Karnataka Anganwadi Recruitment 2026: ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪಾಸಾದ ಮಹಿಳೆಯರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಕೊನೆಯ ದಿನಾಂಕ ಮತ್ತು ಅರ್ಜಿ ಸಲ್ಲಿಕೆಯ ಸಂಪೂರ್ಣ ವಿವರ ಇಲ್ಲಿದೆ…
ಹಳ್ಳಿ ಅಥವಾ ಪಟ್ಟಣ ಬಿಟ್ಟು ದೂರದ ಊರಿಗೆ ಹೋಗದೆ, ನಮ್ಮೂರಿನಲ್ಲೇ ಇದ್ದುಕೊಂಡು ಒಂದು ಒಳ್ಳೆಯ ಸರ್ಕಾರಿ ಕೆಲಸ (Government Job) ಮಾಡಬೇಕು ಎಂಬ ಆಸೆ ಬಹಳಷ್ಟು ಮಹಿಳೆಯರಿಗೆ ಇರುತ್ತದೆ.
ಅಂತಹವರಿಗೆ ಈಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (Women and Child Development Department) ಒಂದು ಉತ್ತಮ ಅವಕಾಶವನ್ನು ಕಲ್ಪಿಸಿಕೊಟ್ಟಿದೆ.
ಬೀದರ್, ಚಾಮರಾಜನಗರ ಮತ್ತು ಗದಗ ಜಿಲ್ಲೆಗಳು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ (Anganwadi Worker) ಹಾಗೂ ಸಹಾಯಕಿಯರ (Anganwadi Helper) ಹುದ್ದೆಗಳ ಭರ್ತಿಗೆ ಇಲಾಖೆ ಮುಂದಾಗಿದೆ.
ಈ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಬದಲಾಗಿ ನಿಮ್ಮ ಅಂಕಗಳ ಆಧಾರದ ಮೇಲೆಯೇ ಆಯ್ಕೆ ನಡೆಯುವುದರಿಂದ, ಅರ್ಹ ಮಹಿಳೆಯರು ಇದನ್ನು ಕೈಚೆಲ್ಲಬಾರದು.
ಬೀದರ್ ಜಿಲ್ಲೆಯಲ್ಲಿ 441 ಹುದ್ದೆಗಳು ಖಾಲಿ ಇವೆ
ನೀವು ಬೀದರ್ ಜಿಲ್ಲೆಯವರಾಗಿದ್ದರೆ ನಿಮಗೆ ಬಂಪರ್ ಅವಕಾಶವಿದೆ. ಇಲ್ಲಿ ಬರೋಬ್ಬರಿ 441 ಹುದ್ದೆಗಳನ್ನು ತುಂಬಲಾಗುತ್ತಿದೆ. ಇದರಲ್ಲಿ ಬೀದರ್ ತಾಲೂಕಿನಲ್ಲಿ 27 ಕಾರ್ಯಕರ್ತೆ ಹಾಗೂ 103 ಸಹಾಯಕಿಯರ ಹುದ್ದೆಗಳಿವೆ.
ಔರಾದ್ ತಾಲೂಕಿನಲ್ಲಿ 27 ಕಾರ್ಯಕರ್ತೆ ಮತ್ತು 56 ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಹಾಗೆಯೇ ಬಸವಕಲ್ಯಾಣದಲ್ಲಿ 25 ಕಾರ್ಯಕರ್ತೆ ಹಾಗೂ 47 ಸಹಾಯಕಿಯರು, ಭಾಲ್ಕಿಯಲ್ಲಿ 16 ಕಾರ್ಯಕರ್ತೆ ಹಾಗೂ 43 ಸಹಾಯಕಿಯರ ಹುದ್ದೆಗಳು ಖಾಲಿ ಇವೆ.
ಇನ್ನುಳಿದಂತೆ ಹುಮನಾಬಾದ್‌ನಲ್ಲಿ 6 ಕಾರ್ಯಕರ್ತೆ ಮತ್ತು 34 ಸಹಾಯಕಿಯರು, ಚಿಟಗುಪ್ಪದಲ್ಲಿ 3 ಕಾರ್ಯಕರ್ತೆ ಮತ್ತು 25 ಸಹಾಯಕಿಯರು ಹಾಗೂ ಕಮಲನಗರದಲ್ಲಿ 5 ಕಾರ್ಯಕರ್ತೆ ಮತ್ತು 12 ಸಹಾಯಕಿಯರ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಬೀದರ್ ಜಿಲ್ಲೆಯ ಅಭ್ಯರ್ಥಿಗಳು ಡಿಸೆಂಬರ್ 11 ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಇದನ್ನೂ ಓದಿ: Kuri Meke Shed: ಕುರಿ, ಮೇಕೆ ಶೆಡ್ ನಿರ್ಮಾಣಕ್ಕೆ ₹83,000 ಉಚಿತ ಹಣ | ಗ್ರಾಮೀಣ ಜನರಿಗೆ ಬಂಪರ್ ಆಫರ್!

ಚಾಮರಾಜನಗರ ಜಿಲ್ಲೆಯ ವಿವರ ಹೀಗಿದೆ
ಚಾಮರಾಜನಗರ ಜಿಲ್ಲೆಯಲ್ಲೂ ದೊಡ್ಡ ಮಟ್ಟದ ನೇಮಕಾತಿ ನಡೆಯುತ್ತಿದ್ದು, ಒಟ್ಟು 120 ಕಾರ್ಯಕರ್ತೆಯರು ಮತ್ತು 271 ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಗುಂಡ್ಲುಪೇಟೆ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ 46 ಕಾರ್ಯಕರ್ತೆಯರು ಮತ್ತು 76 ಸಹಾಯಕಿಯರ ಹುದ್ದೆಗಳಿವೆ. ಕೊಳ್ಳೇಗಾಲ ತಾಲೂಕಿನಲ್ಲಿ 22 ಕಾರ್ಯಕರ್ತೆಯರು ಹಾಗೂ 45 ಸಹಾಯಕಿಯರು, ಹನೂರು ತಾಲೂಕಿನಲ್ಲಿ 21 ಕಾರ್ಯಕರ್ತೆಯರು ಮತ್ತು 48 ಸಹಾಯಕಿಯರ ಹುದ್ದೆಗಳು ಖಾಲಿ ಇವೆ.
ಚಾಮರಾಜನಗರ ತಾಲೂಕಿನಲ್ಲಿ 14 ಕಾರ್ಯಕರ್ತೆಯರು ಮತ್ತು 43 ಸಹಾಯಕಿಯರು, ಸಂತೇಮರಹಳ್ಳಿಯಲ್ಲಿ 18 ಕಾರ್ಯಕರ್ತೆಯರು ಮತ್ತು 37 ಸಹಾಯಕಿಯರು ಹಾಗೂ ಯಳಂದೂರು ತಾಲೂಕಿನಲ್ಲಿ 9 ಕಾರ್ಯಕರ್ತೆಯರು ಮತ್ತು 22 ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಇಲ್ಲಿನ ಅಭ್ಯರ್ಥಿಗಳಿಗೆ ಡಿಸೆಂಬರ್ 4 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಇದರ ಜೊತೆಗೆ ಗದಗ ಜಿಲ್ಲೆ ಸೇರಿದಂತೆ ಇತರ ಜಿಲ್ಲೆಗಳಲ್ಲೂ ನೇಮಕಾತಿ ಪ್ರಕ್ರಿಯೆ ಚಾಲನೆಯಲ್ಲಿದೆ.
ಇದನ್ನೂ ಓದಿ: Uchita Koli Mari Vitarane- Yojane: ಮಹಿಳೆಯರಿಗೆ ಉಚಿತ ಕೋಳಿ ಮರಿ ವಿತರಣೆಗೆ ಪಶು ಇಲಾಖೆಯಿಂದ ಅರ್ಜಿ ಆಹ್ವಾನ
ಯಾರು ಅರ್ಜಿ ಸಲ್ಲಿಸಬಹುದು?
ಈ ಹುದ್ದೆಗಳಿಗೆ ಆಯಾ ಗ್ರಾಮ ಅಥವಾ ವಾರ್ಡ್‌ನ ಸ್ಥಳೀಯ ಮಹಿಳೆಯರು ಮಾತ್ರ ಅರ್ಜಿ ಹಾಕಲು ಅರ್ಹರು. ನೀವು ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸುವುದಾದರೆ ಪಿಯುಸಿ (PUC) ಪಾಸಾಗಿರಬೇಕು.
ಒಂದು ವೇಳೆ ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಹಾಕುವುದಾದರೆ ಎಸ್.ಎಸ್.ಎಲ್.ಸಿ (SSLC / 10th Pass) ಉತ್ತೀರ್ಣರಾಗಿದ್ದರೆ ಸಾಕು.
ಅರ್ಜಿ ಸಲ್ಲಿಸುವುದು ಹೇಗೆ? ಏನೆಲ್ಲಾ ದಾಖಲೆ ಬೇಕು?
ಅರ್ಜಿ ಹಾಕಲು ಸೈಬರ್ ಸೆಂಟರ್‌ಗೆ ಹೋಗುವ ಮುನ್ನ ನಿಮ್ಮ ಎಸ್.ಎಸ್.ಎಲ್.ಸಿ ಅಥವಾ ಪಿಯುಸಿ ಅಂಕಪಟ್ಟಿ (Marks Card), ತಹಶೀಲ್ದಾರ್ ಕಚೇರಿಯಿಂದ ಪಡೆದ ವಾಸಸ್ಥಳ ದೃಢೀಕರಣ ಪತ್ರ (Domicile Certificate), ಜಾತಿ ಪ್ರಮಾಣ ಪತ್ರ (Caste Certificate), ಆಧಾರ್ ಕಾರ್ಡ್ ಮತ್ತು ಇತ್ತೀಚಿನ ಫೋಟೋವನ್ನು ತೆಗೆದುಕೊಂಡು ಹೋಗಿ. ಇವುಗಳನ್ನು ಸ್ಕ್ಯಾನ್ (Scan) ಮಾಡಿ ಅಪ್‌ಲೋಡ್ ಮಾಡಬೇಕಾಗುತ್ತದೆ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು https://karnemakaone.kar.nic.in/abcd/ ವೆಬ್‌ಸೈಟ್‌ಗೆ ಭೇಟಿ ನೀಡಿ. ಅಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪುಟ ತೆರೆದುಕೊಳ್ಳುತ್ತದೆ.
ಅಲ್ಲಿ ಕಾಣಿಸುವ ‘Step 1’ ಮುಂದಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಮತ್ತು ಹುದ್ದೆಯನ್ನು ಆಯ್ಕೆ ಮಾಡಿಕೊಂಡು, ನಿಮ್ಮ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ. ಕೊನೆಯಲ್ಲಿ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಿ (Submit).
ಇದನ್ನೂ ಓದಿ: Lowest Personal Loan: ಕಡಿಮೆ ಬಡ್ಡಿದರದಲ್ಲಿ ಪರ್ಸನಲ್ ಲೋನ್ ಬೇಕೇ? ಇಲ್ಲಿದೆ ಬ್ಯಾಂಕ್‌ಗಳ ಪೂರ್ಣ ಮಾಹಿತಿ…
ಸಂದೇಹಗಳಿದ್ದರೆ ಈ ನಂಬರ್‌ಗಳಿಗೆ ಕರೆ ಮಾಡಿ
ಚಾಮರಾಜನಗರ ಜಿಲ್ಲೆಯ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಕೆಯಲ್ಲಿ ಏನಾದರೂ ಗೊಂದಲಗಳಿದ್ದರೆ ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು.
ಚಾಮರಾಜನಗರ (08226-222603), ಸಂತೇಮರಹಳ್ಳಿ (08226-240215), ಗುಂಡ್ಲುಪೇಟೆ (08229-222286), ಕೊಳ್ಳೇಗಾಲ ಮತ್ತು ಹನೂರು (08224-252367) ಹಾಗೂ ಯಳಂದೂರು (08226-240224) ಕಚೇರಿಗಳಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.