ಮೇಕೆ ಸಾಕಾಣಿಕೆಗೆ ₹1.75 ಲಕ್ಷ ಆರ್ಥಿಕ ನೆರವು ನೀಡಲು ಅರ್ಜಿ ಆಹ್ವಾನ Amrita Swabhimani Kurigahi Scheme

ಯಾರಿಗೆಲ್ಲ ಸಿಗಲಿದೆ ಈ ನೆರವು?

ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸುವ ಪ್ರತಿ ಕುಟುಂಬಕ್ಕೆ ವರ್ಷದಲ್ಲಿ 100 ದಿನಗಳ (ಬರ ಪೀಡಿತ ಪ್ರದೇಶಗಳಲ್ಲಿ 150 ದಿನಗಳು) ಉದ್ಯೋಗ ಖಾತರಿ ನೀಡಲಾಗುತ್ತಿದೆ. ವಿಸೇಷವೆಂದರೆ ಅಂಗವಿಕಲರು ಹಾಗೂ 65 ವರ್ಷ ಮೇಲಿನ ವೃದ್ಧರಿಗೂ ಕೂಡ ವಿನಾಯಿತಿ ಸಹಿತ ಉದ್ಯೋಗ ಅವಕಾಶಗಳಿವೆ.

ಈ ಯೋಜನೆಯಡಿ ನೋಂದಾಯಿತ ಒಂದು ಅರ್ಹ ಕುಟುಂಬ ತನ್ನ ಜೀವಿತಾವಧಿಯಲ್ಲಿ ಗರಿಷ್ಠ 5 ಲಕ್ಷ ರೂಪಾಯಿ ವರೆಗೆ ನೀಡಲಾಗುವ ವೈಯಕ್ತಿಕ ಕಾಮಗಾರಿ ಕೈಗೊಳ್ಳಲು ಅವಕಾಶವಿದೆ. ಬರಗಾಲದಿಂದ ಕಂಗಾಲಾಗಿರುವ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಈ ನೆರವು ಅತ್ಯಂತ ಸಹಕಾರಿಯಾಗಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲೆಮಾರಿ ಬುಡಕಟ್ಟುಗಳು, ಅಧಿಸೂಚನೆಯಿಂದ ಕೈಬಿಟ್ಟ ಬುಡಕಟ್ಟುಗಳು, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು, ಮಹಿಳಾ ಪ್ರಧಾನ ಕುಟುಂಬಗಳು, ವಿಕಲಚೇತನ ಕುಟುಂಬಗಳು, ಭೂ ಸುಧಾರಣಾ ಫಲಾನುಭವಿಗಳು, ವಸತಿ ಯೋಜನೆಯ ಫಲಾನುಭವಿಗಳು, ಅರಣ್ಯ ಹಕ್ಕು ಕಾಯ್ದೆ 2006ರ ಫಲಾನುಭವಿಗಳು ಹಾಗೂ ಸಣ್ಣ ಮತ್ತು ಅತಿ ಸಣ್ಣ ರೈತರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.

ಹೈನುಗಾರಿಕೆಗೆ ಪಶು ಕಿಸಾನ್ ಕಾರ್ಡ್ ಯೋಜನೆಯಡಿ ಆರ್ಥಿಕ ನೆರವು | ಹೀಗೆ ಅರ್ಜಿ ಸಲ್ಲಿಸಿ… Pashu Kisan Credit Card Loan


Spread the love
WhatsApp Group Join Now
Telegram Group Join Now

Leave a Comment

error: Content is protected !!