Ugadi Horoscope 2026: ಯುಗಾದಿ ಭವಿಷ್ಯ 2026: 12 ರಾಶಿಗಳ ಸಂಪೂರ್ಣ ಗೋಚಾರ ವಿಶ್ಲೇಷಣೆ. ಯಾರಿಗೆ ಅದೃಷ್ಟ, ಯಾರಿಗೆ ಸವಾಲು? ಸಂಪೂರ್ಣ ಗೋಚಾರ ವಿಶ್ಲೇಷಣೆ ಇಲ್ಲಿದೆ…
ಯುಗಾದಿ ನಮ್ಮ ಜೀವನದಲ್ಲಿ ಹೊಸ ಆರಂಭವನ್ನು ಸೂಚಿಸುವ ಮಹತ್ವದ ಹಬ್ಬ. ಈ ದಿನದಿಂದ ಆರಂಭವಾಗುವ ನೂತನ ಸಂವತ್ಸರವು ವ್ಯಕ್ತಿಯ ಜೀವನದ ದಿಕ್ಕು, ಅವಕಾಶಗಳು ಮತ್ತು ಸವಾಲುಗಳನ್ನು ನಿರ್ಧರಿಸುವುದಾಗಿ ಜ್ಯೋತಿಷ್ಯಶಾಸ್ತ್ರ (Astrology) ಹೇಳುತ್ತದೆ.
ಗ್ರಹಗಳ ಗೋಚಾರ (Planetary Transit) ವಿಶ್ಲೇಷಣೆ ಮಾಡುವಾಗ ವೇಗವಾಗಿ ಚಲಿಸುವ ರವಿ, ಕುಜ, ಬುಧ, ಶುಕ್ರ ಗ್ರಹಗಳಿಗಿಂತ ನಿಧಾನವಾಗಿ ಚಲಿಸುವ ಗುರು, ಶನಿ, ರಾಹು, ಕೇತುಗಳ ಪ್ರಭಾವವೇ ದೀರ್ಘಕಾಲೀನ ಫಲಿತಾಂಶಗಳನ್ನು ನೀಡುತ್ತದೆ.
2026ರ ಸಂವತ್ಸರದಲ್ಲಿ ಶನೇಶ್ಚರನು ಮೀನ ರಾಶಿಯಲ್ಲಿ ವರ್ಷಪೂರ್ತಿ ಸಂಚರಿಸುತ್ತಾನೆ. ಗುರು ಗ್ರಹವು ಮಿಥುನದಿಂದ ಕಟಕ, ನಂತರ ಸಿಂಹ ಮತ್ತು ಮತ್ತೆ ಕಟಕ ರಾಶಿಗೆ ಸಂಚರಿಸುವ ಮೂಲಕ ವರ್ಷಪೂರ್ತಿ ಹಲವು ಪ್ರಮುಖ ಬದಲಾವಣೆಗಳನ್ನು ತರುತ್ತಾನೆ. ಡಿಸೆಂಬರ್ನ ನಂತರ ರಾಹು ಮತ್ತು ಕೇತುಗಳು ತಮ್ಮ ರಾಶಿ ಬದಲಾವಣೆ ಮೂಲಕ ಜೀವನದ ಹೊಸ ಅಧ್ಯಾಯಗಳನ್ನು ತೆರೆದಿಡುತ್ತವೆ.
ಮೇಷ ರಾಶಿ
ಈ ವರ್ಷ ಅವಕಾಶಗಳ ಜೊತೆಗೆ ಜವಾಬ್ದಾರಿಗಳ ವರ್ಷವಾಗಿರುತ್ತದೆ. ಗುರು ನಿಮಗೆ ರಕ್ಷಾಕವಚದಂತೆ ಕಾರ್ಯನಿರ್ವಹಿಸಿ ಜೀವನದಲ್ಲಿ ಮುನ್ನಡೆಯಲು ಸಹಕಾರಿಯಾಗುತ್ತಾನೆ. ವಿಶೇಷವಾಗಿ ಜೂನ್ನಿಂದ ಅಕ್ಟೋಬರ್ವರೆಗೆ ನಿಮ್ಮ ಜೀವನದಲ್ಲಿ ಸುವರ್ಣಕಾಲ ಕಾಣಬಹುದು.
ಕುಟುಂಬದಲ್ಲಿ ಸಂತೋಷ, ಆಸ್ತಿ ಮತ್ತು ವಾಹನಗಳ ಯೋಗ, ಹಿರಿಯರಿಂದ ಬೆಂಬಲ ಸಿಗುವ ಸಾಧ್ಯತೆ ಇದೆ. ಆದರೆ ಶನಿಯ ದ್ವಾದಶ ಸಂಚಾರದಿAದ ಖರ್ಚು ಹೆಚ್ಚಳ, ನಿದ್ರಾಹೀನತೆ ಮತ್ತು ಆಂತರಿಕ ಒತ್ತಡ ಅನುಭವಿಸಬಹುದು. ಇದರಿಂದ ಆರ್ಥಿಕ ನಿಯಂತ್ರಣ ಮತ್ತು ಶಾಂತ ಮನೋಭಾವ ಅತ್ಯಗತ್ಯವಾಗುತ್ತದೆ.
ಇದನ್ನೂ ಓದಿ: Karnataka March Pension Delay: ಕರ್ನಾಟಕ ಪಿಂಚಣಿ ಹಣ ತಡ | ಕಾರಣ ಏನು? ಯಾವಾಗ ಜಮಾ ಆಗುತ್ತದೆ? ಸಂಪೂರ್ಣ ಮಾಹಿತಿ
ವೃಷಭ ರಾಶಿ
ಈ ವರ್ಷ ಸ್ಥಿರ ಬೆಳವಣಿಗೆ ತರುವುದಾಗಿ ಕಾಣಿಸುತ್ತದೆ. ಉದ್ಯೋಗದಲ್ಲಿ ಪ್ರಗತಿ, ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಮತ್ತು ಹಿಂದಿನ ಪ್ರಯತ್ನಗಳಿಗೆ ಫಲ ಸಿಗುವ ಸಮಯ ಇದು.
ಆದರೆ ವರ್ಷದ ಮಧ್ಯಭಾಗದಲ್ಲಿ ಗುರುನ ಚಲನೆಯಿಂದ ಕೆಲವು ಅಡಚಣೆಗಳು, ಕುಟುಂಬದಲ್ಲಿ ಅಸಮಾಧಾನ ಮತ್ತು ಮನಸ್ಸಿನ ಅಶಾಂತಿ ಉಂಟಾಗಬಹುದು. ಆದ್ದರಿಂದ ತಾಳ್ಮೆ ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮುಖ್ಯ.
ಮಿಥುನ ರಾಶಿ
ವರ್ಷದ ಆರಂಭದಲ್ಲಿ ಕೆಲವು ಸವಾಲುಗಳನ್ನು ಎದುರಿಸಬಹುದು. ಆದರೆ ಜೂನ್ನ ನಂತರ ಗುರುನ ಅನುಗ್ರಹದಿಂದ ಧನಯೋಗ, ಕೀರ್ತಿ ಮತ್ತು ಆರ್ಥಿಕ ಭದ್ರತೆ ದೊರೆಯುತ್ತದೆ.
ಶನಿಯ ಪ್ರಭಾವದಿಂದ ವೃತ್ತಿ ಜೀವನದಲ್ಲಿ ಒತ್ತಡ ಹೆಚ್ಚಾಗಬಹುದು, ಆದರೆ ಇದೇ ಒತ್ತಡ ನಿಮ್ಮನ್ನು ಇನ್ನಷ್ಟು ಶಕ್ತಿಶಾಲಿಯಾಗಿಸಲು ಸಹಕಾರಿಯಾಗುತ್ತದೆ. ಶ್ರಮ ಮತ್ತು ನಿಯಮಿತತೆ ನಿಮ್ಮ ಯಶಸ್ಸಿನ ಕೀಲಿ ಆಗುತ್ತದೆ.
ಇದನ್ನೂ ಓದಿ: Uchita Thotagarike Tarabeti: 10 ತಿಂಗಳ ಉಚಿತ ತೋಟಗಾರಿಕೆ ತರಬೇತಿಗೆ ಅರ್ಜಿ | ರೈತ ಮಕ್ಕಳಿಗೆ ಅವಕಾಶ
ಕಟಕ ರಾಶಿ
ಈ ವರ್ಷ ಬದಲಾವಣೆ ಮತ್ತು ಅವಕಾಶಗಳ ಮಿಶ್ರಣವಾಗಿದೆ. ವರ್ಷದ ಆರಂಭದಲ್ಲಿ ಖರ್ಚು ಹೆಚ್ಚಾಗುವ ಸಾಧ್ಯತೆ ಇದ್ದರೂ, ಜೂನ್ನ ನಂತರ ಗುರು ಉಚ್ಚ ಸ್ಥಿತಿಗೆ ಬಂದಾಗ ಅದೃಷ್ಟ ನಿಮ್ಮತ್ತ ತಿರುಗುತ್ತದೆ.
ವಿವಾಹ ಯೋಗ, ಸಂತಾನ ಭಾಗ್ಯ ಮತ್ತು ಕುಟುಂಬದಲ್ಲಿ ಶುಭ ಕಾರ್ಯಗಳ ಸೂಚನೆಗಳು ಕಾಣಬಹುದು. ಆದರೆ ರಾಹು ಪ್ರಭಾವದಿಂದ ಕೆಲವೊಮ್ಮೆ ಮಾನಸಿಕ ಒತ್ತಡ ಮತ್ತು ಆತಂಕ ಉಂಟಾಗಬಹುದು.
ಇದನ್ನೂ ಓದಿ: LPG Cylinder Booking New Rule: ಸಿಲಿಂಡರ್ ಬುಕ್ ಮಾಡುವವರಿಗೆ ಹೊಸ ನಿಯಮ | ಕೇಂದ್ರ ಸರ್ಕಾರದ ಮಹತ್ವದ ಆದೇಶ
ಸಿಂಹ ರಾಶಿ
ಈ ವರ್ಷ ಹೆಚ್ಚು ಎಚ್ಚರಿಕೆಯ ಅಗತ್ಯವಿದೆ. ಆರೋಗ್ಯದ ಮೇಲೆ ವಿಶೇಷ ಗಮನ ಹರಿಸಬೇಕು. ಕುಟುಂಬ ಮತ್ತು ಸಂಬಂಧಗಳಲ್ಲಿ ಅರ್ಥಭ್ರಾಂತಿ ಉಂಟಾಗುವ ಸಾಧ್ಯತೆ ಇದೆ.
ಉದ್ಯೋಗದಲ್ಲಿ ಸ್ಥಿರತೆ ಕಂಡುಬಂದರೂ, ನಿಮ್ಮ ಮಾತು ಮತ್ತು ವರ್ತನೆಗೆ ಮೃದುವಾದ ನಡವಳಿಕೆ ಅಗತ್ಯ. ತಾಳ್ಮೆ ಮತ್ತು ಸಂವಹನ ಕೌಶಲ (Communication Skills) ಈ ವರ್ಷ ನಿಮ್ಮನ್ನು ಕಾಪಾಡುತ್ತವೆ.

ಕನ್ಯಾ ರಾಶಿ
ಈ ವರ್ಷ ಅತ್ಯಂತ ಶುಭಕರವಾಗಿದೆ. ವೃತ್ತಿ ಜೀವನದಲ್ಲಿ ಬಡ್ತಿ, ಹೊಸ ಅವಕಾಶಗಳು ಮತ್ತು ಗುರುನ ಅನುಗ್ರಹದಿಂದ ಆರ್ಥಿಕ ಲಾಭಗಳು ಹೆಚ್ಚಾಗುತ್ತವೆ.
ಜೂನ್ನ ನಂತರ ನಿಮ್ಮ ಜೀವನದಲ್ಲಿ ದೊಡ್ಡ ಮಟ್ಟದ ಪ್ರಗತಿ ಕಾಣಬಹುದು. ವ್ಯವಹಾರ ವಿಸ್ತರಣೆ, ಹೊಸ ಯೋಜನೆಗಳು ಮತ್ತು ದೊಡ್ಡ ಒಪ್ಪಂದಗಳಿಗೆ ಇದು ಉತ್ತಮ ಸಮಯ.
ತುಲಾ ರಾಶಿ
ಈ ಸಂವತ್ಸರ ಅದೃಷ್ಟದ ವರ್ಷವಾಗಿದೆ. ಗುರುನ ಪ್ರಭಾವದಿಂದ ಉನ್ನತ ಹುದ್ದೆಗಳು, ಉತ್ತಮ ಆದಾಯ ಮತ್ತು ಸಮಾಜದಲ್ಲಿ ಗೌರವ ದೊರೆಯುತ್ತದೆ.
ನಿಮ್ಮ ಬಹುಕಾಲದ ಕನಸುಗಳು ಈಡೇರುವ ಸಾಧ್ಯತೆ ಇದೆ. ಆದರೆ ಪ್ರೀತಿ, ಮಕ್ಕಳು ಅಥವಾ ಸೃಜನಶೀಲ ಕ್ಷೇತ್ರದಲ್ಲಿ ಕೆಲವು ಅಶಾಂತಿ ಕಾಣಬಹುದು.
ಇದನ್ನೂ ಓದಿ: Mudra Loan 20 lakhs: ಮುದ್ರಾ ಸಾಲದ ಮಿತಿ 20 ಲಕ್ಷಕ್ಕೆ ಏರಿಕೆ! ಗ್ಯಾರಂಟಿ ಇಲ್ಲದೆ ಲೋನ್ – ಪಡೆಯುವುದು ಹೇಗೆ?
ವೃಶ್ಚಿಕ ರಾಶಿ
ಈ ವರ್ಷ ಆಳವಾದ ಬದಲಾವಣೆಗಳನ್ನು ತರುತ್ತದೆ. ಅಷ್ಟಮ ಗುರುನ ಪ್ರಭಾವದಿಂದ ಜೀವನದ ದಿಕ್ಕೇ ಬದಲಾಗುವ ಅನುಭವ ಬರಬಹುದು.
ಅನಿರೀಕ್ಷಿತ ಖರ್ಚುಗಳು ಮತ್ತು ಆಂತರಿಕ ಗೊಂದಲ ಉಂಟಾಗಬಹುದು. ಆದರೆ ಈ ಬದಲಾವಣೆಗಳು ನಿಮ್ಮ ವ್ಯಕ್ತಿತ್ವವನ್ನು ಮತ್ತಷ್ಟು ಗಟ್ಟಿಯಾಗಿಸಲು ಸಹಕಾರಿಯಾಗುತ್ತವೆ.
ಇದನ್ನೂ ಓದಿ: OSM Vextra Electric Scooter Launch: ಖರ್ಚಿಲ್ಲದೆ 110 ಕಿ.ಮೀ ಓಡುವ ಕಡಿಮೆ ಬೆಲೆಯ ಹೊಸ ಸ್ಟೈಲಿಷ್ ಸ್ಕೂಟರ್ ಬಿಡುಗಡೆ
ಧನಸ್ಸು ರಾಶಿ
ಸಂಬಂಧಗಳ ಪರೀಕ್ಷೆಯ ವರ್ಷವಾಗಿದೆ. ಪಾಲುದಾರಿಕೆಗಳಲ್ಲಿ ಲಾಭ ಕಂಡುಬಂದರೂ, ಕುಟುಂಬದಲ್ಲಿ ಒತ್ತಡ ಮತ್ತು ಜವಾಬ್ದಾರಿಗಳು ಹೆಚ್ಚಾಗಬಹುದು.
ಹಿರಿಯರ ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕಾಗುತ್ತದೆ. ಶಾಂತಿ ಮತ್ತು ಸಹನೆ ನಿಮ್ಮನ್ನು ಕಷ್ಟದಿಂದ ಹೊರತೆಗೆಯುತ್ತದೆ.
ಮಕರ ರಾಶಿ
ಈ ವರ್ಷ ರಾಜಯೋಗದ ಫಲಿತಾಂಶಗಳನ್ನು ನೀಡುವ ಸಾಧ್ಯತೆ ಇದೆ. ಶನಿಯ ಅನುಗ್ರಹದಿಂದ ಶತ್ರುಗಳ ಮೇಲೆ ಜಯ, ಸ್ಪರ್ಧೆಯಲ್ಲಿ ಯಶಸ್ಸು ಮತ್ತು ಉದ್ಯೋಗದಲ್ಲಿ ಬೆಳವಣಿಗೆ ಕಂಡುಬರುತ್ತದೆ. ನಿಮ್ಮ ಶ್ರಮಕ್ಕೆ ನೇರ ಫಲ ದೊರೆಯುವ ಸಮಯ ಇದು. ಆದರೆ ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ಅಗತ್ಯ.
ಕುಂಭ ರಾಶಿ
ಸಾಡೇಸಾತಿಯ ಕೊನೆಯ ಹಂತವನ್ನು ಅನುಭವಿಸುತ್ತಿದ್ದಾರೆ. ಈ ಸಮಯದಲ್ಲಿ ಹಣಕಾಸಿನ ಒತ್ತಡ, ಕುಟುಂಬ ಸಮಸ್ಯೆಗಳು ಮತ್ತು ಆಂತರಿಕ ಸಂಘರ್ಷಗಳು ಎದುರಾಗಬಹುದು. ಆದರೆ ಇದೇ ಸಮಯ ನಿಮ್ಮನ್ನು ಶಕ್ತಿಶಾಲಿ ವ್ಯಕ್ತಿಯಾಗಿ ರೂಪಿಸುವ ಹಂತವಾಗಿದೆ. ತಾಳ್ಮೆ ಮತ್ತು ಶಿಸ್ತು ಈ ವರ್ಷ ಅತ್ಯಗತ್ಯ.
ಮೀನ ರಾಶಿ
ಈ ವರ್ಷ ಹೆಚ್ಚು ಸವಾಲಿನದ್ದಾಗಿರುತ್ತದೆ. ಸಾಡೇಸಾತಿಯ ಗರಿಷ್ಠ ಹಂತದಲ್ಲಿರುವುದರಿಂದ ಆರೋಗ್ಯ, ಮಾನಸಿಕ ನೆಮ್ಮದಿ ಮತ್ತು ಹಣಕಾಸಿನ ಮೇಲೆ ಒತ್ತಡ ಹೆಚ್ಚಾಗಬಹುದು. ಆದರೂ ಜೂನ್ನಿಂದ ಅಕ್ಟೋಬರ್ವರೆಗೆ ಗುರುನ ಅನುಗ್ರಹದಿಂದ ಉತ್ತಮ ಫಲಿತಾಂಶಗಳು ದೊರೆಯುವ ಸಾಧ್ಯತೆ ಇದೆ.
ಒಟ್ಟಿನಲ್ಲಿ 2026ರ ಯುಗಾದಿ ಸಂವತ್ಸರವು ಪ್ರತಿಯೊಂದು ರಾಶಿಗೂ ವಿಭಿನ್ನ ಅನುಭವಗಳನ್ನು ನೀಡುತ್ತದೆ. ಕೆಲವು ರಾಶಿಗಳಿಗೆ ಇದು ಅದೃಷ್ಟದ ದಾರಿ ತೆರೆದರೆ, ಇನ್ನೂ ಕೆಲವು ರಾಶಿಗಳಿಗೆ ಜೀವನದ ಪಾಠಗಳನ್ನು ಕಲಿಸುವ ಸಮಯವಾಗುತ್ತದೆ. ಜ್ಯೋತಿಷ್ಯವು ದಾರಿದೀಪದಂತಿದ್ದು, ನಮ್ಮ ಶ್ರಮ ಮತ್ತು ನಿರ್ಧಾರಗಳೇ ಅಂತಿಮ ಫಲಿತಾಂಶವನ್ನು ನಿರ್ಧರಿಸುತ್ತವೆ ಎಂಬುದನ್ನು ಮರೆಯಬಾರದು.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.