ಯಾವೆಲ್ಲ ಕಾರಣಕ್ಕೆ ಬೆಳೆ ಹಾನಿಯಾದರೆ ರೈತರಿಗೆ ಬೆಳೆವಿಮೆ ಪರಿಹಾರ ಸಿಗುತ್ತದೆ? ರೈತರು ತಿಳಿದಿರಬೇಕಾದ ಮಾಹಿತಿ ಇಲ್ಲಿದೆ… Karnataka Raitha Suraksha Fasal Bima Yojana

Spread the love

Karnataka Raitha Suraksha Fasal Bima Yojana : ಯಾವೆಲ್ಲ ಕಾರಣಕ್ಕೆ ಬೆಳೆ ನಷ್ಟವಾದರೆ ರೈತರಿಗೆ ಬೆಳೆ ವಿಮೆ ಪರಿಹಾರ ಸಿಗುತ್ತದೆ? ಮುಂಗಾರು ಬೆಳೆ ವಿಮೆ ಕಂತು ಪಾವತಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ..

WhatsApp Group Join Now
Telegram Group Join Now

ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ (Karnataka Raitha Suraksha PM Fasal Bima Yojana) 2024-25ನೇ ಸಾಲಿನ ಮುಂಗಾರು ಬೆಳೆಗಳ ವಿಮಾ ನೋಂದಣಿಗೆ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಮುಂಗಾರು ಹಂಗಾಮಿನಲ್ಲಿ ಒಟ್ಟು 36 ಅಧಿಸೂಚಿತ ಬೆಳೆಗಳು ಈ ವಿಮಾ ಯೋಜನೆಯ ವ್ಯಾಪ್ತಿಗೆ ಬರುತ್ತವೆ.

ಬೆಳೆವಾರು ನಿಗದಿಪಡಿಸಿದ ವಿಮಾ ಮೊತ್ತವನ್ನು ರೈತರು ಮುಂಗಾರು ಹಂಗಾಮಿನಲ್ಲಿ ಶೇ.2ರಷ್ಟು (ತೋಟಗಾರಿಕೆ ಬೆಳೆಗಳಿಗೆ ಶೇ.5ರಷ್ಟು) ಮೊತ್ತವನ್ನು ಮಾತ್ರ ಪಾವತಿಸಬೇಕು. ಈ ಯೋಜನೆಯಡಿ ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿದರೆ ಪ್ರತಿ ಹೆಕ್ಟೇರ್‌ಗೆ ₹29,000 ಯಿಂದ ₹86,000 ವರೆಗೂ ಆಯಾ ಬೆಳೆಗೆ ತಕ್ಕಂತೆ ಬೆಳೆನಷ್ಟ ಪರಿಹಾರ ಸಿಗುತ್ತದೆ. ತೋಟಗಾರಿಕೆ ಬೆಳೆಗಳಿಗೆ ಇನ್ನೂ ಹೆಚ್ಚಿನ ಬೆಳೆಹಾನಿ ವಿಮಾ ಪರಿಹಾರ ಸಿಗುತ್ತದೆ.

ಸರಕಾರಿ ನೌಕರರ ಸಂಬಳ ಹೆಚ್ಚಳಕ್ಕೆ ಡೇಟ್ ಫಿಕ್ಸ್ | ನೌಕರರ ನಿಯೋಗಕ್ಕೆ ಸಿಎಂ ಭರವಸೆ Karnataka 7th Pay Commission

ಯಾವೆಲ್ಲ ನಷ್ಟಕ್ಕೆ ಪರಿಹಾರ ಸಿಗಲಿದೆ?

ಫಸಲ್ ಬೀಮಾ ಯೋಜನೆಯಡಿ ಪ್ರಕೃತಿ ವಿಕೋಪದಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸಲಾಗುತ್ತಿದೆ. ಹಾಲಿ ಇರುವ ಬೆಳೆಗಳಿಗೆ ಬಿತ್ತನೆಯಿಂದ ಕಟಾವಿನ ಹಂತದ ವರೆಗೆ ಈ ವಿಮಾ ರಕ್ಷಣೆ ಇರುತ್ತದೆ. ವಿಮೆ ಮಾಡಿದ ಕ್ಷೇತ್ರದಲ್ಲಿ ಮಳೆ ಅಭಾವದಿಂದ ಬಿತ್ತನೆ ಅಥವಾ ನಾಟಿ ವಿಫಲವಾದಲ್ಲಿ ವಿಮಾ ರಕ್ಷಣೆ ಒದಗಿಸಲಿದೆ.

Karnataka Raitha Suraksha Fasal Bima Yojana

ಬರ, ಶುಷ್ಕ ಪರಿಸ್ಥಿತಿ, ನೆರೆ, ಪ್ರವಾಹಗಳಿಂದ ಬೆಳೆ ಮುಳಗಡೆ, ಗುಡುಗು ಮಿಂಚುಗಳಿ೦ದ ಉಂಟಾಗುವ ಬೆಂಕಿ ಅವಘಡ, ಭೂಕುಸಿತ, ಬಿರುಗಾಳಿ, ಚಂಡಮಾರುತ ಸಹಿತ ಮಳೆ, ಅಕಾಲಿಕ ಮಳೆಯಿಂದ ನಷ್ಟ ಸಂಭವಿಸಿದಲ್ಲಿ ಸಮಗ್ರ ವಿಮಾ ಭದ್ರತೆಯನ್ನು ಒದಗಿಸುವುದು ಹಾಗೂ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟ ಸಂದರ್ಭದಲ್ಲಿ (14 ದಿನಗಳ ವರೆಗೆ) ಆಲಿಕಲ್ಲು ಮಳೆ, ಚಂಡಮಾರುತ ಸಹಿತ ಮಳೆ ಹಾಗೂ ಅಕಾಲಿಕ ಮಳೆಯಿಂದ ಬೆಳೆ ನಷ್ಟವಾದರೂ ಕೂಡ ನಷ್ಟ ಪರಿಹಾರ ಒದಗಿಸಲಾಗುತ್ತದೆ.

ಹೊಸ ರೇಷನ್ ಕಾರ್ಡ್ ನೀಡಲು ಮನೆ ಬಾಗಿಲಿಗೆ ಬರ‍್ತಾರೆ ಅಧಿಕಾರಿಗಳು | ಅಸಲಿ ದಾಖಲೆ ನೀಡಿದರೆ ಮಾತ್ರ ಹೊಸ ರೇಷನ್ ಕಾರ್ಡ್ Officials will come to doorsteps of ration card applicants

ಬೆಳೆ ವಿಮೆ ನೋಂದಣಿ ಹೇಗೆ?

ನಿಮ್ಮೂರಿನ ಗ್ರಾಮ ಒನ್, ಸಾಮಾನ್ಯ ಸೇವಾ ಕೇಂದ್ರ, ಕರ್ನಾಟಕ ಒನ್ ಅಥವಾ ಬ್ಯಾಂಕ್‌ಗಳಲ್ಲಿ ವಿಮಾ ಪ್ರಸ್ತಾವನೆ, ಪಹಣಿ, ಚಾಲ್ತಿ ಬ್ಯಾಂಕ್ ಪಾಸ್ ಪುಸ್ತಕ, ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯೊ೦ದಿಗೆ ಪ್ರೀಮಿಯಂ ಪಾವತಿಸಿ ವಿಮೆಗೆ ನೋಂದಾಯಿಸಿಕೊಳ್ಳಲು ಅವಕಾಶ ಇದೆ.

ಈಗಾಗಲೇ ಬೆಳೆವಾರು ಬೆಳೆ ವಿಮೆ ಕಂತು ಮಾಡಿಸಿದ ರೈತರಿಗೆ ವಿಮಾ ಕಂಪನಿ ಆದ್ಯತೆ ಮೇರೆಗೆ ಪರಿಹಾರ ಧನವನ್ನು ಬಿಡುಗಡೆ ಮಾಡಲಾಗುತ್ತದೆ. ಆದರೆ ಪ್ರಸ್ತುತ ಸಾಲಿನ ಬೆಳೆ ವಿಮೆ ಅರ್ಜಿಯನ್ನು ರೈತರು ಕಾಲಮಿತಿಯಲ್ಲಿ ತುಂಬಿದರೆ ಮಾತ್ರ ವಿವಿಧ ಕಾರಣಕ್ಕೆ ಬೆಳೆ ನಷ್ಟವಾದಲ್ಲಿ ಮಾತ್ರ ಈ ಪರಿಹಾರ ಸಿಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳು, ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು. ಉಚಿತ ಸಹಾಯವಾಣಿ 1800180 1551 ನಂಬರಿಗೆ ಕರೆ ಮಾಡುವ ಮೂಲಕ ನಿಮ್ಮ ಜಿಲ್ಲೆಗೆ ನಿಗದಿಯಾಗಿರುವ ಬೆಳೆ ವಿಮಾ ಕಂಪನಿಯ ಸಿಬ್ಬಂದಿಯ ಮೊಬೈಲ್ ನಂಬರ್ ಪಡೆದು ವಿವರವಾದ ಮಾಹಿತಿ ತಿಳಿಯಬಹುದು.

PUC, SSLC ಪಾಸಾದವರಿಗೆ ಸರ್ಕಾರಿ LKG-UKG ಶಾಲೆ ಶಿಕ್ಷಕರು ಮತ್ತು ಆಯಾ ಹುದ್ದೆಗಳ ನೇಮಕಾತಿ | ಖಾಲಿ ಹುದ್ದೆಗಳ ಜಿಲ್ಲಾವಾರು ಪಟ್ಟಿ ಇಲ್ಲಿದೆ… Govt LKG UKG Teachers Recruitment 2024


Spread the love
WhatsApp Group Join Now
Telegram Group Join Now
error: Content is protected !!