Karmikara Makkalige Scholarship 2026: ಕಾರ್ಮಿಕರ ಮಕ್ಕಳಿಗೆ ₹25,000 ವರೆಗೆ ವಿದ್ಯಾರ್ಥಿವೇತನ | ಆನ್‌ಲೈನ್ ಅರ್ಜಿ ಆಹ್ವಾನ

Spread the love

WhatsApp Group Join Now
Telegram Group Join Now

Karmikara Makkalige Scholarship 2026: ಕಾರ್ಮಿಕರ ಮಕ್ಕಳಿಗೆ ₹25,000 ವರೆಗೆ ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿವೇತನ! 2026-27ನೇ ಸಾಲಿನ ಸ್ಕಾಲರ್‌ಶಿಪ್‌ಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ…

ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಮಿಕ ಕಲ್ಯಾಣ ಯೋಜನೆಯಡಿ (Labour Welfare Scheme) 2026-27ನೇ ಶೈಕ್ಷಣಿಕ ಸಾಲಿಗೆ ವಿದ್ಯಾರ್ಥಿವೇತನವನ್ನು ಘೋಷಿಸಲಾಗಿದ್ದು; ಇದೀಗ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಇದನ್ನೂ ಓದಿ: LPG Gas Cylinder New Rules: ಆಗಸ್ಟ್ 1ರಿಂದ ಗ್ಯಾಸ್ ಸಿಲಿಂಡರ್ ಹೊಸ ರೂಲ್ಸ್ | ಬುಕ್ಕಿಂಗ್‌ನಿಂದ ಹೊಸ ಸಂಪರ್ಕದವರೆಗೆ ಏನೆಲ್ಲ ಬದಲಾಗಲಿದೆ?

ಈ ಬಾರಿಯ ವಿಶೇಷತೆಯೆಂದರೆ, 1ನೇ ತರಗತಿಯ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ವೃತ್ತಿಪರ (Professional) ಪದವಿ ಕೋರ್ಸ್ ಹಾಗೂ ಉನ್ನತ ಸಂಶೋಧನಾ ಹಂತದವರೆಗಿನ ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆಯಬಹುದು.

ಕೇಂದ್ರ ಸಚಿವಾಲಯವು ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ (National Scholarship Portal – NSP) ಮೂಲಕ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಪಾರದರ್ಶಕಗೊಳಿಸಿದ್ದು, ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ನೈಜ ಫಲಾನುಭವಿಗಳಿಗೆ ಹಣ ತಲುಪಲಿದೆ.

ಇದನ್ನೂ ಓದಿ: Karnataka Voter List: ಮತದಾರರ ಪಟ್ಟಿಯಿಂದ 84.31 ಲಕ್ಷ ಮಂದಿ ಔಟ್! ನಿಮ್ಮ ಹೆಸರು ಪಟ್ಟಿಯಿಂದ ಔಟ್ ಆಗಿದೆಯೇ? ಈಗಲೇ ಚೆಕ್ ಮಾಡಿ

ಅರ್ಜಿ ಸಲ್ಲಿಸುವುದು ಹೇಗೆ? (How to Apply)

ಈ ವಿದ್ಯಾರ್ಥಿವೇತನವನ್ನು ಬೀಡಿ, ಸಿನೆಮಾ, ಸುಣ್ಣದ ಕಲ್ಲು (Limestone) ಮತ್ತು ಡೊಲಮೈಟ್ ಗಣಿ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ಬೆಳಗಲು ಈ ಆರ್ಥಿಕ ನೆರವು (Financial Assistance) ನೀಡಲಾಗುತ್ತದೆ.

ಅರ್ಹ ಆಸಕ್ತ ವಿದ್ಯಾರ್ಥಿಗಳು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅಧಿಕೃತ ಪೋರ್ಟಲ್ scholarships.gov.in ಮೂಲಕವೇ ಆನ್‌ಲೈನ್ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: Karnataka Rain Alert: 18 ಜಿಲ್ಲೆಗಳಲ್ಲಿ ಭಾರೀ ಮಳೆ | ಯಾವ ಜಿಲ್ಲೆಗಳಲ್ಲಿ ಹೆಚ್ಚು ಮಳೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಒನ್ ಟೈಮ್ ರಿಜಿಸ್ಟ್ರೇಷನ್ (One Time Registration – OTR): ಅರ್ಜಿ ಸಲ್ಲಿಕೆಗೆ ಈ ಬಾರಿ OTR ಕಡ್ಡಾಯಗೊಳಿಸಲಾಗಿದ್ದು, ಇದಕ್ಕೆ ವಿದ್ಯಾರ್ಥಿಯ ಸಕ್ರಿಯ ಆಧಾರ್ ಸಂಖ್ಯೆ (Aadhaar Number) ಅತ್ಯಗತ್ಯ.

ಒಮ್ಮೆ ನೀವು ನೋಂದಾಯಿಸಿದ ನಂತರ, ಪೋರ್ಟಲ್‌ನಲ್ಲಿ ಅಭ್ಯರ್ಥಿಯ ವಿವರಗಳು ಹಾಗೂ ಶುಲ್ಕದ ಮಾಹಿತಿಯು ಸ್ವಯಂಚಾಲಿತವಾಗಿ ಭರ್ತಿಯಾಗುವುದರಿಂದ (Auto-fill) ಅರ್ಜಿ ಪ್ರಕ್ರಿಯೆ ಸುಲಭವಾಗುತ್ತದೆ.

ಸ್ವತಃ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕಷ್ಟವಾದರೆ, ನಿಮ್ಮ ಹತ್ತಿರದ ಗ್ರಾಮ ಒನ್ (Grama One) ಕೇಂದ್ರಗಳಿಗೆ ಭೇಟಿ ನೀಡಿ ಸುಲಭವಾಗಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Coconut Farming Subsidy: ಹೊಸದಾಗಿ ತೆಂಗಿನ ತೋಟ ಮಾಡ್ತಿದ್ದೀರಾ? ಸರ್ಕಾರದಿಂದ ಸಿಗುತ್ತೆ ₹56,000 ಸಹಾಯ!

Karmikara Makkalige Scholarship 2026
Karmikara Makkalige Scholarship 2026

ವಿದ್ಯಾರ್ಥಿವೇತನ ಪಾವತಿ ವಿಧಾನ (Payment Method)

ವಿದ್ಯಾರ್ಥಿವೇತನದ ಮೊತ್ತವನ್ನು ನೇರವಾಗಿ ಅರ್ಹ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ತಲುಪಿಸಲು ‘ಆಧಾರ್ ಪೇಮೆಂಟ್ ಬ್ರಿಡ್ಜ್’ (Aadhaar Payment Bridge – APB) ವ್ಯವಸ್ಥೆಯನ್ನು ಬಳಸಲಾಗುತ್ತದೆ.

  • ಅರ್ಜಿದಾರರು ಯಾವುದೇ ರಾಷ್ಟ್ರೀಕೃತ, ನಿಗದಿತ, ಸಹಕಾರಿ, ಗ್ರಾಮೀಣ ಅಥವಾ ಖಾಸಗಿ ಬ್ಯಾಂಕ್‍ನಲ್ಲಿ ತಮ್ಮ ಸ್ವಂತ ಹೆಸರಿನಲ್ಲೇ ಉಳಿತಾಯ ಖಾತೆ (Savings Account) ಹೊಂದಿರಬೇಕು.
  • ಈ ಬ್ಯಾಂಕ್ ಖಾತೆಯು ಕಡ್ಡಾಯವಾಗಿ ಆಧಾರ್ ಲಿಂಕ್ (Aadhaar Seeded) ಆಗಿರಬೇಕು.
  • ಬ್ಯಾಂಕ್ ಖಾತೆಗೆ NEFT ಮತ್ತು CBS ಸೌಲಭ್ಯ ಇರುವುದನ್ನು ಖಚಿತಪಡಿಸಿಕೊಳ್ಳಿ.
WhatsApp Group Join Now
Telegram Group Join Now

ಇದನ್ನೂ ಓದಿ: Manipal Health Card 2026: ಈ ಕಾರ್ಡ್ ಇದ್ದರೆ ಮಣಿಪಾಲ್ ಆಸ್ಪತ್ರೆಯಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ | ಆರೋಗ್ಯ ಕಾರ್ಡ್-2026ಗೆ ಮೊಬೈಲ್‌ನಲ್ಲೇ ಅರ್ಜಿ ಹಾಕಿ

ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು (Required Documents)

ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಗಳು ಈ ಕೆಳಗಿನ ದಾಖಲೆಗಳನ್ನು ಕಡ್ಡಾಯವಾಗಿ ಅ‍ಪ್‌ಲೋಡ್ ಮಾಡಬೇಕಾಗುತ್ತದೆ:

  • ಕುಟುಂಬದ ಅಧಿಕೃತ ಆದಾಯ ಪ್ರಮಾಣಪತ್ರ (Income Certificate).
  • ಪೋಷಕರು ಉದ್ಯೋಗದಲ್ಲಿರುವುದನ್ನು ದೃಢೀಕರಿಸಲು, ಸಂಬಂಧಪಟ್ಟ ಆಡಳಿತ ಮಂಡಳಿಯು ನೀಡಿದ ಬೀಡಿ/ಗಣಿ ಕಾರ್ಮಿಕರ ಗುರುತಿನ ಚೀಟಿ (Labour ID Card).
  • ವಿದ್ಯಾರ್ಥಿಯ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋ (Passport Size Photo).
  • ವಿದ್ಯಾರ್ಥಿಯ ಆಧಾರ್ ಕಾರ್ಡ್ (Aadhaar Card).
  • ಬ್ಯಾಂಕ್ ಪಾಸ್ ಬುಕ್ (Bank Passbook).

ಇದನ್ನೂ ಓದಿ: VB Gram G Scheme 2026: ಪ್ರತಿ ಕುಟುಂಬಕ್ಕೂ ವರ್ಷಕ್ಕೆ ₹47,750 ಆದಾಯ! ಗ್ರಾಮ ಪಂಚಾಯಿತಿಯಿಂದ ಅರ್ಜಿ ಆಹ್ವಾನ

ತರಗತಿವಾರು ವಿದ್ಯಾರ್ಥಿವೇತನದ ಮೊತ್ತ (Scholarship Amount Details)

ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಕೋರ್ಸ್ ಹಾಗೂ ತರಗತಿಗಳ ಆಧಾರದ ಮೇಲೆ ವಾರ್ಷಿಕ ಪ್ರೋತ್ಸಾಹ ಧನವನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ:

  • 1 ರಿಂದ 4 ನೇ ತರಗತಿ ರೂ. 1,000/-
  • 5 ರಿಂದ 8 ನೇ ತರಗತಿ ರೂ. 1,500/-
  • 9 ಮತ್ತು 10 ನೇ ತರಗತಿ ರೂ. 2,000/-
  • ಪ್ರಥಮ ಹಾಗೂ ದ್ವಿತೀಯ ಪಿಯುಸಿ (PUಅ) ರೂ. 3,000/-
  • ಐಟಿಐ (ITI), ಪಾಲಿಟೆಕ್ನಿಕ್ ಮತ್ತು ಪದವಿ (ಬಿ.ಎಸ್ಸಿ ಕೃಷಿ ಸೇರಿದಂತೆ)ರೂ. 6,000/-
  • ವೃತ್ತಿಪರ ಕೋರ್ಸ್’ಗಳು (Professional Courses) ರೂ. 25,000/-

ಇದನ್ನೂ ಓದಿ: 221 Crore Crop Insurance: 221 ಕೋಟಿ ರೂ. ಅಂತಿಮ ಕಂತು ಬೆಳೆ ವಿಮೆ ಬಿಡುಗಡೆ | ರೈತರ ಖಾತೆಗೆ ಹಣ ಜಮಾ | ಮೊಬೈಲ್‌ನಲ್ಲೇ ಸ್ಟೇಟಸ್ ಚೆಕ್ ಮಾಡಿ

ನೆನಪಿಡಬೇಕಾದ ಪ್ರಮುಖ ದಿನಾಂಕಗಳು (Important Dates)

ಗಮನಿಸಿ: ಕೊನೆಯ ದಿನಗಳಲ್ಲಿ ಸರ್ವರ್ ದಟ್ಟಣೆ (Server Issue) ಎದುರಾಗುವ ಸಾಧ್ಯತೆಗಳಿರುವುದರಿಂದ, ಅರ್ಹ ವಿದ್ಯಾರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಆದಷ್ಟು ಬೇಗ ಅರ್ಜಿ ಸಲ್ಲಿಸುವುದು ಉತ್ತಮ.

  • ಮೆಟ್ರಿಕ್ ಪೂರ್ವ ಯೋಜನೆ (Pre-Matric Scheme – 1 ರಿಂದ 10 ನೇ ತರಗತಿ): ಆಗಸ್ಟ್ 31, 2026
  • ಮೆಟ್ರಿಕ್ ನಂತರದ ಯೋಜನೆ (Post-Matric Scheme – 11 ನೇ ತರಗತಿ ಮತ್ತು ಮೇಲ್ಪಟ್ಟು): ಅಕ್ಟೋಬರ್ 31, 2026

ಇದನ್ನೂ ಓದಿ: KFD Forest Watcher Recruitment 2026: ಎಸ್ಸೆಸ್ಸೆಲ್ಸಿ ಪಾಸಾದವರಿಗೆ 750 ಅರಣ್ಯ ವೀಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ (Helpline Info)

ವಿದ್ಯಾರ್ಥಿವೇತನದ ಕುರಿತು ಯಾವುದೇ ಗೊಂದಲಗಳಿದ್ದಲ್ಲಿ, ಇಲಾಖೆಯ ಅಧಿಕೃತ ಸಹಾಯವಾಣಿಯನ್ನು ಸಂಪರ್ಕಿಸಿ:

  • ಮೊಬೈಲ್ ಸಂಖ್ಯೆ: 9148240554
  • ದೂರವಾಣಿ ಸಂಖ್ಯೆ: 080-23471406
ಅರ್ಜಿ ಲಿಂಕ್: Apply Now

Karnataka Voter List: ಮತದಾರರ ಪಟ್ಟಿಯಿಂದ 84.31 ಲಕ್ಷ ಮಂದಿ ಔಟ್! ನಿಮ್ಮ ಹೆಸರು ಪಟ್ಟಿಯಿಂದ ಔಟ್ ಆಗಿದೆಯೇ? ಈಗಲೇ ಚೆಕ್ ಮಾಡಿ


Spread the love
error: Content is protected !!