New LPG Gas Connection: ರಾಜ್ಯದಲ್ಲಿ ಹೊಸ ಎಲ್ಪಿಜಿ ಗ್ಯಾಸ್ ಕನೆಕ್ಷನ್ ಪಡೆಯಲು ಕಾಯುತ್ತಿರುವವರಿಗೆ ಮಹತ್ವದ ಮಾಹಿತಿ. 90 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಾಕಿ ಇದ್ದು; ಸರ್ಕಾರ ಏನು ಹೇಳಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜ್ಯದಲ್ಲಿ ಹೊಸ ಅಡುಗೆ ಅನಿಲ (LPG) ಸಂಪರ್ಕಕ್ಕಾಗಿ ಕಾಯುತ್ತಿರುವ ಸಾವಿರಾರು ಕುಟುಂಬಗಳಿಗೆ ನಿರಾಸೆಯ ಸುದ್ದಿಯೊಂದು ಎದುರಾಗಿದೆ. ಮಧ್ಯಪ್ರಾಚ್ಯ (Middle East) ದೇಶಗಳಲ್ಲಿ ಮುಂದುವರಿದಿರುವ ಸಮರದ ಪರಿಣಾಮ ಇದೀಗ ಪರೋಕ್ಷವಾಗಿ ಕರ್ನಾಟಕದ ಜನರ ಮೇಲೂ ಬಿದ್ದಿದೆ.
ಕಳೆದ ನಾಲ್ಕು ತಿಂಗಳಿAದ ಹೊಸ ಗ್ಯಾಸ್ ಕನೆಕ್ಷನ್ ವಿತರಣೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಸದ್ಯ ರಾಜ್ಯದಲ್ಲಿ ಸುಮಾರು 90 ಸಾವಿರಕ್ಕೂ ಹೆಚ್ಚು ಹೊಸ ಗ್ಯಾಸ್ ಕನೆಕ್ಷನ್ ಅರ್ಜಿಗಳು ಬಾಕಿ ಉಳಿದಿದ್ದು, ಅರ್ಜಿ ಸಲ್ಲಿಸಿದವರು ತಿಂಗಳುಗಟ್ಟಲೆ ಕಾಯುತ್ತಿದ್ದರೂ ಸಂಪರ್ಕ ಸಿಗದೆ ಪರದಾಡುವಂತಾಗಿದೆ.
ಸಮರದ ಪರಿಣಾಮದಿಂದ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ
ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಪರಿಣಾಮ ಇಂಧನ ಮತ್ತು ಅನಿಲ (Fuel & Gas Supply) ಸರಬರಾಜಿನ ಮೇಲೂ ಬಿದ್ದಿದೆ. ಇದರ ಪರಿಣಾಮವಾಗಿ ದೇಶದ ವಿವಿಧ ಭಾಗಗಳಲ್ಲಿ ಗ್ಯಾಸ್ ಪೂರೈಕೆಯಲ್ಲಿ ಸಮಸ್ಯೆ ಎದುರಾಗಿದ್ದು, ಕರ್ನಾಟಕವೂ ಇದರಿಂದ ಹೊರತಾಗಿಲ್ಲ.
ಗ್ಯಾಸ್ ಏಜೆನ್ಸಿಗಳು ಹೊಸ ಸಂಪರ್ಕ ನೀಡುವುದನ್ನು ಬಹುತೇಕ ಸ್ಥಗಿತಗೊಳಿಸಿದ್ದು, ಈಗಿರುವ ಗ್ರಾಹಕರಿಗೆ ಸಿಲಿಂಡರ್ ಪೂರೈಕೆ ಹಾಗೂ ವಾಣಿಜ್ಯ (Commercial) ಸಿಲಿಂಡರ್ ವಿತರಣೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದಾಗಿ ತಿಳಿದುಬಂದಿದೆ.
ಇದನ್ನೂ ಓದಿ: 18 Lakh Pension Stopped: ರಾಜ್ಯದಲ್ಲಿ 18 ಲಕ್ಷಕ್ಕೂ ಹೆಚ್ಚು ಜನರ ಪಿಂಚಣಿ ಬಂದ್ | ಫಲಾನುಭವಿಗಳಿಗೆ ಮಹತ್ವದ ಮಾಹಿತಿ
ಗ್ಯಾಸ್ ಏಜೆನ್ಸಿಗಳಲ್ಲಿ ಹೊಸ ಸಂಪರ್ಕ ಸ್ಥಗಿತ
ರಾಜ್ಯದ ಸುಮಾರು 3,000ಕ್ಕೂ ಹೆಚ್ಚು ಗ್ಯಾಸ್ ಏಜೆನ್ಸಿಗಳು ಹೊಸ ಗೃಹಬಳಕೆಯ (Domestic LPG) ಸಂಪರ್ಕ ವಿತರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿವೆ ಎನ್ನಲಾಗಿದೆ.
ಇದರಿಂದ ಹೊಸ ಮನೆ ಕಟ್ಟಿದವರು, ಹೊಸದಾಗಿ ಮದುವೆಯಾದ ಕುಟುಂಬಗಳು ಹಾಗೂ ಮೊದಲ ಬಾರಿಗೆ ಗ್ಯಾಸ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದವರು ಹೆಚ್ಚು ಸಂಕಷ್ಟ ಅನುಭವಿಸುತ್ತಿದ್ದಾರೆ.
ಇದನ್ನೂ ಓದಿ: Intense Pushya rain: ಕರ್ನಾಟಕದಲ್ಲಿ ಪುಷ್ಯ ಮಳೆ ಅಬ್ಬರ: ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ

ಗ್ರಾಹಕರಿಗೆ ನೀಡುತ್ತಿರುವ ನೆಪಗಳೇನು?
ಹೊಸ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ಹಲವು ಕಾರಣಗಳನ್ನು ನೀಡಿ ಕಾದಿರಿಸಲಾಗುತ್ತಿದೆ. ಪ್ರಮುಖವಾಗಿ,
- ದಾಖಲೆಗಳು ಪೂರ್ಣವಾಗಿಲ್ಲ ಅಥವಾ ಸರಿಯಾಗಿಲ್ಲ ಎಂದು ಹೇಳಲಾಗುತ್ತಿದೆ.
- ಸಿಲಿಂಡರ್ ಕೊರತೆ ಇದೆ ಎಂದು ತಿಳಿಸಲಾಗುತ್ತಿದೆ.
- ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಅರ್ಜಿಗಳನ್ನು ಮುಂದೂಡಲಾಗುತ್ತಿದೆ.
- ಕೆಲವು ಏಜೆನ್ಸಿಗಳು ಹೊಸ ಅರ್ಜಿಗಳನ್ನು ಸ್ವೀಕರಿಸಿದರೂ ಸಂಪರ್ಕ ನೀಡದೆ ಬಾಕಿ ಇಡುತ್ತಿವೆ.
ಇದರ ಜೊತೆಗೆ ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯದ 100ಕ್ಕೂ ಹೆಚ್ಚು ಗ್ಯಾಸ್ ಏಜೆನ್ಸಿಗಳು ಸಿಲಿಂಡರ್ ಕೊರತೆ ಹಾಗೂ ಪೂರೈಕೆ ಸಮಸ್ಯೆಗಳನ್ನು ಕಾರಣವಾಗಿ ಹೇಳಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವ ಮಾಹಿತಿಯೂ ಲಭ್ಯವಾಗಿದೆ.
PNG ಸಂಪರ್ಕ ಇರುವವರಿಗೆ ಹೊಸ LPG ಇಲ್ಲ
ತೈಲ ಕಂಪನಿಗಳು ಮತ್ತೊಂದು ಮಹತ್ವದ ಕ್ರಮ ಕೈಗೊಂಡಿವೆ. ಈಗಾಗಲೇ ಪೈಪ್ ಮೂಲಕ ಅಡುಗೆ ಅನಿಲ (PNG – Piped Natural Gas) ಸಂಪರ್ಕ ಇರುವ ಪ್ರದೇಶಗಳಲ್ಲಿ ಹೊಸ ಎಲ್ಪಿಜಿ (LPG) ಸಂಪರ್ಕ ನೀಡದಂತೆ ಸೂಚಿಸಲಾಗಿದೆ.
ಅದೇ ರೀತಿ ಒಂದೇ ಮನೆಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಗ್ಯಾಸ್ ಸಂಪರ್ಕ ಹೊಂದಿರುವವರನ್ನು ಗುರುತಿಸಿ ಹೆಚ್ಚುವರಿ ಸಂಪರ್ಕಗಳನ್ನು ರದ್ದುಗೊಳಿಸುವ ಕಾರ್ಯವೂ ನಡೆಯುತ್ತಿದೆ.
ಇದನ್ನೂ ಓದಿ: Gruhalakshmi Biometric: ಗೃಹಲಕ್ಷ್ಮಿ ಹಣ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ | ಸಚಿವ ಸಂಪುಟದ ಮಹತ್ವದ ನಿರ್ಧಾರ
ಯಾವ ಜಿಲ್ಲೆಯಲ್ಲಿ ಎಷ್ಟು ಅರ್ಜಿಗಳು ಬಾಕಿ?
ಲಭ್ಯವಿರುವ ಅಂದಾಜು ಮಾಹಿತಿಯ ಪ್ರಕಾರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೊಸ ಗ್ಯಾಸ್ ಸಂಪರ್ಕ ಬಯಸಿ ಸಲ್ಲಿಕೆಯಾದ ಜಿಲ್ಲಾವಾರು ಅರ್ಜಿಗಳ ವಿವರ ಈ ಕೆಳಗಿನಂತಿದೆ:
- ಮೈಸೂರು- 12,000
- ಧಾರವಾಡ- 10,000
- ಬೆಳಗಾವಿ- 9,500
- ಕಲಬುರಗಿ- 8,000
- ಇತರ ಜಿಲ್ಲೆಗಳು- 50,500
- ಒಟ್ಟು 90,000ಕ್ಕೂ ಹೆಚ್ಚು
ಮೈಸೂರು, ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಹೊಸ ಗ್ಯಾಸ್ ಸಂಪರ್ಕ ನೀಡುವ ಪ್ರಕ್ರಿಯೆ ನಿಧಾನಗೊಂಡಿದೆ.
ಇದನ್ನೂ ಓದಿ: Gruha Lakshmi 31st Installment: ಗೃಹಲಕ್ಷ್ಮಿ 31ನೇ ಕಂತಿನ ಹಣ ಬಿಡುಗಡೆ: ಮಹಿಳೆಯರ ಖಾತೆಗೆ ಹಣ ಜಮೆ ಆರಂಭ
ಸರ್ಕಾರದ ಪ್ರತಿಕ್ರಿಯೆ ಏನು?
ಕೇಂದ್ರ ಪೆಟ್ರೋಲಿಯಂ ಸಚಿವಾಲಯದ (Ministry of Petroleum and Natural Gas) ಮಾರ್ಗಸೂಚಿಯಂತೆ ಐಒಸಿ (IOC), ಬಿಪಿಸಿಎಲ್ (BPCL) ಹಾಗೂ ಎಚ್ಪಿಸಿಎಲ್ (HPCL) ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಆಸ್ಪತ್ರೆಗಳು ಸೇರಿದಂತೆ ಅತ್ಯಗತ್ಯ ಸೇವೆಗಳಿಗೆ ಮಾತ್ರ ಹೊಸ ಸಂಪರ್ಕಕ್ಕೆ ಆದ್ಯತೆ ನೀಡಲಾಗುತ್ತಿದೆ. ಉಳಿದ ಅರ್ಜಿಗಳ ಕುರಿತು ಗ್ಯಾಸ್ ಏಜೆನ್ಸಿಗಳೊಂದಿಗೆ ಚರ್ಚೆ ನಡೆಸಿ, ಅಗತ್ಯವಿದ್ದರೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: BPL Card in 15 Days: ಕೇವಲ 15 ದಿನಗಳಲ್ಲಿ ಸಿಗಲಿದೆ ಬಿಪಿಎಲ್ ಕಾರ್ಡ್ | ಹೊಸ ನಿಯಮಗಳ ಸಂಪೂರ್ಣ ಮಾಹಿತಿ
ಗ್ರಾಹಕರು ಏನು ಮಾಡಬೇಕು?
ಹೊಸ ಗ್ಯಾಸ್ ಸಂಪರ್ಕಕ್ಕಾಗಿ ಈಗಾಗಲೇ ಅರ್ಜಿ ಸಲ್ಲಿಸಿರುವವರು ತಮ್ಮ ಅರ್ಜಿಯ ಸ್ಥಿತಿಯನ್ನು ಸಂಬAಧಿತ ಗ್ಯಾಸ್ ಏಜೆನ್ಸಿಯಲ್ಲಿ ಪರಿಶೀಲಿಸಬೇಕು. ದಾಖಲೆಗಳಲ್ಲಿ ಯಾವುದೇ ಕೊರತೆ ಇಲ್ಲದಿದ್ದರೆ ಅದರ ಬಗ್ಗೆ ಲಿಖಿತ ಮಾಹಿತಿ ಪಡೆಯುವುದು ಉತ್ತಮ.
ಪೂರೈಕೆ ಸಾಮಾನ್ಯ ಸ್ಥಿತಿಗೆ ಬಂದ ನಂತರ ಬಾಕಿ ಇರುವ ಅರ್ಜಿಗಳಿಗೆ ಹಂತ ಹಂತವಾಗಿ ಸಂಪರ್ಕ ನೀಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
ಒಟ್ಟಾರೆ, ಮಧ್ಯಪ್ರಾಚ್ಯದ ಬಿಕ್ಕಟ್ಟು ಇದೀಗ ಕರ್ನಾಟಕದ ಮನೆಮನೆಗೂ ತಟ್ಟಿದ್ದು, ಹೊಸ LPG ಗ್ಯಾಸ್ ಕನೆಕ್ಷನ್ ಪಡೆಯಲು ಕಾಯುತ್ತಿರುವ ಸಾವಿರಾರು ಕುಟುಂಬಗಳು ಅನಿಶ್ಚಿತತೆಯ ನಡುವೆ ದಿನ ಕಳೆಯುವಂತಾಗಿದೆ. ಪರಿಸ್ಥಿತಿ ಯಾವಾಗ ಸಹಜವಾಗಲಿದೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.
SIR Status Check By SMS: ಎಸ್ಐಆರ್ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ? ಜಸ್ಟ್ ಒಂದು ಎಸ್ಎಂಎಸ್ ಮೂಲಕ ಚೆಕ್ ಮಾಡಿ!

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.