Karnataka Gram Panchayat Election 2026: ಗ್ರಾಮ ಪಂಚಾಯತಿ ಚುನಾವಣೆಗೆ ಸಿದ್ಧತೆ ಚುರುಕು | ಜಿಲ್ಲಾಧಿಕಾರಿಗಳಿಗೆ ಆಯೋಗದ ಖಡಕ್ ಸೂಚನೆ

Spread the love

WhatsApp Group Join Now
Telegram Group Join Now

Karnataka Gram Panchayat Election 2026: ಕರ್ನಾಟಕದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಸಿದ್ಧತೆ ಚುರುಕುಗೊಂಡಿದ್ದು, 5,864 ಗ್ರಾಪಂಗಳ ವಾರ್ಡ್ ಮರು ವಿಂಗಡಣೆ ಮತ್ತು ಮೀಸಲಾತಿ ಪೂರ್ಣಗೊಂಡಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ…

ಬೆಂಗಳೂರು: ರಾಜ್ಯದ ಗ್ರಾಮೀಣ ರಾಜಕೀಯದಲ್ಲಿ ಬಹುದಿನಗಳಿಂದ ಕಾದು ಕುಳಿತಿದ್ದ ಗ್ರಾಮ ಪಂಚಾಯಿತಿ ಚುನಾವಣೆಗಳ (Gram Panchayat Elections) ಸದ್ದು ಇದೀಗ ಮತ್ತೆ ಕೇಳಿಬರತೊಡಗಿದೆ. ಚುನಾವಣೆ ನಡೆಸಲು ಅಗತ್ಯವಾದ ಪೂರ್ವಭಾವಿ ಸಿದ್ಧತೆಗಳನ್ನು ರಾಜ್ಯ ಚುನಾವಣಾ ಆಯೋಗ (State Election Commission – SEC) ವೇಗಗೊಳಿಸಿದ್ದು, ಜಿಲ್ಲೆಗಳಲ್ಲಿ ಲಭ್ಯವಿರುವ ಮತಪೆಟ್ಟಿಗೆಗಳ (Ballot Boxes) ವಿವರವನ್ನು ತಕ್ಷಣ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.

ಬ್ಯಾಲೆಟ್ ಪೇಪರ್ ಮೂಲಕ ಮತದಾನ ನಡೆಸುವ ಉದ್ದೇಶದಿಂದ ಆಯೋಗ ಮತಪೆಟ್ಟಿಗೆಗಳ ಸಿದ್ಧತೆಗೂ ಮುಂದಾಗಿದೆ. ದೊಡ್ಡ ಗಾತ್ರದ ಮತಪೆಟ್ಟಿಗೆಗಳು ಎಷ್ಟು ಲಭ್ಯವಿವೆ, ಅವುಗಳ ಸ್ಥಿತಿ ಹೇಗಿದೆ ಎಂಬುದರ ಕುರಿತು ಜಿಲ್ಲಾವಾರು ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ವರದಿ ಸಲ್ಲಿಕೆಯಲ್ಲಿ ಯಾವುದೇ ವಿಳಂಬಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿರುವ ಆಯೋಗ, ತಪ್ಪು ಮಾಹಿತಿ ನೀಡಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: Gram Panchayat E-Swathu: ಹಳ್ಳಿ ಜನರಿಗೆ ಗುಡ್ ನ್ಯೂಸ್: ಸೆಪ್ಟೆಂಬರ್ 21ರಿಂದ ಸುಲಭವಾಗಿ ಸಿಗಲಿದೆ ನಿಮ್ಮ ಆಸ್ತಿಯ ‘ಇ-ಸ್ವತ್ತು’!

5,864 ಗ್ರಾಪಂಗಳ ವಾರ್ಡ್ ವಿಂಗಡಣೆ, ಮೀಸಲಾತಿ ಪೂರ್ಣ

ಚುನಾವಣೆಗೆ ಸಂಬಂಧಿಸಿದ ಮತ್ತೊಂದು ಪ್ರಮುಖ ಹಂತವೂ ಪೂರ್ಣಗೊಂಡಿದೆ. ರಾಜ್ಯದ 5,864 ಗ್ರಾಮ ಪಂಚಾಯಿತಿಗಳ ವಾರ್ಡ್ ಮರು ವಿಂಗಡಣೆ (Ward Delimitation) ಮತ್ತು ಸದಸ್ಯ ಸ್ಥಾನಗಳ ಮೀಸಲಾತಿ (Reservation) ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್’ಗೆ ತಿಳಿಸಿದೆ.

ಇದನ್ನೂ ಓದಿ: SBI Platinum Jubilee Asha Scholarship 2026-27: ಎಸ್‌ಬಿಐ ವಿದ್ಯಾರ್ಥಿವೇತನ 2026: ₹15,000ದಿಂದ ₹15 ಲಕ್ಷದವರೆಗೆ ಸ್ಕಾಲರ್‌ಶಿಪ್ | ಈಗಲೇ ಅರ್ಜಿ ಹಾಕಿ…

ಈ ಪ್ರಕ್ರಿಯೆ ಪೂರ್ಣಗೊಂಡಿರುವ ಮಾಹಿತಿಯನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ರಾಜ್ಯ ಚುನಾವಣಾ ಆಯೋಗಕ್ಕೂ ನೀಡಿದ್ದಾರೆ. ಹೀಗಾಗಿ ಚುನಾವಣೆಯ ಮುಂದಿನ ಹಂತದ ಕ್ರಮಗಳನ್ನು ಕೈಗೊಳ್ಳುವುದು ಇದೀಗ ಚುನಾವಣಾ ಆಯೋಗದ ಹೊಣೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಸೆಪ್ಟೆಂಬರ್ 11ರಂದು ನಡೆದ ವಿಚಾರಣೆಯಲ್ಲಿ ನ್ಯಾಯಮೂರ್ತಿಗಳಾದ ಅನು ಸಿವರಾಮನ್ ಮತ್ತು ಟಿ.ಪಿ. ವಿವೇಕಾನಂದ ಅವರ ವಿಭಾಗೀಯ ಪೀಠ ಈ ವಿಚಾರವನ್ನು ದಾಖಲಿಸಿಕೊಂಡಿತ್ತು.

ಅAದರೆ, ಇಷ್ಟು ದಿನ ಚುನಾವಣೆ ನಡೆಸಲು ಅಗತ್ಯವಿದ್ದ ವಾರ್ಡ್ ರಚನೆ ಹಾಗೂ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳ್ಳುವುದನ್ನು ಕಾಯುತ್ತಿದ್ದ ಪರಿಸ್ಥಿತಿ ಬಹುತೇಕ ಮುಗಿದಂತಾಗಿದೆ. ಈಗ ಚುನಾವಣಾ ಆಯೋಗ ತನ್ನ ವ್ಯಾಪ್ತಿಯ ಮುಂದಿನ ಪ್ರಕ್ರಿಯೆಗಳನ್ನು ಆರಂಭಿಸಬೇಕಿದೆ.

ಇದನ್ನೂ ಓದಿ: Swavalambi Sarathi Yojana 2026: ಸ್ವಾವಲಂಬಿ ಸಾರಥಿ ಯೋಜನೆ: ವಾಹನ ಖರೀದಿಗೆ 3 ಲಕ್ಷ ರೂ. ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ

ಸರ್ಕಾರದ ಪ್ರಕ್ರಿಯೆ ಮುಗಿದಿದೆ; ಆಯೋಗದ ಮುಂದಿನ ಹೆಜ್ಜೆ

ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಅವರು, 5,864 ಗ್ರಾಮ ಪಂಚಾಯಿತಿಗಳ ವಾರ್ಡ್ ವಿಂಗಡಣೆ ಮತ್ತು ಮೀಸಲಾತಿ ನಿಗದಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಜಿಲ್ಲಾಧಿಕಾರಿಗಳು ಈ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದಾರೆ ಎಂದು ಹೈಕೋರ್ಟ್’ಗೆ ತಿಳಿಸಿದ್ದರು.

ಇದನ್ನು ದಾಖಲಿಸಿಕೊಂಡ ನ್ಯಾಯಾಲಯ, ಸರ್ಕಾರ ಮಾಡಬೇಕಾದ ಅಗತ್ಯ ಕೆಲಸ ಪೂರ್ಣಗೊಂಡಿರುವುದರಿಂದ ಈಗ ಚುನಾವಣೆಗೆ ಸಂಬಂಧಿಸಿದ ಮುಂದಿನ ಅಗತ್ಯ ಕ್ರಮ ಕೈಗೊಳ್ಳುವುದು ರಾಜ್ಯ ಚುನಾವಣಾ ಆಯೋಗದ ಕೆಲಸ ಎಂದು ಹೇಳಿತ್ತು. ಆಯೋಗದ ಕೋರಿಕೆಯ ಮೇರೆಗೆ ವಿಚಾರಣೆಯನ್ನು ಸೆಪ್ಟೆಂಬರ್ 17ಕ್ಕೆ ಮುಂದೂಡಲಾಗಿತ್ತು.

ಇದನ್ನೂ ಓದಿ: Ration Card e-KYC: ರೇಷನ್ ಕಾರ್ಡುದಾರರಿಗೆ ಸರ್ಕಾರದ ಮಹತ್ವದ ಎಚ್ಚರಿಕೆ

Karnataka Gram Panchayat Election 2026
Karnataka Gram Panchayat Election 2026

5,927 ಗ್ರಾಪಂ; 56 ಪಂಚಾಯಿತಿಗಳು ಸದ್ಯ ಪರಿಗಣನೆಯಲ್ಲಿಲ್ಲ

ಸರ್ಕಾರ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ರಾಜ್ಯದಲ್ಲಿ ಒಟ್ಟು 5,927 ಗ್ರಾಮ ಪಂಚಾಯಿತಿಗಳು ಇರುವುದಾಗಿ ತಿಳಿಸಲಾಗಿದೆ. ಈ ಪೈಕಿ 56 ಗ್ರಾಮ ಪಂಚಾಯಿತಿಗಳ ಅಧಿಕಾರಾವಧಿ 2027ರ ಮಾರ್ಚ್ 31ರಂದು ಮುಕ್ತಾಯವಾಗಲಿರುವುದರಿಂದ, ಪ್ರಸ್ತುತ ನಡೆಯುತ್ತಿರುವ ಚುನಾವಣಾ ಪ್ರಕ್ರಿಯೆಯಲ್ಲಿ ಅವುಗಳನ್ನು ಪರಿಗಣಿಸಿಲ್ಲ.

ಇದನ್ನೂ ಓದಿ: Gruhalakshmi Beneficiaries Reverification: ಗೃಹಲಕ್ಷ್ಮಿ ಹಣ ಪಡೆಯುವವರಿಗೆ ಮಹತ್ವದ ಸೂಚನೆ | ಸಿಎಂ ಸ್ಪಷ್ಟನೆ

WhatsApp Group Join Now
Telegram Group Join Now

ಇನ್ನು ಏಳು ಗ್ರಾಮ ಪಂಚಾಯಿತಿಗಳಿಗೆ ಸಂಬಂಧಿಸಿದ ಗಡಿ ನಿಗದಿ, ಗ್ರಾಮ ಪಂಚಾಯಿತಿ ಕೇಂದ್ರಸ್ಥಾನ ಅಂತಿಮಗೊಳಿಸುವುದು ಸೇರಿದಂತೆ ವಿವಿಧ ವಿಚಾರಗಳು ಹೈಕೋರ್ಟ್’ನಲ್ಲಿ ಬಾಕಿ ಇರುವುದಾಗಿ ಸರ್ಕಾರ ತಿಳಿಸಿದೆ.

ಇದರ ನಡುವೆ ಕರ್ನಾಟಕ ಪಂಚಾಯತ್ ರಾಜ್ ಕ್ಷೇತ್ರ ಪುನರ್‌ವಿಂಗಡಣಾ ಆಯೋಗದ ಶಿಫಾರಸಿನ ಆಧಾರದ ಮೇಲೆ ಪ್ರತಿಯೊಂದು ಗ್ರಾಮ ಪಂಚಾಯಿತಿಯಿAದ ಆಯ್ಕೆಯಾಗಬೇಕಾದ ಸದಸ್ಯರ ಸಂಖ್ಯೆಯನ್ನು ಸರ್ಕಾರ 2026ರ ಮೇ 27ರಂದು ಅಧಿಸೂಚನೆ ಮೂಲಕ ನಿಗದಿಪಡಿಸಿದೆ. ಅದರ ಪ್ರತಿಯನ್ನು ಜೂನ್ 2ರಂದು ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ.

ಇದನ್ನೂ ಓದಿ: Mudra Loan: ಗ್ಯಾರಂಟಿ ಇಲ್ಲದೆ ₹20 ಲಕ್ಷ ಮುದ್ರಾ ಲೋನ್ | ಈ ಸಾಲ ಪಡೆಯುವುದು ಹೇಗೆ? ಸಂಪೂರ್ಣ ಮಾಹಿತಿ

ಮತಪತ್ರದ ಮೂಲಕ ಚುನಾವಣೆ?

ಈ ಬಾರಿಯ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮತಪತ್ರ (Ballot Paper) ಬಳಕೆಯ ಸಿದ್ಧತೆಗಳು ನಡೆಯುತ್ತಿರುವುದು ವಿಶೇಷ ಗಮನ ಸೆಳೆದಿದೆ. ಪಂಚಾಯಿತಿ ಚುನಾವಣೆಗಳಿಗೆ ಬ್ಯಾಲೆಟ್ ಪೇಪರ್ ವ್ಯವಸ್ಥೆ ಕಲ್ಪಿಸುವಂತೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ವರದಿಯಾಗಿದೆ.

ಇದರ ಭಾಗವಾಗಿಯೇ ಮತಪೆಟ್ಟಿಗೆಗಳ ಲಭ್ಯತೆ, ಅವುಗಳ ಗಾತ್ರ ಹಾಗೂ ಬಳಕೆಗೆ ಯೋಗ್ಯವಾಗಿರುವ ಸ್ಥಿತಿ ಸೇರಿದಂತೆ ಜಿಲ್ಲಾವಾರು ವಿವರಗಳನ್ನು ಆಯೋಗ ಸಂಗ್ರಹಿಸುತ್ತಿದೆ. ಚುನಾವಣಾ ವ್ಯವಸ್ಥೆಯ ಪ್ರಮುಖ ಪರಿಕರಗಳ ಸಿದ್ಧತೆಯೂ ಆರಂಭವಾಗಿರುವುದು ಚುನಾವಣೆ ಪ್ರಕ್ರಿಯೆ ವೇಗ ಪಡೆಯುತ್ತಿರುವ ಸೂಚನೆಯಾಗಿದೆ.

ಇದನ್ನೂ ಓದಿ: SBI Stree Shakti Package Loan: ಎಸ್‌ಬಿಐ ಸ್ತ್ರೀ ಶಕ್ತಿ ಪ್ಯಾಕೇಜ್ ಲೋನ್ | ಮಹಿಳೆಯರಿಗೆ ₹10 ಲಕ್ಷವರೆಗೆ ಮೇಲಾಧಾರ ರಹಿತ ಸಾಲ

ಹಳ್ಳಿಗಳಲ್ಲಿ ಮತ್ತೆ ಚುನಾವಣಾ ಕಾವು

ಗ್ರಾಮ ಪಂಚಾಯಿತಿ ಚುನಾವಣೆ ಎಂದರೆ ಕೇವಲ ಸದಸ್ಯರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲ. ಹಳ್ಳಿಯ ರಸ್ತೆ, ಕುಡಿಯುವ ನೀರು, ಚರಂಡಿ, ಬೀದಿ ದೀಪ, ಸ್ವಚ್ಛತೆ, ಸಾರ್ವಜನಿಕ ಆಸ್ತಿಗಳ ನಿರ್ವಹಣೆ ಸೇರಿದಂತೆ ಸ್ಥಳೀಯ ಸಮಸ್ಯೆಗಳ ಬಗ್ಗೆ ನೇರವಾಗಿ ನಿರ್ಧಾರ ತೆಗೆದುಕೊಳ್ಳುವ ಆಡಳಿತ ವ್ಯವಸ್ಥೆಗೆ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಾಗಿದೆ.

ಹೀಗಾಗಿ ಚುನಾವಣೆ ದಿನಾಂಕ ಘೋಷಣೆಯಾಗುವುದಕ್ಕೂ ಮುನ್ನವೇ ಗ್ರಾಮೀಣ ಪ್ರದೇಶಗಳಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಳ್ಳುವ ಸಾಧ್ಯತೆ ಇದೆ. ಸಂಭಾವ್ಯ ಅಭ್ಯರ್ಥಿಗಳು, ಸ್ಥಳೀಯ ಮುಖಂಡರು ಮತ್ತು ರಾಜಕೀಯ ಪಕ್ಷಗಳು ತಮ್ಮದೇ ರೀತಿಯಲ್ಲಿ ಸಿದ್ಧತೆ ಆರಂಭಿಸುವ ನಿರೀಕ್ಷೆಯೂ ಇದೆ.

ಇದನ್ನೂ ಓದಿ: Low Interest Loan Eligibility- ಕಡಿಮೆ ಬಡ್ಡಿ ಸಾಲ ಪಡೆಯುವ ಸರಳ ಮಾರ್ಗ | ಮೊಬೈಲ್‌ನಲ್ಲೇ ಚೆಕ್ ಮಾಡಿ ನಿಮ್ಮ ಸಾಲ ಪಡೆಯುವ ಅರ್ಹತೆ

ಕರ್ನಾಟಕದಲ್ಲಿ ಕೊನೆಯ ಗ್ರಾಮ ಪಂಚಾಯಿತಿ ಚುನಾವಣೆಗಳು 2020ರ ಡಿಸೆಂಬರ್‌ನಲ್ಲಿ ನಡೆದಿದ್ದವು. ಕೇಂದ್ರ ಪಂಚಾಯತ್ ರಾಜ್ ಸಚಿವಾಲಯದ ಮಾಹಿತಿಯ ಪ್ರಕಾರ, ಗ್ರಾಮ ಪಂಚಾಯಿತಿಗಳ ಮುಂದಿನ ಚುನಾವಣೆ ಡಿಸೆಂಬರ್ 2025ಕ್ಕೆ ಬಾಕಿಯಾಗಿತ್ತು.

ಇದೀಗ ವಾರ್ಡ್ ಮರು ವಿಂಗಡಣೆ, ಸದಸ್ಯರ ಮೀಸಲಾತಿ ಹಾಗೂ ಮತಪೆಟ್ಟಿಗೆಗಳ ಸಿದ್ಧತೆ ಸೇರಿದಂತೆ ಚುನಾವಣೆಯ ಹಲವು ಪೂರ್ವಭಾವಿ ಹಂತಗಳು ವೇಗ ಪಡೆಯುತ್ತಿವೆ. ಹೀಗಾಗಿ ಗ್ರಾಮ ಪಂಚಾಯಿತಿ ಚುನಾವಣೆ ಯಾವಾಗ ಎಂಬ ಕುತೂಹಲಕ್ಕೆ ಶೀಘ್ರದಲ್ಲೇ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ. ಆದರೆ ನಿಖರ ಚುನಾವಣಾ ವೇಳಾಪಟ್ಟಿ (Election Schedule) ಮತ್ತು ಮತದಾನದ ದಿನಾಂಕವನ್ನು ರಾಜ್ಯ ಚುನಾವಣಾ ಆಯೋಗವೇ ಅಧಿಕೃತವಾಗಿ ಪ್ರಕಟಿಸಬೇಕಿದೆ.

Gram Panchayat E-Swathu: ಹಳ್ಳಿ ಜನರಿಗೆ ಗುಡ್ ನ್ಯೂಸ್: ಸೆಪ್ಟೆಂಬರ್ 21ರಿಂದ ಸುಲಭವಾಗಿ ಸಿಗಲಿದೆ ನಿಮ್ಮ ಆಸ್ತಿಯ ‘ಇ-ಸ್ವತ್ತು’!


Spread the love
error: Content is protected !!