LIC Bima Sakhi Yojana- ಎಸ್‌ಎಸ್‌ಎಲ್‌ಸಿ ಪಾಸಾದ ಮಹಿಳೆಯರಿಗೆ ಎಲ್‌ಐಸಿ ಉದ್ಯೋಗ | ನಿಮ್ಮೂರಲ್ಲೇ ಸರ್ಕಾರಿ ನೌಕರಿ ಮಾಡುವ ಸುವರ್ಣಾವಕಾಶ

Spread the love

WhatsApp Group Join Now
Telegram Group Join Now

10ನೇ ತರಗತಿ ಪಾಸಾದ ಮಹಿಳೆಯರು ತಮ್ಮೂರಲ್ಲೇ ಕೇಂದ್ರ ಸರ್ಕಾರಿ ಅಧೀನದ ಎಲ್‌ಐಸಿಯಲ್ಲಿ ‘ಬೀಮಾ ಸಖಿ’ (LIC Bima Sakhi Yojana) ಉದ್ಯೋಗ ನಿರ್ವಹಿಲು ಅವಕಾಶ ನೀಡಲಾಗಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ…

ಗ್ರಾಮೀಣ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹಾಗೂ ಉದ್ಯೋಗಾವಕಾಶ ವೃದ್ಧಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ. 10ನೇ ತರಗತಿ (SSLC) ಪಾಸಾದ ಮಹಿಳೆಯರಿಗೆ ತಮ್ಮದೇ ಗ್ರಾಮದಲ್ಲೇ ಕೇಂದ್ರ ಸರ್ಕಾರಿ ಅಧೀನದ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮ (LIC) ನಲ್ಲಿ ಉದ್ಯೋಗ ಮಾಡುವ ಅವಕಾಶವನ್ನು ನೀಡುತ್ತಿರುವ ‘ಬಿಮಾ ಸಖಿ’ (BIMA SAKHI ) ಯೋಜನೆ ಇದೀಗ ಮಹಿಳೆಯರಲ್ಲಿ ಹೊಸ ಭರವಸೆ ಮೂಡಿಸಿದೆ.

ಈ ಯೋಜನೆಯಡಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಹಿಳೆಯರನ್ನು ತರಬೇತಿ ನೀಡಿ ವಿಮಾ ಜಾಗೃತಿ ಹಾಗೂ ಸೇವೆಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ವಿಶೇಷವಾಗಿ ಸ್ವಯಂ ಸಹಾಯ ಗುಂಪುಗಳ ಮಹಿಳೆಯರಿಗೆ ಇದು ಅತ್ಯುತ್ತಮ ಉದ್ಯೋಗಾವಕಾಶವಾಗಿದೆ.

ಇದನ್ನೂ ಓದಿ: Rashtriya Gokul Mission Scheme – ರಾಷ್ಟ್ರೀಯ ಗೋಕುಲ ಮಿಷನ್: ಹಸು ಸಾಕಾಣಿಕೆಗೆ ಸರ್ಕಾರದ ಭರ್ಜರಿ ಸಹಾಯಧನ | ವರ್ಷಕ್ಕೆ ಹೆಚ್ಚುವರಿ ₹21,500 ಆದಾಯ

What is Bima Sakhi? – ಏನಿದು ‘ಬಿಮಾ ಸಖಿ’ ಯೋಜನೆ?

‘ಬಿಮಾ ಸಖಿ’ (LIC BIMA SAKHI Scheme) ಎಂಬುದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದನ್ನು ಗ್ರಾಮೀಣಾಭಿವೃದ್ಧಿ ಸಚಿವಾಲಯ ಹಾಗೂ ಭಾರತೀಯ ಜೀವ ವಿಮಾ ನಿಗಮ (LIC) ಸಹಯೋಗದಲ್ಲಿ ಜಾರಿಗೆ ತರಲಾಗಿದೆ.

ಈ ಯೋಜನೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (NRLM) ಅಡಿಯಲ್ಲಿ ಕಾರ್ಯಗತವಾಗಿದ್ದು, ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ವಿಮಾ ಕ್ಷೇತ್ರದಲ್ಲಿ ಉದ್ಯೋಗ ಹಾಗೂ ಆದಾಯದ ಅವಕಾಶ ಕಲ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಬಿಮಾ ಸಖಿಯರು ಅವರು ವಾಸವಿರುವ ಗ್ರಾಮಗಳಲ್ಲಿ ವಿವಿಧ ವಿಮಾ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಿ, ಪಾಲಿಸಿಗಳನ್ನು ಮಾರಾಟ ಮಾಡುವ ಮೂಲಕ ಕಮಿಷನ್ ಗಳಿಸಬಹುದು.

ಇದನ್ನೂ ಓದಿ: Karnataka Cold Wave Warning- ಕರ್ನಾಟಕದಲ್ಲಿ ಮತ್ತೆ ಹೆಚ್ಚಿದ ಚಳಿ | ಹಲವು ಜಿಲ್ಲೆಗಳಲ್ಲಿ ಶೀತ ಅಲೆ ಎಚ್ಚರಿಕೆ!

One Bima Sakhi per Gram Panchayat – ಗ್ರಾಮ ಪಂಚಾಯಿತಿಗೊಬ್ಬ ಬಿಮಾ ಸಖಿ

ಎಲ್‌ಐಸಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದಾರ್ಥ ಮೊಹಂತಿ ಅವರು ಈ ಯೋಜನೆಯ ಬಗ್ಗೆ ಮಾಹಿತಿ ನೀಡುತ್ತಾ, ದೇಶದ ಪ್ರತಿಯೊಂದು ಗ್ರಾಮ ಪಂಚಾಯಿತಿಗೂ ಕನಿಷ್ಠ ಒಬ್ಬ ಬಿಮಾ ಸಖಿಯನ್ನು ನೇಮಿಸುವುದು ನಮ್ಮ ಗುರಿ ಎಂದು ತಿಳಿಸಿದ್ದಾರೆ.

ಇದೀಗ ಲಕ್ಷಾಂತರ ಮಹಿಳೆಯರು ಈಗಾಗಲೇ ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ಬಿಮಾ ಸಖಿಗಳಾಗಿ ಎಲ್‌ಐಸಿ ಉತ್ಪನ್ನಗಳ ಮಾರಾಟ ಕಾರ್ಯ ಆರಂಭಿಸಿರುವುದು ಈ ಯೋಜನೆಯ ಯಶಸ್ಸಿಗೆ ಸಾಕ್ಷಿಯಾಗಿದೆ.

LIC Bima Sakhi Yojana
LIC Bima Sakhi Yojana

Eligibility Criteria – ಬಿಮಾ ಸಖಿಯರಾಗಲು ಯಾರು ಅರ್ಹರು?

ಬಿಮಾ ಸಖಿ ಯೋಜನೆಗೆ ಅರ್ಜಿ ಸಲ್ಲಿಸಲು ಈ ಅರ್ಹತೆಗಳು ಇರಬೇಕು:

  • ಅರ್ಜಿದಾರರು ಮಹಿಳೆಯಾಗಿರಬೇಕು
  • ವಯಸ್ಸು 18 ರಿಂದ 70 ವರ್ಷಗಳ ನಡುವೆ ಇರಬೇಕು
  • ಕನಿಷ್ಠ 10ನೇ ತರಗತಿ (SSLC) ಪಾಸಾಗಿರಬೇಕು
  • ಗ್ರಾಮೀಣ ಪ್ರದೇಶದ ನಿವಾಸಿಯಾಗಿರಬೇಕು
  • ಸ್ವಯಂ ಸಹಾಯ ಗುಂಪಿನ ಸದಸ್ಯರಾಗಿದ್ದವರಿಗೆ ಆದ್ಯತೆ

ವಿಶೇಷವಾಗಿ, ಪದವೀಧರ ಮಹಿಳೆಯರಿಗೆ ಮುಂದಿನ ಹಂತದಲ್ಲಿ ಎಲ್‌ಐಸಿಯಲ್ಲಿ ಡೆವಲಪ್ಮೆಂಟ್ ಆಫೀಸರ್ ಆಗುವ ಅವಕಾಶವೂ ಇದೆ.

ಇದನ್ನೂ ಓದಿ: Amrutha Swabhimani Kurigahi Subsidy- ಕುರಿ-ಮೇಕೆ ಸಾಕಾಣಿಕೆಗೆ 43,750 ರೂ. ಸರ್ಕಾರದ ಸಹಾಯಧನ | ಅರ್ಜಿ ಸಲ್ಲಿಕೆ ಸಂಪೂರ್ಣ ಮಾಹಿತಿ ಇಲ್ಲಿದೆ…

Training & Job Security – ತರಬೇತಿ ಹಾಗೂ ಉದ್ಯೋಗ ಭದ್ರತೆ

ಈ ಯೋಜನೆಯಡಿ ಆಯ್ಕೆಯಾಗುವ ಮಹಿಳೆಯರಿಗೆ 3 ವರ್ಷಗಳ ಕಾಲ ತರಬೇತಿ ನೀಡಲಾಗುತ್ತದೆ. ತರಬೇತಿ ಪೂರ್ಣಗೊಂಡ ಬಳಿಕ ಎಲ್‌ಐಸಿಯ ಖಾಯಂ ಏಜೆಂಟ್ ಆಗಿ ಕಾರ್ಯನಿರ್ವಹಿಸುವ ಅವಕಾಶ ನೀಡಲಾಗುತ್ತದೆ.

WhatsApp Group Join Now
Telegram Group Join Now

ಮುಂದಿನ ದಿನಗಳಲ್ಲಿ ಉತ್ತಮ ಆದಾಯ ಹಾಗೂ ಸ್ಥಿರ ಉದ್ಯೋಗ ಸಿಗುತ್ತದೆ. ಇದು ಕೇವಲ ತಾತ್ಕಾಲಿಕ ಕೆಲಸವಲ್ಲ; ದೀರ್ಘಕಾಲೀನ ವೃತ್ತಿಯಾಗಿ ಬೆಳೆಯುವ ಅವಕಾಶ ಹೊಂದಿದೆ.

Government Stipend – ಸರ್ಕಾರದಿಂದ ಸಿಗುವ ಗೌರವಧನ

ಬಿಮಾ ಸಖಿಯಾಗಿ ತರಬೇತಿ ಪಡೆಯುವ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ಮಾಸಿಕ ಸ್ಟೈಪೆಂಡ್ ನೀಡಲಾಗುತ್ತದೆ:

  • ಮೊದಲ ವರ್ಷ ₹7,000
  • ಎರಡನೇ ವರ್ಷ ₹6,000
  • ಮೂರನೇ ವರ್ಷ ₹5,000

ಇದರ ಜೊತೆಗೆ, ಪಾಲಿಸಿಗಳ ಮಾರಾಟದಲ್ಲಿ ನಿರ್ದಿಷ್ಟ ಗುರಿ ಸಾಧಿಸಿದರೆ ಮುಂದಿನ ವರ್ಷದ ಸ್ಟೈಪೆಂಡ್ ಲಭ್ಯವಾಗುತ್ತದೆ. ತರಬೇತಿ ಪೂರ್ಣಗೊಂಡ ಬಳಿಕ ಎಲ್‌ಐಸಿ ಏಜೆಂಟ್‌ಗಳಿಗೆ ದೊರೆಯುವ ಕಮಿಷನ್ ಹಾಗೂ ಇತರ ಸೌಲಭ್ಯಗಳು ಅನ್ವಯವಾಗುತ್ತವೆ.

ಇದನ್ನೂ ಓದಿ: Crop Loss and Crop Insurance Scheme- ಬೆಳೆ ಹಾನಿ ಮತ್ತು ಬೆಳೆ ವಿಮೆ ಪರಿಹಾರದ ಹಣ ರೈತರ ಖಾತೆಗೆ ಜಮಾ | ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

Benefits of Bima Sakhi Job – ಬಿಮಾ ಸಖಿಯಾಗಿ ಕೆಲಸ ಮಾಡುವ ಲಾಭಗಳು

  • ನಿಮ್ಮದೇ ಊರಲ್ಲಿ ಉದ್ಯೋಗ
  • ಕೇಂದ್ರ ಸರ್ಕಾರದ ಬೆಂಬಲಿತ ಯೋಜನೆ
  • ತರಬೇತಿ + ಸ್ಟೈಪೆಂಡ್ + ಕಮಿಷನ್
  • ಮಹಿಳೆಯರ ಆರ್ಥಿಕ ಸ್ವಾವಲಂಬನೆ
  • ಭವಿಷ್ಯದಲ್ಲಿ ಎಲ್‌ಐಸಿಯಲ್ಲಿ ಉನ್ನತ ಹುದ್ದೆಗಳ ಅವಕಾಶ

Application Process – ಅರ್ಜಿ ಸಲ್ಲಿಕೆ ಹೇಗೆ?

ಬಿಮಾ ಸಖಿ ಯೋಜನೆಗೆ ಅರ್ಜಿ ಸಲ್ಲಿಸುವುದು ಅತ್ಯಂತ ಸರಳ. ಮೊದಲು ನಾವು ಈ ಲೇಖನದ ಕೆಳಗೆ ನೀಡಿರುವ ಲಿಂಕ್ ಬಳಸಿಕೊಂಡು ಎಲ್‌ಐಸಿ ಅಧಿಕೃತ ವೆಬ್‌ಸೈಟ್ licindiaಗೆ ಭೇಟಿ ನೀಡಿ.

LIC Bima Sakhi Yojana
LIC Bima Sakhi Yojana

‘lead application for lic’s bima sakhi scheme’ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಹೆಸರು, ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆ ಸೇರಿದಂತೆ ಅಗತ್ಯ ವಿವರಗಳನ್ನು ಭರ್ತಿ ಮಾಡಿ, ಅರ್ಜಿಯನ್ನು ಸಬ್‌ಮಿಟ್ ಮಾಡಿ.

ಇದನ್ನೂ ಓದಿ: Morarji Desai Residential School Admission 2026-27- ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಅರ್ಜಿ ಆಹ್ವಾನ | ಸಂಪೂರ್ಣ ಉಚಿತ ಶಿಕ್ಷಣ

Don’t Miss This Opportunity – ಈ ಅವಕಾಶವನ್ನು ಬಳಸಿಕೊಳ್ಳಿ

ಗ್ರಾಮೀಣ ಮಹಿಳೆಯರು ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಬಿಮಾ ಸಖಿ ಯೋಜನೆ ಅತ್ಯುತ್ತಮ ವೇದಿಕೆಯಾಗಿದೆ. 10ನೇ ತರಗತಿ ಪಾಸಾದ ಮಹಿಳೆಯರು ಈ ಅವಕಾಶವನ್ನು ತಪ್ಪಿಸಿಕೊಳ್ಳದೇ, ತಮ್ಮ ಜೀವನದ ದಿಕ್ಕು ಬದಲಿಸಿಕೊಳ್ಳಬಹುದು.

ನೀವು ಅಥವಾ ನಿಮ್ಮ ಮನೆಯ ಮಹಿಳೆಯರು ಅರ್ಹರಾಗಿದ್ದರೆ ಇಂದೇ ಅರ್ಜಿ ಸಲ್ಲಿಸಿ ನಿಮ್ಮೂರಲ್ಲೇ ಸರ್ಕಾರಿ ಉದ್ಯೋಗ, ಗೌರವಯುತ ಆದಾಯ ಮತ್ತು ಭವಿಷ್ಯದ ಭದ್ರತೆ ಪಡೆಯಿರಿ.

ಅರ್ಜಿ ಲಿಂಕ್: Apply Now

Gruhalakshmi 2 Months Pending Payment- ಗೃಹಲಕ್ಷ್ಮಿ ಯೋಜನೆ 2 ತಿಂಗಳ ಬಾಕಿ ಹಣ ಬಿಡುಗಡೆ | ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ


Spread the love
error: Content is protected !!