Rashtriya Gokul Mission Scheme – ರಾಷ್ಟ್ರೀಯ ಗೋಕುಲ ಮಿಷನ್: ಹಸು ಸಾಕಾಣಿಕೆಗೆ ಸರ್ಕಾರದ ಭರ್ಜರಿ ಸಹಾಯಧನ | ವರ್ಷಕ್ಕೆ ಹೆಚ್ಚುವರಿ ₹21,500 ಆದಾಯ

Spread the love

WhatsApp Group Join Now
Telegram Group Join Now

‘ರಾಷ್ಟ್ರೀಯ ಗೋಕುಲ ಮಿಷನ್ ಯೋಜನೆ’ (Rashtriya Gokul Mission Scheme) ಅಡಿಯಲ್ಲಿ ಹಸು-ಎಮ್ಮೆ ಸಾಕಾಣಿಕೆಗೆ ರೈತರಿಗೆ ಭರ್ಜರಿ ಸಬ್ಸಿಡಿ ನೀಡಲಾಗುತ್ತಿದ್ದು; ಈ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

ದೇಶದ ಹಾಲು ಉತ್ಪಾದನೆಯ ಹೆಚ್ಚಳ, ಸ್ಥಳೀಯ ಗೋ ತಳಿಗಳ ಸಂರಕ್ಷಣೆ ಹಾಗೂ ಪಶುಪಾಲಕರ ಆರ್ಥಿಕ ಭದ್ರತೆ ಎನ್ನುವ ಮೂರು ಪ್ರಮುಖ ಗುರಿಯನ್ನು ಸಾಧಿಸುವುದಕ್ಕಾಗಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ‘ರಾಷ್ಟ್ರೀಯ ಗೋಕುಲ ಮಿಷನ್ ಯೋಜನೆ’ಯನ್ನು ಜಾರಿಗೆ ತಂದಿದೆ.

ಈ ಯೋಜನೆಯಡಿ ರೈತರಿಗೆ ಹಸು-ಎಮ್ಮೆ ಸಾಕಾಣಿಕೆಗೆ ಸಂಬಂಧಿಸಿದಂತೆ ಹಲವು ರೀತಿಯ ಪ್ರೋತ್ಸಾಹಧನ, ಸಬ್ಸಿಡಿ, ಬಡ್ಡಿ ರಿಯಾಯಿತಿ ಹಾಗೂ ವೈಜ್ಞಾನಿಕ ಪಶುಪಾಲನಾ ತಂತ್ರಜ್ಞಾನಕ್ಕೆ ಪ್ರವೇಶ ದೊರೆಯುತ್ತದೆ.

ಇದನ್ನೂ ಓದಿ: Karnataka Cold Wave Warning- ಕರ್ನಾಟಕದಲ್ಲಿ ಮತ್ತೆ ಹೆಚ್ಚಿದ ಚಳಿ | ಹಲವು ಜಿಲ್ಲೆಗಳಲ್ಲಿ ಶೀತ ಅಲೆ ಎಚ್ಚರಿಕೆ!

₹21,500 Extra Yearly Income- ವರ್ಷಕ್ಕೆ ₹21,500 ವರೆಗೆ ಹೆಚ್ಚುವರಿ ಆದಾಯ

ವಿಶೇಷವಾಗಿ ಐವಿಎಫ್, ಲಿಂಗವಿಂಗಡಿತ ವೀರ್ಯ (SSexed Semen), ತಳಿ ವರ್ಧನಾ ಘಟಕಗಳು, ಬ್ರೀಡ್ ಮಲ್ಟಿಪ್ಲಿಕೇಶನ್ ಫಾರ್ಮ್ ಆಗಿ ಹೂಡಿಕೆ ಮಾಡುವವರಿಗೆ ಹೆಚ್ಚುವರಿ ಸೌಲಭ್ಯಗಳನ್ನು ನೀಡಲಾಗುತ್ತದೆ.

ಇತ್ತೀಚೆಗೆ ಪಶುಪಾಲಕರ ಆದಾಯವನ್ನು ಹೆಚ್ಚಿಸುವ ಗುರಿಯೊಂದಿಗೆ ಸರ್ಕಾರ ಈ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿ ಮಾಡಿದ್ದು, ಸರಾಸರಿ ಹಾಲು ಉತ್ಪಾದನೆಯ ಹೊರತಾಗಿ, ವರ್ಷಕ್ಕೆ ₹21,500 ವರೆಗೆ ಹೆಚ್ಚುವರಿ ಆದಾಯ ಪಡೆಯಬಹುದೆಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: 1.5 Lakh Kotak Kanya Scholarship- 1.5 ಲಕ್ಷ ರೂ. ಕೋಟಕ್ ಕನ್ಯಾ ವಿದ್ಯಾರ್ಥಿವೇತನ | ಈಗಲೇ ಅರ್ಜಿ ಹಾಕಿ…

About Gokul Mission- ಗೋಕುಲ ಮಿಷನ್ ಯೋಜನೆ ಎಂದರೇನು?

ಗೋಕುಲ ಮಿಷನ್ ಯೋಜನೆ ಮೊದಲು 2014ರಲ್ಲಿ ಜಾರಿಗೊಂಡಿದ್ದು, ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಈ ಯೋಜನೆ ಅಸ್ಥಿತ್ವದಲ್ಲಿ ಇದೆ. ಅನೇಕ ರೈತರು ಇದರ ಪ್ರಯೋಜನ ಪಡೆಯುತ್ತಿದ್ದಾರೆ.

ಪ್ರಸ್ತುತ ಇದು ‘ರಾಷ್ಟ್ರೀಯ ಪಶುಧನ ಅಭಿವೃದ್ಧಿ ಕಾರ್ಯಕ್ರಮ (National Livestock Mission)’ ನಲ್ಲಿ ಒಳಗೊಂಡಿದ್ದು ಎಲ್ಲಾ ವರ್ಗದ ರೈತರಿಗೆ, ಹಾಲು ಉತ್ಪಾದಕರಿಗೆ, ಮಹಿಳಾ ಹಸು-ಎಮ್ಮೆ ಸಾಕಾಣಿಕೆಗಾರರಿಗೆ ಬಳಸಿಕೊಳ್ಳುವ ಅವಕಾಶವಿದೆ.

ಸ್ಥಳೀಯ ಗೋತಳಿಗಳನ್ನು ವೈಜ್ಞಾನಿಕವಾಗಿ ಸಂರಕ್ಷಣೆ, ಉತ್ಪಾದಕತೆ ಹೆಚ್ಚಿಸುವುದು ಹಾಗೂ ರೈತನ ಆದಾಯವನ್ನು ದೀರ್ಘಕಾಲಿಕವಾಗಿ ವೃದ್ಧಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ.

ಇದನ್ನೂ ಓದಿ: Crop Loss and Crop Insurance Scheme- ಬೆಳೆ ಹಾನಿ ಮತ್ತು ಬೆಳೆ ವಿಮೆ ಪರಿಹಾರದ ಹಣ ರೈತರ ಖಾತೆಗೆ ಜಮಾ | ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

Scheme Objectives- ಯೋಜನೆಯ ಪ್ರಮುಖ ಗುರಿಗಳು

ಈ ಯೋಜನೆ ಹಾಲು ಉತ್ಪಾದನೆ ಮಾತ್ರವಲ್ಲ, ಒಟ್ಟಾರೆ ಪಶು ಉತ್ಪಾದನಾ ವಲಯದ ಸುಧಾರಣೆಯನ್ನು ಗುರಿಯಾಗಿಸಿಕೊಂಡಿದೆ:

  • ಸ್ಥಳೀಯ ತಳಿಗಳ ಸಂರಕ್ಷಣೆ
  • ತಳಿ ಗುಣಮಟ್ಟ ಸುಧಾರಣೆ
  • ಹಾಲು ಉತ್ಪಾದನಾ ಸಾಮರ್ಥ್ಯ ವೃದ್ಧಿ
  • ಕೃತಕ ಗರ್ಭಧಾರಣೆ ಸೇವೆಗಳ ವಿಸ್ತರಣೆ
  • ರೈತರಿಗೆ ದೀರ್ಘಕಾಲಿಕ ಆದಾಯ ಸೃಷ್ಟಿ

Farmer Benefits- ರೈತರಿಗೆ ದೊರೆಯುವ ಪ್ರಮುಖ ಲಾಭಗಳು

ಈ ಯೋಜನೆಯಡಿ ಹಿಸು-ಎಮ್ಮೆಗಳನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡದರೆ ₹21,500 ಹೆಚ್ಚುವರಿ ಆದಾಯ ಪಡೆಯಬಹುದು. IVF ತಂತ್ರಜ್ಞಾನದಿಂದ ₹60,000 ವರೆಗೆ ಲಾಭ ಪಡೆಯಲು ಅವಕಾಶವಿದೆ.

ಈ ಯೋಜನೆಯು ಹಸು-ಎಮ್ಮೆ ಸಾಕಾಣಿಕೆ ಮಾಡುವ ಎಲ್ಲರಿಗೂ ಅನ್ವಯವಾಗಿದೆ. ಮಹಿಳಾ ಪಶುಪಾಲಕರಿಗೂ ಸಮಾನ ಅವಕಾಶ ನೀಡಲಾಗಿದೆ. ಇದರಿಂದ ಸ್ಥಳೀಯ ತಳಿಯ ಮೌಲ್ಯ ಹೆಚ್ಚಳವಾಗಲಿದೆ.

Rashtriya Gokul Mission Scheme
Rashtriya Gokul Mission Scheme
WhatsApp Group Join Now
Telegram Group Join Now

ಇದನ್ನೂ ಓದಿ: Morarji Desai Residential School Admission 2026-27- ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಅರ್ಜಿ ಆಹ್ವಾನ | ಸಂಪೂರ್ಣ ಉಚಿತ ಶಿಕ್ಷಣ

Subsidy Details- ಸಹಾಯಧನದ ವಿವರ

ಯೋಜನೆಯಡಿಯಲ್ಲಿ ದೊರೆಯುವ ಸಹಾಯಧನ ವಿವರ ಹೀಗಿದೆ:

  • ಹೆಫರ್ ಸಾಕಾಣಿಕೆ ಕೇಂದ್ರ: 35% ಸಬ್ಸಿಡಿ
  • ತಳಿ ವರ್ಧನಾ ಘಟಕ: 50% ಬಂಡವಾಳ ಸಬ್ಸಿಡಿ (ಗರಿಷ್ಠ ₹2 ಕೋಟಿ)
  • IVF ಗರ್ಭಧಾರಣೆ: ₹5,000 ಪ್ರತಿ ಯಶಸ್ವಿ ಗರ್ಭಧಾರಣೆಗೆ
  • ಲಿಂಗವಿಂಗಡಿತ ವೀರ್ಯ: ವೆಚ್ಚದ 50% ರವರೆಗೆ ಸಬ್ಸಿಡಿ
  • ಬ್ಯಾಂಕ್ ಸಾಲ: 3% ಬಡ್ಡಿ ರಿಯಾಯಿತಿ

ಇದನ್ನೂ ಓದಿ: Karnataka Grama Panchayat Election 2026- ಗ್ರಾಮ ಪಂಚಾಯತಿ ಚುನಾವಣೆ ಸಿದ್ಧತೆ | ಮಹತ್ವದ ಮಾಹಿತಿ ಇಲ್ಲಿದೆ…

Who Can Apply?- ಯಾರು ಅರ್ಜಿ ಹಾಕಬಹುದು?

  • ಹಸು ಸಾಕುವ ರೈತರು
  • ಹಾಲು ಉತ್ಪಾದಕರು
  • ಪಶುಪಾಲನಾ ಸಹಕಾರಿಗಳ ಸದಸ್ಯರು
  • ಮಹಿಳಾ ಪಶುಪಾಲಕರು
  • ಯುವ ಉದ್ಯಮಿಗಳು
  • ಬ್ರೀಡ್ ಫಾರ್ಮ್ ಸ್ಥಾಪಿಸಲು ಬಯಸುವವರು

How to Apply?- ಅರ್ಜಿಯನ್ನು ಹೇಗೆ ಸಲ್ಲಿಸಬೇಕು?

ಅರ್ಹರಾದ ರೈತರು ಪಶುಸಂಗೋಪನಾ ಇಲಾಖೆಯ ಅಧಿಕೃತ ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ಆನ್‌ಲೈನ್ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Personal Loan Tips- ತಕ್ಷಣಕ್ಕೆ ಪರ್ಸನಲ್ ಲೋನ್ ಬೇಕಾ? ಈ ಐದು ಟಿಪ್ಸ್ ಪಾಲಿಸಿ

Required Documents- ಅರ್ಜಿಗೆ ಅಗತ್ಯ ದಾಖಲೆಗಳು

  • ಆಧಾರ್ ಕಾರ್ಡ್
  • ವಾಸ ಪ್ರಮಾಣಪತ್ರ
  • ಬ್ಯಾಂಕ್ ಖಾತೆ ವಿವರ
  • ಆದಾಯ ಪ್ರಮಾಣಪತ್ರ
  • ಯೋಜನಾ ವರದಿ (ಬ್ರೀಡ್ ಯುನಿಟ್‌ಗಳಿಗೆ)

For More Information- ಹೆಚ್ಚಿನ ಮಾಹಿತಿಗಾಗಿ

  • ಅಧಿಕೃತ ಮಾಹಿತಿ ಲಿಂಕ್: Download
  • ಆನ್‌ಲೈನ್‌ನ್ ಅರ್ಜಿ ಲಿಂಕ್: ahvs.karnataka.gov.in

Amrutha Swabhimani Kurigahi Subsidy- ಕುರಿ-ಮೇಕೆ ಸಾಕಾಣಿಕೆಗೆ 43,750 ರೂ. ಸರ್ಕಾರದ ಸಹಾಯಧನ | ಅರ್ಜಿ ಸಲ್ಲಿಕೆ ಸಂಪೂರ್ಣ ಮಾಹಿತಿ ಇಲ್ಲಿದೆ…


Spread the love
error: Content is protected !!