Karnataka March-April Heatwave: ಕರ್ನಾಟಕದಲ್ಲಿ ಮಾರ್ಚ್-ಏಪ್ರಿಲ್‌ನಲ್ಲಿ ಬೆಂಕಿ ಬಿಸಿಲು ಹೆಚ್ಚಳದ ಎಚ್ಚರಿಕೆ. ಹಲವು ಜಿಲ್ಲೆಗಳಲ್ಲಿ ತಾಪಮಾನ 42-45°C ತಲುಪುವ ಸಾಧ್ಯತೆ. ಹವಾಮಾನ ಇಲಾಖೆ ಸೂಚನೆ, ಆರೋಗ್ಯ ಸಲಹೆಗಳು ಇಲ್ಲಿವೆ…
ಕರ್ನಾಟಕದಲ್ಲಿ ಈ ಬಾರಿ ಬೇಸಿಗೆ (Summer Season) ತನ್ನ ನಿಜಸ್ವರೂಪ ತೋರಿಸಲು ಇನ್ನೂ ಸ್ವಲ್ಪ ಸಮಯವಿದ್ದರೂ, ಬಿಸಿಲಿನ ತೀವ್ರತೆ ಈಗಾಗಲೇ ಹೆಚ್ಚಾಗಿದೆ.
ರಾಜ್ಯದ ಹಲವೆಡೆ ಗರಿಷ್ಠ ತಾಪಮಾನ ಏರಿಕೆಯಾಗುತ್ತಿದ್ದು, ಮುಂಬರುವ ಮಾರ್ಚ್-ಏಪ್ರಿಲ್ ತಿಂಗಳುಗಳಲ್ಲಿ ‘ಬೆಂಕಿ ಬಿಸಿಲು’ (Heat Wave) ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ ಎಂದು India Meteorological Department ಎಚ್ಚರಿಕೆ ನೀಡಿದೆ.
ಹವಾಮಾನ ತಜ್ಞರ ಪ್ರಕಾರ, ವಾಡಿಕೆಯಿಗಿಂತ ಹೆಚ್ಚು ಉಷ್ಣಾಂಶ ದಾಖಲಾಗುತ್ತಿರುವುದು ಸಾಮಾನ್ಯ seasonal change ಮಾತ್ರವಲ್ಲ, ಇದು ದೀರ್ಘಕಾಲದ (Climate Change Impact) ಪರಿಣಾಮಗಳ ಸೂಚನೆಯೂ ಆಗಿದೆ.
ಹಲವು ಜಿಲ್ಲೆಗಳಲ್ಲಿ 35°C ದಾಟಿದ ತಾಪಮಾನ
ರಾಜ್ಯದ ಹಾವೇರಿ, ಬಾಗಲಕೋಟೆ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು 35 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ದಾಖಲಾಗುತ್ತಿದೆ. ಕಲಬುರಗಿಯಲ್ಲಿ ಈಗಾಗಲೇ 36 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಕೆಲವು ಪ್ರದೇಶಗಳಲ್ಲಿ ವಾಡಿಕೆಯಿಗಿಂತ 2-3 ಡಿಗ್ರಿ ಹೆಚ್ಚು ತಾಪಮಾನ ದಾಖಲಾಗಿರುವುದು ಗಮನಾರ್ಹ.
ಉತ್ತರ ಒಳನಾಡಿನ ಜಿಲ್ಲೆಗಳಾದ ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರು, ಬಾಗಲಕೋಟೆ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಮಾರ್ಚ್-ಏಪ್ರಿಲ್ ವೇಳೆಗೆ 42°C ರಿಂದ 45°C ವರೆಗೆ ಏರಿಕೆಯ ಸಾಧ್ಯತೆ ಇದೆ. ಬೆಂಗಳೂರಿನಲ್ಲಿಯೂ 39°C ವರೆಗೆ ಉಷ್ಣಾಂಶ ಏರಬಹುದು ಎಂದು ಹವಾಮಾನ ತಜ್ಞ ಸಿ.ಎಸ್. ಪಾಟೀಲ ತಿಳಿಸಿದ್ದಾರೆ.
ತಾಪಮಾನ ಏರಿಕೆಗೆ ಕಾರಣಗಳೇನು?
ಈ ಬಾರಿಯ ಬಿಸಿಲು ತೀವ್ರವಾಗಲು ಹಲವು ಕಾರಣಗಳಿವೆ:
- ಜಾಗತಿಕ ತಾಪಮಾನ ಏರಿಕೆ (Global Warming)
- ತೇವಾಂಶದ ಕೊರತೆ (Low Humidity)
- ಒಣಗಿದ ಗಾಳಿ (Dry Winds)
- ಕಡಿಮೆ ಮೋಡಾವರಣ (Cloud Cover Reduction)
ಹವಾಮಾನ ಇಲಾಖೆಯ ವಿಶ್ಲೇಷಣೆಯ ಪ್ರಕಾರ, ಮಾರ್ಚ್-ಏಪ್ರಿಲ್ ತಿಂಗಳಲ್ಲಿ ವಾಡಿಕೆಯಿಗಿಂತ 4-5 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ. ಇದು ಸಾಮಾನ್ಯ seasonal variation ಗಿಂತ ಹೆಚ್ಚು.
ಅಂತರ್ಜಲ ಮಟ್ಟ ಕುಸಿತದ ಆತಂಕ (Groundwater Crisis)
ಬೇಸಿಗೆಯ ತೀವ್ರತೆಯ ಜೊತೆಗೆ ನೀರಿನ ಸಮಸ್ಯೆಯೂ ಉಂಟಾಗುವ ಸಾಧ್ಯತೆ ಇದೆ. ವಿಶೇಷವಾಗಿ ಅಂತರ್ಜಲವನ್ನು ಅತಿಯಾಗಿ ಬಳಸುವ ಬೆಂಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಚಿತ್ರದುರ್ಗ ಜಿಲ್ಲೆಗಳ ಸುಮಾರು 43 ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಇಳಿಮುಖವಾಗುವ ಭೀತಿ ವ್ಯಕ್ತವಾಗಿದೆ.
ಪ್ರತಿ ವರ್ಷವೂ ಬೇಸಿಗೆ ಸಮಯದಲ್ಲಿ ನೀರಿನ ಮಟ್ಟ ಇಳಿಯುವುದು ಸಾಮಾನ್ಯ. ಆದರೆ ಈ ಬಾರಿ ಉಷ್ಣಾಂಶ ಹೆಚ್ಚಾದರೆ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗುವ ಸಾಧ್ಯತೆ ಇದೆ. ನಗರ ಪ್ರದೇಶಗಳಲ್ಲಿ Borewell Dry ಆಗುವ ಸಮಸ್ಯೆ ಎದುರಾಗಬಹುದು.
ಇದನ್ನೂ ಓದಿ: RTE Karnataka 2026-27: ಆರ್‌ಟಿಇ 2026-27 ಅರ್ಜಿ ಆಹ್ವಾನ | ಬಡ ಮಕ್ಕಳಿಗೆ ಖಾಸಗಿ ಶಾಲೆಯಲ್ಲಿ ಓದುವ ಅವಕಾಶ

ಗುಡುಗು-ಸಿಡಿಲು ಮತ್ತು ಬೇಸಿಗೆ ಮಳೆ (Pre-Monsoon Rain)
ಮಾರ್ಚ್ನಿಂದ ಮೇ ತನಕ ತಾಪಮಾನ ಏರಿಕೆಯಾಗುತ್ತಿದ್ದಂತೆ ಮೋಡಗಳ ರಚನೆ ಹೆಚ್ಚಾಗುತ್ತದೆ. ಇದರಿಂದ ಗುಡುಗು-ಸಿಡಿಲು (Thunderstorm Activity) ಹಾಗೂ ಸ್ವಲ್ಪ ಮಟ್ಟಿನ ಬೇಸಿಗೆ ಮಳೆಯೂ ಸಂಭವಿಸಬಹುದು.
ಹವಾಮಾನ ತಜ್ಞ ಶ್ರೀನಿವಾಸ ರೆಡ್ಡಿ ಅವರ ಪ್ರಕಾರ, ಮುಂಗಾರು ಪೂರ್ವ ಮಳೆ (Pre-Monsoon Rainfall) ಈ ಬಾರಿ ವಾಡಿಕೆಯಷ್ಟೇ ಬೀಳುವ ಸಾಧ್ಯತೆ ಇದೆ. ಅದಕ್ಕಿಂತ ಹೆಚ್ಚು ಮಳೆಯಾಗುವ ಲಕ್ಷಣಗಳು ಕಡಿಮೆ.
ಬೇಸಿಗೆ ಮಳೆಯು ತಾತ್ಕಾಲಿಕವಾಗಿ ತಾಪಮಾನ ಇಳಿಕೆಗೆ ಸಹಕಾರಿಯಾದರೂ, ತೇವಾಂಶ ಹೆಚ್ಚಾಗಿ Humidity ಏರಿಕೆಯಿಂದ ಉಷ್ಣಾಂಶದ ಅನುಭವ ಮತ್ತಷ್ಟು ಕಠಿಣವಾಗಬಹುದು.
ಇದನ್ನೂ ಓದಿ: Mudra Loan 20 lakhs: ಮುದ್ರಾ ಸಾಲದ ಮಿತಿ 20 ಲಕ್ಷಕ್ಕೆ ಏರಿಕೆ! ಗ್ಯಾರಂಟಿ ಇಲ್ಲದೆ ಲೋನ್ – ಪಡೆಯುವುದು ಹೇಗೆ?
ಆರೋಗ್ಯದತ್ತ ವಿಶೇಷ ಗಮನ ಅಗತ್ಯ (Health Alert)
ಬೇಸಿಗೆ ಕಾಲವು ಆರೋಗ್ಯದ ದೃಷ್ಟಿಯಿಂದ ಸವಾಲಿನ ಕಾಲವಾಗಿದೆ. Heat Stroke, Dehydration, Cholera, Viral Fever, ತಲೆನೋವು, ದೇಹ ದೌರ್ಬಲ್ಯ ಮುಂತಾದ ಸಮಸ್ಯೆಗಳು ಹೆಚ್ಚಾಗಬಹುದು. ತಜ್ಞರು ನೀಡಿರುವ ಸಲಹೆಗಳು:
- ಬೆಳಗ್ಗೆ 11ರಿಂದ ಸಂಜೆ 4ರವರೆಗೆ ಬಿಸಿಲಿನಲ್ಲಿ ಹೆಚ್ಚು ಹೊತ್ತು ತಂಗಬೇಡಿ.
- ದಿನಕ್ಕೆ ಕನಿಷ್ಠ 3-4 ಲೀಟರ್ ನೀರು ಕುಡಿಯಿರಿ.
- ಸಡಿಲವಾದ, ತೆಳ್ಳನೆಯ ಅoಣಣoಟಿ ಬಟ್ಟೆ ಧರಿಸಿರಿ.
- ಚಹಾ-ಕಾಫಿ ಹಾಗೂ Soft Drinks ಕಡಿಮೆ ಮಾಡಿರಿ.
- ಕಲುಷಿತ ನೀರು ಮತ್ತು ಹೊರಗಿನ ಅಸ್ವಚ್ಛ ಆಹಾರ ಸೇವಿಸಬೇಡಿ.
- ಮಕ್ಕಳು, ವೃದ್ಧರು ಹಾಗೂ ಗರ್ಭಿಣಿಯರು ವಿಶೇಷ ಎಚ್ಚರಿಕೆ ವಹಿಸಬೇಕು.
ರೈತರಿಗೆ ಮುನ್ನೆಚ್ಚರಿಕೆ
ಬಿಸಿಲಿನ ತೀವ್ರತೆಯಿಂದ ಬೆಳೆಗಳಿಗೆ ಹಾನಿ ಉಂಟಾಗುವ ಸಾಧ್ಯತೆ ಇದೆ. ನೀರಾವರಿ ವ್ಯವಸ್ಥೆ ಸಮರ್ಪಕವಾಗಿ ಮಾಡಬೇಕು. ಮಣ್ಣಿನ ತೇವಾಂಶ ಉಳಿಸಿಕೊಳ್ಳಲು Mulching ವಿಧಾನ ಅನುಸರಿಸುವುದು ಸೂಕ್ತ. ಹಣ್ಣು ಹಾಗೂ ತರಕಾರಿ ಬೆಳೆಗಳಲ್ಲಿ ನೆರಳು ಜಾಲ ಬಳಕೆ ಸಹಾಯಕವಾಗಬಹುದು.
ಒಟ್ಟಾರೆ, ಕರ್ನಾಟಕದಲ್ಲಿ ಈ ಬಾರಿ ಮಾರ್ಚ್-ಏಪ್ರಿಲ್ ತಿಂಗಳುಗಳು ಉಗ್ರ ಬೇಸಿಗೆ (Extreme Summer) ಅನುಭವಿಸುವ ಸಾಧ್ಯತೆ ಹೆಚ್ಚಾಗಿದೆ. ಹವಾಮಾನ ಇಲಾಖೆ ನೀಡಿರುವ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಆರೋಗ್ಯ ಮತ್ತು ನೀರಿನ ಸಂರಕ್ಷಣೆಯತ್ತ ಜನರು ಹೆಚ್ಚಿನ ಗಮನ ಹರಿಸಬೇಕಾಗಿದೆ.
ಬಿಸಿಲನ್ನು ಲಘುವಾಗಿ ತೆಗೆದುಕೊಳ್ಳದೆ, ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವುದು ಇಂದಿನ ಅಗತ್ಯ. Heat Wave Safety ಬಗ್ಗೆ ಜಾಗೃತಿ ಹೆಚ್ಚಿದರೆ ಮಾತ್ರ ಅನಾಹುತಗಳನ್ನು ತಪ್ಪಿಸಬಹುದು.
Personal Loan Tips- ತಕ್ಷಣಕ್ಕೆ ಪರ್ಸನಲ್ ಲೋನ್ ಬೇಕಾ? ಈ ಐದು ಟಿಪ್ಸ್ ಪಾಲಿಸಿ

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.