PM Awas Yojana 2026: ಪಿಎಂ ಆವಾಸ್ ಯೋಜನೆಯಡಿ ಮನೆ ನಿರ್ಮಾಣಕ್ಕೆ ಅರ್ಜಿ ಆಹ್ವಾನ | ಯಾರಿಗೆ ಸಿಗಲಿದೆ ಈ ಸೌಲಭ್ಯ? ಇಲ್ಲಿದೆ ಸಂಪೂರ್ಣ ಮಾಹಿತಿ

Spread the love

WhatsApp Group Join Now
Telegram Group Join Now

PM Awas Yojana 2026: ಪಿಎಂ ಆವಾಸ್ ಯೋಜನೆ ಅಡಿಯಲ್ಲಿ ಮನೆ ನಿರ್ಮಾಣಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ, ದಾಖಲೆಗಳು, ಅರ್ಜಿ ಸಲ್ಲಿಸುವ ವಿಧಾನ ಮತ್ತು ಕೊನೆಯ ದಿನಾಂಕದ ಸಂಪೂರ್ಣ ಮಾಹಿತಿ ಇಲ್ಲಿದೆ…

ಸ್ವಂತ ಮನೆ ಹೊಂದುವ ಕನಸು ಕಾಣುತ್ತಿರುವ ವಸತಿ ರಹಿತ ಕುಟುಂಬಗಳಿಗೆ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಪ್ರಧಾನಮಂತ್ರಿ ಆವಾಸ್ ಯೋಜನೆ (PM Awas Yojana) ಅಡಿಯಲ್ಲಿ ಮತ್ತೊಂದು ಅವಕಾಶ ದೊರೆತಿದೆ. ನಗರ ಪ್ರದೇಶಗಳಲ್ಲಿ ಮನೆ ನಿರ್ಮಿಸಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ) 2.0 (PMAY-U 2.0) ಅಡಿಯಲ್ಲಿ ರಾಯಚೂರು ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಸತಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: E-Swathu: ಗ್ರಾಮ ಪಂಚಾಯತಿ ವ್ಯಾಪ್ತಿಯ ‘ಇ-ಸ್ವತ್ತು’ ನಿಯಮ ಸಡಿಲಿಕೆ | ಸರ್ಕಾರದ ಮಹತ್ವದ ಘೋಷಣೆ

ಯಾರು ಅರ್ಜಿ ಸಲ್ಲಿಸಬಹುದು?

ಈ ಯೋಜನೆಯಡಿ ವಸತಿ ರಹಿತ ಮತ್ತು ನಿವೇಶನ ರಹಿತ ಕುಟುಂಬಗಳಿಗೆ ಆದ್ಯತೆ ನೀಡಲಾಗುತ್ತದೆ. ವಿಶೇಷವಾಗಿ ಕೆಳಗಿನ ವರ್ಗದವರು ಅರ್ಜಿ ಸಲ್ಲಿಸಬಹುದು:

  • ಒಂಟಿ ಮಹಿಳೆಯರು ಮತ್ತು ಮಹಿಳಾ ಕುಟುಂಬಗಳು
  • ವಿಕಲಚೇತನರು (Divyang)
  • ಹಿರಿಯ ನಾಗರಿಕರು
  • ತೃತೀಯ ಲಿಂಗಿಗಳು (Transgender)
  • ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ಹಿಂದುಳಿದ ವರ್ಗದವರು
  • ಅಲ್ಪಸಂಖ್ಯಾತ ಸಮುದಾಯದವರು
  • ಸ್ವಚ್ಛತಾ ಕಾರ್ಮಿಕರು
  • ಪಿಎಂ ಸ್ವನಿಧಿ ಯೋಜನೆ (PM SVANidhi) ಅಡಿಯಲ್ಲಿ ಗುರುತಿಸಲ್ಪಟ್ಟ ಬೀದಿ ಬದಿ ವ್ಯಾಪಾರಿಗಳು
  • ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ (PM Vishwakarma Scheme) ಅಡಿಯಲ್ಲಿ ಗುರುತಿಸಲ್ಪಟ್ಟ ಕುಶಲಕರ್ಮಿಗಳು
  • ಅಂಗನವಾಡಿ ಕಾರ್ಯಕರ್ತರು
  • ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು
  • ಕೈಗಾರಿಕರು ಹಾಗೂ ವಲಸೆ ಬಂದ ಕುಟುಂಬಗಳು

ಇದನ್ನೂ ಓದಿ: Podi Process Karnataka: ಪೋಡಿ ಎಂದರೇನು? ಏಕೆ ಮಾಡಿಸಬೇಕು? ರೈತರಿಗೆ ಸಂಪೂರ್ಣ ಮಾರ್ಗದರ್ಶಿ

ಅರ್ಜಿ ಸಲ್ಲಿಸುವ ವಿಧಾನ (Application Process)

ಅರ್ಹ ಅಭ್ಯರ್ಥಿಗಳು ಪ್ರಧಾನಮಂತ್ರಿ ಆವಾಸ್ ಯೋಜನೆಯ ಅಧಿಕೃತ ವೆಬ್‌ಪೋರ್ಟಲ್ (Official Portal) ಮೂಲಕ ಅಥವಾ ಹತ್ತಿರದ ಸಿಎಸ್‌ಸಿ ಕೇಂದ್ರಗಳಲ್ಲಿ (CSC Centre) ಸ್ವತಃ ಅರ್ಜಿ ಸಲ್ಲಿಸಬಹುದು.

ಅರ್ಜಿಯನ್ನು ಸಲ್ಲಿಸುವಾಗ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು. ನಿಗದಿತ ಅವಧಿಯ ನಂತರ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Karnataka Pension Scheme: ವೃದ್ಧಾಪ್ಯ, ವಿಧವಾ, ಅಂಗವಿಕಲ ವೇತನಕ್ಕೆ ಹೊಸ ನಿಯಮ | 18.45 ಲಕ್ಷ ಜನರಿಗೆ ಪೆನ್ಷನ್ ಬಂದ್!

PM Awas Yojana 2026
PM Awas Yojana 2026

ಬೇಕಾಗುವ ದಾಖಲೆಗಳು (Documents Required)

ಅರ್ಜಿ ಸಲ್ಲಿಸುವವರು ಸಾಮಾನ್ಯವಾಗಿ ಈ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು:

  1. ಆಧಾರ್ ಕಾರ್ಡ್ (Aadhaar Card)
  2. ಪಡಿತರ ಚೀಟಿ (Ration Card)
  3. ಜಾತಿ ಪ್ರಮಾಣ ಪತ್ರ (Caste Certificate)
  4. ಆದಾಯ ಪ್ರಮಾಣ ಪತ್ರ (Income Certificate)
  5. ಬ್ಯಾಂಕ್ ಪಾಸ್‌ಬುಕ್ ಪ್ರತಿ (Bank Passbook Copy)
  6. ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳು (ಹಕ್ಕುಪತ್ರ, ಕ್ರಯಪತ್ರ, ದಾನ ಪತ್ರ, ಉಡುಗೊರೆ ಪತ್ರ, ಖಾತಾ ದಾಖಲೆಗಳು)

ನಿವೇಶನ ಹೊಂದಿರುವವರು ತಮ್ಮ ಜಾಗದ ದಾಖಲೆಗಳನ್ನು ಸಲ್ಲಿಸಬೇಕು. ನಿವೇಶನ ಇಲ್ಲದವರು ಇತರೆ ಅಗತ್ಯ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: BPL Card Cancellation: 14 ಲಕ್ಷ ಜನರ ಬಿಪಿಎಲ್ ರೇಷನ್ ಕಾರ್ಡ್ ರದ್ದು? ಸಚಿವ ಮುನಿಯಪ್ಪ ಮಹತ್ವದ ಸುಳಿವು

ಚಾಮರಾಜನಗರ ಹಾಗೂ ರಾಯಚೂರಿನಲ್ಲಿ ಅರ್ಜಿ ಅವಕಾಶ

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯಲ್ಲಿಯೂ ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ) 2.0 ಅಡಿಯಲ್ಲಿ ವಸತಿ ರಹಿತರಿಗೆ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಅದೇ ರೀತಿ ರಾಯಚೂರು ಜಿಲ್ಲೆಯ ಮಾನ್ವಿ ಪುರಸಭೆ ವ್ಯಾಪ್ತಿಯಲ್ಲೂ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಎರಡೂ ಜಿಲ್ಲೆಗಳ ಹೊರತಾಗಿಯೂ ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ನಗರ ಪ್ರದೇಶದ ಅರ್ಹರಿಗೆ ಅರ್ಜಿ ಸಲ್ಲಿಕೆ ಅವಕಾಶವಿದೆ.

WhatsApp Group Join Now
Telegram Group Join Now

ಇದನ್ನೂ ಓದಿ: Uchita Solar Vidyut Yojane: ಪ್ರತಿ ಮನೆಗೂ ಉಚಿತ ಸೋಲಾರ್ ಕರೆಂಟ್ ಭಾಗ್ಯ | ಪಿಎಂ ಸೂರ್ಯ ಘರ್ ಯೋಜನೆ ಸಂಪೂರ್ಣ ಮಾಹಿತಿ

ಸ್ವಂತ ಮನೆ ನಿರ್ಮಾಣಕ್ಕೆ ಸರ್ಕಾರದಿಂದ ದೊರೆಯುವ ಈ ಸೌಲಭ್ಯವನ್ನು ಅರ್ಹ ಕುಟುಂಬಗಳು ಬಳಸಿಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಬAಧಪಟ್ಟ ನಗರಸಭೆ, ಪುರಸಭೆ ಅಥವಾ ಮಹಾನಗರ ಪಾಲಿಕೆ ಕಚೇರಿಯನ್ನು ಸಂಪರ್ಕಿಸಬಹುದು.

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: ಜೂನ್ 30, 2026

ಅರ್ಜಿ ಲಿಂಕ್: Apply Now

Karnataka Pension Scheme: ವೃದ್ಧಾಪ್ಯ, ವಿಧವಾ, ಅಂಗವಿಕಲ ವೇತನಕ್ಕೆ ಹೊಸ ನಿಯಮ | 18.45 ಲಕ್ಷ ಜನರಿಗೆ ಪೆನ್ಷನ್ ಬಂದ್!


Spread the love
error: Content is protected !!